ವಾಷಿಂಗ್ಟನ್: ಟ್ರಂಪ್ ವಲಸೆ ನೀತಿ ವಿರುದ್ಧ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕಾನೂನು ಜಾರಿ ಸಂಸ್ಥೆಗಳೊಂದಿಗೆ ಘರ್ಷಣೆಗಳು ನಡೆಯುತ್ತಿರಯವ ವರದಿಗಳಾಗುತ್ತಿವೆ. ಈ ಬೆನ್ನಲ್ಲೇ ಪ್ರತಿಭಟನೆ ಹತ್ತಿಕ್ಕಲು ಟ್ರಂಪ್ ಸರ್ಕಾರ 700 ನೌಕಾಪಡೆ ಮತ್ತು ಹೆಚ್ಚುವರಿಯಾಗಿ 2,000 ರಾಷ್ಟ್ರೀಯ ಗಾರ್ಡ್ ಗಳನ್ನು ಲಾಸ್ ಏಂಲೀಸ್ನಲ್ಲಿ ಸಜ್ಜುಗೊಳಿಸಿರುವುದಾಗಿ ಘೋಷಿಸಲಾಗಿದೆ.
ಟ್ರಂಪ್ ಈಗಾಗಲೇ 2000 ರಾಷ್ಟ್ರೀಯ ಗಾರ್ಡ್ ಪಡೆಗಳನ್ನು ನಿಯೋಜಿಸಿದ್ದು, ಸುಮಾರು 300 ಜನರು ಫೆಡರಲ್ ಕಟ್ಟಡಗಳು ಮತ್ತು ಅಧಿಕಾರಿಗಳನ್ನು ರಕ್ಷಿಸುವ ಕೆಲಸಕ್ಕೆ ನಿಯೋಜನೆ ಮಾಡಿದ್ದಾರೆ.
ಈ ಕುರಿತು ಎಎಫ್ಪಿಗೆ ಹೇಳಿಕೆ ನೀಡಿರುವ ಹಿರಿಯ ಆಡಳಿತ ಅಧಿಕಾರಿ, ಫೆಡರಲ್ ಏಜೆಂಟ್‌ಗಳು ಮತ್ತು ಕಟ್ಟಡಗಳನ್ನು ರಕ್ಷಿಸಲು ಸಹಾಯ ಮಾಡಲು ಕ್ಯಾಂಪ್ ಪೆಂಡಲ್ಟನ್‌ನಿಂದ ಸಕ್ರಿಯ ಕರ್ತವ್ಯದ ಯುಎಸ್ ಮೆರೀನ್‌ಗಳನ್ನು ಲಾಸ್ ಏಂಜಲೀಸ್‌ನಲ್ಲಿ ನಿಯೋಜಿಸಲಾಗಿದೆ. ಈ ಮೊದಲು 500 ಮೆರೀನ್‌ಗಳ ನೀಡಿದ್ದು, ಇದೀಗ ಇವುಗಳನ್ನು 700ಕ್ಕೆ ಏರಿಸಲಾಗಿದೆ ಎಂದರು.
ಅಮೆರಿಕದೊಳಗಿನ ನಾಗರಿಕರ ಸಮುದಾಯಕ್ಕೆ ಅಮೆರಿಕದ ನೌಕಾಪಡೆಯಂತಹ ಸಕ್ರಿಯ ಕರ್ತವ್ಯದ ಮಿಲಿಟರಿ ಸಿಬ್ಬಂದಿಯನ್ನು ನಿಯೋಜಿಸುವುದು ಅತ್ಯಂತ ಅಸಾಮಾನ್ಯ ಕ್ರಿಯೆಯಾಗಿದೆ. ಆದರೆ ಪ್ರತಿಭಟನೆಯ ಕಾವು ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆ ಅಶಾಂತಿಯ ವಾತಾವರಣವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆಯಾಗಿ ಸರಿಸುಮಾರು 700 ನೌಕಾಪಡೆಯ ಸಿಬ್ಬಂದಿಯನ್ನು ಅಮೆರಿಕ ಸೇನೆ ಪ್ರತ್ಯೇಕವಾಗಿ ನಿಯೋಜಿಸಿದ್ದಾಗಿ ದೃಢಪಡಿಸಿದೆ.
ಇದನ್ನೂ ಓದಿ: ಟ್ರಂಪ್ - ಮಸ್ಕ್ ಗುದ್ದಾಟ; ಟೆಸ್ಲಾ ಷೇರು ಭಾರೀ ಕುಸಿತ
ಕ್ಯಾಲಿಫೋರ್ನಿಯಾದ ಡೆಮಾಕ್ರಟಿಕ್ ಗವರ್ನರ್ ಗ್ಯಾವಿನ್ ನ್ಯೂಸಮ್ ಒಪ್ಪಿಗೆಯಿಲ್ಲದೇ ಲಾಸ್ ಏಂಜಲೀಸ್‌ಗೆ ನಿಯೋಜಿಸಿದ್ದ ರಾಷ್ಟ್ರೀಯ ಗಾರ್ಡ್ ಪಡೆಗಳೊಂದಿಗೆ ಸರಾಗವಾಗಿ ಸಂಯೋಜನೆಗೊಳ್ಳಲಾಗುವುದು. ಸಾಕಷ್ಟು ಸಂಖ್ಯೆ ಪಡೆಗಳನ್ನು ಖಚಿತಪಡಿಸಿಕೊಳ್ಳಲು ಈ ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪೆಂಟಗನ್ ವಕ್ತಾರ ಸೀನ್ ಪಾರ್ನೆಲ್, ವಲಸೆ ಮತ್ತು ಕಸ್ಟಮ್ಸ್ ಜಾರಿಗೆ ಬೆಂಬಲ ನೀಡಲು ಮತ್ತು ಫೆಡರಲ್ ಕಾನೂನು ಜಾರಿ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಸಹಾಯ ಮಾಡುವ ಉದ್ದೇಶದಿಂದ ಫೆಡರಲ್ ಸೇವೆಗೆ ಹೆಚ್ಚುವರಿ 2,000 ಕ್ಯಾಲಿಫೋರ್ನಿಯಾ ರಾಷ್ಟ್ರೀಯ ಗಾರ್ಡ್ ಗಳನ್ನು ನಿಯೋಜಿಸಲಾಗಿದೆ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: ಟ್ರಂಪ್ ಅವರ ಬ್ಯೂಟಿಫುಲ್ ವಿಧೇಯಕದಿಂದ ಭಾರತಕ್ಕೆ ಶತಕೋಟಿ ಡಾಲರ್ ನಷ್ಟ ಸಾಧ್ಯತೆ: ಏನಿದು ಮಸೂದೆ?