ಮೇಷ : ಈ ವಾರವು ಮೇಷ ರಾಶಿಯವರಿಗೆ ಅನುಕೂಲಕರವಾಗಿದೆ. ಆದರೆ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಬೇಕು. ಕೆಲವೊಂದು ಹವ್ಯಾಸಗಳನ್ನು ನಿರ್ಲಕ್ಷಿಸಿದರೆ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ನಿಮ್ಮ ಕುರಿತು ಕಾಳಜಿ ವಹಿಸುವುದು ಅಗತ್ಯ. ವ್ಯಾಪಾರೋದ್ಯಮಿಗಳು ಹೊಸ ಸಂಪರ್ಕವನ್ನು ಪಡೆಯುವ ನಿರೀಕ್ಷೆ ಇದ್ದು, ಇದರಿಂದ ಆರ್ಥಿಕ ಪ್ರಗತಿ ಮತ್ತು ವಿಸ್ತರಣೆ ಉಂಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವವರಿಗೆ ಪ್ರಗತಿ ಉಂಟಾಗಲಿದ್ದು, ವೃತ್ತಿಯಲ್ಲಿ ಮುನ್ನಡೆ ದೊರೆಯಲಿದೆ. ಪ್ರೇಮ ಸಂಬಂಧದಲ್ಲಿ, ಸಹೋದ್ಯೋಗಿಯತ್ತ ಭಾವನೆಗಳು ಚಿಗುರುವ ಸಾಧ್ಯತೆ ಇದೆ. ಆದರೆ ಮೂರನೇ ವ್ಯಕ್ತಿಯು ಉಂಟು ಮಾಡಬಹುದಾದ ಅನಗತ್ಯ ಒತ್ತಡವನ್ನು ದೂರ ಮಾಡುವುದಕ್ಕಾಗಿ ಸಂಬಂಧದಲ್ಲಿ ಸ್ಪಷ್ಟತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ಹೂಡಿಕೆಗಳ ಕುರಿತು ಮಾತನಾಡುವುದಾದರೆ, ಆರ್ಥಿಕ ಪ್ರಗತಿಗಾಗಿ ಈ ವಾರದಲ್ಲಿ ಉತ್ತಮ ಅವಕಾಶ ಲಭಿಸಲಿದೆ. ಆದರೆ ಮುಖ್ಯವಾಗಿ ಕುಟುಂಬದ ಸದಸ್ಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವೊಂದು ಅನಿರೀಕ್ಷಿತ ವೆಚ್ಚಗಳು ಉಂಟಾಗಬಹುದು. ಜಾಗರೂಕತೆ ವಹಿಸಿ ಬಾಕಿ ಇರುವ ಕೆಲಸವನ್ನು ಮುಗಿಸಲು ಒತ್ತು ನೀಡಿದರೆ ಮಾನಸಿಕ ಒತ್ತಡವನ್ನು ದೂರ ಮಾಡಬಹುದು. ಒಟ್ಟಾರೆಯಾಗಿ ಆರೋಗ್ಯ, ಸಂಬಂಧ ಮತ್ತು ಹಣಕಾಸಿಗೆ ಸಂಬಂಧಿಸಿದಂತೆ ಸಂತುಲನವನ್ನು ಕಾಪಾಡಿದರೆ ಈ ವಾರವು ಉತ್ಪಾದಕ ಎನಿಸಲಿದೆ.
ವೃಷಭ : ವೃಷಭ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ಈ ನಿಟ್ಟಿನಲ್ಲಿ ನೀವು ಹೆಚ್ಚಿನ ಕಾಳಜಿ ವಹಿಸಬೇಕು. ನಿರಂತರವಾಗಿ ಯೋಗ ಮತ್ತು ವ್ಯಾಯಾಮವನ್ನು ಮಾಡಬೇಕು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರದಲ್ಲಿ ಸ್ವಲ್ಪ ಅಡಚಣೆಗಳು ಉಂಟಾಗಬಹುದು. ನಿಮ್ಮ ನಿರೀಕ್ಷೆಗೆ ತಕ್ಕುದಾಗಿ ನೀವು ಲಾಭವನ್ನು ಪಡೆಯದಿದ್ದರೆ ನಿಮಗೆ ನಿರಾಸೆ ಉಂಟಾಗಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಸಂತಸ ಕಾಣಲಿದ್ದಾರೆ. ಆದರೆ ಕೆಲಸವನ್ನು ಬದಲಾಯಿಸುವ ಕುರಿತು ನೀವು ಯೋಚಿಸಬಾರದು. ಈ ವಾರದಲ್ಲಿ ನಿಮಗೆ ಅರ್ಥಿಕ ನಷ್ಟ ಉಂಟಾಗಬಹುದು. ಇದರಿಂದಾಗಿ ನಿಮಗೆ ಬೇಸರ ಕಾಡಬಹುದು. ಪ್ರೇಮ ಸಂಬಂಧದಲ್ಲಿ ಒಂದಷ್ಟು ಅಂತರ ಮೂಡುವ ಸಾಧ್ಯತೆ ಇದೆ. ನಿಮ್ಮ ವೈವಾಹಿಕ ಸಂಬಂಧದ ಕುರಿತು ಹೇಳುವುದಾದರೆ ಸಮಯವು ಚೆನ್ನಾಗಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಸಾಕಷ್ಟು ಸಮಯವನ್ನು ಅನ್ಯೋನ್ಯತೆಯಿಂದ ಕಳೆಯಲಿದ್ದೀರಿ. ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಅಧ್ಯಯನಕ್ಕೆ ಒತ್ತು ನೀಡಲಿದ್ದಾರೆ.
