ಇಡ್ಲಿ ಹಿಟ್ಟಿಂದ ಟೇಸ್ಟಿ ಪಡ್ಡು ತಯಾರಿಸುವುದು ಹೇಗೆ?
How to make Tasty Paddu: ನಿಮಗಿಂದು ನಾವು ಸೂಪರ್ ಟೇಸ್ಟಿ ಪಡ್ಡು ರೆಸಿಪಿ ತಂದಿದ್ದೇವೆ.


Published : September 2, 2025 at 3:43 PM IST
Super Tasty Paddu Recipe: ಇಡ್ಲಿ ತುಂಬಾ ಆರೋಗ್ಯಕರ ಹಾಗೂ ಎಲ್ಲರೂ ಇಷ್ಟಪಡುವ ಉಪಹಾರ. ಅನೇಕರು ವಾರಕ್ಕೆ ಕನಿಷ್ಠ ಎರಡು ಅಥವಾ ಮೂರು ಬಾರಿ ಇಡ್ಲಿ ತಯಾರಿಸುತ್ತಾರೆ. ಕೆಲವೊಮ್ಮೆ ದೊಡ್ಡ ಪ್ರಮಾಣದಲ್ಲಿ ಇಡ್ಲಿ ಹಿಟ್ಟು ತಯಾರಿಸಿದ ಸಂದರ್ಭದಲ್ಲಿ ಹಿಟ್ಟು ಉಳಿದಿರುತ್ತದೆ. ಉಳಿದ ಹಿಟ್ಟಿನಿಂದ ಏನು ಮಾಡಬೇಕೆಂದು ತಿಳಿಯದೆ ಕೆಲವರು ಹೊರಗೆ ಎಸೆಯುತ್ತಾರೆ. ಆದರೆ ವ್ಯರ್ಥವಾಗದಂತೆ ಪಡ್ಡು ಮಾಡಬಹುದು.
ಈ ಪಡ್ಡುಗಳನ್ನು ಕೇವಲ 10ರಿಂದ 15 ನಿಮಿಷಗಳಲ್ಲಿ ತಯಾರಿಸಿ ಸೇವಿಸಬಹುದು.

ಪಡ್ಡು ತಯಾರಿಸಲು ಬೇಕಾಗುವ ಪದಾರ್ಥಗಳು:
- ಇಡ್ಲಿ ಹಿಟ್ಟು - ಅಗತ್ಯಕ್ಕೆ ತಕ್ಕಷ್ಟು
- ಈರುಳ್ಳಿ - 2
- ಹಸಿ ಮೆಣಸು - 4
- ಕ್ಯಾರೆಟ್ - 2
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಉಪ್ಪು - ರುಚಿಗೆ ತಕ್ಕಷ್ಟು
- ಜೀರಿಗೆ - 1 ಟೀಸ್ಪೂನ್
- ಕರಿಬೇವು - 2 ಚಿಗುರುಗಳು

ಪಡ್ಡು ಸಿದ್ಧಪಡಿಸುವ ವಿಧಾನ:
- ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಗಳನ್ನು ತೆಳುವಾಗಿ ಕತ್ತರಿಸಿ ಪಕ್ಕಕ್ಕೆ ಇಡಿ. ಕ್ಯಾರೆಟ್ ಸಿಪ್ಪೆ ತೆಗೆದು ನುಣ್ಣಗೆ ತುರಿದುಕೊಳ್ಳಿ.
- ಒಂದು ಬಟ್ಟಲಿನಲ್ಲಿ ಅಗತ್ಯವಿರುವ ಪ್ರಮಾಣದ ಇಡ್ಲಿ ಹಿಟ್ಟು ತೆಗೆದುಕೊಳ್ಳಿ. ಈಗ ಈರುಳ್ಳಿ, ಹಸಿ ಮೆಣಸಿನಕಾಯಿಗಳನ್ನು ನುಣ್ಣಗೆ ಕತ್ತರಿಸಿ, ತುರಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಕರಿಬೇವು, ಉಪ್ಪು, ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ಒಲೆ ಆನ್ ಮಾಡಿ, ಅದರ ಮೇಲೆ ಪಡ್ಡಿನ ಮಣೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಬೇಕು.

