ETV Bharat / lifestyle

ಎಚ್ಚರಿಕೆ! ಅಜಾಗರೂಕ ಚಾಲನೆ & ಲಾಕ್ ಮಾಡಿದ ಕಾರುಗಳಿಂದ ಮಕ್ಕಳ ಜೀವಕ್ಕೆ ಅಪಾಯ - LOCKED CARS POSE A RISK TO LIFE

ಅಜಾಗರೂಕತೆಯ ಚಾಲನೆ ಸೇರಿದಂತೆ ಲಾಕ್ ಮಾಡಿದ ಕಾರುಗಳಿಂದ ಮಕ್ಕಳ ಜೀವಕ್ಕೆ ಅಪಾಯ ಉಂಟಾಗುತ್ತದೆ. ವಾಹನಗಳ ಸಮೀಪದಲ್ಲಿ ಮಕ್ಕಳು ಆಟವಾಡುವಾಗ ಪೋಷಕರು ಹಾಗೂ ಚಾಲಕರು ವಿಶೇಷ ಎಚ್ಚರಿಕೆವಹಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ.

Reckless Driving  Locked Cars Claim Young Lives  ಲಾಕ್ ಮಾಡಿದ ಕಾರುಗಳಿಂದ ಜೀವಕ್ಕೆ ಅಪಾಯ  Locked Cars
ಅಜಾಗರೂಕ ಚಾಲನೆ & ಲಾಕ್ ಮಾಡಿದ ಕಾರುಗಳಿಂದ ಮಕ್ಕಳ ಜೀವಕ್ಕೆ ಅಪಾಯ- ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Lifestyle Team

Published : April 15, 2025 at 1:05 PM IST

2 Min Read

ಹೈದರಾಬಾದ್: ನಿರ್ಲಕ್ಷ್ಯ ಮತ್ತು ಅಜಾಗರೂಕ ಚಾಲನೆಯಿಂದಾಗಿ ಮಕ್ಕಳ ಸಾವಿನ ಪ್ರಕರಣಗಳು ಹೈದರಾಬಾದ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಾಗುತ್ತಿವೆ. ಈ ರೀತಿಯ ಘಟನೆಗಳು ಏರಿಕೆಯಾಗುತ್ತಿರುವುದು ನಾಗರಿಕರು ಹಾಗೂ ಪೊಲೀಸರಲ್ಲಿ ಆತಂಕ ಉಂಟುಮಾಡಿದೆ.

ಘಟನೆ-1: ಇಲ್ಲಿನ ಮೀರ್‌ಪೇಟೆಯ ಭೂಪೇಶ್‌ಗುಪ್ತ ನಗರದಲ್ಲಿ ಇತ್ತೀಚೆಗೆ ನಡೆದ ಹೃದಯ ವಿದ್ರಾವಕ ಘಟನೆಯಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಇದಕ್ಕೆ ಕಾರು ಚಾಲಕನ ಸಂಪೂರ್ಣ ನಿರ್ಲಕ್ಷ್ಯವೇ ಕಾರಣವಾಗಿತ್ತು.

ಘಟನೆ-2: ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಸಾಂಬೈಗುಡೆಮ್‌ನಲ್ಲಿ ನಡೆದ ಪ್ರತ್ಯೇಕ ದುರಂತದಲ್ಲಿ ಆಟವಾಡಲು ಹೋಗಿದ್ದ ಮೂರು ವರ್ಷದ ಮಗು ರಾತ್ರಿಯ ನಂತರವೂ ಮನೆಗೆ ಹಿಂತಿರುಗಲಿಲ್ಲ. ಹತ್ತಿರದ ಪ್ರದೇಶಗಳಲ್ಲಿ ತೀವ್ರ ಹುಡುಕಾಟದ ನಂತರ, ಮಗು ಕಾರಿನೊಳಗೆ ಮೃತಪಟ್ಟಿರುವುದು ಕಂಡುಬಂದಿದೆ. ಆ ಮಗು ತನಗರಿವಿಲ್ಲದೆ ನಿಲ್ಲಿಸಿದ್ದ ವಾಹನದೊಳಗೆ ಹೋಗಿ ಕುಳಿದಿದೆ. ನಂತರ ಈ ವಾಹನವು ಒಳಗಿನಿಂದ ಲಾಕ್ ಆಗಿತ್ತು.

