ಪಹಲ್ಗಾಮ್ ಉಗ್ರ ದಾಳಿಯ ನಂತರ ಭಾರತ ಯುದ್ಧ ತಂತ್ರವನ್ನು ನವೀಕರಿಸಿದೆ. ಎಐ ತಂತ್ರಜ್ಞಾನ ಬಳಸಿ ಭಾರತೀಯ ಸೇನೆ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಅತ್ಯಂತ ನಿಖರವಾಗಿ ಗುರುತಿಸಿ ಧ್ವಂಸ ಮಾಡಿರುವುದು ಇದಕ್ಕೆ ನಿದರ್ಶನ. ಯುದ್ಧದಲ್ಲಿ AI ತಂತ್ರಜ್ಞಾನ ಬಳಕೆ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಬ್ರಿಗೇಡಿಯರ್ ರಾಕೇಶ್ ಭಾಟಿಯಾ ಅವರು ಈ ವಿಶೇಷ ಲೇಖನದಲ್ಲಿ ಯುದ್ಧದಲ್ಲಿ AI ತಂತ್ರಜ್ಞಾನ ಬಳಕೆ ಮಹತ್ವದ ಬಗ್ಗೆ ವಿವರಿಸಿದ್ದಾರೆ.
ಥರ್ಮಲ್ ಬ್ಲಿಪ್ ಮಲ್ಟಿಸ್ಪೆಕ್ಟ್ರಲ್ ಸಂವೇದಕ ಗ್ರಿಡ್ ಅನ್ನು ಬೆಳಗಿಸುತ್ತದೆ. ಇದು ಪ್ರತಿಕೂಲ ವೇದಿಕೆಯೊಂದಿಗಿನ ಸಂಪರ್ಕ ಹೊಂದಿದೆ. ಇದರಿಂದ ಮೈಕ್ರೋ ಸೆಕೆಂಡುಗಳಲ್ಲಿ ಶಾಖದ ಸಂಕೇತ, ಟರ್ರೆಟ್ ಪ್ರೊಫೈಲ್, ರಾಡಾರ್ ಕ್ರಾಸ್ ಸೆಕ್ಷನ್, ಚಲನಶೀಲತೆಯ ಮಾದರಿ, ವಿದ್ಯುತ್ಕಾಂತೀಯ ಹೊರಸೂಸುವಿಕೆ ಮತ್ತು ಅಕೌಸ್ಟಿಕ್ ಹೆಜ್ಜೆ ಗುರುತನ್ನು ಗುರುತಿಸಲಾಗುತ್ತದೆ.
ಎಐ ಚಾಲಿತ ಹೈಟೆಕ್ ಇಂಟೆಲಿಜೆನ್ಸ್ ಫ್ಯೂಷನ್ ಸಿಸ್ಟಮ್ನಲ್ಲಿಇವುಗಳನ್ನು ಇರಿಸಲಾಗಿರುತ್ತದೆ. ಒಂದು ದೊಡ್ಡ ಲ್ಯಾಂಗ್ವೇಜ್ ಮಾಡೆಲ್ ಲಕ್ಷಾಂತರ ರಕ್ಷಣಾ ದತ್ತಾಂಶಗಳ ಮೂಲಕ ಶೋಧಿಸಲಾಗುತ್ತದೆ. ಗುಣಲಕ್ಷಣಗಳು ಹೊಂದಿಕೆಯಾಗಿ, ಗುರುತು ದೃಢಪಟ್ಟಾಗ ಇದು ಚೀನೀ ಮೂಲದ 'ಟೈಪ್ 09ಎ ಸೆಲ್ಫ್-ಪ್ರೊಪೆಲ್ಡ್ ಆರ್ಟಿಲರಿ ಎಂದು ಗೊತ್ತಾಯಿತು.
ಹತ್ತಿರದ ಉಪಗ್ರಹಗಳು, ಡ್ರೋನ್‌ಗಳು ಮತ್ತು ರಾಡಾರ್‌ಗಳ ಮೇಲೆ ಗುರಿ ಇಡಲು AI ಸ್ವಯಂಚಾಲಿತವಾಗಿ ನಿರ್ದೇಶಿಸುತ್ತದೆ. ನಂತರ ಅವುಗಳನ್ನು ಮೌಲ್ಯಮಾಪನ ಮಾಡಲಾಗುತ್ತಿದೆ. ಕಮಾಂಡರ್‌ಗೆ ಮೂರು ಅತ್ಯುತ್ತಮ ಸ್ಟ್ರೈಕ್ ಆಯ್ಕೆಗಳು ಪಾಪ್ ಅಪ್ ಆಗುತ್ತವೆ. ಆಯ್ಕೆ 2 ಈಗಾಗಲೇ ಓವರ್ ಹೆಡ್ ವಾರ್ನಿಂಗ್ ಮ್ಯೂನಿಷನ್ ಅನ್ನು ಬಳಸುವುದನ್ನು ಸೂಚಿಸುತ್ತದೆ. ಕಮಾಂಡರ್ ಒಪ್ಪಿಗೆ ಕೊಟ್ಟರೆ ಗುರಿಯನ್ನು ಭೇದಿಸಲಾಗುತ್ತದೆ.
