ETV Bharat / lifestyle

ಬೇಸಿಗೆಯ ವಿಶೇಷ ತಂಪು ಪಾನೀಯವಿದು: ಹೆಲ್ದಿ ಅಂಡ್ ಟೇಸ್ಟಿ ಬೆಲ್ಲದ ಲಿಂಬು ಶರಬತ್ ಸಿದ್ಧಪಡಿಸೋದು ಹೇಗೆ ಗೊತ್ತಾ? - SUPER LEMON JAGGERY SHARBAT

Lemon Jaggery Sharbat Recipe: ನಾವು ನಿಮಗಾಗಿ ವಿಶೇಷವಾದ ಬೇಸಿಗೆಯ ಪಾನೀಯ ರೆಸಿಪಿ ತಂದಿದ್ದೇವೆ. ರುಚಿಕರ ಮತ್ತು ಆರೋಗ್ಯಕ್ಕೆ ಒಳ್ಳೆಯದಾದ ಬೆಲ್ಲದ ಲಿಂಬು ಶರಬತ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

LEMON SHARBA MAKING PROCESS  JAGGERY SHARBAT RECIPE  SUPER LEMON SHARBAT AT HOME  SUMMER SPECIAL HEALTHY DRINK RECIPE
ಬೆಲ್ಲದ ಲಿಂಬು ಶರಬತ್ (Getty Images)
author img

By ETV Bharat Lifestyle Team

Published : April 18, 2025 at 12:08 PM IST

3 Min Read

Super Lemon Jaggery Sharbat Recipe: ಬೇಸಿಗೆಯಲ್ಲಿ ಬರುವ ವಿವಿಧ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಲು ದೇಹವನ್ನು ಹೈಡ್ರೀಕರಿಸುವುದು ತುಂಬಾ ಮುಖ್ಯವಾಗಿದೆ. ಕೆಲವೊಮ್ಮೆ ನೀವು ಎಷ್ಟೇ ಸಾಮಾನ್ಯ ನೀರನ್ನು ಕುಡಿದರೂ ನಿಮ್ಮ ಬಾಯಾರಿಕೆ ತಣಿಸುವುದಿಲ್ಲ. ಈ ಸಂದರ್ಭದಲ್ಲಿ ಅನೇಕ ಜನರು ಮಜ್ಜಿಗೆ ಇಲ್ಲವೇ ಲಿಂಬು ಶರಬತ್ ತಯಾರಿಸಿ ಕುಡಿಯುತ್ತಾರೆ. ಅದರಲ್ಲೂ ಬೆಲ್ಲದ ಲಿಂಬು ಶರಬತ್ ಕೂಡ ತಯಾರಿಸಲಾಗುತ್ತದೆ. ಇದು ರುಚಿಕರವಾಗಿರುವುದಲ್ಲದೇ, ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ವಿಶೇಷವಾಗಿ ದೇಹವು ನಿರ್ಜಲೀಕರಣಗೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ಸೂರ್ಯನ ಶಾಖದಿಂದ ಪರಿಹಾರ ನೀಡುವುದಲ್ಲದೇ, ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಈ ಶರಬತ್​ ಹೊರಗೆ ಮಾರಾಟ ಆಗುವ ಪಾನೀಯಗಳಿಗಿಂತ ಹೆಚ್ಚು ಆರೋಗ್ಯಕರವಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇದನ್ನು ಕುಡಿಯಲು ಇಷ್ಟಪಡುತ್ತಾರೆ. ಆರೋಗ್ಯಕರ ಮತ್ತು ರುಚಿಕರವಾದ ಬೆಲ್ಲದ ಲಿಂಬು ಶರಬತ್ ಹೇಗೆ ಸಿದ್ಧಪಡಿಸುವುದು ಎಂಬುದನ್ನು ಈಗ ನೋಡೋಣ.

LEMON SHARBA MAKING PROCESS  JAGGERY SHARBAT RECIPE  SUPER LEMON SHARBAT AT HOME  SUMMER SPECIAL HEALTHY DRINK RECIPE
ಸಬ್ಜಾ ಬೀಜ (Getty Images)

ಬೆಲ್ಲದ ಲಿಂಬು ಶರಬತ್​ಗೆ ಟಿಪ್ಸ್​:

