Onion Chutney Recipe: ಊಟ ಮತ್ತು ಉಪಹಾರಗಳ ಜೊತೆಗೆ ಕೆಲವು ಚಟ್ನಿಗಳು ಒಳ್ಳೆಯ ಸಂಯೋಜನೆಯಾಗಿವೆ. ಸೈಡ್ ಡಿಶ್ ಆಗಿರುವ ಈ ಚಟ್ನಿಗಳಿಂದ ಆಹಾರದ ರುಚಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಮನೆಯಲ್ಲಿ ಯಾವುದೇ ತರಕಾರಿ ಇಲ್ಲದ ವೇಳೆಯಲ್ಲಿ ಈರುಳ್ಳಿಯಿಂದ ಸೂಪರ್ ರುಚಿಯ ಚಟ್ನಿ ಮಾಡಬಹುದು. ಒಂದು ಬಾರಿ ಸಖತ್ ಟೇಸ್ಟಿಯಾಗಿರುವ ಈರುಳ್ಳಿ ಚಟ್ನಿಯ ಸವಿದರೆ, ಪದೇ ಪದೇ ತಿನ್ನಬೇಕೆನಿಸುತ್ತದೆ. ಈ ಚಟ್ನಿ ಸಿದ್ಧಪಡಿಸುವುದು ಕೂಡ ಅತ್ಯಂತ ಸುಲಭವಾಗಿದೆ.
ಈರುಳ್ಳಿ ಚಟ್ನಿಯನ್ನು ಬಿಸಿ ಬಿಸಿಯಾದ ರೈಸ್ ಜೊತೆಗೆ ಸೇವಿಸಿದರೆ ಮನದಲ್ಲಿ ಸಂತೋಷ ಮೂಡುತ್ತದೆ. ಈ ಚಟ್ನಿ ಅನ್ನದಲ್ಲಿ ಮಾತ್ರವಲ್ಲದೇ ಇಡ್ಲಿ, ದೋಸೆ, ವಡೆ, ಪೂರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಜೊತೆಗೆ ಸವಿದರೆ, ವಾವ್ ಎನಿಸುವಂತಹ ಭಾವ ನಿಮಗೆ ಲಭಿಸುತ್ತದೆ. ರುಚಿಕರ ಹಾಗೂ ಮಸಾಲೆಯುಕ್ತ ಈರುಳ್ಳಿ ಚಟ್ನಿ ಸಿದ್ಧಪಡಿಸೋದು ಹೇಗೆ? ಈ ಚಟ್ನಿಗೆ ಬೇಕಾದ ಪದಾರ್ಥಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಈರುಳ್ಳಿ ಚಟ್ನಿಗೆ ಅಗತ್ಯವಿರುವ ಸಾಮಗ್ರಿ:
- ಎಣ್ಣೆ- 2 ಟೀಸ್ಪೂನ್
- ಉದ್ದಿನ ಬೇಳೆ- 1 ಟೀಸ್ಪೂನ್
- ಕಡಲೆ ಬೇಳೆ- 1 ಟೀಸ್ಪೂನ್
- ಕೆಂಪು ಮೆಣಸಿನಕಾಯಿ- 4
- ಸಣ್ಣಗೆ ಕತ್ತರಿಸಿದ ಈರುಳ್ಳಿ - 1
- ಹುಣಿಸೆಹಣ್ಣು- ಸ್ವಲ್ಪ
- ಬೆಲ್ಲ- ಅರ್ಧ ಟೀಸ್ಪೂನ್
- ಉಪ್ಪು- ರುಚಿಗೆ ತಕ್ಕಷ್ಟು
- ನೀರು - ಕಾಲು ಕಪ್ ಅಥವಾ ಅಗತ್ಯವಿರುವಷ್ಟು
ಒಗ್ಗರಣೆ ನೀಡಲು ಬೇಕಾಗುವ ಸಾಮಗ್ರಿ
- ಎಣ್ಣೆ- 2 ಟೀಸ್ಪೂನ್
- ಸಾಸಿವೆ- ಅರ್ಧ ಟೀಸ್ಪೂನ್
- ಜೀರಿಗೆ- ಅರ್ಧ ಟೀಸ್ಪೂನ್
- ಉದ್ದಿನ ಬೇಳೆ- 1 ಟೀಸ್ಪೂನ್
- ಇಂದು - ಚಿಟಿಕೆ
- ಕೆಂಪು ಮೆಣಸಿನಕಾಯಿ - 1
- ಕರಿಬೇವಿನ ಎಲೆಗಳು- ಸ್ವಲ್ಪ
ಈರುಳ್ಳಿ ಚಟ್ನಿ ಸಿದ್ಧಪಡಿಸುವ ವಿಧಾನ ಹೀಗಿದೆ ನೋಡಿ:
- ಮೊದಲು ಒಲೆ ಮಾಡಿ ಬಾಣಲೆ ಇಡಿ. ಅದು ಬಿಸಿಯಾದ ಬಳಿಕ ಎರಡು ಟೀಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಅದರೊಳಗೆ ಉದ್ದಿನ ಬೇಳೆ, ಕಡಲೆ ಬೇಳೆ ಹಾಗೂ ಕೆಂಪು ಮೆಣಸಿನಕಾಯಿಯನ್ನು ಕಡಿಮೆ ಉರಿಯಲ್ಲಿ ಫ್ರೈ ಮಾಡಬೇಕಾಗುತ್ತದೆ.
