ಬಿಸಿಬಿಸಿಯಾದ ಅನ್ನದೊಂದಿಗೆ ಭರ್ಜರಿ ರುಚಿಯ ಜೀರಿಗೆ ರಸಂ ಸಿದ್ಧಪಡಿಸೋದು ಹೇಗೆ?
Cumin Rasam Recipe: ಅನ್ನದೊಂದಿಗೆ ಸೂಪರ್ ಕಾಂಬಿನೇಷನ್ ಆಗಿರುವ ತುಂಬಾ ರುಚಿಯ ಜೀರಿಗೆ ರಸಂ ರೆಸಿಪಿ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.


Published : October 10, 2025 at 9:59 AM IST
Cumin Rasam Recipe: ಊಟದ ಕೊನೆಯಲ್ಲಿ ಸಾಂಬಾರ್ ಇಲ್ಲವೇ ರಸಂ ಇಲ್ಲದಿದ್ದರೆ ಅನೇಕ ಜನರಿಗೆ ಹೊಟ್ಟೆ ತುಂಬಿದಂತೆ ಅನಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಟೊಮೆಟೊ, ಮೆಣಸಿನ ರಸಂ ಮತ್ತು ಹಸಿಮೆಣಸಿನಕಾಯಿ ರಸಂ ಅನ್ನು ಅಧಿಕವಾಗಿ ತಯಾರಿಸಲಾಗುತ್ತದೆ.
ಯಾವಾಗಲೂ ಒಂದೇ ರೀತಿಯಲ್ಲಿ ತಿನ್ನುತ್ತಿದ್ದರೆ ಯಾರಿಗಾದರೂ ಬೇಸರವಾಗುತ್ತದೆ. ಹಾಗಾಗಿ ಜೀರಿಗೆ ರಸಂನ್ನು ಈ ರೀತಿ ಮಾಡಿ ನೋಡಿ. ಇದು ತುಂಬಾ ರುಚಿಯಾಗಿರುತ್ತದೆ ಹಾಗೂ ಹೆಚ್ಚು ತಿನ್ನಲು ಪ್ರೇರೇಪಿಸುತ್ತದೆ. ಮಕ್ಕಳು ಹಾಗೂ ವಯಸ್ಕರು ಸೇರಿದಂತೆ ಎಲ್ಲರೂ ಈ ರಸಂ ಅನ್ನವನ್ನು ತಿನ್ನಲು ಇಷ್ಟಪಡುತ್ತಾರೆ. ಇದನ್ನು ತಯಾರಿಸುವುದು ಕೂಡ ಸರಳ. ಜೀರಿಗೆ ರಸಂ ತಯಾರಿಸಲು ಬೇಕಾಗುವಂತಹ ಪದಾರ್ಥಗಳು ಹಾಗೂ ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ.

ಜೀರಿಗೆ ರಸಂ ತಯಾರಿಸಲು ಬೇಕಾಗುವ ಸಾಮಗ್ರಿಗಳೇನು?:
- ಕೊತಂಬರಿ ಬೀಜ - 1.5 ಟೀಸ್ಪೂನ್
- ಜೀರಿಗೆ - 1 ಟೀಸ್ಪೂನ್
- ಕೆಂಪು ಮೆಣಸಿನಕಾಯಿ - 10
- ಟೊಮೆಟೊ - 1
- ಕರಿಬೇವು - ಸ್ವಲ್ಪ
- ಹುಣಸೆಹಣ್ಣು - ಸ್ವಲ್ಪ
- ಅರಿಶಿನ - ಅರ್ಧ ಟೀಸ್ಪೂನ್
- ಸಾಸಿವೆ - ಅರ್ಧ ಟೀಸ್ಪೂನ್
- ಇಂಗು - ಕಾಲು ಟೀಸ್ಪೂನ್
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಎಣ್ಣೆ - 1 ಟೀಸ್ಪೂನ್