  • ನಿಮ್ಮ ರುಚಿಗೆ ತಕ್ಕಂತೆ ಸಾಕಷ್ಟು ಕಾಳು ಮೆಣಸು ಪುಡಿ ಮತ್ತು ಶುಂಠಿ ಸೇರಿಸಬಹುದು. ನಿಮಗೆ ಸ್ವಲ್ಪ ಖಾರ ಬೇಕಾದರೆ ಹೆಚ್ಚು ಬಳಸಬಹುದು.
  • ಮೆಣಸಿನ ಪುಡಿ ಮಿಶ್ರಣವನ್ನು ಪಾನೀಯಕ್ಕೆ ತಯಾರಿಸಿಸುವ ಮೊದಲೇ ಪಕ್ಕಕ್ಕೆ ಇಡಬೇಕು. ನೀರು ಸೇರಿಸಿದ ನಂತರ ಅಗತ್ಯ ಇರುವಂತೆ ಉಳಿದವನ್ನು ಸೇರಿಸಬಹುದು.
  • ಶರಬತ್​ ರುಚಿಯನ್ನು ಇನ್ನಷ್ಟು ಹೆಚ್ಚಿಸಲು ಪುಡಿಮಾಡಿದ ಶುಂಠಿ ಸೇರಿಸಿ.
  • ನಿಮ್ಮ ರುಚಿಗೆ ತಕ್ಕಂತೆ ನಿಂಬೆ ರಸ ಸೇರಿಸಿ.

ಬೆಲ್ಲದ ಲಿಂಬು ಶರಬತ್​ಗೆ ಬೇಕಾಗುವ ಪದಾರ್ಥಗಳೇನು?:

ಬಡೆಸೋಂಪು (Getty Images)
  • ನೆನೆಸಿದ ಸಬ್ಜಾ ಬೀಜಗಳು - ಎರಡೂವರೆ ಚಮಚ
  • ಬೆಲ್ಲ - 350 ಗ್ರಾಂ
  • ಒಣ ಶುಂಠಿ - ಎರಡು ಇಂಚಿನ ತುಂಡು
  • ಕಾಳುಮೆಣಸು ಪುಡಿ - ಒಂದರಿಂದ ಎರಡು ಟೀಸ್ಪೂನ್​
  • ಕಲ್ಲು ಉಪ್ಪು - ಒಂದೂವರೆ ಟೀಸ್ಪೂನ್​
  • ಬಡೆಸೋಂಪು - ಒಂದು ಟೀಸ್ಪೂನ್​
  • ಏಲಕ್ಕಿ - 8 ರಿಂದ 10
  • ತುಳಸಿ ಎಲೆಗಳು - ಒಂದು ಹಿಡಿ
  • ಹಸಿಶುಂಠಿ - 1 ಇಂಚಿನ ತುಂಡು
  • ನಿಂಬೆಹಣ್ಣು - 3 ರಿಂದ 4

ಬೆಲ್ಲದ ಲಿಂಬು ಶರಬತ್ ತಯಾರಿಸುವುದು ಹೇಗೆ?:

