ETV Bharat / lifestyle

ಸುನೀತಾ ವಿಲಿಯಮ್ಸ್ ಶೌರ್ಯಕ್ಕೆ ಅಭೂತಪೂರ್ವ ಮೆಚ್ಚುಗೆ: ಛಲದಿಂದ ಮುನ್ನಡೆದ ಮಹಿಳಾ ಗಗನಯಾತ್ರಿ ಬದುಕು ಎಲ್ಲರಿಗೂ ಮಾದರಿ - SUNITA WILLIAMS ACHIEVEMENTS

ಒಂದು ವಾರ ಬಾಹ್ಯಾಕಾಶದ ಸಂಶೋಧನೆಗಾಗಿ ತೆರಳಿದದ್ದ ಸುನೀತಾ ವಿಲಿಯಮ್ಸ್, 9 ತಿಂಗಳ ನಂತರ ಭೂಮಿಗೆ ಹಿಂತಿರುಗಿದ್ದಾರೆ. ಸಮಯದೊಳಗೆ ವಾಪಸ್​ ಬರಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ನಿರುತ್ಸಾಹಗೊಳ್ಳದೇ ಮತ್ತಷ್ಟು ಗಟ್ಟಿಯಾದ ಸುನೀತಾ ಸಾಧನೆಗಳ ಹಾದಿ ಹೀಗಿದೆ ನೋಡಿ...

Sunita Williams  ಸುನೀತಾ ವಿಲಿಯಮ್ಸ್  NASA  female astronaut achievements
ಸುನೀತಾ ವಿಲಿಯಮ್ಸ್ (Getty Images)
author img

By ETV Bharat Lifestyle Team

Published : March 20, 2025 at 12:46 PM IST

5 Min Read

Sunita Williams achievements: ಒಂದು ವಾರ ಬಾಹ್ಯಾಕಾಶದ ಸಂಶೋಧನೆಗಾಗಿ ತೆರಳಿದದ್ದ ಸುನೀತಾ ವಿಲಿಯಮ್ಸ್ ಅವರು ತಾಂತ್ರಿಕ ಸಮಸ್ಯೆಯಿಂದ 9 ತಿಂಗಳ ನಂತರ ಭೂಮಿಗೆ ಹಿಂತಿರುಗಿದ್ದಾರೆ. ನಿಗದಿತ ಸಮಯದೊಳಗೆ ವಾಪಸ್​ ಬರಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ನಿರುತ್ಸಾಹಗೊಳ್ಳದೇ ದೈಹಿಕವಾಗಿ ಹಾಗೂ ಮಾನಸಿಕವಾಗಿ ಮತ್ತಷ್ಟು ಸಿದ್ಧರಾದ ಸುನೀತಾ ವಿಲಿಯಮ್ಸ್ ಅವರ ಶೌರ್ಯಕ್ಕೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗಿಯಿತು.

ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಒಂಬತ್ತು ತಿಂಗಳ ನಂತರ, ಬುಧವಾರ (ಮಾ.19 ರಂದು) ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗಿಳಿದರು. ಇವರಿಬ್ಬರೂ ಕಳೆದ ವರ್ಷ ಜೂನ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ತಾಂತ್ರಿಕ ತೊಂದರೆ, ವೇಳಾಪಟ್ಟಿಯಲ್ಲಿನ ಬದಲಾವಣೆಗಳಿಂದ ವಾಪಸ್​ ಬರಲು ತುಂಬಾ ವಿಳಂಬವಾಗಿತ್ತು. ತಾಂತ್ರಿಕ ಸಮಸ್ಯೆಯ ಹಿನ್ನೆಲೆ ಒಂದು ವಾರದ ಈ ಕಾರ್ಯಾಚರಣೆಗೆ ಬರೊಬ್ಬರಿ ಒಂಬತ್ತು ತಿಂಗಳಿಗೆ ವಿಸ್ತರಣೆಯಾಗಿತ್ತು. ಜೂನ್ 2024ರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿದ್ದ NASA ಗಗನಯಾತ್ರಿಗಳಾದ 59 ವರ್ಷದ ಸುನೀತಾ ವಿಲಿಯಮ್ಸ್ ಮತ್ತು 62 ವರ್ಷದ ಬುಚ್ ವಿಲ್ಮೋರ್ ಅವರೊಂದಿಗೆ ನಿಕ್ ಹೇಗ್, ಅಲೆಕ್ಸಾಂಡರ್ ಗೋರ್ಬುನೋವ್ ಅವರು ಬಾಹ್ಯಾಕಾಶದಿಂದ ಧರೆಗೆ ಮರಳಿದ್ದಾರೆ.

