ನವದೆಹಲಿ: ಭಾರತದ ಮೇಲೆ ಅಮೆರಿಕ ವಿಧಿಸಿದ್ದ ಶೇ.26ರಷ್ಟು ಹೆಚ್ಚುವರಿ ಸುಂಕವನ್ನು 90 ದಿನಗಳವರೆಗೆ ಅಂದರೆ, ಜುಲೈ 9ರವರೆಗೆ ಹಿಂಪಡೆಯಲಾಗುವುದು ಎಂದು ಶ್ವೇತಭವನ ತಿಳಿಸಿದೆ.
ಅಮೆರಿಕಕ್ಕೆ ಸರಕುಗಳನ್ನು ರಫ್ತು ಮಾಡುವ ಸುಮಾರು 60 ದೇಶಗಳಿಗೆ ಅಮೆರಿಕ ಭಾರತ ಸೇರಿದಂತೆ ಹಲವು ರಾಜ್ಯಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದರು. ಇದು ಸಿಗಡಿಯಿಂದ ಉಕ್ಕಿನವರೆಗೆ ಎಲ್ಲಾ ವಸ್ತುಗಳ ಉತ್ಪನ್ನಗಳ ಮೇಲಿನ ಸುಂಕ ಜಗತ್ತಿನ ಆರ್ಥಿಕಗೆ ಮೇಲೆ ಪರಿಣಾಮ ಬೀರಿತ್ತು. ಈ ಹೆಚ್ಚುವರಿ ಸುಂಕದ ಮೂಲಕ ವ್ಯಾಪಾರ ಕೊರತೆ ಕಡಿತ ಮಾಡಿ, ದೇಶೀಯ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿತ್ತು.
ಅಮೆರಿಕವು ಭಾರತದ ಮೇಲೆ ಶೇ.26ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಿದ್ದರೆ, ಥೈಲ್ಯಾಂಡ್, ವಿಯೆಟ್ನಾಂ ಮತ್ತು ಚೀನಾದ ಮೇಲೆ ಹೆಚ್ಚಿನ ಸುಂಕ ವಿಧಿಸಿತ್ತು. ಇದೀಗ ಸುಂಕ ಭಾರತ ಮೇಲೆ ವಿಧಿಸಿರುವ ಸುಂಕವನ್ನು ತಾತ್ಕಲಿಕವಾಗಿ ರದ್ದು ಮಾಡಿದ್ದು, ಚೀನಾ, ಹಾಂಕ್ಗಾಂಗ್ ಮತ್ತು ಮೆಕು ಮೇಲೆ ಯಾವುದೇ ಹಿಂಪಡೆತ ಆಗಿಲ್ಲ.
ಈ ಕ್ರಮವು ಏಪ್ರಿಲ್ 10ರಿಂದ ಜಾರಿಗೆ ಬರಲಿದ್ದು, ಜುಲೈ 9ರವರೆಗೆ ಜಾರಿಯಲ್ಲಿರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಶೇ.10ರಷ್ಟು ಬೇಸ್ಲೈನ್ ಸುಂಕ ವಿಧಿಸುವಿಕೆ ಮುಂದುವರೆಯಲಿದೆ.
ವ್ಯಾಪಾರ ತಜ್ಞರು ಹೇಳುವಂತೆ, ಉಕ್ಕು, ಅಲ್ಯೂಮಿನಿಯಂ ಮಾರ್ಚ್ 12ರಿಂದ ಜಾರಿಗೆ ಬರುವಂತೆ, ಆಟೋ ಮತ್ತು ಆಟೋ ಘಟಕಗಳ ಮೇಲಿನ ಶೇ.25ರಷ್ಟು ಸುಂಕ ಏಪ್ರಿಲ್ 3ರಿಂದ ಮುಂದುವರೆದಿದೆ.
ಸೆಮಿಕಂಡಕ್ಟರ್‌ಗಳು, ಔಷಧಗಳು ಮತ್ತು ಕೆಲವು ಇಂಧನ ಉತ್ಪನ್ನಗಳು ವಿನಾಯಿತಿ ವರ್ಗದಲ್ಲಿದೆ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಮಹಾನಿರ್ದೇಶಕ ಅಜಯ್ ಸಹಾಯ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಹೊರತುಪಡಿಸಿ ಉಳಿದ ದೇಶಗಳ ಮೇಲೆ ಹಾಕಿದ್ದ ಸುಂಕವನ್ನು ಹಿಂಪಡೆದಿದ್ದು, ಈ ವ್ಯಾಪಾರ ಯುದ್ಧಕ್ಕೆ 90 ದಿನಗಳ ವಿರಾಮ ಘೋಷಿಸಿದ್ದಾರೆ. ಟ್ರಂಪ್ ಅವರ ಈ ವ್ಯಾಪಾರ ಯುದ್ಧ ಜಾಗತಿಕ ಷೇರು ಮಾರುಕಟ್ಟೆಯಲ್ಲಿಯೂ ತಲ್ಲಣ ಮೂಡಿಸಿ, ಷೇರು ಕುಸಿತಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಉಲ್ಟಾ ಹೊಡೆದ ಟ್ರಂಪ್: ಚೀನಾ ಬಿಟ್ಟು ಎಲ್ಲ ದೇಶಗಳ ಮೇಲೆ ಹೇರಿದ್ದ ಸುಂಕಕ್ಕೆ ವಿರಾಮ ನೀಡಿದ ಅಮೆರಿಕ: ಷೇರುಪೇಟೆಯಲ್ಲಿ ಚೇತರಿಕೆ
ಇದನ್ನೂ ಓದಿ: ರೆಸೇಷನ್ಗೆ ಕಾರಣವಾಗುತ್ತಾ ರೆಸಿಪ್ರೋಕಲ್: ಚೀನಾ ಮೇಲೆ ಇಂದಿನಿಂದಲೇ 104ರಷ್ಟು ಸುಂಕ ಜಾರಿ; ಏಷ್ಯಾ ಷೇರು ಮಾರುಕಟ್ಟೆಗಳಲ್ಲಿ ತಲ್ಲಣ