SMALLEST COUNTRY IN THE WORLD: ಸದ್ಯ ಜಗತ್ತಿನಲ್ಲಿ 225 ದೇಶಗಳಿವೆ. ಕೆಲವು ದೇಶಗಳು ಗಾತ್ರದಲ್ಲಿ ಬಹಳ ದೊಡ್ಡದಾಗಿದ್ದರೆ, ಕೆಲವು ದೇಶಗಳು ಗಾತ್ರದಲ್ಲಿ ತುಂಬಾ ಚಿಕ್ಕದಾಗಿದೆ. ಕೆಲವು ದೇಶಗಳ ಜನಸಂಖ್ಯೆಯು ಕೋಟಿ ಮತ್ತು ಶತಕೋಟಿಗಳಲ್ಲಿದೆ. ಇನ್ನು ಕೆಲವು ದೇಶಗಳ ಜನಸಂಖ್ಯೆಯು ಲಕ್ಷಗಳು ಮತ್ತು ಸಾವಿರಾರು ಇದೆ. ಇಂದು ನಾವು ನಿಮಗೆ ಅಂತಹ ಒಂದು ದೇಶದ ಬಗ್ಗೆ ಹೇಳಲು ಬಯಸುತ್ತೇವೆ. ಪ್ರಸ್ತುತ ಕೇವಲ ಮೂರು ನಾಯಿಗಳು ಮತ್ತು ಮೂರು ಜನರು ವಾಸಿಸುತ್ತಾರೆ. ಈ ಪುಟ್ಟ ದೇಶವು ಎಲ್ಲಿದೆ ಎಂಬುದನ್ನು ತಿಳಿಯೋಣ.
ನೆವಾಡದಲ್ಲಿದೆ ಈ ಪುಟ್ಟ ದೇಶ: ಈ ದೇಶವು ಅಮೆರಿಕಾ ಸಂಯುಕ್ತ ಸಂಸ್ಥಾನದ ನೆವಾಡಾ ರಾಜ್ಯದಲ್ಲಿದೆ. ಜನರು ಇದನ್ನು 'ರಿಪಬ್ಲಿಕ್ ಆಫ್ ಮೊಲೋಸಿಯಾ' ಎಂದು ಕರೆಯುತ್ತಾರೆ. ಈ ದೇಶವು ತುಂಬಾ ಚಿಕ್ಕದಾಗಿದೆ, ಆದ್ದರಿಂದ ನೀವು ಇದನ್ನು ಮೈಕ್ರೊನೇಷನ್ ಎಂದೂ ಹೇಳಾಗುತ್ತದೆ. ಈ ದೇಶವು ತನ್ನದೇ ಆದ ನೌಕಾಪಡೆ, ನೌಕಾ ಅಕಾಡೆಮಿ, ಅಂಚೆ ಸೇವೆ, ಬ್ಯಾಂಕ್, ಬಾಹ್ಯಾಕಾಶ ಯೋಜನೆ, ರೈಲ್ವೆ ಮತ್ತು ಆನ್‌ಲೈನ್ ರೇಡಿಯೊ ಕೇಂದ್ರವನ್ನು ಹೊಂದಿದೆ. ಈ ಮೈಕ್ರೊನೇಷನ್ ಅನ್ನು ಪ್ರಪಂಚದಾದ್ಯಂತ ಗ್ರ್ಯಾಂಡ್ ರಿಪಬ್ಲಿಕ್ ಆಫ್ ಗೋಲ್ಡ್‌ಸ್ಟೈನ್ ಅಥವಾ ಮೊಲೋಸಿಯಾ ಎಂದು ಕರೆಯಲಾಗುತ್ತದೆ.
ಯಾವುದು ಆ ಚಿಕ್ಕ ದೇಶ: ಮೊಲೋಸಿಯಾ ವಿಶ್ವದ ಅತ್ಯಂತ ಚಿಕ್ಕ ದೇಶಗಳಲ್ಲಿ ಒಂದಾಗಿದೆ. ಇದರ ಒಟ್ಟು ವಿಸ್ತೀರ್ಣ 11.3 ಎಕರೆ ಆಗಿದೆ. ಇದು ನೆವಾಡಾದ ಡೇಟನ್ ನಗರದೊಳಗೆ ಈ ದೇಶವಿದೆ. ಮೊಲೋಸಿಯಾವನ್ನು 1977ರಲ್ಲಿ ಸ್ಥಾಪಿಸಲಾಯಿತು. ಈ ದೇಶದ ಜನಸಂಖ್ಯೆ ಕೇವಲ 38 ಇದೆ. ಆದರೆ ಪ್ರಸ್ತುತ ಇಲ್ಲಿ ಕೇವಲ ಮೂರು ನಾಯಿಗಳು ಮತ್ತು ಮೂರು ಜನರು ವಾಸಿಸುತ್ತಿದ್ದಾರೆ. ರಿಪಬ್ಲಿಕ್ ಆಫ್ ಮೊಲೋಸಿಯಾ ತನ್ನನ್ನು ತಾನು ಒಂದು ದೇಶವೆಂದು ಕರೆದುಕೊಂಡರೂ ಕೂಡ ವಿಶ್ವಸಂಸ್ಥೆಯಿಂದ ಇದನ್ನು ದೇಶವೆಂದು ಗುರುತಿಸಲ್ಪಟ್ಟಿಲ್ಲ. ರಿಪಬ್ಲಿಕ್ ಆಫ್ ಮೊಲೋಸಿಯಾವು ಕಾರ್ಸನ್ ಸಿಟಿಯ ಪಶ್ಚಿಮಕ್ಕೆ ಸುಮಾರು ಮೂವತ್ತು ನಿಮಿಷಗಳ ದೂರದ್ದು, ಇದು ಮೈಕ್ರೊನೇಷನ್ ಆಗಿದೆ.
