ETV Bharat / lifestyle

ಯಾವುದೇ ಆಹಾರದ ಬಣ್ಣ ಬಳಸದೇ ಶ್ಯಾವಿಗೆ ಐಸ್ ಕ್ರೀಮ್ ತಯಾರಿಸೋದು ಹೇಗೆ ಗೊತ್ತೇ? - SUPER TASTY ICE CREAM RECIPE

Ice Cream Recipe: ಮಕ್ಕಳು ತಿನ್ನಲು ಇಷ್ಟಪಡುವ ಯಾವುದೇ ಆಹಾರದ ಬಣ್ಣ ಬಳಸದೇ ಶ್ಯಾವಿಗೆ ಐಸ್ ಕ್ರೀಮ್ ತಯಾರಿಸೋದು ಹೇಗೆ ಎಂಬುದನ್ನು ಇಂದು ತಿಳಿಯೋಣ.

Simple And Super Tasty Ice Cream  Tasty Ice Cream  Ice Cream Recipe  ಶ್ಯಾವಿಗೆ ಐಸ್ ಕ್ರೀಮ್
ಶ್ಯಾವಿಗೆ ಐಸ್ ಕ್ರೀಮ್- ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Lifestyle Team

Published : May 24, 2025 at 2:28 PM IST

3 Min Read

Simple And Super Tasty Ice Cream Recipe: ಯಾವುದೇ ಸೀಸನ್​ ಇರಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಹಲವು ಜನರು ಐಸ್ ಕ್ರೀಮ್ ಅನ್ನು ತುಂಬಾ ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಬೇಸಿಗೆಯಲ್ಲಿ ಈ ಬಗ್ಗೆ ವಿಶೇಷವಾಗಿ ಏನೂ ಹೇಳಲು ಇಲ್ಲ. ಅದರಲ್ಲೂ ಮಕ್ಕಳ ವಿಷಯಕ್ಕೆ ಬಂದರೆ ಒಮ್ಮೆ ಐಸ್ ಕ್ರೀಮ್ ಹೆಸರು ಕೇಳಿದರೆ ಸಾಕು ಅದನ್ನು ಖರೀದಿಸುವವರೆಗೂ ಬಿಡುವುದಿಲ್ಲ.

ಆದರೆ, ಹೊರಗಡೆ ಅಂಗಡಿಗಳಲ್ಲಿ ಮಾರಾಟ ಮಾಡಲಾಗುವ ಐಸ್ ಕ್ರೀಮ್‌ಗಳಿಗೆ ವಿವಿಧ ಸಂರಕ್ಷಕಗಳನ್ನು ಬಳಕೆ ಮಾಡಲಾಗುತ್ತದೆ. ಇದರಿಂದ ಅಂತಹ ಹೊರಗಿನ ಐಸ್​ ಕ್ರೀಮ್​ ತಿನ್ನುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಮನೆಯಲ್ಲಿ ಸುಲಭವಾಗಿ ಹಾಗೂ ಆರೋಗ್ಯಕರವಾಗಿ ತಯಾರಿಸಬಹುದಾದ ಸರಳ ಐಸ್ ಕ್ರೀಮ್ ರೆಸಿಪಿ ತಂದಿದ್ದೇವೆ. ಅದುವೇ... ಮಕ್ಕಳ ನೆಚ್ಚಿನ ಶ್ಯಾವಿಗೆ ಐಸ್ ಕ್ರೀಮ್. ಈ ಐಸ್ ಕ್ರೀಮ್ ತುಂಬಾ ರುಚಿಕರವಾಗಿರುತ್ತದೆ. ಬಾಲ್ಯದಲ್ಲಿ ಬೀದಿಗಳಲ್ಲಿ ಸಂಚರಿಸುವ ಗಾಡಿಗಳಲ್ಲಿ ಈ ಐಸ್ ಕ್ರೀಮ್ ಮಾರಾಟ ಮಾಡಲಾಗುತ್ತಿತ್ತು. ಅಂತಹ ಐಸ್ ಕ್ರೀಮ್ ಅನ್ನು ಮನೆಯಲ್ಲಿ ಕೆಲವೇ ನಿಮಿಷಗಳಲ್ಲಿ ತಯಾರಿಸಿ ನಿಮ್ಮ ಮಕ್ಕಳಿಗೆ ನೀಡಿದರೆ, ಅವರು ತುಂಬಾ ಖುಷಿ ಪಡುತ್ತಾರೆ.

ಯಾವುದೇ ಆಹಾರದ ಬಣ್ಣವನ್ನು ಬಳಸದೆ ಕಲ್ಲಂಗಡಿಯಿಂದ ತಯಾರಿಸಿದ ಈ ಆರೋಗ್ಯಕರ ಐಸ್ ಕ್ರೀಮ್ ಮಕ್ಕಳಿಗೆ ಮಾತ್ರವಲ್ಲದೆ ಕುಟುಂಬದ ಎಲ್ಲಾ ಸದಸ್ಯರಿಗೂ ಇಷ್ಟವಾಗುತ್ತದೆ. ಈ ಸರಳ ಹಾಗೂ ರುಚಿಕರವಾದ ಐಸ್ ಕ್ರೀಮ್ ಮಾಡಲು ಯಾವ ಪದಾರ್ಥಗಳು ಬೇಕಾಗುತ್ತವೆ? ಜೊತೆಗೆ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.