ಮಿಥುನ : ಈ ವಾರದಲ್ಲಿ ಮಿಥುನ ರಾಶಿಯವರಿಗೆ ಮುಖ್ಯವಾಗಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದಷ್ಟು ಸವಾಲುಗಳು ಉಂಟಾಗಬಹುದು. ಏಕೆಂದರೆ ದೀರ್ಘಕಾಲೀನ ಅನಾರೋಗ್ಯವು ಒಂದಷ್ಟು ಅನನುಕೂಲತೆಯನ್ನು ಉಂಟು ಮಾಡಬಹುದು. ಆದರೆ ವ್ಯಾಪಾರೋದ್ಯಮಿಗಳು ಹೊಸ ಸಂಪರ್ಕವನ್ನು ಬೆಳೆಸುವ ಮೂಲಕ ಹಾಗೂ ಜಾಲವನ್ನು ವಿಸ್ತರಿಸುವ ಮೂಲಕ ಗಣನೀಯ ಪ್ರಗತಿಯನ್ನು ಸಾಧಿಸಬಹುದು. ಉದ್ಯೋಗವನ್ನು ಅರಸುತ್ತಿರುವವರಿಗೆ ಮತ್ತು ವೃತ್ತಿಯಲ್ಲಿ ಪ್ರಗತಿಯನ್ನು ಕಾಣಲು ಇಚ್ಛಿಸುವವರಿಗೆ ಆಶಾದಾಯಕ ಅವಕಾಶಗಳು ಲಭಿಸಲಿವೆ. ಪ್ರೇಮ ಸಂಬಂಧದಲ್ಲಿ ಗೊಂದಲ ಮತ್ತು ತಪ್ಪು ಗ್ರಹಿಕೆ ಉಂಟಾಗಲಿದ್ದು, ಇದನ್ನು ದೂರ ಮಾಡಲು ತಾಳ್ಮೆ ಮತ್ತು ಸಂವಹನದ ಅಗತ್ಯವಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಯತ್ನಿಸಲಿದ್ದಾರೆ. ಶೇರು ಮಾರುಕಟ್ಟೆಯ ಅವಕಾಶವನ್ನು ಪರಿಗಣಿಸುವುದಾದರೆ, ಈ ವಾರವು ಆರ್ಥಿಕ ಪ್ರಗತಿಗೆ ಅನುಕೂಲಕರ. ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಮಯವನ್ನು ಕಳೆಯಬಹುದು. ಇದರಿಂದಾಗಿ ಅಧ್ಯಯನದ ಮೇಲಿನ ಗಮನವು ಬೇರೆಡೆಗೆ ಹೋಗಬಹುದು. ಶಿಸ್ತು ಮತ್ತು ಏಕಾಗ್ರತೆಯನ್ನು ಕಾಪಾಡುವುದರಿಂದ ಯಶಸ್ಸನ್ನು ಸಾಧಿಸಬಹುದು. ಒಟ್ಟಾರೆಯಾಗಿ ಈ ವಾರದಲ್ಲಿ ಆರೋಗ್ಯ, ಸಂಬಂಧ ಮತ್ತು ಉತ್ಪಾದಕತೆಗೆ ಒತ್ತು ನೀಡಿದರೆ ನಿಮ್ಮ ಹಾದಿಯಲ್ಲಿ ಬರುವ ಹೆಚ್ಚಿನ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಬಹುದು.
