Panch ratan dal dosa Recipe: ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಉಪಹಾರದಲ್ಲಿ ದೋಸೆಗೆ ವಿಶೇಷ ಸ್ಥಾನವಿದೆ. ಹೌದು, ಪ್ರತಿದಿನ ಕೋಟ್ಯಂತರ ಜನರು ವಿವಿಧ ಪ್ರಕಾರದ ದೋಸೆಗಳನ್ನು ತುಂಬಾ ಇಷ್ಟುಪಟ್ಟ ಸೇವಿಸುತ್ತಾರೆ. ಜೊತೆಗೆ ಜನರ ಇಚ್ಛೆಗೆ ತಕ್ಕಂತೆ ಹಲವು ರೀತಿಯ ದೋಸೆಗಳು ಹುಟ್ಟಿಕೊಂಡಿವೆ. ಅದರಲ್ಲಿ ಪಂಚ ಧಾನ್ಯ ದೋಸೆಯು ಒಂದು ಆಗಿದೆ.
ಈ ದೋಸೆಯನ್ನು ಐದು ಪ್ರಮುಖ ಪದಾರ್ಥಗಳಿಂದ ಸಿದ್ಧಪಡಿಸಲಾಗುತ್ತದೆ. ಉದ್ದಿನ ಬೇಳೆ, ಹೆಸರು ಬೇಳೆ, ಕಡಲೆ ಬೇಳೆ, ತೊಗರಿ ಬೇಳೆ ಮತ್ತು ಅಕ್ಕಿಯಿಂದ ಪಂಚ ಧಾನ್ಯ ದೋಸೆಯನ್ನು ರೆಡಿ ಮಾಡಬಹುದು. ಈ ದೋಸೆಯು ವಿಶಿಷ್ಟವಾದ ರುಚಿ ಹಾಗೂ ಪೌಷ್ಟಿಕಾಂಶವನ್ನು ಹೊಂದಿದೆ. ಈ ವಿಭಿನ್ನ ದೋಸೆಯನ್ನು ಹೇಗೆ ತಯಾರಿಸುವುದು ಹಾಗೂ ಬೇಕಾಗುವ ಪದಾರ್ಥಗಳೇನು ಎಂಬುದನ್ನು ತಿಳಿಯೋಣ.
ಪಂಚ ಧಾನ್ಯ ದೋಸೆಗೆ ಅಗತ್ಯವಿರುವ ಪದಾರ್ಥಗಳೇನು?
- ಅರ್ಧ ಕಪ್ - ಉದ್ದಿನ ಬೇಳೆ
- ಅರ್ಧ ಕಪ್ - ಹೆಸರು ಬೇಳೆ
- ಅರ್ಧ ಕಪ್ - ತೊಗರಿ ಬೇಳೆ
- ಅರ್ಧ ಕಪ್ - ಕಡಲೆ ಬೇಳೆ
- 1 ಕಪ್ - ಅಕ್ಕಿ
- 4 ಒಣ ಮೆಣಸಿನಕಾಯಿ ಅಥವಾ 4 ಹಸಿಮೆಣಸಿನಕಾಯಿ (ನಿಮ್ಮ ಆಯ್ಕೆಗೆ ಬಿಟ್ಟಿದ್ದು)
- 1 ಅರ್ಧ ಮಧ್ಯಮ ಗಾತ್ರದ ಈರುಳ್ಳಿ (ಕತ್ತರಿಸಬೇಕು)
- ಸ್ವಲ್ಪ ಕರಿಬೇವು
- ಅರ್ಧ ಟೀಸ್ಪೂನ್ ಮೆಣಸು
- 1 ಟೀಸ್ಪೂನ್ ಜೀರಿಗೆ
- ಸಾಕಷ್ಟು ಉಪ್ಪು
- ಚಿಟಿಕೆ ಇಂಗು
- ಸ್ವಲ್ಪ ಹಳದಿ.
- ಸಾಕಷ್ಟು ನೀರು (ರುಬ್ಬುವಾಗ)
- ಫ್ರೈ ಮಾಡಲು ಸ್ವಲ್ಪ ಎಣ್ಣೆ
ಪಂಚ ಧಾನ್ಯ ದೋಸೆ ತಯಾರಿಸುವ ವಿಧಾನ:
- ಉದ್ದಿನ ಬೇಳೆ, ಹೆಸರು ಬೇಳೆ, ಕಡಲೆ ಬೇಳೆ, ತೊಗರಿ ಬೇಳೆ ಮತ್ತು ಅಕ್ಕಿಯನ್ನು ಒಂದು ದೊಡ್ಡ ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ತೊಳೆಯಿರಿ.
- ತೊಳೆದ ಬೇಳೆಯನ್ನು ರಾತ್ರಿಯಿಡೀ (ಕನಿಷ್ಠ 8 ಗಂಟೆಗಳ ಕಾಲ) ನೀರಿನಲ್ಲಿ ಅಕ್ಕಿ ಸಂಪೂರ್ಣವಾಗಿ ಮುಳುಗುವವರೆಗೆ ನೆನೆಸಿಡಿ.
- ಬೆಳಿಗ್ಗೆ ನೆನೆಸಿದ ನೀರನ್ನು ಸಂಪೂರ್ಣವಾಗಿ ಸೋಸಿಕೊಳ್ಳಬೇಕು.