Simple And Super Tasty Ice Cream  Tasty Ice Cream  Ice Cream Recipe  ಶ್ಯಾವಿಗೆ ಐಸ್ ಕ್ರೀಮ್
ಕಲ್ಲಂಗಡಿ (ETV Bharat)

ಶ್ಯಾವಿಗೆ ಐಸ್ ಕ್ರೀಮ್​ಗೆ ಬೇಕಾಗುವ ಪದಾರ್ಥಗಳೇನು?:

  • ನೀರು - 2 ಕಪ್
  • ಶ್ಯಾವಿಗೆ - ಅರ್ಧ ಕಪ್
  • ಸಣ್ಣ ಕಲ್ಲಂಗಡಿ - ಒಂದು
  • ಗುಲಾಬಿ ಸಿರಪ್ - 2 ಟೀಸ್ಪೂನ್​
Simple And Super Tasty Ice Cream  Tasty Ice Cream  Ice Cream Recipe  ಶ್ಯಾವಿಗೆ ಐಸ್ ಕ್ರೀಮ್
ಶ್ಯಾವಿಗೆ ಐಸ್ ಕ್ರೀಮ್- ಸಾಂದರ್ಭಿಕ ಚಿತ್ರ (ETV Bharat)

ಶ್ಯಾವಿಗೆ ಐಸ್ ಕ್ರೀಮ್ ತಯಾರಿಸುವ ವಿಧಾನ:

  • ಮೊದಲು ರೆಸಿಪಿಗಾಗಿ ಒಲೆ ಆನ್​ ಮಾಡಿ ಪಾತ್ರೆಗೆ ನೀರನ್ನು ಸುರಿಯಿರಿ ಮತ್ತು ಕುದಿಸಿ.
  • ನೀರು ಕುದಿಯಲು ಪ್ರಾರಂಭಿಸಿದ ಬಳಿಕ ಶ್ಯಾವಿಗೆ ಸೇರಿಸಿ ಸ್ವಲ್ಪ ಹೊತ್ತು ಬೇಯಿಸಿ ಒಮ್ಮೆ ಬೆರೆಸಿಕೊಳ್ಳಿ.
  • ಶ್ಯಾವಿಗೆ ಬೆಂದ ಬಳಿಕ ಒಲೆ ಆಫ್ ಮಾಡಬೇಕಾಗುತ್ತದೆ. ಇನ್ನೊಂದು ಬಟ್ಟಲಿನಲ್ಲಿ ಸ್ವಲ್ಪ ಹೊತ್ತು ಇರಿಸಿ ಸೋಸಿಕೊಳ್ಳಿ.
  • ಸೋಸಿದ ಬಳಿಕ ಶಾಖದಿಂದಾಗಿ ಶ್ಯಾವಿಗೆ ಹೆಚ್ಚು ಬೇಯದಂತೆ ತಡೆಯಲು, ತಕ್ಷಣ ಅದನ್ನು ತಣ್ಣೀರಿನಿಂದ ತೊಳೆದು ಒಂದು ಪಾತ್ರೆಗೆ ವರ್ಗಾಯಿಸಿ ಪಕ್ಕಕ್ಕೆ ಇಡಿ.