Sunita Williams  ಸುನೀತಾ ವಿಲಿಯಮ್ಸ್  NASA  female astronaut achievements
ಬಾಹ್ಯಾಕಾಶದಿಂದ ಮರಳಿದ ಸುನೀತಾ ವಿಲಿಯಮ್ಸ್ (AP)

ಶೌರ್ಯಕ್ಕೆ ಮತ್ತೊಂದು ಹೆಸರೇ ಸುನೀತಾ: ನಿಗದಿತ ಸಮಯದೊಳಗೆ ಭೂಮಿಗೆ ವಾಪಸ್​ ಬರಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ನಿರುತ್ಸಾಹಗೊಳ್ಳದ ಸುನೀತಾ ವಿಲಿಯಮ್ಸ್ ಅವರು, ದೈಹಿಕವಾಗಿ ಹಾಗೂ ಮಾನಸಿಕವಾಗಿ ಮತ್ತಷ್ಟು ಗಟ್ಟಿಯಾದರು. ಹೌದು, ಶೌರ್ಯಕ್ಕೆ ಮತ್ತೊಂದು ಹೆಸರೇ ಸುನೀತಾ ವಿಲಿಯಮ್ಸ್. ತನ್ನ ವೃತ್ತಿಜೀವನದಲ್ಲಿ ಹೆಚ್ಚಿನ ಅನುಭವ ಮತ್ತು ಕೌಶಲ್ಯಗಳನ್ನು ಪಡೆಯಲು ಈ ಒಂಬತ್ತು ತಿಂಗಳುಗಳ ಕಾಲ ತನಗಿರುವ ಏಕೈಕ ಅವಕಾಶ ಎಂಬಂತೆ ಅವರು ಸದುಪಯೋಗಪಡಿಸಿಕೊಂಡರು. ಅದಕ್ಕಾಗಿಯೇ ಇಡೀ ಜಗತ್ತನ್ನೇ ಸುನೀತಾ ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದೆ.

ಸವಾಲುಗಳನ್ನು ಸಹ ಸಕಾರಾತ್ಮಕವಾಗಿ ಎದುರಿಸಬಹುದು ಎಂಬುದನ್ನು ತಮ್ಮ ದೀರ್ಘ ಬಾಹ್ಯಾಕಾಶ ಪ್ರಯಾಣದ ಮೂಲಕ ಸಾಬೀತುಪಡಿಸಿದ ಸುನೀತಾ ಅವರ ಪ್ರಯಾಣವು ಅನೇಕರಿಗೆ ಸ್ಫೂರ್ತಿಯಾಗಿದೆ. ಸುಮಾರು 286 ದಿನಗಳ ನಂತರ ಭೂಮಿಗೆ ಬಂದಿಳಿದ ಈ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರಿಂದ ನಾವು ಕಲಿಯಬಹುದಾದ ಅನೇಕ ವಿಷಯಗಳಿವೆ.

ತಮಗೆ ಇಷ್ಟವಾದದ್ದನ್ನು ಮಾಡುವುದು: ದೊಡ್ಡ ಕನಸು ಕಾಣು.. ಕಷ್ಟಪಟ್ಟು ಕೆಲಸ ಮಾಡು.. ಎಷ್ಟೇ ಬೆಳೆದರೂ ವಿನಮ್ರನಾಗಿರು.. ಸಕಾರಾತ್ಮಕ ಜನರೊಂದಿಗೆ ಸ್ನೇಹ ಬೆಳೆಸು.. ಎಂಬುವುದು ಸುನೀತಾ ಅವರು ನಂಬಿದ್ದ ತತ್ವಗಳಿವು. ಅವರು ತಮ್ಮ ಜೀವನದ ಮೂಲಕ ಇದನ್ನೆಲ್ಲವನ್ನು ಸಾಬೀತುಪಡಿಸಿದ್ದಾರೆ. ಹಿಂದೆ ಪುರುಷರೇ ಪ್ರಾಬಲ್ಯ ಹೊಂದಿದ್ದ ಸಮಯದಲ್ಲಿ ಸುನೀತಾ ಅವರು ಬಾಹ್ಯಾಕಾಶದಲ್ಲಿ ಬಹುದೊಡ್ಡ ಸಾಧನೆಯ ಕನಸು ಕಂಡಿದ್ದರು.

