ETV Bharat / international

ಗಾಜಾದಲ್ಲಿ ತಕ್ಷಣದ ಕದನ ವಿರಾಮ ಘೋಷಣೆ: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ ತಿರಸ್ಕರಿಸಿದ ಅಮೆರಿಕ - US VETOES UN COUNCIL RESOLUTION

ವಿಶ್ವಸಂಸ್ಥೆಯ ಪರವಾಗಿ 14 ಸದಸ್ಯರು ಮತಚಲಾಯಿಸಿದರೆ, ಅಮೆರಿಕ ಮಾತ್ರ ಇದರ ವಿರುದ್ಧ ಮತ ಚಲಾಯಿಸಿದೆ.

us-vetoes-un-security-council-resolution-demanding-immediate-gaza-ceasefire
ಪ್ಯಾಲೆಸ್ತೇನಿಯ ಮಹಿಳೆ ಕಣ್ಣೀರು (AP)
author img

By ETV Bharat Karnataka Team

Published : June 5, 2025 at 12:37 PM IST

2 Min Read

ವಿಶ್ವಸಂಸ್ಥೆ: ಗಾಜಾದಲ್ಲಿ ತಕ್ಷಣದ ಮತ್ತು ಶಾಶ್ವತ ಕದನ ವಿರಾಮಕ್ಕೆ ಒತ್ತಾಯಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಅಮೆರಿಕ ತಿರಸ್ಕರಿಸಿದೆ. ಕಾರಣ ಇದು ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿಲ್ಲ, ಇದು ಹಮಾಸ್ ಉಗ್ರಗಾಮಿಗಳಿಗೆ ಧೈರ್ಯ ತುಂಬುವ ಕೆಲಸ ಎಂದು ಅಮೆರಿಕ ಹೇಳಿದೆ.

ನಿರ್ಣಯದ ಪರವಾಗಿ ಮಂಡಳಿಯ 14 ಸದಸ್ಯರು ಮತಚಲಾಯಿಸಿದ್ದು, ಗಾಜಾದಲ್ಲಿ ಮಾನವೀಯ ಪರಿಸ್ಥಿತಿ ದುರಂತ ಎಂದಿದೆ. ಹಾಗೇ ಆ ಪ್ರದೇಶದಲ್ಲಿರುವ 2.1 ಮಿಲಿಯನ್ ಪ್ಯಾಲೆಸ್ಟೈನಿಯನ್ನರಿಗೆ ನೆರವು ನೀಡುವ ಎಲ್ಲ ನಿರ್ಬಂಧಗಳನ್ನು ತೆಗೆದು ಹಾಕುವಂತೆ ಇಸ್ರೇಲ್‌ಗೆ ಕರೆ ನೀಡಿದೆ.

ವಿಶ್ವಸಂಸ್ಥೆ ಮುಂದೆ ಮಂಡನೆಯಾದ ನಿರ್ಣಯದಲ್ಲಿ ಅಮೆರಿಕ ಎರಡು ಬೇಡಿಕೆಗಳನ್ನು ಈಡೇರಿಸಲಿಲ್ಲ. ಹಾಗೇ ಇದು 2023ರ ಅಕ್ಟೋಬರ್​ 7ರಂದು ಇಸ್ರೇಲ್‌ನಲ್ಲಿ ಹಮಾಸ್ ನಡೆಸಿದ ಮಾರಕ ದಾಳಿಯನ್ನು ಖಂಡಿಸಲಿಲ್ಲ. ಹಾಗೇ ಗಾಜಾದಿಂದ ಉಗ್ರಗಾಮಿ ಗುಂಪು ನಿಶ್ಯಸ್ತ್ರಗೊಳಿಸಿ ಹಿಂದೆ ಸರಿಯಬೇಕು ಎಂದು ಹೇಳಲಿಲ್ಲ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಅಮೆರಿಕ ಹೇಳಿದ್ದೇನು?: ಮತದಾನಕ್ಕೂ ಮುನ್ನ ಮಂಡಳಿಯನ್ನುದ್ದೇಶಿಸಿ ಮಾತನಾಡಿದ ಅಮೆರಿಕದ ಹಂಗಾಮಿ ರಾಯಭಾರಿ ಡೊರೊಥಿ ಶಿಯಾ, ಈ ನಿರ್ಣಯವು ಅಮೆರಿಕದ ಆಪ್ತ ಮಿತ್ರ ರಾಷ್ಟ್ರವಾದ ಇಸ್ರೇಲ್‌ನ ಭದ್ರತೆ ದುರ್ಬಲಗೊಳಿಸುತ್ತದೆ. ಇದು ನೆಲದ ವಾಸ್ತವಗಳನ್ನು ಪ್ರತಿಬಿಂಬಿಸುವ ಕದನ ವಿರಾಮದ ಕುರಿತ ರಾಜತಾಂತ್ರಿಕ ಪ್ರಯತ್ನ ಮಾಡುತ್ತದೆ ಎಂದರು.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಈ ನಿರ್ಣಯವು ಹಮಾಸ್‌ಗೆ ಅಧಿಕಾರ ನೀಡುತ್ತದೆ. ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಉಳಿದ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಮೂಲಕ ಈ ಘರ್ಷಣೆ ಅಂತ್ಯ ಮಾಡಬಹುದು ಎಂದು ತಿಳಿಸಿದರು.

