ರುಚಿಕರವಾದ ಕಾರ್ನ್ ಉತ್ತಪ್ಪ ತಯಾರಿಸುವುದು ಹೇಗೆ ಗೊತ್ತೇ?
Corn Utthappa Recipe: ಉಪಹಾರಕ್ಕೆ ಹೇಳಿದ ಕಾರ್ನ್ ಉತ್ತಪ್ಪ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.


Published : September 3, 2025 at 4:24 PM IST
Delicious Corn Utthappa Recipe: ಬೆಳಗಿನ ಉಪಹಾರಕ್ಕೆ ಅನೇಕರಿಗೆ ಉತ್ತಪ್ಪ ಇಷ್ಟ. ಉತ್ತಪ್ಪಕ್ಕೆ ಈರುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ, ಕ್ಯಾರೆಟ್ ಹಾಗೂ ವಿವಿಧ ತರಕಾರಿಗಳನ್ನು ಸೇರಿಸುವುದರಿಂದ ಆರೋಗ್ಯಕರವಾಗಿಯೂ ರುಚಿಕರವಾಗಿಯೂ ಆಗುತ್ತದೆ.
ಅನೇಕರು ಮನೆಯಲ್ಲಿ ದೋಸೆ ಹಿಟ್ಟು ಇದ್ದರೆ, ಉತ್ತಪ್ಪ ತಯಾರಿಸುತ್ತಾರೆ. ಯಾವಾಗಲೂ ಈ ರೀತಿ ಸಿದ್ಧಪಡಿಸುವ ಬದಲು ಮೆಕ್ಕೆಜೋಳದೊಂದಿಗೆ ಉತ್ತಪ್ಪ ಮಾಡಿದರೆ ತುಂಬಾ ರುಚಿಕರವಾಗಿರುತ್ತದೆ. ಈ ಉತ್ತಪ್ಪವನ್ನು ಸರಳವಾಗಿ ಮಾಡಬಹುದು. ಮಕ್ಕಳೂ ಇಷ್ಟಪಟ್ಟು ತಿನ್ನುತ್ತಾರೆ. ತಡಮಾಡದೆ ಕಾರ್ನ್ ಉತ್ತಪ್ಪ ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ.

ಕಾರ್ನ್ ಉತ್ತಪ್ಪ ಬೇಕಾಗುವ ಸಾಮಗ್ರಿ:
- ಕಾರ್ನ್ ತೆನೆ - 1
- ಬಾಂಬೆ ರವೆ - ಅರ್ಧ ಕಪ್
- ಅಕ್ಕಿ ಹಿಟ್ಟು - 2 ಟೀಸ್ಪೂನ್
- ಉಪ್ಪು - ರುಚಿಗೆ ತಕ್ಕಷ್ಟು
- ಇಂಗು - ಕಾಲು ಟೀಸ್ಪೂನ್
- ಮೊಸರು - ಕಾಲು ಕಪ್
- ಬೇಕಿಂಗ್ ಸೋಡಾ - ಕಾಲು ಟೀಸ್ಪೂನ್
- ಈರುಳ್ಳಿ - 1
- ಹಸಿ ಮೆಣಸಿನಕಾಯಿ - 3
- ಕ್ಯಾರೆಟ್ - 1
- ಟೊಮೆಟೊ - 1
- ಕರಿಬೇವು - 2 ಚಿಗುರುಗಳು
- ಕೊತ್ತಂಬರಿ ಸೊಪ್ಪು - ಸ್ವಲ್ಪ

ತಯಾರಿಸುವ ವಿಧಾನ:
- ಮೊದಲಿಗೆ ತೆನೆಯಿಂದ ಮೆಕ್ಕೆಜೋಳದ ಬೀಜಗಳನ್ನು ತೆಗೆದು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ.
- ಕಾರ್ನ್ ಬೀಜಗಳನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ ಒರಟಾಗಿ ರುಬ್ಬಿ ಮಿಕ್ಸಿಂಗ್ ಬೌಲ್‌ನಲ್ಲಿ ತೆಗೆದುಕೊಳ್ಳಿ.
- ಇದಕ್ಕೆ ರವೆ, ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಇಂಗು ಹಾಗೂ ಮೊಸರು ಸೇರಿಸಿ ಒಮ್ಮೆ ಮಿಶ್ರಣ ಮಾಡಿ.
- ಬಳಿಕ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಹಾಗೂ ಹಿಟ್ಟು ತುಂಬಾ ಸಡಿಲವಾಗದಂತೆ ಮಿಶ್ರಣ ಮಾಡಬೇಕು.

- ಹಿಟ್ಟನ್ನು ಮುಚ್ಚಿ ಸ್ವಲ್ಪ ಹೊತ್ತು ಪಕ್ಕಕ್ಕೆ ಇಡಿ. ಈ ಮಧ್ಯೆ ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು ಹಾಗೂ ಟೊಮೆಟೊವನ್ನು ಸಾಧ್ಯವಾದಷ್ಟು ತೆಳುವಾಗಿ ಕತ್ತರಿಸಿ. ಕತ್ತರಿಸಿದ ಪದಾರ್ಥಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
- ಕ್ಯಾರೆಟ್ ಸಿಪ್ಪೆ ತೆಗೆದು ನುಣ್ಣಗೆ ತುರಿದು ಹಾಕಿ. 20 ನಿಮಿಷಗಳ ಬಳಿಕ ಕಾರ್ನ್ ಮಿಶ್ರಣವನ್ನು ಒಮ್ಮೆ ಮಿಶ್ರಣ ಮಾಡಿ ಮಿಕ್ಸರ್ ಜಾರ್‌ನಲ್ಲಿ ಹಾಕಬೇಕು. ಇದನ್ನು ನುಣ್ಣಗೆ ರುಬ್ಬಿಕೊಂಡು ಮಿಕ್ಸಿಂಗ್ ಬೌಲ್‌ಗೆ ಹಾಕಿಕೊಳ್ಳಿ.
- ಬಳಿಕ 1 ಟೀಸ್ಪೂನ್ ಅಡಿಗೆ ಸೋಡಾ ಹಾಗೂ ನೀರು ಸೇರಿಸಿ ಉತ್ತಪ್ಪ ಮಾಡುವ ಹದಕ್ಕೆ ಹಿಟ್ಟನ್ನು ಮಿಶ್ರಣ ಮಾಡಿ.