ಈ ಉತ್ಸಾಹದಿಂದ ತಮ್ಮ ಅಧ್ಯಯನವನ್ನು ಮುಂದುವರಿಸಿದ ಸುನೀತಾ ಅವರು, 1998ರಲ್ಲಿ ನಾಸಾದಲ್ಲಿ ಗಗನಯಾತ್ರಿಯಾಗಿ ಸೇರಿದರು. ಈ ಸಂಸ್ಥೆಯು ಕೈಗೊಂಡ ಅನೇಕ ಪ್ರತಿಷ್ಠಿತ ಬಾಹ್ಯಾಕಾಶ ಯಾತ್ರೆಗಳಲ್ಲಿ ಅವರು ಭಾಗವಾಗಿದ್ದಾರೆ. ಸುನೀತಾ ಅವರು ಈ ಹಿಂದೆ 195 ದಿನಗಳನ್ನು ಬಾಹ್ಯಾಕಾಶದಲ್ಲಿ ಹಾಗೂ ಅದರ ಹಿಂದೆ, 127 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದರು. ಈ ಬಾರಿ ಅವರು ಅನಿರೀಕ್ಷಿತವಾಗಿ ಒಂಬತ್ತು ತಿಂಗಳು ಅಲ್ಲಿಯೇ ಇರಬೇಕಾಯಿತು. ಅವರು ಇಲ್ಲಿಯವರೆಗೆ 9 ಬಾಹ್ಯಾಕಾಶ ಯಾತ್ರೆ ಮಾಡಿದ್ದಾರೆ. ಈ ಮೂಲಕ ಸುನೀತಾ ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಕಾಲ ನಡೆದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಾವು ಬಯಸಿದ ಕ್ಷೇತ್ರವನ್ನು ಪ್ರವೇಶಿಸಿದ ನಂತರ, ಪುನಃ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬ ಮಾತಿನಂತೆ ಸ್ಪೇಸ್ ವುಮನ್ ಸುನೀತಾ ತಮ್ಮ ವೃತ್ತಿಜೀವನದಲ್ಲಿ ಬಹುದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ.

ಸುನೀತಾಗೆ ಸವಾಲುಗಳೇ ಮೆಟ್ಟಿಲು: ಸುನೀತಾ ಅವರು ಕಳೆದ ವರ್ಷ ಜೂನ್‌ನಲ್ಲಿ ಒಂದು ವಾರದ ಬಾಹ್ಯಾಕಾಶ ಯಾತ್ರೆಗಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ತೆರಳಿದರು. ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ದೋಷ ಉಂಟಾದ ನಂತರ ಅವರು ಒಂಬತ್ತು ತಿಂಗಳು ಅಲ್ಲಿಯೇ ಇರಬೇಕಾಯಿತು. ಆದ್ರೆ, ಅವರು ಮಾನಸಿಕವಾಗಿ ಚಿಂತಿತರಾಗದೇ, ಸಂತೋಷದಿಂದಲೇ ಬಾಹ್ಯಾಕಾಶ ಸಂಶೋಧನೆ ಮುಂದುವರಿಸಿದರು. ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಎಷ್ಟು ದಿನಗಳವರೆಗೆ ಇರುತ್ತಾರೋ ಅಷ್ಟು ದಿನಗಳವರೆಗೆ ಭೂಮಿಯ ಮೇಲೆ ಸೂಕ್ತ ತರಬೇತಿಯನ್ನು ಪಡೆದಿರುತ್ತಾರೆ. ಪ್ರಯಾಣದಲ್ಲಿ ಬೇಕಾದ ಆಹಾರ ಮತ್ತು ಇತರ ವಸ್ತುಗಳನ್ನು ಅವರು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ. ಅನಿರೀಕ್ಷಿತವಾಗಿ ತಿಂಗಳುಗಟ್ಟಲೆ ಅವಧಿ ವಿಸ್ತರಣೆಯಾದರೆ, ಆಹಾರ ಲಭ್ಯತೆಯು ಕೂಡ ಕಷ್ಟವಾಗುತ್ತದೆ.

ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ (Photo credit: astronaut.sunitalynwilliams.fc)

ಶೂನ್ಯ ಗುರುತ್ವಾಕರ್ಷಣೆ ಇರುವ ಪ್ರದೇಶದಲ್ಲಿ ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳುವುದು ಕೂಡ ಒಂದು ಸವಾಲಿನ ಕಾರ್ಯವಾಗಿದೆ. ಮತ್ತೊಂದೆಡೆ, ನಾವು ಭೂಮಿಗೆ ಯಾವಾಗ ಹಿಂತಿರುಗುತ್ತೇವೆ ಎಂದು ತಿಳಿಯದ ಸಂದರ್ಭಗಳಲ್ಲಿ ಮಾನಸಿಕ ಒತ್ತಡವಿರುತ್ತದೆ. ಆದರೆ, ಸುನೀತಾ ಅಂತಹ ಅನೇಕ ಸವಾಲುಗಳನ್ನು ನಿವಾರಿಸಿಕೊಂಡು ಈ ಒಂಬತ್ತು ತಿಂಗಳುಗಳನ್ನು ಬಾಹ್ಯಾಕಾಶದಲ್ಲಿ ಸಂತೋಷದಿಂದಲೇ ಕಳೆದರು. ಆದರೆ, ಸುನೀತಾ ಅವರು ವಾಪಸ್​ ಬಂದ ಬಳಿಕ ನಂತರ, 'ನಾನು ಮತ್ತೆ ಸ್ಪೇಸ್ ಅ​ನ್ನು ಮಿಸ್ ಮಾಡಿಕೊಳ್ಳುತ್ತೇನೆ' ಎಂದು ಹೇಳಿದ್ದು ಗಮನಾರ್ಹ. ಅವರು ತನ್ನ ಸುದೀರ್ಘ ಬಾಹ್ಯಾಕಾಶ ಪ್ರಯಾಣದಿಂದ ಅನೇಕ ಕೌಶಲ್ಯಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಜೀವನ ಅಥವಾ ವೃತ್ತಿಜೀವನದ ಸವಾಲುಗಳಿಂದ ದೂರ ಸರಿಯದೇ, ಗುರಿಗಳನ್ನು ಸಾಧಿಸಲು ಅವುಗಳನ್ನೇ ಮೆಟ್ಟಿಲುಗಳಾಗಿ ಬದಲಾಯಿಸಿದರು.

ಜೀವನಪರ್ಯಂತ ವಿದ್ಯಾರ್ಥಿಯಾಗಿರುತ್ತೇನೆ: ಗಗನಯಾತ್ರಿಯಾಗಿ ಹೆಚ್ಚು ಅನುಭವ ಹೊಂದಿರುವ ಸುನೀತಾ ಅವರಿಗೆ ಬಾಹ್ಯಾಕಾಶ ಕ್ಷೇತ್ರದ ಇನ್ನೂ ಹಲವು ವಿಷಯಗಳನ್ನು ಕಲಿಯುವ ಬಗ್ಗೆ ಹೆಚ್ಚಿನ ಆಸಕ್ತಿಹೊಂದಿರುವ ಶ್ರೇಷ್ಠ ವಿದ್ಯಾರ್ಥಿಯಂತೆ ಕಾಣಿತ್ತಾರೆ. ಅವರು ಎಷ್ಟೇ ಬೆಳೆದರೂ ವಿನಮ್ರಳಾಗಿ ಉಳಿಯುವಂತಹ ತತ್ವದಲ್ಲಿ ನಂಬಿಕೆ ಇಟ್ಟಿದ್ದಾರೆ. ಈ ತತ್ವವನ್ನು ತನ್ನ ವೃತ್ತಿಜೀವನದಲ್ಲಿ ಅಕ್ಷರಶಃ ಅಳವಡಿಸಿಕೊಂಡಿದ್ದಾರೆ. ನಾನು ಜೀವನಪರ್ಯಂತ ವಿದ್ಯಾರ್ಥಿಯಾಗಿಯೇ ಇರಲು ಬಯಸುತ್ತೇನೆ ಎಂದು ಹಲವು ಬಾರಿ ಸುನೀತಾ ಹೇಳಿದ್ದಾರೆ. ಸುನೀತಾ ತಮ್ಮ ಒಂಬತ್ತು ತಿಂಗಳ ಸುದೀರ್ಘ ಬಾಹ್ಯಾಕಾಶ ಪ್ರಯಾಣದಲ್ಲಿ ಅದನ್ನೇ ಸಾಬೀತುಪಡಿಸಿದ್ದಾರೆ.

