ETV Bharat / lifestyle

ನೀವು ಬೇಸಿಗೆಯಲ್ಲಿ ಮಣ್ಣಿನ ಮಡಕೆಗಳನ್ನು ಉಪಯೋಗಿಸುತ್ತಿದ್ದೀರಾ? ಈ ವಿಷಯವನ್ನು ಎಂದಿಗೂ ಮರೆಯಬೇಡಿ: ಸಂಶೋಧನೆ ಏನು ಹೇಳುತ್ತೆ? - TIPS FOR CLEANING CLAY POTS

ಮಣ್ಣಿನ ಮಡಕೆಯಿಂದ ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಬೇಸಿಗೆಯ ತಿಂಗಳುಗಳಲ್ಲಿ ಬಹುತೇಕರು ಮಣ್ಣಿನ ಮಡಕೆಗಳಲ್ಲಿ ನೀರನ್ನು ಕುಡಿಯುತ್ತಾರೆ. ಇದೀಗ ಮಡಕೆಯನ್ನು ಪ್ರತಿದಿನ ಹೇಗೆ ಸ್ವಚ್ಛಗೊಳಿಸಬೇಕು ಎಂಬುದರ ಬಗ್ಗೆ ತಿಳಿಯೋಣ.

TIPS FOR CLEANING CLAY POTS  BENEFITS OF DRINKING POT WATER  CLEANING TIPS  ಮಣ್ಣಿನ ಮಡಕೆ
ಮಣ್ಣಿನ ಮಡಕೆಗಳನ್ನು ಸ್ವಚ್ಛಗೊಳಿಸೋದು ಹೇಗೆ?- ಸಾಂದರ್ಭಿಕ ಚಿತ್ರ (Getty Images)
author img

By ETV Bharat Lifestyle Team

Published : May 19, 2025 at 1:43 PM IST

3 Min Read

Tips for Cleaning Clay Pots: ಬೇಸಿಗೆಯಲ್ಲಿ ಎಲ್ಲರೂ ತಂಪಾಗಿರುವ ನೀರು ಕುಡಿಯಲು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ರೆಫ್ರಿಜರೇಟರ್ ಇರುತ್ತದೆ. ಆದರೆ, ಇದರಲ್ಲಿರುವ ನೀರು ಕುಡಿದರೆ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಣ್ಣಿನ ಮಡಕೆಗಳಲ್ಲಿನ ತಂಪಾದ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು.

ಕ್ರಮೇಣ ಮಣ್ಣಿನ ಮಡಕೆಯ ಸ್ಥಾನವನ್ನು ರೆಫ್ರಿಜರೇಟರ್ ಆಕ್ರಮಿಸಿಕೊಂಡಿದೆ. ಆದರೆ, ಮಣ್ಣಿನ ಮಡಕೆಯ ಮೇಲಿನ ವ್ಯಾಮೋಹ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇಂದಿಗೂ ಸಹ ಅನೇಕ ಜನರು ಮಣ್ಣಿನ ಮಡಕೆಯಿಂದ ನೀರು ಕುಡಿಯಲು ಇಷ್ಟಪಡುತ್ತಾರೆ. ಏಕೆಂದರೆ, ಮಣ್ಣಿನ ಪಾತ್ರೆಯಿಂದ ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ.

TIPS FOR CLEANING CLAY POTS  BENEFITS OF DRINKING POT WATER  CLEANING TIPS  ಮಣ್ಣಿನ ಮಡಕೆ
ಮಣ್ಣಿನ ಮಡಕೆಗಳನ್ನು ಸ್ವಚ್ಛಗೊಳಿಸೋದು ಹೇಗೆ?- ಸಾಂದರ್ಭಿಕ ಚಿತ್ರ (Getty Images)

