KL Rahul Celebration: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ಸಾಧಿಸಿದೆ. ಇದರಲ್ಲಿ ಕನ್ನಡಿಗ ಕೆಎಲ್ ರಾಹುಲ್ (93*) ಪ್ರಮುಖ ಪಾತ್ರವಹಿಸಿರುವುದು ನಮಗೆಲ್ಲ ಗೊತ್ತೆ ಇದೆ. ಆದರೆ ಪಂದ್ಯ ಗೆದ್ದ ನಂತರ ಕೆಎಲ್ ರಾಹುಲ್ ಸಂಭ್ರಮಿಸಿರುವ ರೀತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪಂದ್ಯ ಫಿನಿಶ್ ಮಾಡಿದ ನಂತರ, ಅವರು ತಮ್ಮ ಬ್ಯಾಟ್ ಹಿಡಿದು "ಇದು ನನ್ನ ಮೈದಾನ" ಎಂದು ಹೇಳಿ ಸಂಭ್ರಮಿಸಿದರು. ಈ ವೇಳೆ ರಾಹುಲ್ ಅಗ್ರೆಸ್ಸಿವ್ ಆಗಿ ಕಾಣಿಸಿಕೊಂಡರು. ಅಲ್ಲದೆ ಹಲವು ವರ್ಷಗಳಿಂದ ಇಲ್ಲಿ ಕ್ರಿಕೆಟ್ ಆಡಿದ್ದೇನೆ ಎಂದು ಕೈಸನ್ನೆ ಮೂಲಕ ಸಂಭ್ರಮಿಸಿದರು.
𝐌𝐨𝐦𝐞𝐧𝐭𝐮𝐦 = 𝐏𝐨𝐰𝐞𝐫𝐞𝐝 𝐛𝐲 𝐊𝐋 & 𝐒𝐭𝐮𝐛𝐛𝐬 👊
— IndianPremierLeague (@IPL) April 10, 2025
🎥 KL Rahul and Tristan Stubbs launch an attack to ignite #DC's chase 💪
They need 30 off 24.
Updates ▶ https://t.co/h5Vb7sp2Z6#TATAIPL | #RCBvDC | @DelhiCapitals | @klrahul pic.twitter.com/LICgoUF3xy
ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂಲಕ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದರು. ಅವರು 2013-16ರ ಋತುವಿನಲ್ಲಿ ಆರ್‌ಸಿಬಿ ಪರ ಆಡಿದ್ದರು. ನಂತರ 2014-15ರಲ್ಲಿ ಸನ್‌ರೈಸರ್ಸ್ ತಂಡವನ್ನು ಪ್ರತಿನಿಧಿಸಿದರು. ಬಳಿಕ ಪಂಜಾಬ್ ಕಿಂಗ್ಸ್ (2018-21) ಮತ್ತು ಲಕ್ನೋ ಸೂಪರ್‌ಜೈಂಟ್ಸ್ (2022-24) ತಂಡಗಳ ನಾಯಕತ್ವ ವಹಿಸಿದ್ದರು. ಈಗ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
Local boy. Big stage. Statement made.
— Star Sports (@StarSportsIndia) April 10, 2025
How good was Bengaluru's KL Rahul against RCB tonight?
Next up on #IPLonJioStar 👉 CSK 🆚 KKR | FRI 11 APR, 6:30 PM LIVE on SS 1, SS 1 Hindi & JioHotstar! pic.twitter.com/wus2jEwNGv
ರಾಹುಲ್ ಸಂಭ್ರಮಕ್ಕೆ ಕಾರಣ ಏನು: ಆದರೆ, ಕೆಎಲ್ ರಾಹುಲ್ ಇಷ್ಟೊಂದು ಅಗ್ರೆಸ್ಸಿವಾಗಿ ವರ್ತಿಸುತ್ತಿರುವುದಕ್ಕೆ ಹಲವು ಕಾರಣಗಳಿವೆ ಎಂದು ಫ್ಯಾನ್ಸ್ಗಳು ಮಾತನಾಡುತ್ತಿದ್ದಾರೆ. ಈ ಬಾರಿ ರಾಹುಲ್ ತಮ್ಮ ತವರು ತಂಡವಾದ ಆರ್‌ಸಿಬಿಗೆ ಮರಳುತ್ತೇನೆಂದು ಹೆಚ್ಚಿನ ನಿರೀಕ್ಷೆ ಹೊಂದಿದ್ದರು. ಆದರೆ ಹರಾಜಿನಲ್ಲಿ ರಾಹುಲ್ರನ್ನು ಆರ್‌ಸಿಬಿ ಖರೀದಿಸಲಿಲ್ಲ. ಆದ್ದರಿಂದ ಅದಕ್ಕೆ ಸೇಡು ತೀರಿಸಿಕೊಂಡಂತೆ ಭಾಸವಾಗುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
KL Rahul - Mr. Consistent Silence the noise, let the bat talk.
— Indian Cricket Fc (@Jonathan_fcc) April 11, 2025
This Is His Ground Cold Celebration By Kl Rahul.#KLRahul #RCBvsDC #ViratKohli
pic.twitter.com/kyCv8RW9Iv
ಈ ಋತುವಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ಯಾರಿಗೆ ನೀಡಬೇಕು ಎಂದು ಸಮಸ್ಯೆಯಾಗಿ ಪರಿಣಮಿಸಿತ್ತು. ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಫಾಫ್ ಡು ಪ್ಲೆಸಿಸ್ ಅವರನ್ನು ಉಳಿಸಿಕೊಳ್ಳಲಿಲ್ಲ. ಇದರೊಂದಿಗೆ, ಸ್ಟಾರ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ರಿಷಭ್ ಪಂತ್, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಹರಾಜಿನಲ್ಲಿ ಆಯ್ಕೆ ಮಾಡಿ ನಾಯಕತ್ವ ವಹಿಸಲಾಗುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ, ಕನ್ನಡಿಗನಾದ ಕೆ.ಎಲ್. ರಾಹುಲ್ ಅವರನ್ನು ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆಯಿದೆ ಎಂದು ಭಾವಿಸಿದ್ದರು.
ಆರ್‌ಸಿಬಿಗೆ ತೆರಳಲು ತಾನು ಕಾತರದಿಂದ ಕಾಯುತ್ತಿದ್ದೇನೆ ಎಂದು ಕೆಎಲ್ ಕೂಡ ಹಲವಾರು ಸಂದರ್ಭಗಳಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದರು. ಆದರೆ, ಆರ್‌ಸಿಬಿ ಕೆಎಲ್ ಅನ್ನು ಖರೀದಿಸಲು ಮುಂದಾಗಲಿಲ್ಲ.
ಇದನ್ನೂ ಓದಿ: ಆ ಇಬ್ಬರು ಮಾಡಿದ ತಪ್ಪಿನಿಂದ ಸೋಲಿಗೆ ಶರಣಾದ RCB!