DC vs RR: ಐಪಿಎಲ್ನ 32ನೇ ಪಂದ್ಯದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿಕೊಳ್ಳುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ (DC): ಈ ಋತುವಿನಲ್ಲಿ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಈ ವರೆಗೂ 5 ಪಂದ್ಯಗಳನ್ನು ಆಡಿದ್ದು ಇದರಲ್ಲಿ 4 ಪಂದ್ಯಗಳನ್ನು ಗೆದ್ದು 1ರಲ್ಲಿ ಸೋಲುಂಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದಿದ್ದ ಕೊನೆಯ ಪಂದ್ಯದಲ್ಲಿ ಡೆಲ್ಲಿ 12 ರನ್ಗಳಿಂದ ಸೋಲು ಕಂಡಿತ್ತು. ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
Two GEN BOLD captains ✖Two GEN BOLD power hitters 🟰 One fierce clash 🔥#DC's unbeaten run was halted by #MI in their last match, while #RR will be hungry to return to winning ways! 💪🏻
— Star Sports (@StarSportsIndia) April 16, 2025
Who will come out on top? 👀#IPLonJioStar 👉 #DCvRR| WED, 16th APR, 6:30 PM LIVE on Star… pic.twitter.com/9nUn6GXSay
ರಾಜಸ್ಥಾನ ರಾಯಲ್ಸ್ (RR): ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ಈವರೆಗೂ ಆಡಿದ 6 ಪಂದ್ಯಗಳ ಪೈಕಿ 2ರಲ್ಲಿ ಗೆದ್ದು 4ರಲ್ಲಿ ಸೋಲು ಅನುಭವಿಸಿದೆ. ಕೊನೆಯ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸೋಲು ಕಂಡಿತ್ತು. ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಸೋಲು-ಗೆಲುವು: ಇತ್ತಂಡಗಳು ಈವರೆಗೂ 29 ಪಂದ್ಯಗಳಲ್ಲಿ ಎದುರು ಬದುರಾಗಿವೆ. ಈ ವೇಳೆ ಡೆಲ್ಲಿ 14 ಬಾರಿ ಗೆದ್ದಿದೆ. ಪಂಜಾಬ್ 15 ಪಂದ್ಯಗಳನ್ನು ಜಯಿಸಿದೆ.
Only a single win stands between these two gun sides! 😯👊🏻
— Star Sports (@StarSportsIndia) April 16, 2025
While #RR have had a stop-start beginning to their season, #DC will be eager to notch up their first home win! 💙🩷
On a high-scoring Delhi track, who will prevail? 👀#IPLonJioStar 👉 #DCvRR | WED, 16 APR | 6:30 PM… pic.twitter.com/kjtpprdwa6
ಗರಿಷ್ಠ-ಕನಿಷ್ಠ ಸ್ಕೋರ್: ರಾಜಸ್ಥಾನ ವಿರುದ್ಧ ಡೆಲ್ಲಿ 221 ರನ್ ಬಾರಿಸಿದ್ದು ಈವರೆಗಿನ ಹೈಸ್ಕೋರ್. 60 ಕನಿಷ್ಠ ಸ್ಕೋರ್. ಡೆಲ್ಲಿ ವಿರುದ್ಧ ರಾಜಸ್ಥಾನ 222 ರನ್ ಬಾರಿಸಿದ್ದ ಹೈಸ್ಕೋರ್ ಆಗಿದ್ದರೆ, 115 ಕಡಿಮೆ ಸ್ಕೋರ್ ಆಗಿದೆ.
ಸಂಭಾವ್ಯ ತಂಡಗಳು- ಡೆಲ್ಲಿ ಕ್ಯಾಪಿಟಲ್ಸ್: ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಮೋಹಿತ್ ಶರ್ಮಾ, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್.
We begin again in Dilli tonight! ❤️🔥🔥 pic.twitter.com/ZUBXTEU0W7
— Delhi Capitals (@DelhiCapitals) April 16, 2025
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (c & wk), ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ.
ಪಂದ್ಯ ಪ್ರಾರಂಭ: ರಾತ್ರಿ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್
ಇದನ್ನೂ ಓದಿ: ₹4.2 ಕೋಟಿ ಢಮಾರ್..! ಈತನನ್ನು ಆರ್ಸಿಬಿ ತಂಡದಿಂದ ಕೈ ಬಿಟ್ಟಿದ್ದೇ ಒಳ್ಳೆಯದಾಯಿತು!