ETV Bharat / sports

ಆರ್ಚರಿ: ಕ್ವಾರ್ಟರ್​ ಫೈನಲ್​ಗೆ ತಲುಪಿದ ದೀಪಿಕಾ, ಭಜನ್​ ಕೌರ್​ ಔಟ್​ ​ - paris olympics 2024

ಮಹಿಳಾ ಆರ್ಚರಿ ಸಿಂಗಲ್ಸ್​ ಪಂದ್ಯದಲ್ಲಿ ದೀಪಿಕಾ ಕುಮಾರಿ ಜರ್ಮನಿಯ ಮಿಚೆಲ್ ಕ್ರೊಪ್ಪೆನ್ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ.

author img

By ETV Bharat Sports Team

Published : Aug 3, 2024, 3:57 PM IST

ದೀಪಿಕಾ ಕುಮಾರಿ
ದೀಪಿಕಾ ಕುಮಾರಿ (AP)

ಪ್ಯಾರಿಸ್​ (ಫ್ರಾನ್ಸ್​): ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಶನಿವಾರ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್​ನಲ್ಲಿ ಮಹಿಳಾ ಆರ್ಚರಿ ಸಿಂಗಲ್ಸ್​ ವಿಭಾಗದ 1/8 ಎಲಿಮಿನೇಷನ್ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದರು. ಮತ್ತೊಂದೆಡೆ, ಭಾರತ ದೇಶದವರೇ ಆದ ಭಜನ್ ಕೌರ್ ಶೂಟೌಟ್‌ನಲ್ಲಿ ಇಂಡೋನೇಷ್ಯಾದ ಎದುರಾಳಿ ವಿರುದ್ಧ ಸೋತು ಹೊರಬಿದ್ದರು.

ದೀಪಿಕಾ ಅವರು ಜರ್ಮನಿಯ ಮಿಚೆಲ್ ಕ್ರೊಪ್ಪೆನ್ ಅವರನ್ನು 6-4 ಅಂತರದಿಂದ ಸೋಲಿಸಿದರೆ, ಇಂಡೋನೇಷ್ಯಾದ ಡಿಯಾನಂದಾ ಚೊಯ್ರುನಿಸಾ ಅವರು ಭಜನ್ ಕೌರ್ ವಿರುದ್ಧ 5-6 ಅಂತರದಿಂದ ಗೆಲುವು ಸಾಧಿಸಿದರು. 30ರ ಹರೆಯದ ದೀಪಿಕಾ ಮೊದಲ ಸೆಟ್ ಅನ್ನು 27-24 ಅಂಕಗಳಿಂದ ಗೆದ್ದುಕೊಂಡರು. ಬಳಿಕ ಎರಡನೇ ಸೆಟ್​ನಲ್ಲಿ ದೀಪಿಕಾ ಮತ್ತು ಮಿಚೆಲ್ ಕ್ರೊಪ್ಪೆನ್ ಇಬ್ಬರೂ 27-27 ಸ್ಕೋರ್ ಗಳಿಸಿ ಡ್ರಾ ಸಾಧಿಸಿದರು. ನಂತರ ಮೂರನೇ ಸೆಟ್​ನಲ್ಲಿ ದೀಪಿಕಾ 26-25 ಮತ್ತು ನಾಲ್ಕನೇ ಸೆಟ್​ನಲ್ಲಿ 29-27 ಅಂಗಳ ಕಲೆ ಹಾಕಿ ಮುನ್ನಡೆ ಕಾಯ್ದುಕೊಂಡರು.

ಬಳಿಕ 5ನೇ ಮತ್ತು ಅಂತಿಮ ಸುತ್ತಿನಲ್ಲೂ 27-27 ಗಳಿಸುವ ಮೂಲಕ ಈ ಸುತ್ತು ಡ್ರಾ ಆಯಿತು. ಇದರೊಂದಿಗೆ ಮುನ್ನಡೆ ಸಾಧಿಸಿದ್ದ ದೀಪಿಕಾ ಅವರು ಕ್ರೋಪೆನ್ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್​ಗೆ ಪ್ರವೇಶ ಪಡೆದರು.

ಮತ್ತೊಂದೆಡೆ, ಭಜನ್ ಕೌರ್ ಶೂಟೌಟ್‌ನಲ್ಲಿ ಇಂಡೋನೇಷ್ಯಾದ ಪ್ರತಿಸ್ಪರ್ಧಿ ವಿರುದ್ಧ ಸೋಲನ್ನು ಕಂಡಿದ್ದಾರೆ. ಭಜನ್ ಕೌರ್ ಇಂಡೋನೇಷ್ಯಾದ ದಿಯಾನಂದ ಚೊಯಿರುನಿಸಾ ವಿರುದ್ಧ 5-6 ಅಂತರದಿಂದ ಸೋಲನುಭವಿಸಿದರು. ಈ ಪಂದ್ಯದಲ್ಲಿ ಭಜನ್​ ಕೌರ್​ ಉತ್ತಮ ಆರಂಭವನ್ನು ಪಡೆದಿದ್ದರು. ಪ್ರತಿಸ್ಪರ್ಧಿಗೆ ಕಠಿಣ ಸವಾಲೊಡ್ಡಿದ ಪರಿಣಾಮ ಐದು ಸೆಟ್‌ಗಳ ನಂತರ ಸ್ಕೋರ್ 5-5 ರಲ್ಲಿ ಸಮಗೊಂಡಿತು. ನಂತರ ಪಂದ್ಯವು ಶೂಟ್-ಆಫ್ ತಲುಪಿತು. ಇಲ್ಲಿ ಇಂಡೋನೇಷ್ಯಾದ ನಿಸಾ 9 ಅಂಕ ಗಳಿಸಿದರೇ ಭಜನ್ 8 ಅಂಕಗಳನ್ನು ಮಾತ್ರ ಕಲೆ ಹಾಕಿ ಸ್ಪರ್ಧೆಯಿಂದ ಹೊರಬಿದ್ದರು.

ಇದನ್ನೂ ಓದಿ: ಭಾರತ ಶ್ರೀಲಂಕಾ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೂ ಸೂಪರ್​ ಓವರ್​ ಏಕೆ ಆಯೋಜಿಸಲಿಲ್ಲ ಗೊತ್ತಾ?: ಅದಕ್ಕೆ ಇದೇ ಕಾರಣ - india vs sri lanka

ETV Bharat Logo

Copyright © 2024 Ushodaya Enterprises Pvt. Ltd., All Rights Reserved.