ಮಣ್ಣಿನ ಮಡಕೆಗಳಲ್ಲಿ ನೀರು ಸಂಗ್ರಹಿಸುವುದು ಭಾರತದಲ್ಲಿ ಶತಮಾನಗಳಷ್ಟು ಹಳೆಯದಾದ ಸಂಪ್ರದಾಯವಾಗಿದೆ. ಇದರ ಹಲವು ಲಾಭಗಳನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಮಣ್ಣಿನ ಮಡಕೆಗಳನ್ನು ಕೆಲವು ದಿನಗಳವರೆಗೆ ತೊಳೆಯದಿದ್ದರೆ, ಅವುಗಳಲ್ಲಿ ಸೂಕ್ಷ್ಮಜೀವಿಗಳು ಅಥವಾ ಶಿಲೀಂಧ್ರಗಳು ಬೆಳೆಯಬಹುದು. ಇದು ನಿಮ್ಮ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಮಣ್ಣಿನ ಮಡಕೆಗಳನ್ನು ಎಷ್ಟು ಬಾರಿ ಹಾಗೂ ಹೇಗೆ ತೊಳೆಯಬೇಕು ಎಂದು ನಿಮಗೆ ತಿಳಿದಿದೆಯೇ? ಮಣ್ಣಿನ ಮಡಕೆ ತೊಳೆಯುವ ಸರಿಯಾದ ವಿಧಾನದ ಬಗ್ಗೆ ತಿಳಿಯೋಣ.

ಜರ್ನಲ್ ಆಫ್ ದಿ ಈಜಿಪ್ಟ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮಣ್ಣಿನ ಮಡಕೆಗಳಲ್ಲಿ ಸಂಗ್ರಹಿಸಲಾದ ನೀರು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಂಗ್ರಹಿಸಲಾದ ನೀರಿಗಿಂತ ಶುದ್ಧ ಹಾಗೂ ಸುರಕ್ಷಿತವಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ಪ್ರಕಟಿಸಿದ ಅಧ್ಯಯನವು, ಮಣ್ಣಿನ ಮಡಕೆಗಳನ್ನು ಬಳಸುವುದು ಸುರಕ್ಷಿತ ಹಾಗೂ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಹೇಳುತ್ತವೆ.

ಮಣ್ಣಿನ ಮಡಕೆಗಳನ್ನು ಸ್ವಚ್ಛಗೊಳಿಸಲು ಟಿಪ್ಸ್:

