ETV Bharat / lifestyle

ರುಬ್ಬಿಕೊಳ್ಳುವ ಅಗತ್ಯವೇ ಇಲ್ಲದೆ 'ಎಗ್ ದೋಸೆ' ಸಿದ್ಧಪಡಿಸೋದು ಹೇಗೆ?: ಚಿಟಿಕೆ ಹೊಡೆಯೋದರೊಳಗೆ ನಿಮ್ಮಿಷ್ಟದ ಗರಿ ಗರಿ ದೋಸೆ ರೆಡಿ! - SUPER EGG DOSA RECIPE

ಮನೆ ಮಂದಿಯೆಲ್ಲರೂ ತುಂಬಾ ಇಷ್ಟಪಡುವಂತಹ ರೆಸಿಪಿಯೊಂದನ್ನು ತಂದಿದ್ದೇವೆ. ಅದುವೇ, ಸಖತ್ ರುಚಿಯ ಎಗ್ ದೋಸೆ. ಕೆಲವೇ ನಿಮಿಷಗಳಲ್ಲಿಈ ದೋಸೆ ರೆಡಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

EASY DOSA RECIPE  INSTANT DOSA RECIPE  HEALTHY BREAKFAST  Super Egg Dosa
ಎಗ್ ದೋಸೆ (ETV Bharat)
author img

By ETV Bharat Lifestyle Team

Published : March 24, 2025 at 8:32 PM IST

2 Min Read

Super Tasty Egg Dosa Recipe: ಕೆಲವೊಮ್ಮೆ ಮನೆಯಲ್ಲಿ ಉಪಹಾರ ತಯಾರಿಸಲು ಇಡ್ಲಿ ಇಲ್ಲವೆ ದೋಸೆ ಹಿಟ್ಟು ಇಲ್ಲದಿರುವ ಸಮಯದಲ್ಲಿ ಸೂಪರ್ ರುಚಿಯ ದೋಸೆಗಳನ್ನು ತಯಾರಿಸಬಹುದು. ನೀವು ಹಿಂದಿನ ದಿನ ಅಕ್ಕಿ, ಉದ್ದಿನ ಬೇಳೆಯನ್ನು ನೆನೆಸಿ ಇಡುವ ಅಗತ್ಯವಿಲ್ಲ, ಹಿಟ್ಟನ್ನು ರುಬ್ಬಿಕೊಂಡು ಹುದುಗಿಸಿ ಇಡಬೇಕಾಗಿಲ್ಲ. ಕೆಲವೇ ನಿಮಿಷಗಳಲ್ಲಿ ಹಿಟ್ಟನ್ನು ತಯಾರಿಸಲು ಸಾಧ್ಯವಿದೆ.

ಹಾಗಾದರೆ, ನೀವು ಭರ್ಜರಿ ರುಚಿಯ ದೋಸೆಗಳನ್ನು ತಿನ್ನಲು ಬಯಸಿದರೆ, ಅವುಗಳನ್ನು ಗೋಧಿ ಹಿಟ್ಟಿನಿಂದ ಈ ರೀತಿ ಮಾಡಿ ನೋಡಿ ಮನೆಯ ಸದಸ್ಯರೆಲ್ಲರಿಗೂ ತುಂಬಾ ಇಷ್ಟವಾಗುತ್ತದೆ. ನಾವು ತಿಳಿಸಿದಂತೆ ನೀವು ಗೋಧಿ ಹಿಟ್ಟಿನಿಂದ ದೋಸೆಗಳನ್ನು ಮಾಡಿದರೆ, ಸಂಪೂರ್ಣ ಹಾಗೂ ಸ್ವಾದಿಷ್ಟವಾದ ತಿಂಡಿಯನ್ನು ಹೊಟ್ಟೆ ತುಂಬಾ ತಿನ್ನಬಹುದು. ಈ ಗೋಧಿ ಎಗ್ ದೋಸೆಗಳನ್ನು ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಇದೀಗ ಗೋಧಿ ಹಿಟ್ಟಿನ ಎಗ್​ ದೋಸೆಗಳನ್ನು ಸರಳ ಮತ್ತು ಸುಲಭವಾಗಿ ರೆಡಿ ಮಾಡುವುದು ಹೇಗೆ ಎಂದು ತಿಳಿಯೋಣ.

ಎಗ್ ದೋಸೆಗೆ ಅಗತ್ಯವಿರುವ ಪದಾರ್ಥಗಳೇನು?:

  • ಗೋಧಿ ಹಿಟ್ಟು - ಕಪ್
  • ಅಕ್ಕಿ ಹಿಟ್ಟು - ಕಾಲು ಕಪ್
  • ಖಾರದ ಪುಡಿ - ಟೀಸ್ಪೂನ್ (ಹಿಟ್ಟಿನಲ್ಲಿ ಮಿಶ್ರಣ ಮಾಡಿ)
  • ಅಡುಗೆ ಸೋಡಾ - ಒಂದು ಚಿಟಿಕೆ
  • ಉಪ್ಪು- ಒಂದು ಚಿಟಿಕೆ

ಎಗ್​ ಮಿಶ್ರಣಕ್ಕಾಗಿ:

  • ಮೊಟ್ಟೆ- 1
  • ಖಾರದ ಪುಡಿ - ಅರ್ಧ ಟೀಸ್ಪೂನ್​
  • ಉಪ್ಪು- ಒಂದು ಚಿಟಿಕೆ
  • ಈರುಳ್ಳಿ ಪೇಸ್ಟ್ - ಟೀಸ್ಪೂನ್
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಗರಂ ಮಸಾಲ ಪುಡಿ- ಚಿಟಿಕೆ