ಮೊದಲು ಹೀಗೆ ಕರೆಯಲಾಗುತ್ತಿತ್ತು: ಮೊಲೋಸಿಯಾ ಎರಡು ಎಕರೆಗಿಂತ ಕಡಿಮೆ ಭೂಮಿಯಲ್ಲಿ ಹರಡಿಕೊಂಡಿದೆ. ಇದು ನೆವಾಡಾದ ಡೇಟನ್‌ನಲ್ಲಿ ಕಾರ್ಸನ್ ನದಿಯ ದಡದಲ್ಲಿದೆ. 1977ರಲ್ಲಿ ಸ್ಥಾಪಿಸಿದಾಗ ಈ ದೇಶವನ್ನು ಮೂಲತಃ ಗ್ರ್ಯಾಂಡ್ ರಿಪಬ್ಲಿಕ್ ಆಫ್ ವಾಲ್ಡಸ್ಟೈನ್ ಎಂದು ಕರೆಯಲಾಯಿತು. ಸುಮಾರು 20 ವರ್ಷಗಳ ನಂತರ, 1998ರಲ್ಲಿ ಅದರ ಹೆಸರನ್ನು ಮೊಲೋಸಿಯಾ ಸಾಮ್ರಾಜ್ಯ ಎಂದು ಬದಲಾಯಿಸಲಾಯಿತು. ಮೊಲೋಸಿಯಾ ದೇಶದ ಅಧ್ಯಕ್ಷರ ಹೆಸರು ಕೆವಿನ್ ಬಾಗ್.
ಈ ದೇಶದಲ್ಲಿಲ್ಲ ಈರುಳ್ಳಿಗೆ ಪ್ರವೇಶ, ಕಾರಣ?: ಮೊಲೋಸಿಯಾ ದೇಶಕ್ಕೆ ಬರುವ ಪ್ರವಾಸಿಗರು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ದೇಶದಲ್ಲಿ ಕ್ಯಾಟ್‌ಫಿಶ್ ಮತ್ತು ಈರುಳ್ಳಿಯನ್ನು ನಿಷೇಧಿಸಲಾಗಿದೆ. ನೀವು ಇಲ್ಲಿಗೆ ಹೋದಾಗ, ಈ ಎರಡು ವಸ್ತುಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ಜೈಲಿಗೆ ಹೋಗಬಹುದು. ಮೊಲೋಸಿಯಾದ ರಾಷ್ಟ್ರೀಯ ಭಾಷೆ ಇಂಗ್ಲಿಷ್ ಆಗಿದೆ. ಆದರೆ, ಎಸ್ಪೆರಾಂಟೊ ಮತ್ತು ಸ್ಪ್ಯಾನಿಷ್ ಸಹ ಇಲ್ಲಿ ಮಾತನಾಡುತ್ತಾರೆ. ಮೊಲೋಸಿಯಾದ ಕರೆನ್ಸಿ ವಲೋರಾ.
ಪ್ರವಾಸಿಗರು ಏಪ್ರಿಲ್ ಮತ್ತು ಅಕ್ಟೋಬರ್‌ನಲ್ಲಿ ಮೊಲೋಸಿಯಾಕ್ಕೆ ಪ್ರವಾಸಗಳನ್ನು ಬುಕ್ ಮಾಡಬಹುದು. ಮೊಲೊಸ್ಸಿಯಾ ರೈಲ್ವೆ ಹೊಂದಿದೆ. ಆದರೆ ಕಾಲ್ನಡಿಗೆಯಲ್ಲಿ ಅದನ್ನು ಅನ್ವೇಷಿಸಲು ಉತ್ತಮವಾಗಿದೆ. ಮೊಲೋಸಿಯಾ ತನ್ನ ಸ್ವಂತ ಬ್ರಾಂಡ್ ನೀರನ್ನು ಮೊಲೋಸಿಯನ್ ವಾಟರ್ ಎಂದು ಹೊಂದಿದೆ.
ವಿಶ್ವಸಂಸ್ಥೆಯ ಯಾವುದೇ 193 ಸದಸ್ಯ ರಾಷ್ಟ್ರಗಳಲ್ಲಿ ಮೊಲೋಸಿಯಾವನ್ನು ಗುರುತಿಸಲಾಗಿಲ್ಲ. ಇಂದು ಮೊಲೊಸ್ಸಿಯಾ ವಿಶ್ವದ 200 ಮೈಕ್ರೊನೇಷನ್‌ಗಳಲ್ಲಿ ಒಂದಾಗಿದೆ. ಈ ಚಿಕ್ಕ ದೇಶಕ್ಕೆ ತೆರಳಲು ಕಾರ್ಸನ್ ಸಿಟಿಯಿಂದ ಕೇವಲ 31 ನಿಮಿಷದ ಮತ್ತು ವರ್ಜೀನಿಯಾ ಸಿಟಿಯಿಂದ 18 ನಿಮಿಷಗಳು ಬೇಕಾಗುತ್ತದೆ. ಈ ಪುಟ್ಟ ದೇಶವು ಹೆಮ್ಮೆಯ ಪರಂಪರೆ ಮತ್ತು ಇತಿಹಾಸ ಹೊಂದಿದೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ವೀಕ್ಷಿಸಬಹುದು:
https://www.molossia.org/news.html
ಇದನ್ನೂ ಓದಿ: ಇದು 11 ದಿನಗಳ ಸೂಪರ್ ಟೂರ್: ಕೆಂಪುಕೋಟೆ, ತಾಜ್ ಮಹಲ್, ಹವಾ ಮಹಲ್ ನೋಡುವ ಸುವರ್ಣಾವಕಾಶ!