Super Tasty Tomato Rasam Recipe: ನಮ್ಮಲ್ಲಿ ಹಲವರಿಗೆ ಊಟದ ಕೊನೆಯಲ್ಲಿ ರಸಂ ಮತ್ತು ಮಜ್ಜಿಗೆಯನ್ನು ಸೇವಿಸುವ ಅಭ್ಯಾಸವಿರುತ್ತದೆ. ಹೆಚ್ಚಿನ ಜನರು ಇದಕ್ಕಾಗಿಯೇ ಟೊಮೆಟೊ ರಸಂ ಮೊರೆ ಹೋಗುತ್ತಾರೆ. ಆದರೆ, ಈ ರಸಂ ಎಷ್ಟೇ ಚೆನ್ನಾಗಿ ಮಾಡಿದರೂ ರುಚಿಯಲ್ಲಿ ಏನೋ ವ್ಯತ್ಯಾಸವಿದೆ ಎಂದು ಅನಿಸುತ್ತದೆ. ಬಿಸಿಲ ಝಳ ಹೆಚ್ಚಿರುವ ಸಮಯದಲ್ಲಿ ಕೆಲವರಿಗೆ ಊಟವೇ ಸೇರುವುದಿಲ್ಲ. ಆಗ ಈ ರೀತಿಯ ಟೊಮೆಟೊ ರಸಂ ಜೊತೆಗೆ ತೃಪ್ತಿಕರ ಊಟ ಮಾಡಬಹುದು.
ಮನೆ ಸದಸ್ಯರೆಲ್ಲರಿಗೂ ಇಷ್ಟವಾಗುವಂತಹ ಟೊಮೆಟೊ ರಸಂ ತಯಾರಿಸಬಹುದು. ಇದು ಅದ್ಭುತ ರುಚಿಯೊಂದಿಗೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಪ್ರತಿದಿನ ಈ ರಸಂ ಸೇವಿಸಿದರೂ ನಿಮಗೆ ಬೇಸರವಾಗುವುದಿಲ್ಲ. ತುಂಬಾ ರುಚಿಕರವಾಗಿರುವುದರಿಂದ ನೀವು ಅದನ್ನು ಅನ್ನದ ಜೊತೆಗೆ ತಿನ್ನಬಹುದು, ಇಲ್ಲವೇ ನೇರವಾಗಿ ಕುಡಿಯಬಹುದು. ಮಕ್ಕಳು ಕೂಡ ಈ ರಸಂ ಅನ್ನು ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ. ಹಾಗಾದ್ರೆ, ಈ ಸೂಪರ್ ಟೇಸ್ಟಿ ಟೊಮೆಟೊ ರಸಂ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಟೊಮೆಟೊ ರಸಂ ತಯಾರಿಸಲು ಬೇಕಾಗುವ ಪದಾರ್ಥಗಳೇನು?:
- ಟೊಮೆಟೊ - ನಾಲ್ಕು (ಮಧ್ಯಮ ಗಾತ್ರ)
- ಹುಣಸೆಹಣ್ಣು - ಒಂದು ಸಣ್ಣ ನಿಂಬೆಹಣ್ಣಿನ ಗಾತ್ರ
- ಮೆಣಸು - ಒಂದು ಟೀಸ್ಪೂನ್
- ಬೆಳ್ಳುಳ್ಳಿ ಎಸಳು - 6
- ಜೀರಿಗೆ - ಅರ್ಧ ಟೀಸ್ಪೂನ್
- ಕರಿಬೇವು - ಸ್ವಲ್ಪ
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಉಪ್ಪು - ರುಚಿಗೆ ತಕ್ಕಷ್ಟು
- ಅರಿಶಿನ - ಅರ್ಧ ಟೀಸ್ಪೂನ್

ರಸಂ ಪುಡಿಗಾಗಿ ಬೇಕಾಗುವ ಸಾಮಗ್ರಿ:
- ಮೆಂತ್ಯ ಕಾಳು - ಅರ್ಧ ಟೀಸ್ಪೂನ್
- ಕಡಲೆಬೇಳೆ - ಒಂದು ಟೀಸ್ಪೂನ್
- ಕಾಳುಮೆಣಸು - ಒಂದು ಟೀಸ್ಪೂನ್
- ಧನಿಯಾ ಬೀಜಗಳು - ಒಂದು ಟೀಸ್ಪೂನ್
- ಒಣಮೆಣಸಿನಕಾಯಿ - 12 (ರುಚಿಗೆ ತಕ್ಕಷ್ಟು)
- ಜೀರಿಗೆ - ಒಂದು ಟೀಸ್ಪೂನ್

ಟೊಮೆಟೊ ರಸಂ ತಯಾರಿಸುವ ವಿಧಾನ:
- ರುಚಿಕರವಾದ ಟೊಮೆಟೊ ರಸಂ ತಯಾರಿಸಲು ಮೊದಲು ಒಂದು ಪಾತ್ರೆಯಲ್ಲಿ ಟೊಮೆಟೊಗಳನ್ನು ಸ್ವಚ್ಛವಾಗಿ ತೊಳೆಯಿರಿ. ಬಳಿಕ ಟೊಮೆಟೊಗಳು ಮುಳುಗುವವರೆಗೆ ನೀರನ್ನು (ಎರಡು ಕಪ್) ಸುರಿಯಿರಿ.