ಒತ್ತೆಯಾಳುಗಳನ್ನು ಬಿಡಲು ನಿರಾಕರಿಸಿದ್ದಕ್ಕಾಗಿ ಇಸ್ರೇಲ್‌ನ ವಿಶ್ವಸಂಸ್ಥೆಯ ರಾಯಭಾರಿ ಡ್ಯಾನಿ ಡ್ಯಾನನ್ ಅಮೆರಿಕಕ್ಕೆ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: ಗಾಜಾದಲ್ಲಿ ಕದನ ವಿರಾಮಕ್ಕೆ ಕರೆ: ವಿಶ್ವಸಂಸ್ಥೆಯಲ್ಲಿ ನಿರ್ಣಯದ ಪರ ಭಾರತ ಮತ

ನವೆಂಬರ್‌ನಲ್ಲಿ ಬೈಡನ್​ ಆಡಳಿತದಲ್ಲಿ ಗಾಜಾ ಕುರಿತಾದ ಕೊನೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಅಮೆರಿಕ ತಿರಸ್ಕರಿಸಿತು. ಈ ಕದನ ವಿರಾಮ ಬೇಡಿಕೆಯು ಎಲ್ಲ ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿಲ್ಲ. ಪ್ರಸ್ತುತ ನಿರ್ಣಯವು ಹಮಾಸ್ ಮತ್ತು ಇತರ ಗುಂಪುಗಳಿಂದ ಸೆರೆಹಿಡಿಯಲ್ಪಟ್ಟವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುತ್ತದೆ ಎಂದು ತಿಳಿಸಿತು.

ಜನವರಿಯಲ್ಲಿ ಅಧಿಕಾರಕ್ಕೆ ಬಂದ ಡೋನಾಲ್ಡ್​​​ ಟಂಪ್​ ಆಡಳಿತ ಕೂಡ ಇಸ್ರೇಲ್​ ಮತ್ತು ಹಮಾಸ್​ ನಡುವಿನ 20 ತಿಂಗಳ ಯುದ್ಧದ ನಂತರ ಗಾಜಾದಲ್ಲಿ ಶಾಂತಿಯನ್ನು ಕಾಪಾಡಲು ಹೆಚ್ಚಿನ ಪ್ರಯತ್ನ ನಡೆಸಿದೆ. ಆದರೆ, ಹಮಾಸ್ ಅಮೆರಿಕದ ಪ್ರಸ್ತಾವನೆಗೆ ತಿದ್ದುಪಡಿಗಳನ್ನು ಕೋರಿದೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಗಾಜಾ ಒತ್ತೆಯಾಳುಗಳ ಪ್ರತಿಭಟನೆ ವೇಳೆ ಭಯೋತ್ಪಾದಕ ದಾಳಿ; 6 ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.