ಜೀರಿಗೆ ರಸಂ ತಯಾರಿಸುವ ವಿಧಾನ ಹೇಗೆ?:
- ಅತ್ಯಂತ ರುಚಿಕರವಾಗಿರುವ ಜೀರಿಗೆ ರಸಂ ತಯಾರಿಸಲು ಮೊದಲಿಗೆ ಒಂದು ಬಟ್ಟಲಿಗೆ 1.5 ಟೀಸ್ಪೂನ್ ಜೀರಿಗೆ, 1 ಟೀಸ್ಪೂನ್ ಕೊತಂಬರಿ ಬೀಜ ಮತ್ತು 10 ಒಣ ಮೆಣಸಿನಕಾಯಿ ಹಾಕಿ. ನೀರು ಸುರಿದು 30 ನಿಮಿಷ ನೆನೆಸಿಕೊಳ್ಳಬೇಕು. ಮತ್ತೊಂದೆಡೆ ಇನ್ನೊಂದು ಬಟ್ಟಲಿಗೆ ಸ್ವಲ್ಪ ಹುಣಸೆಹಣ್ಣು ತೆಗೆದುಕೊಂಡು ನೆನೆಸಿ.
- 30 ನಿಮಿಷಗಳ ಬಳಿಕ ನೆನೆಸಿದ ಜೀರಿಗೆ ಮತ್ತು ಕೊತಂಬರಿ ಬೀಜ ಇವುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

- ಇದೀಗ ಇನ್ನೊಂದು ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ರುಬ್ಬಿದ ಪೇಸ್ಟ್ ಹಾಕಿ.
- ಅದೇ ರೀತಿ ಕತ್ತರಿಸಿದ ಟೊಮೆಟೊ ತುಂಡುಗಳು, ಸ್ವಲ್ಪ ಕರಿಬೇವು ಹಾಗೂ ಹುಣಸೆ ರಸವನ್ನು ಸೇರಿಸಿ. 750 ಗ್ರಾಂ ನೀರು, ಅರ್ಧ ಟೀಸ್ಪೂನ್ ಅರಿಶಿನ ಮತ್ತು ಸ್ವಲ್ಪ ಉಪ್ಪು ಸೇರಿಸಿ ಮಿಶ್ರಣ ಮಾಡಿ.

- ಬಳಿಕ ಒಲೆ ಆನ್ ಮಾಡಿ ಪಾತ್ರೆ ಇಟ್ಟು ಮಧ್ಯಮ ಉರಿಯಲ್ಲಿ, ರಸಂ ಕುದಿಯುವವರೆಗೆ ಇಡಬೇಕು. ಬಳಿಕ ಅದನ್ನು ಮುಚ್ಚಿ, ಇನ್ನೊಂದು ಐದು ನಿಮಿಷ ಬೇಯಿಸಿಕೊಳ್ಳಿ.
- ಮತ್ತೊಂದೆಡೆ ಒಗ್ಗರಣೆಗಾಗಿ ಒಲೆ ಆನ್ ಮಾಡಿ ಕಡಾಯಿ ಇಟ್ಟು ಒಂದು ಟೀಸ್ಪೂನ್ ಎಣ್ಣೆ ಸೇರಿಸಿ. ಎಣ್ಣೆ ಬಿಸಿಯಾದ ಬಳಿಕ ಅರ್ಧ ಟೀಸ್ಪೂನ್ ಸಾಸಿವೆ ಹಾಗೂ ಕಾಲು ಟೀಸ್ಪೂನ್ ಇಂಗು ಸೇರಿಸಿ ಹುರಿಯಿರಿ. ಬಳಿಕ ಕೊತ್ತಂಬರಿ ಸೊಪ್ಪು ಸೇರಿಸಿ ಹುರಿಯಲು ಬಿಡಿ.

- ಒಗ್ಗರಣೆ ಬೇಯಿಸಿದ ಬಳಿಕ ಅದನ್ನು ತಯಾರಿಸಿದ ರಸಂಗೆ ಸೇರಿಸಿ ಮಿಶ್ರಣ ಮಾಡಿ.
- ಇದೀಗ ಬಿಸಿಬಿಸಿಯಾದ ಅನ್ನದೊಂದಿಗೆ ಜೀರಿಗೆ ರಸಂ ಸವಿಯಲು ಸಿದ್ಧವಾಗಿದೆ.
- ಈ ರಸಂನ್ನು ಬಿಸಿ ಅನ್ನದೊಂದಿಗೆ ಸೇವಿಸಿದರೆ ಮತ್ತಷ್ಟು ರುಚಿಯಾಗಿರುತ್ತದೆ.

ಇದನ್ನೂ ಓದಿ: ಮಕ್ಕಳಿಗಾಗಿ ಸಖತ್ ರುಚಿಯಾದ ಬೂಂದಿ ಲಡ್ಡು ತಯಾರಿಸೋದು ಹೇಗೆ ಗೊತ್ತೇ?