ಸುತ್ತಮುತ್ತಲ ಪ್ರದೇಶದಲ್ಲಿ ಮೈಕ್ರೋ ಡ್ರೋನ್ ದಾಳಿಯ ನಂತರದ ಹಾನಿಯನ್ನು ನಿರ್ಣಯಿಸುತ್ತದೆ. ನಂತರ ಎಐ ಎರಡನೇ ಹಗುರವಾದ ಪೇಲೋಡ್ ಕಳುಹಿಸುತ್ತದೆ. ಇದು ಗುರಿಯನ್ನು ಭೇದಿಸುತ್ತದೆ. ಹೌದು, ಇದು ವೈಜ್ಞಾನಿಕ ಕಾದಂಬರಿಯಲ್ಲ, ಸದ್ಯ ಯುದ್ಧಭೂಮಿಯಲ್ಲಿ ನಡೆಯುತ್ತಿರುವ ವಾಸ್ತವ.
ಯುದ್ಧಭೂಮಿಯಲ್ಲಿನ ಮಾಹಿತಿಯು ಉಪಗ್ರಹಗಳು, ಡ್ರೋನ್‌ಗಳು, ಸಂವೇದಕಗಳು, ಪ್ರತಿಬಂಧಕಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ದೊರೆಯುತ್ತದೆ. ಇದು ಯುದ್ಧಭೂಮಿ ವರದಿಗಳು ಮತ್ತು GPS ಫೀಡ್‌ಗಳಂತಹ ರಚನಾತ್ಮಕ ಸ್ವರೂಪಗಳಲ್ಲಿ ಬರುತ್ತದೆ.
ಅವುಗಳಲ್ಲಿ ಪ್ರತಿಯೊಂದು ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿದೆ. ಹವಾಮಾನ, ಭೂಪ್ರದೇಶ ಸ್ಥಿತಿ ನಿರ್ಣಾಯಕವಾಗಿವೆ. ಇದಲ್ಲದೇ, ಇವೆಲ್ಲವೂ ಚಿತ್ರಗಳು, ವಿಡಿಯೋಗಳು, ಥರ್ಮಲ್ ಸ್ನ್ಯಾಪ್ ಶಾಟ್ ಗಳು, ಮಲ್ಟಿಸ್ಪೆಕ್ಟ್ರಲ್ ಚಿತ್ರಣ ಮತ್ತು ಡ್ರೋನ್ ಲೈವ್ ದೃಶ್ಯಗಳಂತಹ ವಿಭಿನ್ನ ಸ್ವರೂಪಗಳಲ್ಲಿವೆ. ಈ ವೈವಿಧ್ಯತೆ ಮಾನವ ಮನಸ್ಸಿನ ಸಾಮರ್ಥ್ಯವನ್ನೂ ಮೀರಿದೆ.
ಎಐ ಹಿನ್ನೆಲೆ ಜ್ಞಾನದೊಂದಿಗೆ ಲೈವ್ ಫೀಡ್ಗಳನ್ನು ನೀಡುತ್ತದೆ. ಕ್ಲೌಡ್‌ನಲ್ಲಿ ಸಂಗ್ರಹವಾಗಿರುವ ಪೆಟಾಬೈಟ್‌ಗಳಷ್ಟು ದತ್ತಾಂಶವನ್ನು ಮಷೀನ್ ಲರ್ನಿಂಗ್, ಡೀಪ್ ಲರ್ನಿಂಗ್ ಮೂಲಕ ಸಂಸ್ಕರಿಸಲಾಗುತ್ತದೆ ಮತ್ತು ನ್ಯೂರಲ್ ನೆಟ್ವರ್ಕ್ ಮೂಲಕ ಅರ್ಥೈಸಲಾಗುತ್ತದೆ. ಕ್ವಾಂಟಮ್ ಕಂಪ್ಯೂಟಿಂಗ್ ಲಕ್ಷಾಂತರ ಸನ್ನಿವೇಶಗಳಿಗೆ ಹೋಲಿಕೆ ಮಾಡುತ್ತದೆ. ಮಾದರಿ, ಬೆದರಿಕೆಗಳನ್ನು ಗುರುತಿಸಲಾಗುತ್ತದೆ. ಪ್ರತಿಯೊಂದನ್ನು ಮರು ಪರಿಶೀಲಿಸಲಾಗುತ್ತದೆ. ಎಐ ಇಡೀ ಚಿತ್ರವನ್ನು ಮನುಷ್ಯನಿಗಿಂತ ವೇಗವಾಗಿ, ಸ್ಪಷ್ಟವಾಗಿ ಮತ್ತು ಬೇಗನೆ ನೋಡುತ್ತದೆ.