- ಬಳಿಕ ಮಿಶ್ರಣ ಮಾಡಿದ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಹಾಕಬೇಕು. ಅದನ್ನು ಮುಚ್ಚಿ ಮತ್ತು ಉರಿಯನ್ನು ಮಧ್ಯಮಕ್ಕೆ ಇರಿಸಿ ಹಾಗೂ ಅವು ಕೆಂಪು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಬೇಕು.
- ಒಂದು ಬದಿಯಲ್ಲಿ ಕೆಂಪು ಬಣ್ಣಕ್ಕೆ ತಿರುಗಿದ ಬಳಿಕ ಅದನ್ನು ತಿರುಗಿಸಿ ಹಾಗೂ ಇನ್ನೊಂದು ಬದಿಯಲ್ಲಿ ಬೇಯಿಸಬೇಕು. ಎರಡೂ ಬದಿಗಳನ್ನು ಹೀಗೆ ಬೇಯಿಸಿದ ಬಳಿಕ ಶೇಂಗಾ ಅಥವಾ ತೆಂಗಿನಕಾಯಿ ಕೊಬ್ಬರಿ ಚಟ್ನಿಯೊಂದಿಗೆ ಸವಿಯಬಹುದು. ಈಗ ಇಡ್ಲಿ ಹಿಟ್ಟಿನೊಂದಿಗೆ ತುಂಬಾ ರುಚಿಕರವಾದ ಪಡ್ಡುಗಳು ತಯಾರಾಗುತ್ತವೆ. ನಿಮಗೆ ಪಡ್ಡಿನ ರೆಸಿಪಿ ಇಷ್ಟವಾದರೆ ಒಮ್ಮೆ ಪ್ರಯತ್ನಿಸಿ ನೋಡಿ.

ಟಿಪ್ಸ್:
- ಇಡ್ಲಿ ಹಿಟ್ಟು ತುಂಬಾ ಹುಳಿಯಾಗಿರಬಾರದು. ಹಿಟ್ಟು ಹುಳಿಯಾಗಿದ್ದರೆ ಪಡ್ಡುಗಳೂ ಹುಳಿಯಾಗುತ್ತವೆ.
- ಇಡ್ಲಿ ಹಿಟ್ಟಿಗೆ ಮೇಲಿನ ಎಲ್ಲಾ ಪದಾರ್ಥಗಳನ್ನು ಸೇರಿಸಿದ ಬಳಿಕ ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ 5 ನಿಮಿಷ ಬೇಯಿಸಿ, ರುಚಿ ಇನ್ನೂ ಉತ್ತಮವಾಗಿರುತ್ತದೆ.
- ಈ ಪಡ್ಡು ಮಾಡುವಾಗ ಪ್ಯಾನ್ ಚೆನ್ನಾಗಿ ಬಿಸಿಯಾದ ಬಳಿಕ ಎಣ್ಣೆ ಸೇರಿಸಿ ಮತ್ತು ಬಳಿಕ ಹಿಟ್ಟು ಹಾಕಿ ಬೇಯಿಸಿಕೊಳ್ಳಬೇಕು.

ಇದನ್ನೂ ಓದಿ: ಗೋಧಿ ರವೆ ಕೊಬ್ಬರಿ 'ಬ್ರೆಡ್ ದೋಸೆ': ಉಪಹಾರಕ್ಕೆ ಬೆಸ್ಟ್ ರೆಸಿಪಿ, ಟ್ರೈ ಮಾಡಿ
ಇದನ್ನೂ ಓದಿ: ರುಚಿರುಚಿಯಾದ ಕಾಳುಮೆಣಸು ವೀಳ್ಯದೆಲೆ ರಸಂ: ತಯಾರಿ ತುಂಬಾ ಸರಳ

