ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಪುರುಷರ ಹಾಕಿ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿರುವ ಭಾರತ ತಂಡ ಕಂಚಿನ ಪದಕದೊಂದಿಗೆ ತವರಿಗೆ ಮರಳಿದೆ. 52 ವರ್ಷಗಳ ಬಳಿಕ ಭಾರತ ಹಾಕಿ ತಂಡ ಸತತ ಎರಡು ಒಲಿಂಪಿಕ್ಸ್ಗಳಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುಕೊಂಡಿತ್ತು.
VIDEO | " we have received all the support, and all our requirements were fulfilled. i really want to thank... we are very happy and proud. it is a big achievement for hockey. the love that is being showered upon hockey doubles our responsibility. we will also try that whenever we… pic.twitter.com/iODyitxutq
— Press Trust of India (@PTI_News) August 10, 2024
ಇಂದು ಭಾರತ ಹಾಕಿ ತಂಡ ಪ್ಯಾರಿಸ್ನಿಂದ ತವರಿಗೆ ವಾಪಸಾದ ಬಳಿಕ ವಿಮಾನ ನಿಲ್ದಾಣದಲ್ಲಿ ಇಡೀ ತಂಡಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಹಾಕಿ ತಂಡದ ಆಟಗಾರರು ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ನೆರದಿದ್ದ ಅಭಿಮಾನಿಗಳು ಡ್ರಮ್ಗಳನ್ನು ಬಾರಿಸಿ ಹಾರ ಹಾಕಿ ಸ್ವಾಗತ ಕೋರಿದರು. ಇದೇ ವೇಳೆ, ಭಾರತ ಹಾಕಿ ತಂಡದ ಆಟಗಾರರೂ ಸಹ ಡ್ರಮ್ ಬಾರಿಸಿ ಕುಣಿದು ಕುಪ್ಪಳಿಸುವ ದೃಶ್ಯವೂ ಕಂಡು ಬಂತು.
VIDEO | Members of the Indian hockey team receive warm welcome as they arrive at Delhi airport from Paris.#Paris2024 #ParisOlympics2024
— Press Trust of India (@PTI_News) August 10, 2024
(Full video available on PTI Videos - https://t.co/n147TvqRQz pic.twitter.com/SqAImmXXET
ಭಾರತಕ್ಕೆ ಬಂದಿಳಿದ ನಂತರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್, "ಯಾವುದೇ ಪದಕಗಳಾಗಿರಲಿ ಒಲಿಂಪಿಕ್ಸ್‌ನಲ್ಲಿ ಗೆಲ್ಲುವುದು ಸುಲಭದ ವಿಷಯವಲ್ಲ. ನಾವು ಫೈನಲ್ ತಲುಪಲು ಮತ್ತು ಚಿನ್ನ ಗೆಲ್ಲಲು ಪ್ರಯತ್ನಿಸಿದ್ದೇವೆ. ಆದರೆ, ದುರದೃಷ್ಟವಶಾತ್ ನಮ್ಮ ಆಸೆ ಈಡೆರಲಿಲ್ಲ. ಆದರೂ ನಾವು ಬರಿಗೈಯಲ್ಲಿ ದೇಶಕ್ಕೆ ಹಿಂದಿರುಗಿಲ್ಲ, ಸತತವಾಗಿ ಪದಕಗಳನ್ನು ಗೆದ್ದಿರುವುದು ಸ್ವತಃ ದಾಖಲೆಯಾಗಿದೆ. ಪಿಆರ್ ಶ್ರೀಜೇಶ್ ಅವರಿಗೆ ಕೊನೆಯ ಒಲಿಂಪಿಕ್ಸ್ ಆಗಿದ್ದು ಇದು ಭಾವನಾತ್ಮಕ ಕ್ಷಣವಾಗಿದೆ. ಅವರು ಹಾಕಿಯಿಂದ ನಿವೃತ್ತರಾಗಿದ್ದಾರೆ, ಸದಾ ನಮ್ಮೊಂದಿಗೆ ಸಂಪರ್ಕದಲ್ಲಿರುತ್ತಾರೆ. ನಮಗೆ ಸಿಗುತ್ತಿರುವ ಪ್ರೀತಿ ನಮ್ಮ ಜವಾಬ್ದಾರಿಯನ್ನು ದ್ವಿಗುಣಗೊಳಿಸುತ್ತದೆ. ಜತಗೆ ಭಾರತ ಸರ್ಕಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ಒಡಿಶಾ ಸರ್ಕಾರಕ್ಕೂ ಧನ್ಯವಾದಗಳು ತಿಳಿಸುತ್ತೇನೆ ಎಂದು ಹೇಳಿದರು.
ಒಲಿಂಪಿಕ್ಸ್ ಸೆಮಿಫೈನಲ್‌ನಲ್ಲಿ ಭಾರತ ಹಾಕಿ ತಂಡ ಜರ್ಮನಿ ವಿರುದ್ಧ ಸೋಲನುಭವಿಸಿತು. ಈ ಸೋಲಿನೊಂದಿಗೆ ಭಾರತದ ಬೆಳ್ಳಿ ಹಾಗೂ ಚಿನ್ನದ ಪದಕ ಗೆಲ್ಲುವ ಕನಸು ಭಗ್ನಗೊಂಡಿತು. ಬಳಿಕ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಸ್ಪೇನ್ ವಿರುದ್ಧ 2-1 ಗೋಲುಗಳ ಅಂತದಿಂದ ಅದ್ಭುತ ಗೆಲುವು ಸಾಧಿಸಿ ಪದಕವನ್ನು ಗೆದ್ದುಕೊಂಡಿತು. ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಜಯಿಸಿದ್ದು ಇದು ನಾಲ್ಕನೇ ಬಾರಿಯಾಗಿದೆ. ಇದಲ್ಲದೇ ಭಾರತ ಹಾಕಿ ತಂಡ 8 ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಕೊಂಡಿದೆ.
ಟೀಂ ಇಂಡಿಯಾಗೆ ಮೋದಿ ಅಭಿನಂದನೆ: ಪದಕ ಗೆದ್ದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಇಡೀ ತಂಡವನ್ನು ಅಭಿನಂದಿಸಿದರು.
ಇದನ್ನೂ ಓದಿ: ಒಲಿಂಪಿಕ್ ಬ್ರೇಕಿಂಗ್‌ನ ಮೊದಲ ಚಿನ್ನದ ಪದಕ ಗೆದ್ದ ಜಪಾನ್ ಬಿ-ಗರ್ಲ್ ಅಮಿ - Japan B girl won gold medal