ETV Bharat / sports

35 ಬಾಲ್​, 11 ಸಿಕ್ಸ್​, 7 ಬೌಂಡರಿ: ಭಾರತ ತಂಡಕ್ಕೆ ಮತ್ತೊಬ್ಬ ರನ್​ ಮಷಿನ್​ ಸಿಕ್ಕಂತಾಯ್ತಾ!? - VAIBHAV SURYAVANSHI

ರನ್​ ಮಷಿನ್​ ಎಂಬ ಖ್ಯಾತಿ ಗಳಿಸಿದ್ದ ನಮ್ಮ ವಿರಾಟ್​ ಕೊಹ್ಲಿ.. ಈಗ ಈ ರನ್​ ಮಷಿನ್​ ಹೆಸರಿಗೆ ಹೇಳಿ ಮಾಡಿಸಿದಂತಿದ್ದಾರೆ ವೈಭವ್​.. ಮುಂದಿನ ದಿನಗಳಲ್ಲಿ ವೈಭವ್​ಗೆ ಭಾರತ ತಂಡದಲ್ಲಿ ಅವಕಾಶ ಸಿಗುವ ಲಕ್ಷಣಗಳಿವೆ.

RUN MACHINE VIRAT KOHLI  RUN MACHINE VAIBHAV SURYAVANSHI  RAJASTHAN ROYALS VS GUJARAT TITANS  IPL 2025
ಭಾರತ ತಂಡಕ್ಕೆ ಮತ್ತೊಬ್ಬ ರನ್​ ಮಷಿನ್​ ಸಿಕ್ಕಿದಂತಾಯ್ತು (Photo Credit: IANS)
author img

By ETV Bharat Sports Team

Published : April 29, 2025 at 8:27 AM IST

2 Min Read

Vaibhav Suryavanshi: ಸದ್ಯ ಎಲ್ಲರ ಬಾಯಲ್ಲಿ ಈಗ ವೈಭವ್​ ಸೂರ್ಯವಂಶಿದ್ದೇ ಮಾತು. ನಿನ್ನೆ ಆಡಿದ ಆಕ್ರಮಣ ಆಟಕ್ಕೆ ಕ್ರಿಕೆಟ್​ ದಿಗ್ಗಜರು ಮಾತ್ರವಲ್ಲದೇ ಇಡೀ ಕ್ರಿಕೆಟ್​ ಅಭಿಮಾನಿಗಳೇ ಕಿರಿಯ ಕ್ರಿಕೆಟಿಗನನ್ನು ಕೊಂಡಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವೈಭವ್​ ಸೂರ್ಯವಂಶಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಗಬಹುದಾಗಿದೆ.

ರನ್​ ಮಷಿನ್​ ಆಗಬಹುದೇ ವೈಭವ್​?: ಈ ಬಾರಿಯ ಐಪಿಎಲ್​ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲೇ ಇದು ಮೊದಲ ಸೆಂಚೂರಿ ಆಗಿದೆ. ಮೊದಲ ಬಾರಿಗೆ ಲಕ್ನೋ ಸೂಪರ್​ ಜೆಂಟ್ಸ್​ ವಿರುದ್ಧ ಕಣಕ್ಕಿಳಿದಿದ್ದ ವೈಭವ್​ ಭರ್ಜರಿ ಬ್ಯಾಟ್​ ಬೀಸಿದ್ದರು. ಪಾದಾರ್ಪಣೆ ಪಂದ್ಯದಲ್ಲೇ ಕೇವಲ 20 ಎಸೆತಗಳಲ್ಲಿ 34 ರನ್​ ಗಳಿಸಿ ಎಲ್ಲರ ಮನ ಗೆದ್ದಿದ್ದರು.

ಬಳಿಕ ವೈಭವ್​ ಆರ್​ಸಿಬಿ ವಿರುದ್ಧ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್​ ಪ್ರದರ್ಶನ ಮಾಡಲಿಲ್ಲ. ಕೇವಲ 12 ಎಸೆತಕ್ಕೆ 16 ರನ್​ ಗಳಿಸಿ ಪೆವಲಿಯನ್​ ಹಾದಿ ಹಿಡಿದಿದ್ದರು. ಆದ್ರೆ ನಿನ್ನೆ ನಡೆದ ಪಂದ್ಯದಲ್ಲಿ ಕೇವಲ 17 ಎಸೆತಗಳಿಗೆ ಅರ್ಧ ಶತಕ ಗಳಿಸುವ ಮೂಲಕ ಈ ಬಾರಿಯ ಐಪಿಎಲ್​ ನಲ್ಲಿ ಫಾಸ್ಟೆಸ್ಟ್​ ಹಾಫ್​ ಸೆಂಚೂರಿ ಗಳಿಸಿದರು.

