Ruturaj Gaikwad on MS Dhoni: ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಸೋಲುಗಳಿಂದ ಕಂಗೆಟ್ಟಿದೆ. ಇದರ ನಡುವೆಯೇ ನಾಯಕ ರುತುರಾಜ್ ಗಾಯಕ್ವಾಡ್ ಐಪಿಎಲ್‌ನಿಂದ ಹೊರಬಿದ್ದಿರುವುದು ಮತ್ತೊಂದು ಹೊಡೆತ ಬಿದ್ದಂತಾಗಿದೆ. 2023 ರಿಂದ ಸಿಎಸ್ಕೆ ತಂಡದ ಖಾಯಂ ನಾಯಕನಾಗಿರುವ ರುತುರಾಜ್ ಮೊಣಕೈ ಗಾಯದಿಂದಾಗಿ ಈ ರುತುವಿನಿಂದ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೆ ಹಿರಿಯ ಮತ್ತು ಅನುಭವಿ ಆಟಗಾರ ಎಮ್ಎಸ್ ಧೋನಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.
ಇದರಿಂದ ಫ್ಯಾನ್ಸ್ಗಳು ಮತ್ತೊಮ್ಮೆ ಧೋನಿ ಅವರನ್ನು ನಾಯಕನಾಗಿ ನೋಡುತ್ತಿರುವುದಕ್ಕೆ ಸಂಭ್ರಮಿಸಿದ್ದಾರೆ. ಏತನ್ಮಧ್ಯೆ, ಐಪಿಎಲ್ ಟೂರ್ನಿಯಿಂದ ಹೊರ ಬಿದ್ದಿರುವ ನಾಯಕ ರುತುರಾಜ್ ಗಾಯಕ್ವಾಡ್ ಮೊದಲ ಪ್ರತಿಕ್ರಿಯೆ ನೀಡಿದ್ದು ಧೋನಿ ಬಗ್ಗೆಯೂ ಮಾತನಾಡಿದ್ದಾರೆ.
CSK EDIT FOR CAPTAIN MS DHONI 🐐 pic.twitter.com/Pv6CPdYece
— Johns. (@CricCrazyJohns) April 10, 2025
ರುತುರಾಜ್ ಗಾಯಕ್ವಾಡ್ ಫಸ್ಟ್ ರಿಯಾಕ್ಷನ್: ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ರುತುರಾಜ್ ಗಾಯಕವಾಡ್ ಮಾತನಾಡಿರುವ ಅವರ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ, "ಮೊಣಕೈ ಗಾಯಕ್ಕೆ ತುತ್ತಾಗಿ ಐಪಿಎಲ್‌ನಿಂದ ಹೊರಬಿದ್ದಿರುವುದಕ್ಕೆ ನನಗೆ ತುಂಬಾ ಬೇಸರವಾಗಿದೆ. ಈ ವರೆಗೂ ನೀವೂ ನೀಡಿರುವ ಬೆಂಬಲಕ್ಕೆ ಧನ್ಯವಾದಗಳು.
ಈ ಋತುವಿನಲ್ಲಿ ನಮ್ಮ ತಂಡ ಸಾಮಾನ್ಯ ಪ್ರದರ್ಶನ ನೀಡುತ್ತಿದೆ. ಇದೀಗ ತಂಡವನ್ನು ಯುವ ವಿಕೆಟ್ ಕೀಪರ್ (ಎಮ್ಎಸ್ ಧೋನಿ) ಮುನ್ನಡೆಸುತ್ತಾರೆ. ಪರಿಸ್ಥಿತಿ ಬದಲಾಗುತ್ತದೆ ಎಂದು ಆಶಿಸುತ್ತೇವೆ. ನಾನು ತಂಡದೊಂದಿಗೆ ಇರುತ್ತೇನೆ ಮತ್ತು ಅವರಿಗೆ ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ" ಎಂದಿದ್ದಾರೆ.
ನಾಯಕ ಬದಲಾದರೂ ಸಿಎಸ್ಕೆಗೆ ಒಲಿಯದ ಗೆಲುವು
ಧೋನಿ ನಾಯಕತ್ವದಲ್ಲಿ ಸಿಎಸ್ಕೆ ತಂಡ ಕೆಕೆಆರ್ ವಿರುದ್ಧ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿದೆ. ತವರು ಮೈದಾನ ಚೆಪಾಕ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ ತಂಡ 20 ಓವರ್ಗಳಲ್ಲಿ 103ರನ್ ಮಾತ್ರ ಕಲೆಹಾಕಿತು. ತಂಡದ ಪರ ವಿಜಯ್ ಶಂಕರ್ (29) ಮತ್ತು ಶಿವಂ ದುಬೆ (31) ಹೊರತು ಪಡಿಸಿ ಉಳಿದ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಲಿಲ್ಲ.
Straight from Rutu’s soul! 🤳💛📹#WhistlePodu #AllYouNeedIsYellove 🦁💛 pic.twitter.com/PNIZBWR1yR
— Chennai Super Kings (@ChennaiIPL) April 10, 2025
ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ ತಂಡ 10 ಓವರ್ಗಳಲ್ಲೆ ಗೆಲುವಿನ ದಡ ಸೇರಿತು. ತಂಡದ ಪರ ಸುನಿಲ್ ನರೈನೆ (44) ಆಲ್ರೌಂಡರ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ಸಿಎಸ್ಕೆ ತಂಡ ಆಡಿದ ಆರು ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಗೆಲುವು ಸಾಧಿಸಿದ್ದು ಬಿಟ್ಟರೆ ಉಳಿದ 5 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ.
ಇದನ್ನೂ ಓದಿ: 'ನಾಯಕನಾಗಿ ಧೋನಿ ಕಮ್ಬ್ಯಾಕ್': ಮಾಹಿ ನಿರ್ಮಿಸಿರುವ ಈ ದಾಖಲೆಗಳು ಮುರಿಯುವುದು ಅಸಾಧ್ಯ!