ಕರ್ಕಾಟಕ : ಕರ್ಕಾಟಕ ರಾಶಿಯವರಿಗೆ ಈ ವಾರವು ಧನಾತ್ಮಕ ಫಲಿತಾಂಶವನ್ನು ತರಲಿದೆ. ಅದರೆ ಜೀರ್ಣಕ್ರಿಯೆ ಮತ್ತು ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ವಿಶೇಷ ಕಾಳಜಿ ಅಗತ್ಯ. ವ್ಯಾಪಾರೋದ್ಯಮಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಹೊಸ ಉದ್ಯಮವನ್ನು ಪ್ರಾರಂಭಿಸಲು ಇಚ್ಛಿಸುವವರಿಗೆ ಲಾಭದಾಯಕ ಫಲಿತಾಂಶ ದೊರೆಯಲಿದೆ. ಉದ್ಯೋಗವನ್ನು ಅರಸುತ್ತಿರುವವರಿಗೆ ಮತ್ತು ಬದಲಾವಣೆಯನ್ನು ಕಾಣಲು ಇಚ್ಛಿಸುವವರಿಗೆ ಆಶಾದಾಯಕ ಅವಕಾಶಗಳು ಲಭಿಸಲಿವೆ. ಪ್ರೇಮ ಸಂಬಂಧಕ್ಕೆ ಕುರಿತಂತೆ ಹೇಳುವುದಾದರೆ, ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದರಿಂದ ಮತ್ತು ನಿಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸುವುದರಿಂದ ನಿಮ್ಮ ಬಂಧವನ್ನು ಗಟ್ಟಿಗೊಳಿಸಬಹುದು. ವಿವಾಹಿತ ವ್ಯಕ್ತಿಗಳು ಸಂಬಂಧದಲ್ಲಿ ಸಾಮರಸ್ಯವನ್ನು ಕಾಪಾಡಬೇಕಾದರೆ ಗರ್ವ ಮತ್ತು ಅಹಂ ಅನ್ನು ತೋರಬಾರದು. ಹಣಕಾಸಿನ ವಿಚಾರದಲ್ಲಿ ಹೇಳುವುದಾದರೆ, ಗೃಹೋಪಯೋಗಿ ವಸ್ತುಗಳಿಗಾಗಿ ನೀವು ಹಣ ಖರ್ಚು ಮಾಡಲಿದ್ದು, ಮನೆಯನ್ನು ಇನ್ನಷ್ಟು ಸುಂದರಗೊಳಿಸಲಿದ್ದೀರಿ. ಪ್ರಮುಖ ಚರ್ಚೆಯಲ್ಲಿ ಪಾಲ್ಗೊಳ್ಳುವುದರಿಂದ ಸಂತಸ ಮತ್ತು ತೃಪ್ತಿ ದೊರೆಯಲಿದೆ. ಒಟ್ಟಾರೆಯಾಗಿ ಈ ವಾರದಲ್ಲಿ ಆರೋಗ್ಯ ಮತ್ತು ಭಾವನೆಗಳನ್ನು ಜಾಣ್ಮೆಯಿಂದ ನಿಭಾಯಿಸಿದರೆ ವೃತ್ತಿ ಮತ್ತು ಸಂಬಂಧದಲ್ಲಿ ಪ್ರಗತಿ ಸಾಧಿಸಲು ಅವಕಾಶ ಲಭಿಸಲಿದೆ.
ಸಿಂಹ : ಈ ವಾರದಲ್ಲಿ ಸಿಂಹ ರಾಶಿಯವರಿಗೆ ಮಿಶ್ರ ಫಲಿತಾಂಶ ದೊರೆಯಲಿದೆ. ಆರೋಗ್ಯದ ಕುರಿತು ಹೇಳುವುದಾದರೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹೀಗಾಗಿ ಹೊರಗಿನ ಆಹಾರವನ್ನು ಸೇವಿಸಬೇಡಿ. ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಆದಾಯದ ಹೊಸ ಮೂಲಗಳು ಲಭಿಸಬಹುದು. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದ್ದು, ವ್ಯವಹಾರದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಆದರೆ ಉದ್ಯೋಗದಲ್ಲಿರುವವರಿಗೆ ಈ ವಾರದಲ್ಲಿ ಸಾಕಷ್ಟು ಸವಾಲುಗಳು ಉಂಟಾಗಲಿದೆ. ಆದರೆ ಅವರ ಶ್ರಮಕ್ಕೆ ತಕ್ಕುದಾದ ಫಲ ಲಭಿಸಲಿದೆ. ಪ್ರೇಮ ಸಂಬಂಧದಲ್ಲಿ ನಿಮ್ಮ ಸಂಗಾತಿಯ ಜೊತೆಗೆ ತಪ್ಪು ಗ್ರಹಿಕೆ ಉಂಟಾಗಬಹುದು. ಅಲ್ಲದೆ ನಿಮ್ಮ ಗಮನವು ಬೇರೆಡೆಗೆ ಹೋಗುವ ಸಾಧ್ಯತೆ ಇದೆ. ವಿವಾಹಿತ ವ್ಯಕ್ತಿಗಳು ತಮ್ಮ ಬಂಧವನ್ನು ಗಟ್ಟಿಗೊಳಿಸುವುದಕ್ಕಾಗಿ ಪ್ರೀತಿ ಮತ್ತು ಸರಳತೆಗೆ ಒತ್ತು ನೀಡಬೇಕು. ಆರ್ಥಿಕವಾಗಿ ಹೇಳುವುದಾದರೆ, ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುವುದು ಅಥವಾ ಜಮೀನನ್ನು ಖರೀದಿಸುವುದು ಪ್ರಯೋಜನಕಾರಿ. ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಬೇಕಾದರೆ ಕೆಲವೊಂದು ವಿಷಯಗಳಲ್ಲಿ ಹೆಚ್ಚಿನ ಪ್ರಯತ್ನ ಮಾಡಬೇಕು. ಒಟ್ಟಾರೆಯಾಗಿ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ಸುಗಮವಾಗಿ ಮುಂದಕ್ಕೆ ಹೆಜ್ಜೆ ಇಡಬೇಕಾದರೆ ತಾಳ್ಮೆ ಮತ್ತು ಪ್ರಯತ್ನದ ಜೊತೆಗೆ ಎಚ್ಚರಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಕು.
