Ruturaj Gaikwad and Khleel Ahmed Viral Video: ಐಪಿಎಲ್ 2025ರ ಭಾಗವಾಗಿ ಭಾನುವಾರ (ನಿನ್ನೆ) ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಚೆನ್ನೈ ತಂಡ ಮುಂಬೈ ಅನ್ನು 4 ವಿಕೆಟ್ಗಳಿಂದ ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಚೆನ್ನೈ ಪರ ಖಲೀಲ್ ಅಹ್ಮದ್ 3 ವಿಕೆಟ್ ಮತ್ತು ನೂರ್ ಅಹ್ಮದ್ 4 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಈ ಪಂದ್ಯದಲ್ಲಿ ಅದ್ಭೂತ ಪ್ರದರ್ಶನ ನೀಡಿರುವ ಖಲೀಲ್ ಅಹ್ಮದ್ ಮತ್ತು ನಾಯಕ ಋತುರಾಜ್ ಗಾಯಕ್ವಾಡ್ ವಿರುದ್ಧ ದೊಡ್ಡ ಆರೋಪ ಕೇಳಿ ಬಂದಿದ್ದು ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Khaleel Ahmed Gives something to Ruturaj Gaikwad secretly after doing ball tempering and ruturaj put it in his pocket.
— Kevin (@imkevin149) March 24, 2025
These fixers should be banned again for forever. pic.twitter.com/EY0mHHNeRf
ಹೌದು, ಈ ಪಂದ್ಯದಲ್ಲಿ ಟಾಸ್ ಸೋತು ಮುಂಬೈ ತಂಡ ಮೊದಲು ಬ್ಯಾಟಿಂಗ್ಗೆ ಆಗಮಿಸಿತ್ತು. ಚೆನ್ನೈ ಪರ ಖಲೀಲ್ ಅಹ್ಮದ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ನಾಯಕ ಋತುರಾಜ್ ಗಾಯಕ್ವಾಡ್, ಖಲೀಲ್ ಅಹ್ಮದ್ ಬಳಿ ತೆರಳಿ ಮಾತನಾಡಿದ್ದರು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಿಗಿದೆ. ಅಲ್ಲದೆ ಈ ಇಬ್ಬರು ಬಾಲ್ ಟೆಂಪರಿಂಗ್ ಮಾಡಿದ್ದಾರೆ ಎಂದು ಆರೋಫಿಸಲಾಗಿದೆ.
Khaleel Ahmed was doing something to ball with an unknown object then he gave that object to Ruturaj Gaikwad....
— Jonas Kahnwald (@JonasKahnwaldOG) March 24, 2025
Is it BALL TEMPERING👀👀
BCCI must investigate it.....#CSKvsMI
Video Credit:- @JioHotstar, @StarSportsIndia & @IPL pic.twitter.com/HlEMYExO1c
ವಿಡಿಯೋದಲ್ಲಿ ಏನಿದೆ?: ವೈರಲ್ ಆದ ವಿಡಿಯೋದಲ್ಲಿ ಖಲೀಲ್ ಅಹ್ಮದ್ ತಮ್ಮ ಜೇಬಿನಿಂದ ಕೈ ಹೊರ ತೆಗೆದು ಚೆಂಡನ್ನು ಮುಟ್ಟಿದ್ದರು. ಬಳಿಕ ನಾಯಕ ಋತುರಾಜ್ ಗಾಯಕ್ವಾಡ್ ಕೈಗೆ ಏನೋ ಕೊಟ್ಟಂತೆ ಮತ್ತು ಅದನ್ನು ಋತುರಾಜ್ ಜೇಬಿನಲ್ಲಿ ಹಾಕಿಕೊಂಡಿದ್ದು ವಿಡಿಯೋದಲ್ಲಿ ಕಂಡು ಬಂದಿದೆ. ಇದರ ಬೆನ್ನಲ್ಲೆ ಫ್ಯಾನ್ಸ್ಗಳು ಸಿಎಸ್ಕೆ ತಂಡದ ವಿರುದ್ಧ ಬಾಲ್ ಟೆಂಪರಿಂಗ್ ಆರೋಪ ಮಾಡಲಾರಂಭಿಸಿದ್ದಾರೆ.
ಫ್ಯಾನ್ಸ್ ಆಗ್ರಹ: ಅಲ್ಲದೆ ಸಿಎಸ್ಕೆ ತಂಡವನ್ನು ಶಾಶ್ವತವಾಗಿ ಬ್ಯಾನ್ ಮಾಡುವಂತೆ ಆಗ್ರಹಿಸಿದ್ದಾರೆ. ಕೆವಿನ್ ಎಂಬ ಎಕ್ಸ್ ಬಳಕೆದಾರ 2016 ಮತ್ತು 2017ರಲ್ಲಿ ತಂಡದ ಮಾಲೀಕರು ಬೆಟ್ಟಿಂಗ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದರಿಂದ ಫ್ರ್ಯಾಂಚೈಸ್ ಎದುರಿಸಿದ ಎರಡು ವರ್ಷಗಳ ನಿಷೇಧವನ್ನು ನೆನಪಿಸುತ್ತಾ ಮತ್ತೊಮ್ಮೆ ಫ್ರಾಂಚೈಸಿಯನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ. ಆದರೆ ಫ್ಯಾನ್ಸ್ಗಳ ಈ ಆರೋಪಕ್ಕೆ ಈ ವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಖಲೀಲ್ ಅಹ್ಮದ್ ಭರ್ಜರಿ ಪ್ರದರ್ಶನ: ಈ ಪಂದ್ಯದಲ್ಲಿ ಖಲೀಲ್ ಅಹ್ಮದ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು 4 ಓವರ್ಗಳಲ್ಲಿ 29 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: 43ನೇ ವಯಸ್ಸಿನಲ್ಲೂ ಕುಗ್ಗದ ಜೋಶ್: ಧೋನಿ ಶರವೇಗದ ಸ್ಟಂಪಿಂಗ್ಗೆ ಸೂರ್ಯ ಶಾಕ್!