ಲಿಂಬೆ ಹಣ್ಣು (Getty Images)
  • ಮೊದಲು ಒಂದು ಸಣ್ಣ ಬೌಲ್​ನಲ್ಲಿ ಸಾಕಷ್ಟು ನೀರು ತೆಗೆದುಕೊಂಡು ಅದರಲ್ಲಿ ಸಬ್ಜಾ ಬೀಜಗಳನ್ನು ನೆನೆಸಿಡಿ.
  • ಪಾಕ ವಿಧಾನಕ್ಕೆ ಬೇಕಾದ ಇತರ ಪದಾರ್ಥಗಳನ್ನು ಅವರು ಮೊದಲೇ ತಯಾರಿಸಬೇಕಾಗುತ್ತದೆ. ಬೆಲ್ಲವನ್ನು ನುಣ್ಣಗೆ ತುರಿದು ಒಂದು ತಟ್ಟೆಗೆ ತೆಗೆದುಕೊಳ್ಳಿ.
  • ನಂತರ ತೊಳೆದು ಒರೆಸಿದ ಶುಂಠಿಯ ಸಿಪ್ಪೆ ತೆಗೆದುಹಾಕಿ, ಅರಿಶಿನ ಸೇರಿಸಿ ನುಣ್ಣಗೆ ಪುಡಿಮಾಡಿ. ಸಣ್ಣ ಬೌಲ್​ಗೆ ವರ್ಗಾಯಿಸಿ ಪಕ್ಕಕ್ಕೆ ಇರಿಸಿ.
  • ಈಗ ಅದರ ಜೊತೆಗೆ ಕಾಳು ಮೆಣಸು ಪುಡಿ ಸೇರಿಸಿ, ನಂತರ ಉಪ್ಪು ಮತ್ತು ಬಡೆಸೋಂಪು ಸೇರಿಸಿ ನುಣ್ಣಗೆ ಪುಡಿ ಮಾಡಿ.
  • ನಂತರ ಮಿಶ್ರಣಕ್ಕೆ ಏಲಕ್ಕಿಯನ್ನು ಸೇರಿಸಿ ಹಾಗೂ ಅವುಗಳ ಸಿಪ್ಪೆಯನ್ನು ತೆಗೆದುಹಾಕಲು ಸ್ವಲ್ಪ ಪುಡಿಮಾಡಿ. ನಂತರ ಸಿಪ್ಪೆ ತೆಗೆದು ನುಣ್ಣಗೆ ಪುಡಿಮಾಡಿಕೊಳ್ಳಿ. ರೆಸಿಪಿಗೆ ಬೇಕಾದ ಎಲ್ಲಾ ಪದಾರ್ಥಗಳು ಸಿದ್ಧವಾಗಿವೆ.
  • ಇದೀಗ ಶರಬತ್ ತಯಾರಿಸಲು ಒಂದು ದೊಡ್ಡ ಸ್ಪೀಟ್​ನ ಪಾತ್ರೆಯನ್ನು ತೆಗೆದುಕೊಂಡು ಮೊದಲು ತುರಿದ ಬೆಲ್ಲ, ಪುಡಿಮಾಡಿ ಪಕ್ಕಕ್ಕೆ ಇರಿಸಿದ ಶುಂಠಿ ಪುಡಿ, ಕಾಳುಮೆಣಸಿನ ಪುಡಿ ಮಿಶ್ರಣ ಮತ್ತು ನೆನೆಸಿದ ಸಬ್ಜಾ ಬೀಜಗಳನ್ನು ಸೇರಿಸಿ.
  • ನಂತರ ಅದರಲ್ಲಿ ನಾಲ್ಕು ಲೀಟರ್ ತಣ್ಣೀರು ಸುರಿಯಿರಿ. ನಂತರ ತುಳಸಿ ಎಲೆಗಳು ಮತ್ತು ಪುಡಿ ಮಾಡಿದ ಶುಂಠಿ ತುಂಡುಗಳನ್ನು ಸೇರಿಸಿ.
  • ನಂತರ ನಿಂಬೆ ರಸವನ್ನು ಹಿಂಡಿ ಮತ್ತು ನಿಂಬೆ ಸಿಪ್ಪೆಗಳನ್ನು ಅದರೊಳಗೆ ಬಿಡಿ. ಆಗ ಸುವಾಸನೆಯು ಪಾನೀಯದೊಳಗೆ ಸೇರುತ್ತದೆ.
  • ಎಲ್ಲ ಪದಾರ್ಥಗಳನ್ನು ಸೇರಿಸಿದ ಬಳಿಕ ಬೆಲ್ಲ ಸಂಪೂರ್ಣವಾಗಿ ಕರಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
  • ಬೆಲ್ಲ ಸಂಪೂರ್ಣವಾಗಿ ಕರಗಿದ ಬಳಿಕ ಬಟ್ಟಲನ್ನು ತೆಗೆದುಕೊಂಡು ಎರಡರಿಂದ ಮೂರು ಗಂಟೆಗಳ ಕಾಲ ಫ್ರಿಡ್ಜ್​​​ನಲ್ಲಿ ಇರಿಸಿ.
  • ಹೀಗೆ ಇಡುವುದರಿಂದ ಸುವಾಸನೆಯು ಎಲ್ಲ ನೀರನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ ಹಾಗೂ ಶರಬತ್ ತುಂಬಾ ರುಚಿಕರವಾಗುತ್ತದೆ.
  • ಫ್ರಿಡ್ಜ್​ನಲ್ಲಿಟ್ಟ ನಂತರ ನಿಂಬೆ ಸಿಪ್ಪೆಗಳು, ತುಳಸಿ ಎಲೆಗಳು ಮತ್ತು ಶುಂಠಿ ಹೋಳುಗಳನ್ನು ತೆಗೆದುಹಾಕಿ, ಈ ಪಾನೀಯವನ್ನು ಗ್ಲಾಸ್‌ಗಳಲ್ಲಿ ಸುರಿಯಿರಿ.
  • ಇದೀಗ ಸಿದ್ಧವಾದ ಬೆಲ್ಲದ ಲಿಂಬು ಶರಬತ್ ಅನ್ನು ಬಿಸಿಲಿನ ತಾಪಮಾನ ಹೆಚ್ಚಿರುವ ಸಮಯದಲ್ಲಿ ಆರಾಮವಾಗಿ ಕುಡಿಯಿರಿ, ಟೇಸ್ಟ್​ ಕೂಡ ಸೂಪರ್​ ಆಗಿರುತ್ತದೆ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.