Jowar Malt Recipe: ರಾಜ್ಯದಲ್ಲಿ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲೇ ಸೂರ್ಯ ತನ್ನ ಪ್ರತಾಪ ತೋರಿಸುತ್ತಿದ್ದಾನೆ.
ಹೆಚ್ಚುತ್ತಿರುವ ಉಷ್ಣಾಂಶದಿಂದ ಜನರು ಬೆಳಿಗ್ಗೆ 10 ಗಂಟೆಯ ಬಳಿಕ ಹೊರಗೆ ಹೋಗುವುದಕ್ಕೂ ಯೋಚಿಸುತ್ತಿದ್ದಾರೆ. ಬೇಸಿಗೆ ತಾಪಮಾನ ಏರಿಕೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಅದರಲ್ಲಿ ನಿರ್ಜಲೀಕರಣದ ಸಮಸ್ಯೆ ಕಡಿಮೆ ಮಾಡಲು ಅನೇಕ ಜನರು ಆರೋಗ್ಯಕರ ಆಹಾರ ಹಾಗೂ ಪಾನೀಯಗಳನ್ನು ಸೇವಿಸುತ್ತಾರೆ.
ವಿಶೇಷವಾಗಿ ರಾಗಿ ಗಂಜಿ ಸೇರಿದಂತೆ ವಿವಿಧ ಗಂಜಿಗಳನ್ನು ಸೇವನೆ ಮಾಡುತ್ತಾರೆ. ಇವುಗಳು ದೇಹಕ್ಕೂ ತಂಪಾಗಿರುತ್ತವೆ. ದೇಹಕ್ಕೆ ಅಗತ್ಯ ಇರುವ ಶಕ್ತಿ ಮತ್ತು ಪೋಷಕಾಂಶಗಳೆರಡನ್ನೂ ಒದಗಿಸುತ್ತದೆ. ಜೊತೆಗೆ ಆಲಸ್ಯವನ್ನೂ ತಡೆಯುತ್ತದೆ. ನಿಮ್ಮನ್ನು ಹೈಡ್ರೇಟ್ ಆಗಿರಿಸುವ ಹಾಗೂ ನಿರ್ಜಲೀಕರಣವನ್ನು ಹೋಗಲಾಡಿಸುವಂತಹ ಆರೋಗ್ಯಕರ ಪಾನೀಯ ಜೋಳದ ಗಂಜಿ ಮಾಡುವುದು ಹೇಗೆ ತಿಳಿಯೋಣ.
ಜೋಳದ ಗಂಜಿಗೆ ಬೇಕಾಗುವ ಸಾಮಗ್ರಿಗಳು:
- ಜೋಳದ ಹಿಟ್ಟು - ಎರಡು ಚಮಚ
- ನೀರು - ಒಂದು ಗ್ಲಾಸ್
- ಉಪ್ಪು - ರುಚಿಗೆ ತಕ್ಕಷ್ಟು
ಜೋಳದ ಗಂಜಿ ಸಿದ್ಧಪಡಿಸುವ ವಿಧಾನ:
- ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಗ್ಲಾಸ್ ನೀರು ಹಾಕಿಕೊಳ್ಳಿ. ಹಿಟ್ಟಿನಲ್ಲಿ ಗಂಟುಗಳಾಗದಂತೆ ಮಿಶ್ರಣ ಮಾಡಬೇಕಾಗುತ್ತದೆ.
- ಮಿಶ್ರಣವನ್ನು ರಾತ್ರಿಯಿಡೀ ನೆನೆಯಲು ಬಿಡಬೇಕು. ಈ ರೀತಿ ಮಾಡುವುದರಿಂದ ಹಿಟ್ಟಿನಂತಿರುವ ಮತ್ತು ಜಿಗುಟಾದ ಗಂಜಿ ರುಚಿಕರವಾಗಿರುತ್ತದೆ.
- ಬೆಳಗ್ಗೆ ಈ ಗಂಜಿ ಕುಡಿಯಲು ಬಯಸುವವರು ಹಿಂದಿನ ರಾತ್ರಿ ಹಿಟ್ಟನ್ನು ನೆನೆಸಿಡಬೇಕು. ಸಂಜೆ ಸೇವಿಸಲು ಬಯಸುವವರು ಅದೇ ದಿನ ಬೆಳಗ್ಗೆ ನೆನೆಯಬಹುದು.
- ಹಿಟ್ಟು ಸರಿಯಾಗಿ ನೆನೆದ ನಂತರ ನೀವು ಮುಚ್ಚಳವನ್ನು ತೆಗೆದರೆ, ಮೇಲೆ ನೊರೆ ರೂಪುಗೊಳ್ಳುವುದನ್ನು ನೀವು ನೋಡುತ್ತೀರಿ. ಅದನ್ನು ತೆಗೆದು ಮತ್ತೆ ಹಿಟ್ಟನ್ನು ಚೆನ್ನಾಗಿ ಬೆರೆಸಿಕೊಳ್ಳಿ.
- ಒಲೆ ಆನ್ ಮಾಡಿ, ಅದರ ಮೇಲೆ ದಪ್ಪ ಬಟ್ಟಲು ಇಡಬೇಕಾಗುತ್ತದೆ. ಎರಡು ಗ್ಲಾಸ್ ನೀರು (ಅರ್ಧ ಲೀಟರ್) ಮತ್ತು ಉಪ್ಪು ಸೇರಿಸಿ ಬಿಸಿ ಮಾಡಿ.
- ನೀರು ಕುದಿಯುತ್ತಿರುವಾಗ ನೆನೆಸಿದ ನೆನೆಸಿದ ಜೋಳದ ಹಿಟ್ಟನ್ನು ಸೇರಿಸಿ, ಗಂಟುಗಳಾಗದಂತೆ ನಿರಂತರವಾಗಿ ಬೆರೆಸಿ ಬೇಯಿಸಿಕೊಳ್ಳಿ.
- ಜೋಳದ ಹಿಟ್ಟು ಬೇಯಿಸುವ ಸಮಯದಲ್ಲಿ ಮೇಲೆ ನೊರೆ ಬರುತ್ತದೆ. ಇದನ್ನು ತೆಗೆದುಹಾಕಬೇಕು. ಗಂಜಿ ದಪ್ಪವಾಗುವವರೆಗೆ ಕುದಿಸಿ. ಇದರರ್ಥ ಈ ಪ್ರಮಾಣಕ್ಕೆ ಸುಮಾರು 5 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿದರೆ ಸಾಕು.
- ಜೋಳದ ಗಂಜಿ ದಪ್ಪಗಾದ ನಂತರ, ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ಈ ಮಿಶ್ರಣವನ್ನು ಗ್ಲಾಸ್ಗೆ ಸುರಿದು ಬಿಸಿಯಾಗಿರುವಾಗಲೇ ಕುಡಿಯುವುದು ಉತ್ತಮ. ತುಂಬಾ ರುಚಿಕರ ಮತ್ತು ಆರೋಗ್ಯಕರವಾದ ಜೋಳದ ಗಂಜಿ ಸಿದ್ಧವಾಗಿದೆ. ಈ ಜೋಳದ ಗಂಜಿ ರೆಸಿಪಿ ನಿಮಗೆ ಇಷ್ಟವಾದರೆ ಬೇಸಿಗೆಯಲ್ಲಿ ಟ್ರೈ ಮಾಡಿ ನೋಡಿ.
ಇದನ್ನೂ ಓದಿ: ರಣ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಆರೋಗ್ಯಕರ ಕೂಲ್ ಕೂಲ್ ಪಾನೀಯಗಳು