IPL 2025 RCB vs SRH Match: ಐಪಿಎಲ್ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿ ಆಗುತ್ತಿವೆ. ಈಗಾಗಲೇ 17 ಅಂಕಗಳೊಂದಿಗೆ ಪ್ಲೇಆಫ್ಗೆ ಎಂಟ್ರಿ ಪಡೆದಿರುವ ಬೆಂಗಳೂರು ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೇ ಬೆಂಗಳೂರು ಪಡೆಯ ಅಗ್ರ ಎರಡು ಸ್ಥಾನಗಲ್ಲಿರಲಿದೆ.
ಏತನ್ಮಧ್ಯೆ, ಇಂದು ಹೈದರಾಬಾದ್ ಪಡೆ ವಿರುದ್ಧ ಸೆಣಸಾಟಕ್ಕೂ ಮೊದಲೇ ಬೆಂಗಳೂರು ತಂಡಕ್ಕೆ ದೊಡ್ಡ ಸವಾಲು ಎದುರಾಗಿದೆ. ಆರ್ಸಿಬಿ ಈ ಹಿಂದೆ ಮೇ 3 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊನೆಯ ಪಂದ್ಯವನ್ನು ಆಡಿತ್ತು. ಅದಾದ ಬಳಿಕ ಭಾರತ ಮತ್ತು ಪಾಕ್ ನಡುವಿನ ಸಂಘರ್ಷದಿಂದಾಗಿ ಒಂದು ವಾರ ಐಪಿಎಲ್ ಸ್ಥಗಿತಗೊಂಡಿತ್ತು.
A sight for sore eyes 🤩
— Royal Challengers Bengaluru (@RCBTweets) May 23, 2025
We can watch this all day long.
This is Royal Challenge presents RCB Shorts.#PlayBold #ನಮ್ಮRCB #IPL2025 pic.twitter.com/B9LwVJ6I7C
ಇದಾದ ಬೆನ್ನಲ್ಲೆ ಮೇ.17 ರಂದು ಐಪಿಎಲ್ ಮತ್ತೆ ಪುನರಾರಂಭಗೊಂಡಿತ್ತು. ಮೊದಲ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿ ಆಗಬೇಕಿತ್ತು. ಆದರೆ ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದಿದ್ದರಿಂದ ಟಾಸ್ ಕಾಣದೆ ಪಂದ್ಯವನ್ನು ರದ್ದುಗೊಳಿಸಲಾಯಿತು.
BIG Match Day and an even bigger opportunity to go 🔝 of the table in Lucknow. 🙌
— Royal Challengers Bengaluru (@RCBTweets) May 23, 2025
We need your loudest cheers tonight, 12th Man Army! 🔥
Last chance to get your tickets! Head to @bookmyshow now.
If you can’t make it to the stadium, catch all the LIVE action on @jiohotstar… pic.twitter.com/FYSzxVqI0C
ಇದೀಗ ಬೆಂಗಳೂರು ತಂಡ ಬರೋಬ್ಬರಿ 20 ದಿನಗಳ ನಂತರ ಇಂದು ಮೈದಾನಕ್ಕಿಳಿಯುತ್ತಿದೆ. ಇದರ ಬೆನ್ನಲ್ಲೇ ಆರ್ಸಿಬಿ ಮತ್ತೆ ಲಯ ಕಂಡುಕೊಳ್ಳುತ್ತಾ ಎಂಬ ಆತಂಕ ಫ್ಯಾನ್ಸ್ಗಳಲ್ಲಿ ಮೂಡಿದೆ. ಏತನ್ಮಧ್ಯೆ ಈ ಬಗ್ಗೆ ತಂಡದ ಕೋಚ್ ಪ್ರತಿಕ್ರಿಯೆ ನೀಡಿದ್ದು ನಮ್ಮ ತಂಡ ಅದ್ಬುತ ಪ್ರದರ್ಶನ ನೀಡುತ್ತಿರುವುದೆ. ಕಳೆದ 20 ದಿನಗಳಲ್ಲಿ ಯಾವುದೇ ಪಂದ್ಯಗಳನ್ನು ಆಡಿಲ್ಲ ಹೌದು, ಆದರೆ ರಜತ್ ಪಡೆಗೆ ಇದು ಆತಂಕ ಪಡುವಂತಹ ವಿಷಯವಲ್ಲ ಎಂದು ಮುಖ್ಯ ಕೋಚ್ ಆಂಡಿ ಫ್ಲವರ್ ಹೇಳಿದ್ದಾರೆ.