- ಬಳಿಕ ಮಿಕ್ಸರ್ ಜಾರ್ ತೆಗೆದುಕೊಂಡು ಅದಕ್ಕೆ ಬೇಳೆ ಮತ್ತು ರೈಸ್ ಸೇರಿಸಿ. ಇದಕ್ಕೆ ಒಣ ಅಥವಾ ಹಸಿ ಮೆಣಸಿನಕಾಯಿ, ಈರುಳ್ಳಿ ಪೀಸ್ಗಳು, ಕರಿಬೇವು, ಕಾಳುಮೆಣಸು, ಜೀರಿಗೆ, ಉಪ್ಪು, ಇಂಗು ಮತ್ತು ಅರಿಶಿನ ಸೇರಿಸಿ.
- ಸಾಕಷ್ಟು ನೀರು ಸೇರಿಸಿ ಹಿಟ್ಟು ದೋಸೆ ಹಿಟ್ಟಿನಂತೆ ನುಣ್ಣಗೆ ಆಗುವವರೆಗೆ ಸರಿಯಾಗಿ ರುಬ್ಬಿಕೊಳ್ಳಿ. ಹಿಟ್ಟು ಯಾವುದೇ ಉಂಡೆಗಳಿಲ್ಲದೆ ನಯವಾಗಿರಬೇಕು.
- ಒಂದು ದೊಡ್ಡ ಬೌಲ್ನಲ್ಲಿ ರುಬ್ಬಿದ ಹಿಟ್ಟನ್ನು ತೆಗೆದುಕೊಳ್ಳಿ.
- ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ, ಬಟ್ಟಲನ್ನು ಮುಚ್ಚಿ ಕನಿಷ್ಠ 1 ಗಂಟೆ ಪಕ್ಕಕ್ಕೆ ಇರಿಸಿ. ಹಿಟ್ಟನ್ನು 2 ರಿಂದ 3 ಗಂಟೆಗಳ ಕಾಲ ನೆನೆಸಿದರೆ ದೋಸೆಗಳು ರುಚಿಕರವಾಗಿರುತ್ತವೆ.
- ದೋಸೆ ಮಾಡಲು, ಒಲೆಯ ಮೇಲೆ ನಾನ್ಸ್ಟಿಕ್ ಪ್ಯಾನ್ ಇಟ್ಟು ಬಿಸಿ ಮಾಡಿ. ಮಧ್ಯಮ ಉರಿಯಲ್ಲಿ ಇರಿಸಿದರೆ ಉತ್ತಮ.
- ಪ್ಯಾನ್ ಬಿಸಿಯಾದ ನಂತರ, ಸ್ವಲ್ಪ ಎಣ್ಣೆ ಸೇರಿಸಿ ಮತ್ತು ಪ್ಯಾನ್ ತುಂಬಾ ಹರಡಿ.
- ಒಂದು ಚಮಚದಿಂದ ಹಿಟ್ಟು ತೆಗೆದುಕೊಂಡು ಅದನ್ನು ಪ್ಯಾನ್‌ನ ಮಧ್ಯಭಾಗಕ್ಕೆ ಸುರಿಯಿರಿ, ಅದನ್ನು ತೆಳುವಾಗಿ ಸುತ್ತ ಹರಡಿ.
- ದೋಸೆಯ ಅಂಚುಗಳ ಸುತ್ತಲೂ ಸ್ವಲ್ಪ ಎಣ್ಣೆ ಹಚ್ಚಿ. ಮಧ್ಯಮ ಉರಿಯಲ್ಲಿ ಒಂದು ಬದಿಯಲ್ಲಿ ಗೋಲ್ಡ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ. ದೋಸೆ ಒಂದು ಬದಿ ಬೆಂದ ನಂತರ, ಅದನ್ನು ಎಚ್ಚರಿಕೆಯಿಂದ ತಿರುಗಿಸಿ ಹಾಗೂ ಇನ್ನೊಂದು ಬದಿಯಲ್ಲಿ ಗೋಲ್ಡ್ ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿ.
- ಉಳಿರುವ ಹಿಟ್ಟಿನಿಂದ ಇದೇ ರೀತಿ ದೋಸೆಗಳನ್ನು ಮಾಡಿ.
- ನಿಮ್ಮ ನೆಚ್ಚಿನ ಶೇಂಗಾ ಚಟ್ನಿ, ಕೊಬ್ಬರಿ, ಟೊಮೆಟೊ ಚಟ್ನಿ ಇತರೆ ಚಟ್ನಿಗಳೊಂದಿಗೆ ಬಿಸಿ ಬಿಸಿಯಾದ ಪಂಚ ಧಾನ್ಯಗಳಿಂದ ಮಾಡಿದ ದೋಸೆಗಳನ್ನು ಪ್ಲೇಟ್ಗೆ ಬಡಿಸಿ.
- ರುಚಿಕರವಾದ ಮತ್ತು ಆರೋಗ್ಯಕರವಾದ ಪಂಚ ಧಾನ್ಯ ದೋಸೆಗಳು ಮನೆಯ ಎಲ್ಲ ಸದಸ್ಯರಿಗೂ ಇಷ್ಟವಾಗುತ್ತದೆ.
ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ ಮಂಗಳೂರಿನ ನೀರ್ ದೋಸೆ ಮಾಡುವುದು ತುಂಬಾ ಸುಲಭ ಮಾರಾಯ್ರೆ!