ಮೇಲಿನ ಎಲ್ಲವನ್ನೂ ಉಕ್ರೇನ್‌ನಲ್ಲಿ ಇಡೀ ಜಗತ್ತಿಗೆ ಪ್ರದರ್ಶಿಸಲಾಗಿದೆ. ಚೀನಾದಲ್ಲಿ, ಹೈಕ್ವಿಷನ್ ಮತ್ತು ಐಫ್ಲೈಟೆಕ್‌ನ ವೇದಿಕೆಗಳು ಪಿಎಲ್‌ಎ ಕಮಾಂಡ್ ವ್ಯವಸ್ಥೆಗೆ ಯುದ್ಧಭೂಮಿಯ ಲೈವ್ ದೃಶ್ಯಗಳನ್ನು ಒದಗಿಸುತ್ತವೆ. ಈ ಮೂಲಕ ಯುದ್ಧಭೂಮಿ ಏನು ನಡೆಯುತ್ತಿದೆ ಎಂದು ನಿರಂತರವಾಗಿ ಮೇಲ್ವಿಚಾರಣೆ ಮಾಡಬಹುದು.
AI ಚಾಲಿತ ಡ್ರೋನ್ ಯುದ್ಧ: ಉಕ್ರೇನ್ AI ಚಾಲಿತ ಯುದ್ಧದ ರಣರಂಗವಾಗಿದೆ. ಮೊದಲ ವ್ಯಕ್ತಿ ವೀಕ್ಷಣೆ (FPV) ಡ್ರೋನ್‌ಗಳಿಗೆ ರಷ್ಯಾದ ರಕ್ಷಾಕವಚವನ್ನು ಲಾಕ್ ಮಾಡಲು ಮತ್ತು ನಾಶಪಡಿಸುವ ಸಾಮರ್ಥ್ಯ ಇದೆ. ಇಸ್ರೇಲ್ ಕೂಡ ಗಾಜಾ ಮತ್ತು ದಕ್ಷಿಣ ಲೆಬನಾನ್‌ನಲ್ಲಿ ಪರಿಶೀಲಿಸಲು, ಡೇಟಾವನ್ನು ಹಂಚಿಕೊಳ್ಳಲು ಮತ್ತು ಯಂತ್ರ - ಸಂಯೋಜಿತ ನಿಖರತೆಯೊಂದಿಗೆ ದಾಳಿ ಮಾಡಲು ಡ್ರೋನ್ಗಳನ್ನು ನಿಯೋಜಿಸಿದೆ.
ಭಾರತದ ಆಪರೇಷನ್ ಸಿಂಧೂರ್ನಲ್ಲಿ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ನಾವಿಕ್ (NavIC) ವ್ಯವಸ್ಥೆಯಿಂದ ಮಾರ್ಗದರ್ಶಿಸಲ್ಪಟ್ಟ ಮತ್ತು AI ಚಾಲಿತ ಕಮಾಂಡ್ ನೆಟ್‌ವರ್ಕ್‌ಗಳಿಂದ ಸಂಯೋಜಿಸಲ್ಪಟ್ಟ ಡ್ರೋನ್‌ಗಳು ಉಗ್ರರ ನೆಲೆಗಳ ಮೇಲೆ ನಿಖರ ದಾಳಿ ಮಾಡಿವೆ.
ಮಿಲಿಟರಿ ಲಾಜಿಸ್ಟಿಕ್ಸ್ ಮತ್ತು ನಿರ್ವಹಣೆಯಲ್ಲಿ AI ಬಳಕೆ: ಲೈವ್ ಇನ್‌ಪುಟ್‌ಗಳಿಂದ ಶಕ್ತಿಯುತವಾಗಿರುವ AI, ಯುದ್ಧೋಪಕರಣಗಳಲ್ಲಿ ವೈಫಲ್ಯ ಸಂಭವಿಸುವುದಕ್ಕೂ ಮೊದಲೇ ಊಹಿಸುತ್ತದೆ. ವಿಮಾನ ನಿರ್ವಹಣೆಗೆ ಮುನ್ಸೂಚನೆ ನೀಡಲು, ಡೌನ್‌ಟೈಮ್ ಅನ್ನು ತಡೆಗಟ್ಟಲು ಮತ್ತು ಫ್ಲೀಟ್ ಸಿದ್ಧತೆಯನ್ನು ಸುಧಾರಿಸಲು AI ಬಳಸುವ ಮೂಲಕ ಅಮೆರಿಕ ವಾಯುಪಡೆಯು ಲಕ್ಷಾಂತರ ಡಾಲರ್ ಹಣ ಉಳಿಸುತ್ತದೆ.