ಘಟನೆ-3: ಚೆವೆಲ್ಲಾದಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದ ಮಕ್ಕಳಾದ ತನ್ಮಯಶ್ರೀ ಮತ್ತು ಅಭಿನಯಶ್ರೀ, ಆಟವಾಡುತ್ತಿದ್ದಾಗ ಲಾಕ್ ಮಾಡಿದ ಕಾರಿನೊಳಗೆ ಉಸಿರುಗಟ್ಟಿ ಸಾವನ್ನಪ್ಪಿದರು. ವಾಹನ ಸ್ವಯಂಚಾಲಿತವಾಗಿ ಲಾಕ್ ಆಗಿತ್ತು. ಲಾಕ್​ ಆಗಿದ್ದ ಕಾರ್​ನಿಂದ ಇಬ್ಬರೂ ಮಕ್ಕಳು ಹೊರಗೆ ಬರಲು ಸಾಧ್ಯವಾಗಲಿಲ್ಲ.

ಇಂಥ ಘಟನೆಗಳಿಗೆ ಏನು ಕಾರಣ?: ಮಕ್ಕಳಿಗೆ ಈ ಕಾರುಗಳು, ಆಟೋಗಳು ಮತ್ತು ಬೈಕ್‌ಗಳಂತಹ ವಾಹನಗಳು ಆಟಿಕೆಗಳಂತೆ ಕಾಣುತ್ತವೆ. ಪೋಷಕರು ಹೆಚ್ಚಾಗಿ ಕೆಲಸ ಅಥವಾ ಕಾರ್ಯಕ್ರಮಗಳಲ್ಲಿ ನಿರತರಾಗಿರುತ್ತಾರೆ. ಮಕ್ಕಳು ಸುರಕ್ಷಿತವಾಗಿ ಆಟವಾಡುವಲ್ಲಿ ನಿರತರಾಗಿದ್ದಾರೆಂದು ಭಾವಿಸುತ್ತಾರೆ. ಆದರೆ, ಈ ಕ್ಷಣಿಕ ಲೋಪವು ಮಕ್ಕಳ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಈ ಘಟನೆಗಳಲ್ಲಿ ಹೆಚ್ಚಿನವು ಪೋಷಕರ ನಿರ್ಲಕ್ಷ್ಯ ಅಥವಾ ವಾಹನ ಚಾಲಕರ ನಿರ್ಲಕ್ಷ್ಯದಿಂದ ಉಂಟಾಗುತ್ತವೆ ಎಂದು ಪೊಲೀಸ್​ ಇಲಾಖೆಯ ತನಿಖೆಗಳಿಂದ ಬಹಿರಂಗವಾಗಿದೆ.

ಮಕ್ಕಳು ಆಗಾಗ್ಗೆ ನಿಲುಗಡೆ ಮಾಡಿದ ವಾಹನಗಳ ಬಳಿ ಆಟವಾಡುತ್ತಾರೆ. ಚಾಲಕರು ತಮಗೆ ಅರಿವಿಲ್ಲದ ವಾಹನವನ್ನು ಚಲಿಸಬಹುದು. ಇದರಿಂದ ತಮಗೆ ತಿಳಿಯದೆ ಅವಘಡಗಳು ಸಂಭವಿಸಬಹುದು. ವಾಹನ ಚಾಲಕರು ಕೆಲವು ಮುನ್ನಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ ತಜ್ಞರು ಒತ್ತಿ ಹೇಳುತ್ತಾರೆ.

  • ವಾಹನವನ್ನು ಪ್ರಾರಂಭಿಸುವ ಮೊದಲು ಸುತ್ತಲೂ ಮತ್ತು ಕೆಳಗೆ ಪರಿಶೀಲಿಸಿ.
  • ವಾಹನವನ್ನು ಚಲಿಸುವ ಮೊದಲು ಒಮ್ಮೆ ಹಾರ್ನ್ ಮಾಡಿ. ವಿಶೇಷವಾಗಿ ವಸತಿ ಅಥವಾ ಆಟದ ಪ್ರದೇಶಗಳಲ್ಲಿ ಹಾರ್ನ್​ ಮಾಡುವುದನ್ನು ಮರೆಯಬಾರದು.
  • ಮಕ್ಕಳು ಇರುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಚಾಲನೆ ಮಾಡಿ.