ಇನ್ನು ಗುಜರಾತ್​ ಟೈಟಾನ್ಸ್​ ಬೌಲರ್​​ಗಳ ಬೆವರಿಳಿಸಿದ್ದ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ 11 ಸಿಕ್ಸ್​, 7 ಬೌಂಡರಿ ಬಾರಿಸುವ ಮೂಲಕ 101 ರನ್ ಗಳಿಸಿದ್ದಾರೆ. ಸೂರ್ಯವಂಶಿ ಆಟದ ಶೈಲಿ ನೆರೆದಿದ್ದ ಪ್ರೇಕ್ಷಕರಿಗೆ ಮಾತ್ರವಲ್ಲ ಕ್ರಿಕೆಟ್​ ದಿಗ್ಗಜರಿಗೂ ಅಚ್ಚರಿ ಮೂಡಿಸಿತು. ಬೌಂಡರಿ, ಸಿಕ್ಸರ್ ಮೂಲಕ ಅಬ್ಬರಿಸಿ ಶತಕ ಗಳಿಸಿದ ಸೂರ್ಯವಂಶಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ಆಟದ ವಿಡಿಯೋಗಳು ವೈರಲ್​ ಆಗ್ತಿದ್ದು, ಸಂಚಲನ ಮೂಡಿಸುತ್ತಿವೆ.

ಸದ್ಯ ನಮ್ಮ ಹೆಮ್ಮೆಯ ವಿರಾಟ್​ ಕೊಹ್ಲಿಯನ್ನು ಎಲ್ಲರೂ ರನ್​ ಮಷಿನ್​ ಎಂದೇ ಕರೆಯುತ್ತಾರೆ. ಅವರ ಸಾಧನೆಗಳನ್ನು ಸರಿಗಟ್ಟುವುದು ಅಷ್ಟು ಸುಲಭದ ಮಾತಲ್ಲ. ಅವರು ಕ್ರೀಸ್​ನಲ್ಲಿದ್ದಾಗ ಒಂದು ಕ್ಷಣ ಯೋಚಿಸಿ ಬೌಲರ್​ಗಳನ್ನು ಬೌಲಿಂಗ್ ಮಾಡ್ತಾರೆ. ಕೊಹ್ಲಿ ಕೈಯಲ್ಲಿ ಬ್ಯಾಟ್​ ಇದ್ರೆ ಸಾಕು ರನ್​ಗಳ ಸುರಿ ಮಳೆಯೇ ನಡೆಯುತ್ತದೆ. ಈಗ ರನ್​ ಮಷಿನ್​ ರೂಪದಲ್ಲಿ ಸೂರ್ಯವಂಶಿ ಕಾಣುತ್ತಿದ್ದಾರೆ. ಕೇವಲ ಐಪಿಎಲ್​ ನಲ್ಲಿ ಮೂರು ಪಂದ್ಯಗಳಾಡಿರುವ ಸೂರ್ಯವಂಶಿ ಒಟ್ಟು 147 ರನ್​ ಗಳನ್ನು ಕಲೆ ಹಾಕಿದ್ದಾರೆ. ಇವರಿಗೆ ಮುಂದಿನ ದಿನಗಳಲ್ಲಿ ಭಾರತ ಕ್ರಿಕೆಟ್​ ತಂಡದ 11 ರ ಬಳಗದಲ್ಲಿ ಆಡಲು ಅವಕಾಶ ಸಿಗಬಹುದಾಗಿದೆ.

ಓದಿ: ಪಠಾಣ್, ಹೆಡ್​, ಮಿಲ್ಲರ್ ದಾಖಲೆ ಧೂಳಿಪಟ: 35 ಎಸೆತಗಳಲ್ಲಿ ಸೆಂಚೂರಿ ಬಾರಿಸಿದ 14ರ ಪೋರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.