ಸುನೀತಾ ಅವರು ನಾಸಾ ತಮಗೆ ವಹಿಸಿದ್ದ ಅನೇಕ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಿದರು. ISSನ ನಿರ್ವಹಣೆಯನ್ನು ನೋಡಿಕೊಳ್ಳುವುದು, ಅಗತ್ಯವಿದ್ದರೆ ಯಾವುದೇ ರಿಪೇರಿ ಮಾಡುವುದು, ಬಾಹ್ಯಾಕಾಶದಲ್ಲಿ ಕೃಷಿ, ತೂಕವಿಲ್ಲದ ಜಾಗದಲ್ಲಿ ದೈಹಿಕ ಆರೋಗ್ಯ ಸೇರಿದಂತೆ ಸುಮಾರು 150 ವಿಷಯಗಳ ಕುರಿತು ಪ್ರಯೋಗಗಳು ಮತ್ತು ಸಂಶೋಧನೆಗಳನ್ನು ನಡೆಸಿದರು. ಇದರಿಂದಾಗಿ ಸುನೀತಾ ತಮ್ಮ ವೃತ್ತಿ ಬೆಳವಣಿಗೆಗೆ ಅಗತ್ಯವಾದ ಅನೇಕ ವಿಷಯಗಳನ್ನು ಕಲಿತರು. ಅನೇಕ ಜನರಿಗೆ ವೃತ್ತಿ ಮಾರ್ಗದರ್ಶನವನ್ನು ನೀಡಿದರು.

ನಮಗೆ 'ಟೀಂ ವರ್ಕ್​' ಬೇಕು: ನೀವು ಯಾವುದೇ ಕೆಲಸವನ್ನು ಹೊಂದಿದ್ದರೂ, ನೀವು ಒಂದು ತಂಡದೊಂದಿಗೆ ಕೆಲಸ ಮಾಡಬೇಕಾಗುತ್ತದೆ. ನಾವು ಕೆಲಸ ಮಾಡುವ ತಂಡದೊಂದಿಗೆ ಸಂಪರ್ಕ ಹೊಂದಿದಾಗ ಮಾತ್ರ ನಮ್ಮ ಕೆಲಸವನ್ನು ಪೂರ್ಣಗೊಳಿಸಬಹುದು. ಇದಕ್ಕೆ ಉತ್ತಮ ಸಂವಹನ ಮುಖ್ಯ ಎಂದು ಸುನೀತಾ ತಿಳಿಸುತ್ತಾರೆ. ಅವರು ತನ್ನ ಬಾಹ್ಯಾಕಾಶ ಹಾರಾಟದಲ್ಲೂ ಇದನ್ನು ಸಾಬೀತುಪಡಿಸಿದರು. ಬಾಹ್ಯಾಕಾಶದಲ್ಲಿ ಈ ಒಂಬತ್ತು ತಿಂಗಳುಗಳ ಕಾಲ, ಸುನೀತಾ ತಮ್ಮ ಸಹ ಗಗನಯಾತ್ರಿ ವಿಲ್ಮೋರ್ ಮತ್ತು ಇತರ ಗಗನಯಾತ್ರಿಗಳೊಂದಿಗೆ ಬಾಹ್ಯಾಕಾಶ ನಿಲ್ದಾಣದ ದುರಸ್ತಿ, ಇತರ ಅಧ್ಯಯನಗಳು ಹಾಗೂ ಸಂಬಂಧಿತ ವಿಷಯಗಳ ಕುರಿತು ಸಂಶೋಧನೆ ನಡೆಸಿದರು.