ಕನ್ಯಾ : ಕನ್ಯಾ ರಾಶಿಯವರಿಗೆ ಈ ವಾರವು ಅನುಕೂಲಕರ. ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮ ಆರೋಗ್ಯವು ಹಿಂದೆಗಿಂತ ಚೆನ್ನಾಗಿರಲಿದೆ. ಆದರೆ ಒಂದಷ್ಟು ಮಾನಸಿಕ ಒತ್ತಡವು ಇರಬಹುದು. ವ್ಯವಹಾರದ ಕುರಿತು ಹೇಳುವುದಾದರೆ, ಮನೆಯಿಂದ ದೂರವಿದ್ದು ವ್ಯವಹಾರವನ್ನು ನಡೆಸುತ್ತಿರುವವರು ಮನೆಯ ಸಮೀಪದಲ್ಲಿ ವ್ಯವಹಾರವನ್ನು ಪ್ರಾರಂಭಿಸುವ ಕುರಿತು ಯೋಚಿಸಬಹುದು. ಉದ್ಯೋಗದಲ್ಲಿರುವವರಿಗೆ ಸಮಯವು ಚೆನ್ನಾಗಿರಲಿದೆ. ಆದರೆ ಕೆಲಸವನ್ನು ಬದಲಾಯಿಸಲು ಇಚ್ಛಿಸುವುದಾದರೆ, ಅವಸರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಪ್ರೇಮ ಸಂಬಂಧದಲ್ಲಿ ಅನುರಾಗ ನೆಲೆಸಲಿದೆ. ವೈವಾಹಿಕ ಸಂಬಂಧವನ್ನು ಕಾಡುತ್ತಿರುವ ಸಮಸ್ಯೆಗಳು ದೂರಗೊಳ್ಳಲಿದ್ದು, ಸಾಮರಸ್ಯ ನೆಲೆಸಲಿದೆ. ಹಣಕಾಸಿನ ವಿಚಾರದಲ್ಲಿ ಹೇಳುವುದಾದರೆ, ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಸಕಾಲ. ಆದರೆ ಸೂಕ್ತ ಯೋಜನೆ ರೂಪಿಸುವುದು ಅಗತ್ಯ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಗಮನ ನೀಡಬೇಕು. ಉನ್ನತ ಶಿಕ್ಷಣವನ್ನು ಪಡೆಯುತ್ತಿರುವವರು ಹೊಸ ಕೋರ್ಸ್ ಗಳನ್ನು ಶೋಧಿಸಬಹುದು. ಒಟ್ಟಾರೆಯಾಗಿ ಸಾಕಷ್ಟು ಪರ್ಯಾಲೋಚಿಸಿದ ನಂತರ ನೀವು ನಿರ್ಧಾರವನ್ನು ತೆಗೆದುಕೊಂಡರೆ ಹಾಗೂ ನಿಮ್ಮ ಯೋಗಕ್ಷೇಮದ ಕುರಿತು ಸಂತುಲಿತ ಮನೋಭಾವವನ್ನು ಮೈಗೂಡಿಸಿಕೊಂಡರೆ ಈ ವಾರವು ವೈಯಕ್ತಿಕ ಮತ್ತು ವೃತ್ತಿಪರ ಪ್ರಗತಿಗೆ ಅವಕಾಶವನ್ನು ತಂದು ಕೊಡಲಿದೆ.