  • ಮೊದಲಿಗೆ ಮಣ್ಣಿನ ಮಡಕೆಗಳಿಂದ ನೀರನ್ನು ತೆಗೆಯಿರಿ. ಈಗ ಹೊರ ಭಾಗವನ್ನು ಸ್ಪಾಂಜ್ ಅಥವಾ ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ. ನಿಮ್ಮ ಕೈಗಳಿಂದ ಪಾತ್ರೆಯ ಒಳಭಾಗವನ್ನು ಸ್ವಚ್ಛಗೊಳಿಸುವುದನ್ನು ತಪ್ಪಿಸಿ ಏಕೆಂದರೆ ಹಾಗೆ ಮಾಡುವುದರಿಂದ ನೀರು ಕಡಿಮೆ ತಂಪಾಗುತ್ತದೆ.
  • ಮಣ್ಣಿನ ಪಾತ್ರೆಗಳನ್ನು ಸ್ವಚ್ಛಗೊಳಿಸಲು ನೀವು ನಿಂಬೆ ರಸ, ಅಡುಗೆ ಸೋಡಾ, ವಿನೆಗರ್ ಅಥವಾ ಉಪ್ಪನ್ನು ಸಹ ಬಳಸಬಹುದು. ಇದಕ್ಕಾಗಿ ಮೊದಲು ಒಂದು ಚಮಚ ಅಡುಗೆ ಸೋಡಾ, ಒಂದು ಚಮಚ ವಿನೆಗರ್ ಮತ್ತು ಸ್ವಲ್ಪ ಉಪ್ಪು ಸೇರಿ ಮಿಶ್ರಣವನ್ನು ತಯಾರಿಸಿ. ಈಗ ಮಿಶ್ರಣವನ್ನು ಪಾತ್ರೆಯಲ್ಲಿ ಸುರಿಯಿರಿ ಹಾಗೂ ಬ್ರಷ್‌ನಿಂದ ಸ್ವಚ್ಛಗೊಳಿಸಿ. ಇದು ಮಣ್ಣಿನ ಮಡಕೆಗಳನ್ನು ಸ್ವಚ್ಛಗೊಳಿಸುತ್ತದೆ ಹಾಗೂ ದುರ್ವಾಸನೆಯನ್ನು ತೆಗೆದುಹಾಕುತ್ತದೆ.
  • ಮಣ್ಣಿನ ಮಡಕೆಗಳನ್ನು ಸ್ವಚ್ಛಗೊಳಿಸಲು ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸ ಮತ್ತು ಅದರ ಸಿಪ್ಪೆಯನ್ನು ಸೇರಿಸಿ. ಈಗ ಈ ಮಿಶ್ರಣವನ್ನು ಕೆಲವು ನಿಮಿಷಗಳ ಕಾಲ ಕುದಿಯಲು ಬಿಡಿ, ನಂತರ ಈ ನೀರನ್ನು ಮಣ್ಣಿನ ಪಾತ್ರೆಯಲ್ಲಿ ಸುರಿಯಿರಿ. ಈಗ ಸ್ವಲ್ಪ ಸಮಯದ ನಂತರ, ನೀರನ್ನು ಹೊರಗೆಸೆಯಿರಿ. ತಣ್ಣೀರು ಸೇರಿಸುವ ಮೂಲಕ ಅದನ್ನು ಸ್ವಚ್ಛಗೊಳಿಸಿ.
  • ಮಣ್ಣಿನ ಮಡಕೆಗಳಲ್ಲಿನ ನೀರನ್ನು ಪ್ರತಿದಿನ ಬದಲಾಯಿಸುವುದು ಒಳ್ಳೆಯದು. ಏಕೆಂದರೆ ನೀವು ನೀರನ್ನು ಎರಡು ಅಥವಾ ಮೂರು ದಿನಗಳವರೆಗೆ ತುಂಬಿಟ್ಟರೆ, ಅದರಲ್ಲಿ ಸೂಕ್ಷ್ಮಜೀವಿಗಳು ಬೆಳೆಯಬಹುದು.
  • ಮಣ್ಣಿನ ಮಡಕೆಗಳಲ್ಲಿ ರಂಧ್ರಗಳಿರುತ್ತವೆ. ಆದ್ದರಿಂದ ತೇವಾಂಶವು ಅದರಲ್ಲಿ ಉಳಿಯುತ್ತದೆ. ಅದನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಅದರಲ್ಲಿ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾಗಳು ಬೆಳೆಯಬಹುದು. ಮಣ್ಣಿನ ಪಾತ್ರೆಯನ್ನು ತೊಳೆದ ನಂತರ, ಅದನ್ನು ಕೆಲವು ನಿಮಿಷಗಳ ಕಾಲ ಬಿಸಿಲಿನಲ್ಲಿ ಒಣಗಲು ಬಿಡಿ. ಹೀಗೆ ಮಾಡುವುದರಿಂದ ಈ ಅಪಾಯವನ್ನು ಕಡಿಮೆ ಮಾಡಬಹುದು.

ಮಣ್ಣಿನ ಮಡಕೆಯ ನೀರಿನ ಲಾಭಗಳೇನು?:

  • ಆಗಾಗ್ಗೆ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವವರಿಗೆ ಮಣ್ಣಿನ ಮಡಕೆ ನೀರು ಪ್ರಯೋಜನಕಾರಿಯಾಗಿದೆ. ಈ ಮಡಕೆ ನೀರು ಕುಡಿಯುವುದರಿಂದ ಭವಿಷ್ಯದಲ್ಲಿ ಸೋಂಕು ಬರದಂತೆ ತಡೆಯಬಹುದು.
  • ಮಣ್ಣಿನ ಮಡಕೆಯಿಂದ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದಲ್ಲದೇ. ಅಜೀರ್ಣ ಮತ್ತು ಮಲಬದ್ಧತೆಯ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.
  • ನಿಯಮಿತವಾಗಿ ಮಡಕೆಯಿಂದ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ.
  • ಮಣ್ಣಿನ ಪಾತ್ರೆಯಿಂದ ನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.
  • ಶಾಖದ ಹೊಡೆತದಿಂದ ರಕ್ಷಿಸುತ್ತದೆ.

  • ಮಣ್ಣಿನ ಮಡಕೆ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರಲು ಸಹಾಯ ಮಾಡುತ್ತದೆ.
  • ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮಟ್ಕಾ ನೀರು ಒಳ್ಳೆಯದು.
  • ಮಣ್ಣಿನ ಪಾತ್ರೆಯಿಂದ ನೀರು ಕುಡಿಯುವುದರಿಂದ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ.
  • ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಹಾಗೂ ಚರ್ಮವು ಹೊಳೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್‌ಗಳನ್ನು ವೀಕ್ಷಿಸಬಹುದು:

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.