NASA ಎಕ್ಸ್​ ಖಾತೆಯಲ್ಲಿ ಸಾಂದರ್ಭಿಕವಾಗಿ ಪೋಸ್ಟ್ ಮಾಡಲಾದ ಫೋಟೋಗಳು ಇದಕ್ಕೆ ನೇರ ಸಾಕ್ಷಿಯಾಗಿವೆ. ತಮ್ಮ ಬಾಹ್ಯಾಕಾಶ ಪ್ರಯಾಣದ ಮೂಲಕ, ತಂಡವನ್ನು ಸಂಘಟಿಸುತ್ತಾ ಮುಂದುವರಿಯುವುದರಿಂದ ಉತ್ಪಾದಕತೆ ಸುಧಾರಿಸುತ್ತದೆ. ಮತ್ತು ಪರೋಕ್ಷವಾಗಿ ವೃತ್ತಿ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂಬುದನ್ನು ಸುನೀತಾ ಸಾಬೀತುಪಡಿಸಿದ್ದಾರೆ.

ಆರೋಗ್ಯವೇ ದೊಡ್ಡ ಭಾಗ್ಯ: ವೈಯಕ್ತಿಕ ಮತ್ತು ವೃತ್ತಿಪರ ಯಶಸ್ಸಿಗೆ ಆರೋಗ್ಯವಾಗಿರುವುದು ಮುಖ್ಯವಾಗಿದೆ. ಅದಕ್ಕಾಗಿಯೇ ಸುನೀತಾ ಅನಿರೀಕ್ಷಿತವಾಗಿ ತಿಂಗಳುಗಟ್ಟಲೆ ಬಾಹ್ಯಾಕಾಶದಲ್ಲಿ ಸಿಕ್ಕಿಹಾಕಿಕೊಂಡರೂ ಆದರೆ, ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಲಿಲ್ಲ. ನಾಸಾ ಸಾಂದರ್ಭಿಕವಾಗಿ ಪೋಸ್ಟ್ ಮಾಡುವ ಫೋಟೋಗಳಲ್ಲಿ ಅವರು ಕುಂಟುತ್ತಿರುವಂತೆ ಕಂಡುಬಂದಾಗ ಅನೇಕರು ಅವರ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದರು. ಆದರೆ, ತಾನು ಬಾಹ್ಯಾಕಾಶದಲ್ಲಿ ಸಂತೋಷವಾಗಿದ್ದೇನೆ ಮತ್ತು ತನ್ನ ವ್ಯಾಯಾಮ ದಿನಚರಿಯನ್ನು ಮುಂದುವರಿಸುತ್ತಿದ್ದೇನೆ ಎಂದು ಸುನೀತಾ ತಿಳಿಸಿದ್ದರು. ಬೆಳಿಗ್ಗೆ 6.30ಕ್ಕೆ ದಿನಚರಿ ಆರಂಭಿಸುತ್ತಿದ್ದ ಸುನೀತಾ ಅವರು, ಸುಮಾರು ಎರಡು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದರು.

ಶೂನ್ಯ ಗುರುತ್ವಾಕರ್ಷಣೆಯಲ್ಲಿ ಸ್ಥಿರವಾಗಿ ವ್ಯಾಯಾಮಗಳನ್ನು ಅಭ್ಯಾಸ ಮಾಡಲು ನಾವು ‘Advanced Resistive Exercise Device (ARED) ಅನ್ನು ಬಳಕೆ ಮಾಡುತ್ತಿದ್ದೆವು. ಇದರ ಸಹಾಯದಿಂದ ನಾವು ವ್ಯಾಯಾಮಗಳನ್ನು ಅಭ್ಯಾಸ ಮಾಡುತ್ತಿದ್ದೆವು. ನೀವು ಎಲ್ಲೇ ಇದ್ದರೂ ಅಥವಾ ಎಷ್ಟೇ ಕಾರ್ಯನಿರತರಾಗಿದ್ದರೂ, ವ್ಯಾಯಾಮವು ನಮ್ಮನ್ನು ಆರೋಗ್ಯವಾಗಿ ಮತ್ತು ಕ್ರಿಯಾಶೀಲವಾಗಿಡುವುದರಿಂದ ಅದಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸುನೀತಾ ತಿಳಿಸಿದ್ದರು.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.