ತುಲಾ : ಈ ವಾರದಲ್ಲಿ ನರಕ್ಕೆ ಸಂಬಂಧಿಸಿದಂತೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಇದರಿಂದ ಪರಿಹಾರ ಪಡೆಯುವುದಕ್ಕಾಗಿ ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಅಗತ್ಯ. ವೃತ್ತಿ ಮತ್ತು ವ್ಯವಹಾರದ ಕುರಿತು ಹೇಳುವುದಾದರೆ, ವ್ಯಾಪಾರಿಗಳು ತಮ್ಮ ಕೆಲಸವನ್ನು ಶಿಸ್ತಿನಿಂದ ನಿಭಾಯಿಸಲಿದ್ದಾರೆ. ಇದರಿಂದ ಅವರಿಗೆ ಸ್ಥಿರವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ. ಉದ್ಯೋಗದಲ್ಲಿರುವವರಿಗೆ ಏನಾದರೂ ಹೊಸತನ್ನು ಕಲಿಯುವ ಅವಕಾಶವಿದ್ದು, ಅವರ ಕೌಶಲ್ಯವನ್ನು ವೃದ್ಧಿಸಲು ನೆರವು ದೊರೆಯಲಿದೆ. ಆದರೆ ಪ್ರೇಮ ಸಂಬಂಧದಲ್ಲಿ ಸಮಸ್ಯೆಗಳು ಎದುರಾಗಬಹುದು. ಕೋಪ ಮತ್ತು ತಪ್ಪು ಗ್ರಹಿಕೆಯ ಕಾರಣ ಉಂಟಾಗುವ ಒತ್ತಡದಿಂದಾಗಿ ವೈವಾಹಿಕ ಬದುಕಿನಲ್ಲಿ ಹಿನ್ನಡೆ ಕಾಣಿಸಿಕೊಳ್ಳಬಹುದು. ಆರ್ಥಿಕವಾಗಿ ಅನಿರೀಕ್ಷಿತ ವೆಚ್ಚಗಳು ಅಡಚಣೆಯನ್ನುಂಟು ಮಾಡಬಹುದು. ಹೀಗಾಗಿ ಹಣವನ್ನು ಸರಿಯಾಗಿ ಹೊಂದಿಸುವುದು ಅಗತ್ಯ. ಆದರೆ ಭೂಮಿ ಮತ್ತು ಆಸ್ತಿಯಲ್ಲಿ ದೀರ್ಘಕಾಲೀನ ಹೂಡಿಕೆ ಮಾಡಿದರೆ ಲಾಭ ಉಂಟಾಗಬಹುದು. ಆದರೆ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಹೆಚ್ಚಿನ ಗಮನ ನೀಡಬೇಕು. ಏಕೆಂದರೆ ನಿರ್ಲಕ್ಷ್ಯ ಮಾಡಿದರೆ ಹಿನ್ನಡೆ ಉಂಟಾಗಬಹುದು. ಸಂಬಂಧದಲ್ಲಿ ತಾಳ್ಮೆಯನ್ನು ಕಾಪಾಡುವ ಮೂಲಕ, ಖರ್ಚುವೆಚ್ಚಗಳನ್ನು ಜಾಣ್ಮೆಯಿಂದ ನಿಭಾಯಿಸುವ ಮೂಲಕ ಮತ್ತು ವೈಯಕ್ತಿಕ ಪ್ರಗತಿಗೆ ಸಮರ್ಪಣಾ ಭಾವವನ್ನು ತೋರುವ ಮೂಲಕ ಸವಾಲುಗಳ ನಡುವೆಯೂ ಈ ವಾರವನ್ನು ನೀವು ಚೆನ್ನಾಗಿ ಕಳೆಯಬಹುದು.
ವೃಶ್ಚಿಕ : ವೃಶ್ಚಿಕ ರಾಶಿಯವರಿಗೆ ಈ ವಾರವು ಅನುಕೂಲಕರ. ಆರೋಗ್ಯದ ಕುರಿತು ಹೇಳುವುದಾದರೆ, ಅನಿಯಮಿತ ಹೃದಯ ಬಡಿತ ಮತ್ತುಅಧಿಕ ರಕ್ತದೊತ್ತಡವು ಚಿಂತೆಗೆ ಕಾರಣವೆನಿಸಬಹುದು. ಹೀಗಾಗಿ ಸಾಕಷ್ಟು ಕಾಳಜಿ ವಹಿಸಿ ಹಾಗೂ ಅಗತ್ಯ ಬಿದ್ದಲ್ಲಿ ವೈದ್ಯಕೀಯ ನೆರವನ್ನು ಪಡೆಯಿರಿ. ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ವ್ಯಾಪಾರೋದ್ಯಮಿಗಳಿಗೆ ಗಣನೀಯ ಪ್ರಮಾಣದ ಲಾಭ ಉಂಟಾಗಬಹುದು. ಆದರೆ ಉದ್ಯೋಗದಲ್ಲಿರುವವರು ಎಚ್ಚರ ವಹಿಸಬೇಕು. ಏಕೆಂದರೆ ವೃತ್ತಿಯಲ್ಲಿ ಪ್ರಗತಿ ಸಾಧಿಸಲು ಅವಕಾಶಗಳು ದೊರೆಯಬಹುದು. ಪ್ರೇಮ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದ್ದು, ಸಾಮರಸ್ಯ ಮತ್ತು ಅನುರಾಗ ಬೆಳೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯೊಂದಿಗೆ ಅನಗತ್ಯ ವಾಗ್ವಾದವನ್ನು ಮಾಡಬಾರದು. ಶಾಂತಿ ಸಾಮರಸ್ಯ ಕಾಪಾಡುವುದಕ್ಕಾಗಿ ತಾಳ್ಮೆಯಿಂದ ಸಂವಹನ ನಡೆಸಬೇಕು. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವ ಉದ್ದೇಶವನ್ನು ನೀವು ಹೊಂದಿದ್ದರೆ, ಈ ಸಮಯವು ಅನುಕೂಲಕರವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಅಥವಾ ವ್ಯಕ್ತಿಗಳಿಗೆ ಸವಾಲುಗಳು ಎದುರಾಗಬಹುದು. ಹೀಗಾಗಿ ಯಶಸ್ಸನ್ನು ಸಾಧಿಸುವುದಕ್ಕಾಗಿ ಹೆಚ್ಚಿನ ಶ್ರಮ ಮತ್ತು ಸಮರ್ಪಣಾಭಾವದ ಅಗತ್ಯವಿದೆ. ಆರೋಗ್ಯದ ಕುರಿತು ಕಾಳಜಿ ವಹಿಸುವ ಮೂಲಕ, ಸಂಬಂಧದಲ್ಲಿ ತಾಳ್ಮೆ ವಹಿಸುವ ಮೂಲಕ ಹಾಗೂ ಆರ್ಥಿಕ ಮತ್ತು ವೃತ್ತಿ ಅವಕಾಶಗಳನ್ನು ಜಾಣ್ಮೆಯಿಂದ ಬಳಸುವ ಮೂಲಕ ಈ ವಾರವನ್ನು ನೀವು ಚೆನ್ನಾಗಿ ಬಳಸಿಕೊಳ್ಳಬಹುದು.