ಲಾಕ್ ಮಾಡಿದ ಕಾರುಗಳು ಸೈಲೆಂಟ್ ಕಿಲ್ಲರ್: ನಿಂತಿರುವ ಕಾರುಗಳು ಸಹ ಮಾರಕವಾಗಬಹುದು. ಪಾರ್ಕ್ ಮಾಡಿದ ಕಾರುಗಳ ಒಳಗೆ ಪ್ರವೇಶಿಸುವ ಮಕ್ಕಳು ತಿಳಿಯದೆ ಒಳಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚು. ಅಂತಹ ಸೀಮಿತ ಸ್ಥಳಗಳಲ್ಲಿ ಇಂಗಾಲದ ಡೈಆಕ್ಸೈಡ್ ಮತ್ತು ಇಂಗಾಲದ ಮಾನಾಕ್ಸೈಡ್ ಮಟ್ಟಗಳು ಬೇಗನೆ ಹೆಚ್ಚಳವಾಗಿ ಉಸಿರಾಡಲು ಕಷ್ಟವಾಗುತ್ತದೆ. ಸಮಯಕ್ಕೆ ಸರಿಯಾಗಿ ರಕ್ಷಿಸದಿದ್ದರೆ ಮಕ್ಕಳ ಜೀವಕ್ಕೆ ಮಾರಕವಾಗಬಹುದು. ಕೆಲವು ಜನರು ಲಾಕ್​ ಮಾಡಿದ ಕಾರುಗಳಲ್ಲಿ ಎಸಿ ಆನ್ ಮಾಡಿ ಮಲಗುತ್ತಾರೆ. ಲಾಕ್​ ಮಾಡಿದ ವಾಹನದಲ್ಲಿ 30 ನಿಮಿಷಗಳಿಗಿಂತ ಹೆಚ್ಚು ಕಾಲ ಇರುವುದು ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ಇದು ಅತ್ಯಂತ ಅಪಾಯಕಾರಿ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಪೊಲೀಸರ ಮನವಿ: ''ಪೋಷಕರು ಮನೆಯಲ್ಲಿ ಮತ್ತು ಹೊರಗೆ ತಮ್ಮ ಮಕ್ಕಳೊಂದಿಗೆ ಜಾಗರೂಕರಾಗಿರಬೇಕು. ಹೊರಾಂಗಣದಲ್ಲಿ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಆಟವಾಡುವಾಗ ಅವರ ಚಲನವಲನಗಳನ್ನು ಅವರು ಮೇಲ್ವಿಚಾರಣೆ ಮಾಡಬೇಕು. ಕಾರುಗಳನ್ನು ನಿಲ್ಲಿಸುವಾಗ ಬಾಗಿಲುಗಳನ್ನು ಸಂಪೂರ್ಣವಾಗಿ ಲಾಕ್ ಮಾಡಬೇಕು. ಮಕ್ಕಳು ಆಟವಾಡುವಾಗ ಕಾರ್​ಗೆ ಹತ್ತಿದರೆ ಮತ್ತು ಬಾಗಿಲು ಇದ್ದಕ್ಕಿದ್ದಂತೆ ಲಾಕ್ ಆಗಿದ್ದರೆ ಆಮ್ಲಜನಕದ ಕೊರತೆಯಿಂದಾಗಿ ಅವರ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿದೆ. ಪೋಷಕರು ಮಕ್ಕಳನ್ನು ವಾಹನಗಳ ಸುತ್ತಲೂ ಗಮನಿಸದೆ ಬಿಡಬಾರದು. ಮಕ್ಕಳ ಹುಡುಕಾಟದ ಸಮಯದಲ್ಲಿ ಯಾವಾಗಲೂ ಕಾರುಗಳ ಒಳಗೆ ಹಾಗೂ ಹೊರಗೆ ಪರಿಶೀಲಿಸಬೇಕಾಗುತ್ತದೆ" ಎಂದು ನಗರ ಸಂಚಾರದ ಎಸಿಪಿ ಧನಲಕ್ಷ್ಮಿ ಹೇಳಿದರು.

ಇದನ್ನೂ ಓದಿ: ಇಂದಿನ ಪೋಷಕರು ಒಂದೇ ಮಗುವಿಗೆ ಸೀಮಿತರಾಗುವುದೇಕೆ? ಮಗುವಿನ ಪಾಲನೆಯ ಸವಾಲುಗಳೇನು ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.