  • ಈಗ ಒಂದು ತಾಜಾ ಮಾಗಿದ ಕಲ್ಲಂಗಡಿ ತೆಗೆದುಕೊಂಡು ಅದನ್ನು ಎರಡು ಭಾಗಗಳಾಗಿ ಕತ್ತರಿಸಿ. ನಂತರ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಒಳಗಿನ ತಿರುಳನ್ನು ಮಾತ್ರ ಪೀಸ್​ಗಳಾಗಿ ಕತ್ತರಿಸಿ, ಮಿಕ್ಸರ್ ಜಾರ್‌ನಲ್ಲಿ ಹಾಕಬೇಕಾಗುತ್ತದೆ, ನಯವಾಗಿ ಜ್ಯೂಸ್​ ಅನ್ನು ಮಾಡಬೇಕಾಗುತ್ತದೆ.
  • ಬಳಿಕ ಕಲ್ಲಂಗಡಿ ಜ್ಯೂಸ್​ ಅನ್ನು ಒಂದು ಪಾತ್ರೆಯಲ್ಲಿ ಸಾಣಿಗೆ ಹಿಡಿದು ಸೋಸಿಕೊಳ್ಳಬೇಕಾಗುತ್ತದೆ. ಅದರ ತಿರುಳು ಸಂಪೂರ್ಣವಾಗಿ ಬೇರ್ಪಡುವವರೆಗೆ ಸೋಸಿಕೊಳ್ಳಬೇಕಾಗುತ್ತದೆ.
  • ಬಳಿಕ ಪರಿಮಳಕ್ಕಾಗಿ ಗುಲಾಬಿ ಸಿರಪ್ ಸೇರಿಸಿ. ಇಲ್ಲಿ ನೈಸರ್ಗಿಕವಾಗಿ ತಯಾರಿಸಿದ ಗುಲಾಬಿ ಸಿರಪ್ ಬಳಸುವುದು ಒಳ್ಳೆಯದು.
  • ನಂತರ ಬೇಯಿಸಿ ಸೋಸಿದ ಶ್ಯಾವಿಗೆ ಅರ್ಧದಷ್ಟು ಭಾಗವನ್ನು ಮಿಶ್ರಣಕ್ಕೆ ಸೇರಿಸಿ ಮತ್ತು ಎಲ್ಲವೂ ಚೆನ್ನಾಗಿ ಮಿಶ್ರಣವಾಗುವವರೆಗೆ ಮತ್ತೆ ಮಿಶ್ರಣ ಮಾಡಿ.
  • ಈಗ ಐಸ್ ಅಚ್ಚುಗಳನ್ನು ತೆಗೆದುಕೊಂಡು ಮೊದಲು ಅವುಗಳಲ್ಲಿ ಸ್ವಲ್ಪ ಬೇಯಿಸಿದ ಶ್ಯಾವಿಗೆ ಹಾಕಿ.
  • ಬಳಿಕ ಕಲ್ಲಂಗಡಿ ಜ್ಯೂಸ್​ ಮಿಶ್ರಿತ ರಸವನ್ನು ಐಸ್ ಕ್ರೀಮ್​ ಅಚ್ಚುಗಳಲ್ಲಿ ತುಂಬಿಸಬೇಕು. ಐಸ್ ಕ್ರೀಮ್​ ಅಚ್ಚುಗಳಿಲ್ಲದವರು ಇದಕ್ಕಾಗಿ ಚಿಕ್ಕ ಟೀ ಗ್ಲಾಸ್‌ಗಳನ್ನು ಬಳಸಬಹುದು.
  • ಈಗ ಶ್ಯಾವಿಗೆ ಮಿಶ್ರಣದಿಂದ ತುಂಬಿದ ಐಸ್ ಅಚ್ಚುಗಳು ಅಥವಾ ಗ್ಲಾಸ್‌ಗಳಿಗೆ ಅಲ್ಯೂಮಿನಿಯಂ ಫಾಯಿಲ್‌ನಿಂದ ಮುಚ್ಚಿ. ಹೀಗೆ ಮಾಡುವುದರಿಂದ ಐಸ್ ಕ್ರೀಮ್​ನ ಮೇಲೆ ಐಸ್ ಸಂಗ್ರಹವಾಗುವುದನ್ನು ತಡೆಯಬಹುದು.
  • ಬಳಿಕ ಅಲ್ಯೂಮಿನಿಯಂ ಫಾಯಿಲ್ ಮಧ್ಯದಲ್ಲಿ ಒಂದು ಸಣ್ಣ ಕಟ್ ಮಾಡಿ ಹಾಗೂ ಎಲ್ಲಾ ಗ್ಲಾಸ್‌ಗಳಲ್ಲಿ ಸ್ಟಿಕ್‌ಗಳನ್ನು ಹೊಂದಿಸಿ. ನಂತರ ಟೀ ಗ್ಲಾಸ್‌ಗಳು ಅಥವಾ ಐಸ್ ಅಚ್ಚುಗಳನ್ನು ಕನಿಷ್ಠ ಐದರಿಂದ ಆರು ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇಡಿ.
  • ಬಳಿಕ ಟೀ ಗ್ಲಾಸ್‌ಗಳು ಅಥವಾ ಐಸ್ ಅಚ್ಚುಗಳನ್ನು ಹೊರತೆಗೆದು ಅವುಗಳಿಂದ ಅಲ್ಯೂಮಿನಿಯಂ ಫಾಯಿಲ್ ಅನ್ನು ತೆಗೆದುಹಾಕಿ.
  • ಇದಾದ ನಂತರ ಅವುಗಳನ್ನು 5 ಸೆಕೆಂಡುಗಳ ಕಾಲ ಸಾಮಾನ್ಯ ನೀರಿನಲ್ಲಿ ಇಡಿ. ಅದರಿಂದ ಐಸ್​ ಕ್ರೀಮ್​ಗಳನ್ನು ಹೊರಗೆ ತೆಗೆದುಕೊಳ್ಳಬೇಕಾಗುತ್ತದೆ. ಈಗ ನಿಮ್ಮ ಮುಂದೆ ರುಚಿಕರವಾದ ಶ್ಯಾವಿಗೆ ಐಸ್ ಕ್ರೀಮ್ ಸವಿಯಲು ಸಿದ್ಧವಾಗಿದೆ.

ಇದನ್ನೂ ಓದಿ: ಕೆಲವೇ ನಿಮಿಷಗಳಲ್ಲಿ ಫಟಾಫಟ್ ಗೆಣಸಿನ ಕುಲ್ಫಿ ಮಾಡುವುದು ಹೇಗೆ ಗೊತ್ತಾ? ಈ ಐಸ್​ ಕ್ರೀಮ್​ ಹೆಲ್ದಿ ಅಂಡ್ ಟೇಸ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.