ಎಗ್ ದೋಸೆ ತಯಾರಿಸುವ ವಿಧಾನ:

  • ಮೊದಲು ಗೋಧಿ ಹಿಟ್ಟು ಹಾಗೂ ಅಕ್ಕಿ ಹಿಟ್ಟನ್ನು ಮಿಕ್ಸಿಂಗ್​ ಬೌಲ್​ಗೆ ಸಾಣಿಸಿಕೊಂಡು ಹಾಕಿ. ಬಳಿಕ ಖಾರದ ಪುಡಿ, ಉಪ್ಪು, ಅಡುಗೆ ಸೋಡಾ ಮತ್ತು ಅರಿಶಿನ ಸೇರಿಸಿದ ಬಳಿಕ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ.
  • ಬಳಿಕ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿ ಯಾವುದೇ ಉಂಡೆಗಳಿಲ್ಲದೇ ಚೆನ್ನಾಗಿ ಕಲಸಿಕೊಳ್ಳಬೇಕಾಗುತ್ತಾರೆ. ದೋಸೆ ಹಿಟ್ಟಿನಂತೆ ಸಿದ್ಧಪಡಿಸಬೇಕಾಗುತ್ತದೆ. ಈ ಗೋಧಿ ದೋಸೆ ಹಿಟ್ಟನ ಮೇಲೆ ಮುಚ್ಚಳವನ್ನು ಮುಚ್ಚಿ 5 ನಿಮಿಷಗಳ ಕಾಲ ಪಕ್ಕಕ್ಕೆ ಇಡಬೇಕಾಗುತ್ತದೆ.
  • ಮೊಟ್ಟೆಯ ಮಿಶ್ರಣವನ್ನು ತಯಾರಿಸಲು ಮೊಟ್ಟೆಯನ್ನು ಸಣ್ಣ ಬಟ್ಟಲಿಗೆ ಒಡೆದು ಹಾಕಿಕೊಳ್ಳಿ. ಇದಕ್ಕೆ ಒಂದು ಚಿಟಿಕೆ ಖಾರದ ಪುಡಿ, ಉಪ್ಪು, ಗರಂ ಮಸಾಲ, ಈರುಳ್ಳಿ, ಹಸಿರು ಮೆಣಸಿನ ಪುಡಿ ಹಾಗೂ ಕೊತ್ತಂಬರಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಬೇಕಾಗುತ್ತದೆ. (ಈ ಮಿಶ್ರಣವು ಒಂದು ಮೊಟ್ಟೆಯ ದೋಸೆ ಮಾಡಲು ಸಾಕು. ನಿಮಗೆ ಬೇಕಾದ ಎಲ್ಲಾ ದೋಸೆಗಳಿಗೆ ಈ ಮೊಟ್ಟೆಯ ಮಿಶ್ರಣ ತಯಾರಿಸಬಹುದು.)
  • ದೋಸೆ ಪ್ಯಾನ್ ಒಲೆಯ ಮೇಲೆ ಇಟ್ಟು ಬಿಸಿ ಮಾಡಿ. ಪ್ಯಾನ್​ಗೆ ಒಂದು ಟೀಸ್ಪೂನ್​ ಎಣ್ಣೆ ಹಾಕಿ ಹರಡಿಕೊಳ್ಳಿ. ಬಳಿಕ ಗೋಧಿ ಹಿಟ್ಟಿನಿಂದ ದೋಸೆ ಹಾಕಿಕೊಳ್ಳಿ.
  • ಒಂದು ನಿಮಿಷದ ನಂತರ ಬಳಿಕ ಹಿಂದೆ ರೆಡಿ ಮಾಡಿದ ಮೊಟ್ಟೆಯ ಮಿಶ್ರಣವನ್ನು ದೋಸೆಯ ಮೇಲೆ ಹರಡಿ.
  • ದೋಸೆಯ ಮೇಲಿನ ಮೊಟ್ಟೆಯ ಮಿಶ್ರಣ ಚೆನ್ನಾಗಿ ಬೆಂದ ನಂತರ, ದೋಸೆಯನ್ನು ತಿರುಗಿಸಿ ಇನ್ನೊಂದು ಬದಿಯೂ ಬೇಯಿಸಿ. ಕಡಿಮೆ ಉರಿ ಬೇಯಿಸಿದರೆ ಉತ್ತಮ.
  • ಒಂದು ನಿಮಿಷದ ಬಳಿಕ, ದೋಸೆಯನ್ನು ಒಂದು ತಟ್ಟೆಗೆ ತೆಗೆದುಕೊಂಡರೆ, ನಿಮ್ಮ ಬಿಸಿ ಎಗ್​ ದೋಸೆ ಸವಿಯಲು ರೆಡಿಯಾಗಿದೆ.
  • ಮನೆಯಲ್ಲಿ ದೋಸೆ ಹಿಟ್ಟು ಇಲ್ಲದಿದ್ದಾಗ ನೀವು ಇನಸ್ಟಂಟ್​ ಎಗ್​ ದೋಸೆಯನ್ನು ತಯಾರಿಸಬಹುದು.
  • ಈ ಎಗ್​ ದೋಸೆಯನ್ನು ಶೇಂಗಾ, ಟೊಮೆಟೊ, ಈರುಳ್ಳಿ, ಕೊಬ್ಬರಿ ಚಟ್ನಿ ಸೇರಿದಂತೆ ಯಾವುದೇ ಚಟ್ನಿಯೊಂದಿಗೆ ಸೇವಿಸಬಹುದು. ಇಲ್ಲವೆ ಹಾಗೆಯೇ ನೇರವಾಗಿ ಸೇವಿಸಿದರೂ ಚೆನ್ನಾಗಿರುತ್ತದೆ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.