- ಒಲೆ ಆನ್ ಮಾಡಿ ಹಾಗೂ ಅದರ ಮೇಲೆ ದೋಸೆ ಪ್ಯಾನ್ ಇಟ್ಟು ಬಿಸಿ ಮಾಡಿ. ಪ್ಯಾನ್ ಬಿಸಿಯಾದ ಬಳಿಕ ಲಘುವಾಗಿ ಎಣ್ಣೆ ಹಚ್ಚಿ ಹಾಗೂ ಬಿಸಿಯಾದ ಬಳಿಕ ಟಿಶ್ಯೂ ಪೇಪರ್‌ನಿಂದ ಒರೆಸಿ.
- ಬಳಿಕ ಹಿಟ್ಟನ್ನು ತೆಗೆದುಕೊಂಡು ಪ್ಯಾನ್ ಮೇಲೆ ಹಾಕಬೇಕು. ಬಳಿಕ ಈರುಳ್ಳಿ ಮಿಶ್ರಣವನ್ನು ಉತ್ತಪ್ಪದ ಮೇಲೆ ಹಾಕಿ ಅಂಚುಗಳ ಉದ್ದಕ್ಕೂ ಎಣ್ಣೆ ಹಚ್ಚಬೇಕು.
- ಬಳಿಕ ಅದನ್ನು ಮುಚ್ಚಿ, ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಬೇಯಿಸಿ. ಉತ್ತಪ್ಪ ಒಂದು ಬದಿಯಲ್ಲಿ ಬೇಯಿಸಿದ ಬಳಿಕ ಅದನ್ನು ಇನ್ನೊಂದು ಬದಿಗೆ ತಿರುಗಿಸಿ ಹಾಗೂ ಇನ್ನೊಂದು ನಿಮಿಷ ಬೇಯಿಸಿ ತಟ್ಟೆಯಲ್ಲಿ ತೆಗೆದುಕೊಳ್ಳಿ.
- ಹಿಟ್ಟನ್ನು ಉತ್ತಪ್ಪದಂತೆ ಹರಡಿ ಎರಡೂ ಬದಿಯಲ್ಲಿ ಬೇಯಿಸಿ, ತಟ್ಟೆಯಲ್ಲಿ ತೆಗೆದುಕೊಂಡು ರೈತಾ ಅಥವಾ ನಿಮ್ಮ ನೆಚ್ಚಿನ ಚಟ್ನಿಯೊಂದಿಗೆ ಬಡಿಸಬಹುದು. ಸೂಪರ್ ಟೇಸ್ಟಿ ಕಾರ್ನ್ ಉತ್ತಪ್ಪ ಸವಿಯಲು ಸಿದ್ಧ. ಈ ಉತ್ತಪ್ಪ ರೆಸಿಪಿ ನಿಮಗೆ ಇಷ್ಟವಾದರೆ ಪ್ರಯತ್ನಿಸಿ ನೋಡಿ.

ಟಿಪ್ಸ್:
- ಕಾರ್ನ್ ಕಾಳುಗಳು ಮೃದುವಾಗಿದ್ದರೆ ಉತ್ತಪ್ಪದ ರುಚಿ ಉತ್ತಮವಾಗಿರುತ್ತದೆ. ತೆನೆಯಿಂದ ಬೀಜಗಳನ್ನು ತೆಗೆಯುವುದು ನಿಮಗೆ ಕಷ್ಟವಾಗಿದ್ದರೆ, ನೀವು ತುರಿಯುವ ಮಣೆಯ ಸಹಾಯದಿಂದ ತುರಿಯಬಹುದು.
- ನಿಮ್ಮಲ್ಲಿ ಬಾಂಬೆ ರವೆ ಇಲ್ಲದಿದ್ದರೆ, ನೀವು ಬದಲಿಗೆ ಗೋಧಿ ರವೆಯನ್ನು ಬಳಸಬಹುದು. ಅಲ್ಲದೇ ನೀವು ಹುಳಿ ಮೊಸರು ಹಾಕಿದರೆ ಉತ್ತಪ್ಪ ರುಚಿ ಚೆನ್ನಾಗಿರುತ್ತದೆ.
- ಹಸಿ ಮೆಣಸಿನಕಾಯಿಯನ್ನು ತುಂಡುಗಳಾಗಿ ತಿನ್ನಲು ನಿಮಗೆ ಕಷ್ಟವಾಗಿದ್ದರೆ ನೀವು ಅದನ್ನು ಪೇಸ್ಟ್ ಮಾಡಿ ಬಳಸಬಹುದು.
ಇದನ್ನೂ ಓದಿ: ಬಿಸಿ ಬಿಸಿ ಊದಲ ಮಸಾಲ ಕಿಚಿಡಿ: ಫಟಾಫಟ್ ರೆಡಿ ನೋಡಿ
ಇದನ್ನೂ ಓದಿ: ಇಡ್ಲಿ ಹಿಟ್ಟಿಂದ ಟೇಸ್ಟಿ ಪಡ್ಡು ತಯಾರಿಸುವುದು ಹೇಗೆ?