- ಬಳಿಕ ಹುಣಸೆಹಣ್ಣು ಸೇರಿಸಿ ಮತ್ತು ಟೊಮೆಟೊ ಮೇಲಿನ ಸಿಪ್ಪೆ ಸ್ವಲ್ಪ ಬೇರ್ಪಡುವವರೆಗೆ ಬೇಯಿಸಿ. ಅವು ಬೆಂದ ಬಳಿಕ, ಒಲೆ ಆಫ್ ಮಾಡಿ ಹಾಗೂ ಸ್ವಲ್ಪ ತಣ್ಣಗಾಗಲು ಬಿಡಬೇಕು.
- ಈ ನಡುವೆ, ರಸಂ ಪುಡಿಯನ್ನು ತಯಾರಿಸಿ. ಇದಕ್ಕಾಗಿ ಇನ್ನೊಂದು ಒಲೆಯ ಮೇಲೆ ಪ್ಯಾನ್ ಅನ್ನು ಇಡಿ. ಅದರೊಳಗೆ ಮೆಂತ್ಯ ಕಾಳು, ಕಡಲೆ ಬೇಳೆ, ಕೊತ್ತಂಬರಿ ಸೊಪ್ಪು ಮತ್ತು ಕಾಳುಮೆಣಸುಗಳನ್ನು ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ಕಡಿಮೆ ಉರಿಯಲ್ಲಿ ಹುರಿಯಬೇಕು.
- ಇವು ಸ್ವಲ್ಪ ಬೆಂದ ಬಳಿಕ ಒಣ ಮೆಣಸಿನಕಾಯಿ ಮತ್ತು ಜೀರಿಗೆ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಹುರಿದು ಒಂದು ತಟ್ಟೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಬೇಕಾಗುತ್ತದೆ. ಬಳಿಕ ಮಿಕ್ಸರ್ ಜಾರ್ ತೆಗೆದುಕೊಂಡು ತಣ್ಣಗಾದ ಮೆಣಸಿನಕಾಯಿ ಮಿಶ್ರಣವನ್ನು ಹಾಕಿಕೊಂಡು ಅದನ್ನು ನುಣ್ಣಗೆ ಪುಡಿ ಮಾಡಿ ಪಕ್ಕಕ್ಕೆ ಇಡಿ.

- ಈಗ ನೀವು ಬೇಯಿಸಿದ ಟೊಮೆಟೊಗಳನ್ನು ತೆಗೆದುಕೊಂಡು ಪಕ್ಕಕ್ಕೆ ಇಡಿ, ಅವುಗಳಿಂದ ಸಿಪ್ಪೆ ತೆಗೆಯಿರಿ. ನೀವು ಬಯಸಿದರೆ, ಟೊಮೆಟೊ ಸಿಪ್ಪೆಯನ್ನು ಹಾಗೆಯೇ ಬಿಟ್ಟು ರಸಂ ತಯಾರಿಸಬಹುದು.
- ಬಳಿಕ ಟೊಮೆಟೊಗಳನ್ನು ನಯವಾದ ಪೇಸ್ಟ್ ಆಗುವವರೆಗೆ ನಿಮ್ಮ ಕೈಗಳಿಂದ ಚೆನ್ನಾಗಿ ಮ್ಯಾಶ್ ಮಾಡಬೇಕಾಗುತ್ತದೆ. ಬಳಿಕ ಅದರಿಂದ ಸ್ವಲ್ಪ ಟೊಮೆಟೊ ಸಿಪ್ಪೆ ತೆಗೆದುಹಾಕಬೇಕು.
- ಟೊಮೆಟೊ ಸಿಪ್ಪೆ ತೆಗೆದು ಈ ರೀತಿ ರಸಂ ಮಾಡುವುದರಿಂದ ತಿನ್ನುವಾಗ ಸಿಪ್ಪೆ ಅಡ್ಡಿಯಾಗದೆ ರಸವು ತುಂಬಾ ರುಚಿಕರವಾಗಿರುತ್ತದೆ.
- ಬಳಿಕ ನಿಮ್ಮ ಈ ಮಿಶ್ರಣಕ್ಕೆ ಸಾಕಷ್ಟು ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪಕ್ಕಕ್ಕೆ ಇಡಬಹುದು.
- ಇದೀಗ ಉತ್ತಮ ಸುವಾಸನೆಗಾಗಿ ಕಾಳುಮೆಣಸು, ಜೀರಿಗೆ ಮತ್ತು ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಕರಿಬೇವು ಮತ್ತು ಕೊತ್ತಂಬರಿ ಸೊಪ್ಪನ್ನು ಕಾಂಡಗಳ ಜೊತೆಗೆ ಸೇರಿಸಿ ಅವುಗಳನ್ನು ನುಣ್ಣಗೆ ಪೇಸ್ಟ್ ಮಾಡಿ. ಈ ಹಿಂದೆ ತಯಾರಿಸಿದ ಟೊಮೆಟೊ ರಸಂಗೆ ಸೇರಿಸಿ.