ಸೈಬರ್ ಯುದ್ಧದಲ್ಲಿ AI: ಸೈಬರ್ ಯುದ್ಧವನ್ನು ಎಐ ಗುರಾಣಿ ಮತ್ತು ಕತ್ತಿ ಎರಡೂ ಎಂದು ಮರು ವ್ಯಾಖ್ಯಾನಿಸುತ್ತಿದೆ. ಇದು ಸೈಬರ್ ದಾಳಿಯನ್ನು ಪತ್ತೆಹಚ್ಚಿ ಮಿಲಿಟರಿ ನೆಟ್‌ವರ್ಕ್‌ಗಳನ್ನು ರಕ್ಷಿಸುತ್ತದೆ. ಆಕ್ರಮಣಕಾರಿಯಾಗಿ ಎಐ, ಹೊಂದಾಣಿಕೆಯ ಮಾಲ್‌ವೇರ್ ಅನ್ನು ಸೃಷ್ಟಿಸುತ್ತದೆ ಮತ್ತು ಮಾನವ ಹ್ಯಾಕರ್ಗಳಿಗಿಂತ ವೇಗವಾಗಿ ದಾಳಿಯನ್ನು ಪ್ರಾರಂಭಿಸುತ್ತದೆ.
AI ಏಕೆ ಮುಖ್ಯ?: ಆಪರೇಷನ್ ಸಿಂಧೂರ್ ಒಂದು ಮಹತ್ವದ ಸತ್ಯವನ್ನು ಸಾಬೀತುಪಡಿಸಿತು. ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಆಕಾಶ್ ಮತ್ತು ನಾವಿಕ್ ಯುದ್ಧಭೂಮಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದವು. ಬೇರೆ ಬೇರೆ ಕಾರಣಗಳಿಂದ ವಿದೇಶದ ರಕ್ಷಣಾ ಪರಿಕರಗಳು ಕೈಕೊಡಬಹುದು. ಆದ್ದರಿಂದ ಭಾರತವು ತನ್ನದೇ ಆದ AI ಚಾಲಿತ ಯುದ್ಧ ನಿರ್ವಹಣಾ ವ್ಯವಸ್ಥೆ ಅಭಿವೃದ್ಧಿಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಗಿದೆ ಮತ್ತು ಪರೀಕ್ಷಿಸಲಾಗಿದೆ.
AI ಕೇವಲ ಉದಯೋನ್ಮುಖ ತಂತ್ರಜ್ಞಾನವಲ್ಲ. ಇದು ಒಂದು ಮಾದರಿ ಬದಲಾವಣೆಯಾಗಿದೆ. ಇದು ನಿರ್ಧಾರ ತೆಗೆದುಕೊಳ್ಳಲು ಬೇಕಾದ ಸಮಯವನ್ನು ಕಡಿಮೆ ಮಾಡುತ್ತದೆ, ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಮತ್ತು ಸಾವು ನೋವವನ್ನು ತಗ್ಗಿಸುತ್ತದೆ. ಇನ್ಮುಂದೆ ಯುದ್ಧ ಮನುಷ್ಯ ಮನುಷ್ಯರ ನಡುವೆ ಅಲ್ಲ, ಅಲ್ಗಾರಿದಮ್ ವಿರುದ್ಧ ಅಲ್ಗಾರಿದಮ್ ಆಗಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ಬಗ್ಗೆ ಪಾಕಿಸ್ತಾನದಿಂದ ತಪ್ಪು ಮಾಹಿತಿ: ನಕಲಿ ನಿರೂಪಣೆ ಭಾರತ ನಿಭಾಯಿಸಿದ್ದೇಗೆ?
ಇದನ್ನೂ ಓದಿ: ವೀಸಾ ಸೇವೆ ಸ್ಥಗಿತ: ಭಾರತ- ಪಾಕ್ ನಡುವಣ ಬಿರುಕನ್ನು ಮತ್ತಷ್ಟು ಹೆಚ್ಚಿಸುತ್ತಾ? ; ಇಲ್ಲಿದೆ ಅದೆಲ್ಲದರ ಒಳ- ಹೊರಗು!