ಹೊಸ ವೇದಿಕೆ, ಹೊಸ ಸ್ಪರ್ಧೆ, ಅದೇ ಉತ್ಸಾಹ! ❤️🔥🙌#PlayBold #ನಮ್ಮRCB #IPL2025 pic.twitter.com/H77yOs8GPq
— Royal Challengers Bengaluru (@RCBTweets) May 23, 2025
ಇಂದಿನ ಪಂದ್ಯದಲ್ಲಿ ರಜತ್ ಪಾಟಿದಾರ್ ಆಡುವುದು ಕೂಡ ಕನ್ಫರ್ಮ್ ಆಗಿದೆ. ಜ್ವರಕ್ಕೆ ತುತ್ತಾಗಿದ್ದ ಫಿಲ್ ಸಾಲ್ಟ್ ಕೂಡು ಚೇತರಿಸಿಕೊಂಡಿದ್ದು ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಉಳಿದಂತೆ ವಿರಾಟ್ ಕೊಹ್ಲಿಯ ತಂಡದಲ್ಲಿರಲಿದ್ದಾರೆ. ಆದರೆ ಕನ್ನಡಿಗ ದೇವದತ್ ಪಡಿಕ್ಕಲ್ ಸ್ಥಾನಕ್ಕೆ ಯಾರು ಆಡಲಿದ್ದಾರೆ ಎಂಬ ಸವಾಲು ಎದುರಾಗಿದೆ. ಮಯಾಂಕ್ ಅಗರ್ವಾಲ್ ಆಡುವ ಸಾಧ್ಯತೆ ಹೆಚ್ಚಿದೆ.
Good weather. Great company. Big game loading tomorrow. 🤝❤️🔥#PlayBold #ನಮ್ಮRCB #IPL2025 pic.twitter.com/AfkkfoEa50
— Royal Challengers Bengaluru (@RCBTweets) May 22, 2025
ಆರ್ಸಿಬಿ ಸಂಭಾವ್ಯ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಾಕೋಬ್ ಬೆಥೆಲ್/ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ರಸಿಖ್ ಸಲಾಂ/ಲುಂಗಿ ಎನ್‌ಗಿಡಿ, ಯಶ್ ದಯಾಲ್.
𝗜𝗺𝗽𝗼𝗿𝘁𝗮𝗻𝘁 𝗡𝗼𝘁𝗶𝗰𝗲, #OrangeArmy
— SunRisers Hyderabad (@SunRisers) May 20, 2025
Our match against RCB has been moved to Lucknow due to adverse weather conditions in Bengaluru.#PlayWithFire | #RCBvSRH | #TATAIPL2025 pic.twitter.com/4fkuP6lqfy
ಇಂಪ್ಯಾಕ್ಟ್ ಪ್ಲೇಯರ್: ಸುಯಶ್ ಶರ್ಮಾ
ಇದನ್ನೂ ಓದಿ: ಗುಜರಾತ್ ವಿರುದ್ಧ ಲಕ್ನೋ ಗೆಲುವು ಸಾಧಿಸುತ್ತಿದ್ದಂತೆ ಆರ್ಸಿಬಿಗೆ ಸಿಕ್ಕಿತು ಗುಡ್ನ್ಯೂಸ್!