- ಬಳಿಕ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಮತ್ತು ಈ ಹಿಂದೆ ತಯಾರಿಸಿದ ರಸಂ ಪುಡಿಯನ್ನು ಒಂದು ಟೀಸ್ಪೂನ್ ಸೇರಿಸಿ ಮತ್ತು ಎಲ್ಲವೂ ಚೆನ್ನಾಗಿ ಮಿಶ್ರಣ ಮಾಡಿ.
- ಬಳಿಕ ಅದನ್ನು ರುಚಿ ನೋಡಿ ಮತ್ತು ಉಪ್ಪು ಮತ್ತು ಹುಳಿ ನಿಮ್ಮ ರುಚಿಗೆ ಸಾಕಾಗಿದೆಯೇ ಎಂದು ಪರಿಶೀಲಿಸಿ. ಇಲ್ಲದಿದ್ದರೆ ಸ್ವಲ್ಪ ಉಪ್ಪು ಸೇರಿಸಬಹುದು.
- ನಂತರ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಕುದಿಸಿ. ರಸಂ ಕುದಿಯಲು ಪ್ರಾರಂಭಿಸಿದಾಗ ಒಲೆ ಆಫ್ ಮಾಡಿ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಪಕ್ಕಕ್ಕೆ ಇಡಿ. ಈ ರಸಂ ಅನ್ನು ಹೆಚ್ಚು ಕುದಿಸುವ ಅಗತ್ಯವಿಲ್ಲ.
ಒಗ್ಗರಣೆಗಾಗಿ:
- ಎಣ್ಣೆ - ಟೀಸ್ಪೂನ್
- ಒಗ್ಗರಣೆಗೆ ಬೇಕಾದ ಕಾಳು - 2 ಟೀಸ್ಪೂನ್ (ಕಡಲೆಬೇಳೆ, ಉದ್ದಿನಬೇಳೆ, ಸಾಸಿವೆ, ಜಿರಿಗೆ)
- ಇಂಗು - 1/2 ಟೀಸ್ಪೂನ್
- ಕರಿಬೇವು - ಸ್ವಲ್ಪ
- ಮೆಣಸಿನಕಾಯಿ - 2
- ಒಲೆಯ ಮೇಲೆ ಸಣ್ಣ ಪ್ಯಾನ್ ಇಟ್ಟು ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾದ ನಂತರ ಕಡಲೆಬೇಳೆ, ಉದ್ದಿನಬೇಳೆ, ಸಾಸಿವೆ, ಜಿರಿಗೆ ಸೇರಿಸಿ ಫ್ರೈ ಮಾಡಿ. ಅವು ಸ್ವಲ್ಪ ಕಂದು ಬಣ್ಣಕ್ಕೆ ಬಂದ ನಂತರ, ಒಣ ಮೆಣಸಿನಕಾಯಿ, ಇಂಗು ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಫ್ರೈ ಮಾಡಿ.
- ತಾಲಿಂಪು ಚೆನ್ನಾಗಿ ಬೆಂದ ನಂತರ, ಒಲೆ ಆಫ್ ಮಾಡಿ ಮತ್ತು ಈ ಹಿಂದೆ ತಯಾರಿಸಿದ ರಸಂಗೆ ಸೇರಿಸಿ, ಎಲ್ಲವನ್ನೂ ಒಮ್ಮೆ ಮಿಶ್ರಣ ಮಾಡಿದರೆ ಸಾಕು ನಿಮ್ಮ ಮುಂದೆ ರುಚಿಕರ ಟೊಮೆಟೊ ರಸಂ ಸವಿಯಲು ಸಿದ್ಧವಾಗಿದೆ.
ಟೊಮೆಟೊ ರಸಂಗೆ ಟಿಪ್ಸ್:
- ಈ ರೆಸಿಪಿಯನ್ನು ರುಚಿಕರವಾಗಿ ಮಾಡಲು ನೀವು ಮೊದಲು ರಸಂ ಪುಡಿಯನ್ನು ತಯಾರಿಸಬೇಕು. ಇದು ರಸಂಗೆ ಸೂಪರ್ ರುಚಿಯನ್ನು ನೀಡುತ್ತದೆ.
- ಅಲ್ಲದೆ, ನೀವು ರಸಂಗೆ ಸ್ವಲ್ಪ ಪುಡಿಯನ್ನು ಸೇರಿಸಿದರೆ, ಉಳಿದ ರಸಂ ಪುಡಿಯನ್ನು ಯಾವುದೇ ಡಬ್ಬದಲ್ಲಿ ಸಂಗ್ರಹಿಸಿ ಆರು ತಿಂಗಳವರೆಗೆ ಬಳಕೆ ಮಾಡಬಹುದು.