ಧನು : ಈ ವಾರವು ಧನು ರಾಶಿಯವರಿಗೆ ಹೊಸ ಭರವಸೆ ಮತ್ತು ಸಂತಸವನ್ನು ತರಲಿದೆ. ಆರೋಗ್ಯದ ಕುರಿತು ಹೇಳುವುದಾದರೆ, ನಿಮಗೆ ಯಾವುದೇ ಪ್ರಮುಖ ಸಮಸ್ಯೆ ಎದುರಾಗುವುದಿಲ್ಲ. ವೃತ್ತಿ ವ್ಯವಹಾರದ ದೃಷ್ಟಿಯಿಂದ ಈ ವಾರವು ಆಶಾದಾಯಕವಾಗಿದೆ. ಉತ್ಸಾಹ ಮತ್ತು ಸಮರ್ಪಣಾ ಭಾವದಿಂದ ನಿಮ್ಮ ಕೆಲಸದಲ್ಲಿ ನೀವು ತೊಡಗಿಸಿಕೊಳ್ಳಲಿದ್ದೀರಿ. ಉದ್ಯೋಗವನ್ನು ಅರಸುತ್ತಿರುವವರಿಗೆ ಮತ್ತು ಬದಲಾವಣೆಯನ್ನು ಕಾಣಲು ಇಚ್ಛಿಸುವ ವೃತ್ತಿಪರರಿಗೆ ಆಶಾದಾಯಕ ಅವಕಾಶಗಳು ಲಭಿಸಲಿವೆ. ಪ್ರೇಮ ಸಂಬಂಧದಲ್ಲಿ, ತಪ್ಪು ಗ್ರಹಿಕೆಗಳು ಒತ್ತಡವನ್ನುಂಟು ಮಾಡಬಹುದು. ಹೀಗಾಗಿ ಮುಕ್ತ ಸಂವಹನ ಅಗತ್ಯ. ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯೊಂದಿಗೆ ಸಾಮರಸ್ಯ ಮತ್ತು ಅನುರಾಗವನ್ನು ಕಾಪಾಡಲಿದ್ದಾರೆ. ಹಣಕಾಸಿನ ವಿಚಾರದಲ್ಲಿ ಹೇಳುವುದಾದರೆ, ಖರ್ಚುವೆಚ್ಚದ ಕುರಿತು ನೀವು ಜಾಗರೂಕರಾಗಿರಬೇಕು. ಏಕೆಂದರೆ ಇತರರನ್ನು ಮನವೊಲಿಸುವುದಕ್ಕಾಗಿ ಅನಗತ್ಯ ವೆಚ್ಚಗಳು ಉಂಟಾಗಬಹುದು. ಸಂಶೋಧನೆ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಅನುಕೂಲಕರವಾಗಿದೆ. ಜ್ಞಾನದ ಕ್ಷೇತ್ರವನ್ನು ವಿಸ್ತರಿಸಲು ಮತ್ತು ಹೊಸ ಒಳನೋಟವನ್ನು ಪಡೆಯಲು ಅವಕಾಶಗಳು ಲಭಿಸಲಿವೆ. ಗಮನವನ್ನು ಕೇಂದ್ರೀಕರಿಸುವ ಮೂಲಕ ಮತ್ತು ಜಾಣ್ಮೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಸಾಕಷ್ಟು ಧನಾತ್ಮಕ ಬೆಳವಣಿಗೆಗಳನ್ನು ಕಾಣಬಹುದು.