- ಈಗ ದೊಡ್ಡ ಗಾತ್ರದ ಒಂದು ಸಣ್ಣಗೆ ಕತ್ತರಿಸಿ ಈರುಳ್ಳಿ ಸೇರಿಸಬೇಕು.
- ನಂತರ, ಈರುಳ್ಳಿಯನ್ನು ಹೊಂಬಣ್ಣ ಬರುವವರೆಗೆ ಹುರಿಯಿರಿ. ಇದಾದ ನಂತರ ಒಲೆ ಆಪ್ ಮಾಡಿ.
- ಈ ಮಿಶ್ರಣವವು ಸಂಪೂರ್ಣವಾಗಿ ತಣ್ಣಗಾದ ಬಳಿಕ ಮಿಕ್ಸರ್ ಜಾರ್ ತೆಗೆದುಕೊಂಡು ಅದರೊಳಗೆ ಹಾಕಿ.
- ಕೊಂಚ ಬೆಲ್ಲ, ಸ್ವಲ್ಪ ಹುಣಿಸೆಹಣ್ಣು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಬೇಕಾಗುತ್ತದೆ.
- ಕಾಲು ಕಪ್ ಇಲ್ಲವೇ ನಿಮಗೆ ಅಗತ್ಯವಿರುವಷ್ಟು ನೀರನ್ನು ಸೇರಿಸಿ ಸಣ್ಣಗೆ ರುಬ್ಬಿಕೊಳ್ಳಿ.
- ಬಳಿಕ ಈ ಚಟ್ನಿಗೆ ಒಗ್ಗರಣೆ ನೀಡಬೇಕಾಗುತ್ತದೆ, ಇದಕ್ಕಾಗಿ ಒಲೆ ಆನ್ ಮಾಡಿ, ಅದರ ಮೇಲೆ ಚಿಕ್ಕ ಪಾತ್ರೆ ಇಡಿ, ಎರಡು ಟೀಸ್ಪೂನ್ ಎಣ್ಣೆ ಹಾಕಿ ಬಿಸಿಮಾಡುವ ಮೂಲಕ ಒಗ್ಗರಣೆ ರೆಡಿ ಮಾಡಬೇಕಾಗುತ್ತದೆ.
- ಉದ್ದಿನ ಬೇಳೆ, ಸಾಸಿವೆ, ಚಿಟಿಕೆ ಹಿಂಗ್, ಮೂರ್ನಾಲ್ಕು ಪೀಸ್ ಮಾಡಿದ ಕೆಂಪು ಮೆಣಸಿನಕಾಯಿ ಹಾಗೂ ಕೆಲವು ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಬೇಕಾಗುತ್ತದೆ. ಒಗ್ಗರಣೆಯ ಮಿಶ್ರಣವು ಸ್ವಲ್ವ ಬ್ರೌನ್ ಕಲರ್ ಬಂದ ನಂತರ ಒಲೆ ಆಫ್ ಮಾಡಿ.
- ಕೊನೆಯದಾಗಿ ಈರುಳ್ಳಿ ಚಟ್ನಿಯೊಳಗೆ ಈ ಒಗ್ಗರಣೆ ಮಿಶ್ರಣವನ್ನು ಸೇರಿಸಿ ಕಲಸಿದರೆ ಸಾಕು, ಭರ್ಜರಿ ರುಚಿಯ ಸೇವಿಸಲು ಸಿದ್ಧವಾಗಿದೆ. ಈ ಈರುಳ್ಳಿ ಚಟ್ನಿಯನ್ನು ಇಡ್ಲಿ, ದೋಸೆ, ಅನ್ನ, ಚಪಾತಿ, ರೊಟ್ಟಿಯ ಜೊತೆಗೆ ತಿಂದರೆ ಸಖತ್ ಆಗಿರುತ್ತದೆ.