ಹೈದರಾಬಾದ್/ದುಬೈ: ದುಬೈನ ಬೇಕರಿಯೊಂದರಲ್ಲಿ ಪಾಕಿಸ್ತಾನಿ ಪ್ರಜೆಯೊಬ್ಬ ಧಾರ್ಮಿಕ ಘೋಷಣೆಗಳನ್ನು ಕೂಗಿ ದಾಳಿ ನಡೆಸಿದ್ದು, ದಾಳಿಯಲ್ಲಿ ತೆಲಂಗಾಣದ ಇಬ್ಬರು ಸಾವನ್ನಪ್ಪಿ, ಒಬ್ಬ ವ್ಯಕ್ತಿ ಗಾಯಗೊಂಡಿರುವುದಾಗಿ ಮೃತರ ಕುಟುಂಬಸ್ಥರು ಮಂಗಳವಾರ ತಿಳಿಸಿದ್ದಾರೆ.
ಸಾವನ್ನಪ್ಪಿದವರನ್ನು ನಿರ್ಮಲ್ ಜಿಲ್ಲೆಯ ಸೋನ್ ಗ್ರಾಮದ ಅಷ್ಟಪು ಪ್ರೇಮ್ಸಾಗರ್ (35), ಹಾಗೂ ನಿಜಾಮಾಬಾದ್ನ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸಾಗರ್ ಎನ್ನುವವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವನ್ನಪ್ಪಿದವರು ಕೆಲಸ ಮಾಡುತ್ತಿದ್ದ ಬೇಕರಿಯಲ್ಲಿ ಈ ಘಟನೆ ನಡೆದಿದೆ.
ಏನಿದು ಘಟನೆ?: "ಪ್ರೇಮಸಾಗರ್ ಕಳೆದ ಐದಾರು ವರ್ಷಗಳಿಂದ ಆ ಬೇಕರಿಯಲ್ಲಿ ಉದ್ಯೋಗಿಯಾಗಿದ್ದರು. ಎರಡು ವರ್ಷಗಳ ಹಿಂದೆ ಕೊನೆಯದಾಗಿ ಊರಿಗೆ ಬಂದು ಹೋಗಿದ್ದ. ಏಪ್ರಿಲ್ 11ರಂದು ಆತನನ್ನು ಕತ್ತಿಯಿಂದ ಇರಿದು ಕೊಲೆ ಮಾಡಲಾಗಿದೆ. ಪ್ರೇಮಸಾಗರ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ದುರಂತದ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಇನ್ನೂ ಮಾಹಿತಿ ನೀಡಿಲ್ಲ ಎಂದು ಅವರ ಚಿಕ್ಕಪ್ಪ ಎ ಪೋಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜೊತೆಗೆ ಆತನ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲು ಸರ್ಕಾರ ಸಹಾಯ ಮಾಡಬೇಕು. ಹಾಗೂ ಪ್ರೇಮಸಾಗರ್ ಅವರ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅವರಿಗೆ ನೆರವು ನೀಡಬೇಕು" ಎಂದು ಮನವಿ ಮಾಡಿದರು.
Deeply shocked by the brutal killing of two Telugu youth from Telangana in Dubai, Ashtapu Premsagar from Nirmal Dist. and Srinivas from Nizamabad Dist.
— G Kishan Reddy (@kishanreddybjp) April 15, 2025
Spoke to Hon’ble External Affairs Minister Shri @DrSJaishankar ji on the matter and he has assured full support to the bereaved…
ಪ್ರಕರಣದ ಬಗ್ಗೆ ಕೇಂದ್ರ ಸಚಿವರು ನೀಡಿದ ಮಾಹಿತಿ ಹೀಗಿದೆ: ಈ ಮಧ್ಯೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿ, ಸಾವನ್ನಪ್ಪಿದ ಎರಡನೇ ವ್ಯಕ್ತಿಯ ಹೆಸರನ್ನು ಹೇಳಿದ್ದಾರೆ. ಗಾಯಗೊಂಡಿರುವ ವ್ಯಕ್ತಿಯ ಬಗ್ಗೆ ಅವರ ಪತ್ನಿ ಭವಾನಿ ನಿಜಮಾಬಾದ್ನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹತ್ಯೆಗಳ ಬಗ್ಗೆ ದುಃಖ ವ್ಯಕ್ತಪಡಿಸಿದ ರೆಡ್ಡಿ, "ಸಾವನ್ನಪ್ಪಿದವ ಪಾರ್ಥೀವ ಶರೀರಗಳನ್ನು ಭಾರತಕ್ಕೆ ತರಲು ಸಹಾಯಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತನಾಡಿದ್ದೇನೆ" ಎಂದು ತಿಳಿಸಿದರು.
ತುರ್ತು ಭಾರತಕ್ಕೆ ಕರೆ ತರುವ ಭರವಸೆ ನೀಡಿದ ಕಿಶನ್ ರೆಡ್ಡಿ: ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಿಶನ್ ರೆಡ್ಡಿ, "ದುಬೈನಲ್ಲಿ ತೆಲಂಗಾಣದ ಇಬ್ಬರು ಯುವಕರು ಹತ್ಯೆಯಾಗಿರುವುದು ತೀವ್ರ ಆಘಾತ ತಂದಿದೆ. ಈ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ಅವರ ಜೊತೆಗೆ ಮಾತನಾಡಿದ್ದೇನೆ. ಅವರು ದುಃಖಿತ ಕುಟುಂಬಗಳಿಗೆ ಸಂಪೂರ್ಣ ಬೆಂಬಲ ನೀಡುವ ಹಾಗೂ ಪಾರ್ಥೀವ ಶರೀರಗಳನ್ನು ತುರ್ತು ಭಾರತಕ್ಕೆ ತರಿಸುವ ಬಗ್ಗೆ ಭರವಸೆ ನೀಡಿದ್ದಾರೆ." ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೊರ ರಾಜ್ಯದ ಕಾರ್ಮಿಕರ ಮೇಲೆ ನಿಗಾ ಇಡಲು ತೀರ್ಮಾನ: ಸಚಿವ ಸಂತೋಷ್ ಲಾಡ್