ಮಕರ : ಈ ವಾರದಲ್ಲಿ ಮಾನಸಿಕ ಒತ್ತಡವು ದೈಹಿಕ ಅನಾರೋಗ್ಯಕ್ಕೆ ಕಾರಣವೆನಿಸಬಹುದು. ಹೀಗಾಗಿ ವಿರಾಮ ಮತ್ತು ಸ್ವಯಂ ಆರೈಕೆಯ ಅಗತ್ಯವಿದೆ. ವ್ಯಾಪಾರೋದ್ಯಮಿಗಳು ಕೆಲಸಕ್ಕೆ ಸಂಬಂಧಿಸಿದ ವಿಚಾರಗಳಿಗಾಗಿ ಆಗಾಗ್ಗೆ ಪ್ರಯಾಣಿಸುವ ಅಗತ್ಯ ಬೀಳಬಹುದು. ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಮತ್ತು ಕೆಲಸವನ್ನು ಬದಲಾಯಿಸಲು ಇಚ್ಛಿಸುವ ವೃತ್ತಿಪರರಿಗೆ ಈ ವಾರವು ಅನುಕೂಲಕರವಾಗಿದೆ. ಅವರಿಗೆ ಹೊಸ ಅವಕಾಶಗಳು ಲಭಿಸಲಿವೆ. ಪ್ರೇಮ ಸಂಬಂಧದ ಕುರಿತು ಹೇಳುವುದಾದರೆ, ಒಂದು ಕಾಲದಲ್ಲಿ ನೀವು ಅನುರಾಗದ ಬಂಧವನ್ನು ಹೊಂದಿದ್ದ ಹಳೆಯ ಸಂಗಾತಿಯ ಜೊತೆಗೆ ಮತ್ತೆ ಸಂಪರ್ಕ ಬೆಳೆಯುವ ಸಾಧ್ಯತೆ ಇದೆ. ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯೊಂದಿಗೆ ಸಾಮರಸ್ಯ ಮತ್ತು ಅನುರಾಗವನ್ನು ಕಾಪಾಡಲಿದ್ದಾರೆ. ನೀವು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇಚ್ಛಿಸುವುದಾದರೆ, ದೀರ್ಘಕಾಲೀನ ಹೂಡಿಕೆಗಳು ಉತ್ತಮ ಫಲಿತಾಂಶವನ್ನು ನೀಡಬಹುದು. ವಿದ್ಯಾರ್ಥಿಗಳು ಮತ್ತು ಉನ್ನತ ಶಿಕ್ಷಣಕ್ಕೆ ಕಾಲಿಡಲು ಬಯಸುವ ವ್ಯಕ್ತಿಗಳು ಯಶಸ್ಸನ್ನು ಗಳಿಸಲಿದ್ದಾರೆ. ಆದರೆ ಆತ್ಮವಿಶ್ವಾಸ ಮತ್ತು ನಿರಂತರತೆಯ ಅಗತ್ಯವಿದೆ. ಒಟ್ಟಾರೆಯಾಗಿ ಈ ವಾರವು ಸವಾಲುಗಳು ಮತ್ತು ಅವಕಾಶಗಳನ್ನು ಹೊತ್ತು ತರಲಿದೆ. ಆದರೆ ಸರಿಯಾದ ಮನೋಭಾವದ ಮೂಲಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಬಹುದು.
ಕುಂಭ : ಕುಂಭ ರಾಶಿಯವರಿಗೆ ಈ ವಾರವು ಅನುಕೂಲಕರ. ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮ ಮನೋಬಲವು ಚೆನ್ನಾಗಿರಲಿದೆ. ನಿಮ್ಮ ರೋಗನಿರೋಧಕ ಶಕ್ತಿಯಲ್ಲಿ ಸುಧಾರಣೆ ಉಂಟಾಗಲಿದ್ದು, ಕಾಯಿಲೆಯ ವಿರುದ್ಧ ನಿಮಗೆ ರಕ್ಷಣೆ ದೊರೆಯಲಿದೆ. ವ್ಯಾಪಾರೋದ್ಯಮಿಗಳಿಗೆ ಸವಾಲುಗಳು ಎದುರಾದರೂ ಸಹ ಸಮಯವು ಉತ್ಪಾದಕ ಎನಿಸಲಿದೆ. ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಲ್ಲಿರುವವ ವೃತ್ತಿಪರರು ಧನಾತ್ಮಕ ಫಲಿತಾಂಶವನ್ನು ಪಡೆಯಲಿದ್ದಾರೆ. ನೀವು ಅವಿವಾಹಿತರಾಗಿದ್ದರೆ, ಯಾರಾದರೂ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶ ನಿಮಗೆ ಲಭಿಸಲಿದೆ. ಇದರಿಂದಾಗಿ ನಿಮ್ಮ ಪ್ರೇಮ ಜೀವನಕ್ಕೆ ಹೊಸ ತಿರುವು ದೊರೆಯಲಿದೆ. ಆದರೆ ವಿವಾಹಿತರಿಗೆ ತಮ್ಮ ಬದುಕಿನಲ್ಲಿ ಒಂದಷ್ಟು ಒತ್ತಡ ಎದುರಾಗಬಹುದು. ಆರ್ಥಿಕವಾಗಿ ಈ ವಾರವು ಆಶಾದಾಯಕವಾಗಿದೆ. ಯಾವುದೇ ಪ್ರಮುಖ ಆರ್ಥಿಕ ಸಮಸ್ಯೆಗಳು ಎದುರಾಗುವುದಿಲ್ಲ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಗಮನ ನೀಡಲಿದ್ದಾರೆ. ಗಣನೀಯ ಸಾಧನೆ ಮಾಡುವುದಕ್ಕಾಗಿ ಅವರು ಮುಂದಕ್ಕೆ ಹೆಜ್ಜೆ ಇಡಬಹುದು. ನಿಮ್ಮ ಕುಟುಂಬದ ಹಿರಿಯ ಸದಸ್ಯರು ಮತ್ತು ಗೆಳೆಯರಿಂದ ನಿಮಗೆ ಬೆಂಬಲ ದೊರೆಯಲಿದೆ. ಅಗತ್ಯ ಬಿದ್ದಾಗ ಅವರು ನಿಮಗೆ ನೆರವನ್ನು ನೀಡಲಿದ್ದಾರೆ. ಒಟ್ಟಾರೆಯಾಗಿ ಈ ವಾರವು ನಿಮಗೆ ಪ್ರಗತಿ, ಸ್ಥಿರತೆ ಮತ್ತು ಅವಕಾಶಗಳನ್ನು ಒದಗಿಸಲಿದ್ದು, ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಮುಂದಕ್ಕೆ ಹೆಜ್ಜೆ ಇಡಲು ದಾರಿ ತೆರೆದುಕೊಳ್ಳಲಿದೆ.
ಮೀನ : ಮೀನ ರಾಶಿಯವರಿಗೆ ಈ ವಾರವು ಅನುಕೂಲಕರ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮಗೆ ಬೆನ್ನುನೋವು ಕಾಡಬಹುದು. ಹೀಗಾಗಿ ಯಾವುದೇ ವಿಳಂಬ ಮಾಡದೆ ವೈದ್ಯಕೀಯ ನೆರವನ್ನು ಪಡೆಯಿರಿ. ವ್ಯಾಪಾರೋದ್ಯಮದಲ್ಲಿ ಸಾಕಷ್ಟು ಪ್ರಗತಿ ಉಂಟಾಗಲಿದೆ. ಹೊಸ ವ್ಯವಹಾರವೊಂದನ್ನು ಪ್ರಾರಂಭಿಸಲು ನೀವು ಯೋಚಿಸಬಹುದು. ಮುಖ್ಯವಾಗಿ ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗವನ್ನು ಬದಲಾಯಿಸಲು ಇಚ್ಛಿಸುವವರಿಗೆ ಒಳ್ಳೆಯ ಅವಕಾಶಗಳು ಲಭಿಸಲಿವೆ. ಪ್ರೇಮ ಜೀವನದಲ್ಲಿ ಸಂತೃಪ್ತಿ ನೆಲೆಸಲಿದೆ. ವಿವಾಹಿತ ವ್ಯಕ್ತಿಗಳು ಸಮಯವನ್ನು ಚೆನ್ನಾಗಿ ಕಳೆಯಲಿದ್ದಾರೆ. ಅವರ ಸಂಗಾತಿಯ ಹೊಸ ಉದ್ಯೋಗವಕಾಶಗಳು ಲಭಿಸಬಹುದು. ಹಣಕಾಸಿನ ವಿಚಾರದಲ್ಲಿ ಹೇಳುವುದಾದರೆ, ಮುಖ್ಯವಾಗಿ ಸರ್ಕಾರಿ ಬ್ಯಾಂಕುಗಳಿಂದ ಸಾಲವನ್ನು ಪಡೆಯಲು ಇದು ಸಕಾಲ. ವಿದ್ಯಾರ್ಥಿಗಳಿಗೆ ಅವರ ಕಠಿಣ ಶ್ರಮದ ಲಾಭ ದೊರೆಯಲಿದ್ದು, ಅವರ ಅಧ್ಯಯನದಲ್ಲಿ ಧನಾತ್ಮಕ ಫಲಿತಾಂಶ ಲಭಿಸಲಿದೆ. ಒಟ್ಟಾರೆಯಾಗಿ ಈ ವಾರವು ವೃತ್ತಿ, ಸಂಬಂಧ ಮತ್ತು ಶಿಕ್ಷಣದಲ್ಲಿ ಸ್ಥಿರತೆಯನ್ನು ತರಲಿದೆ. ಆದರೆ ಸಣ್ಣಪುಟ್ಟ ಕಾಯಿಲೆಗಳನ್ನು ನಿರ್ಲಕ್ಷಿಸಬಾರದು.