ETV Bharat / international

ಪ್ರಧಾನಿ ಮೋದಿಯ 3 ಗಂಟೆಗಳ ಪಾಡ್‌ಕಾಸ್ಟ್ ಹಂಚಿಕೊಂಡ ಟ್ರಂಪ್ - TRUMP SHARES PM MODI PODCAST

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೂರು ಗಂಟೆಗಳ ಪಾಡ್‌ಕಾಸ್ಟ್ ಅನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Trump shares PM Modi's 3-hr podcast on his social media platform
ಅಮೆರಿಕ ಮೂಲದ ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು. (PTI)
author img

By ETV Bharat Karnataka Team

Published : March 17, 2025 at 5:43 PM IST

2 Min Read

ವಾಷಿಂಗ್ಟನ್ : ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಮೂಲದ ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗಿನ ಮೂರು ಗಂಟೆಗಳ ಸಂದರ್ಶನದ ಪಾಡ್‌ಕಾಸ್ಟ್ ಅನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಬೆಳಗ್ಗೆ (ಭಾರತೀಯ ಸಮಯ) ತಮ್ಮ ಸಾಮಾಜಿಕ ಮಾಧ್ಯಮ ಟ್ರುತ್ ಸೋಶಿಯಲ್‌ನಲ್ಲಿ ಹಂಚಿಕೊಂಡಿದ್ದಾರೆ. ಶೇರ್​ ಮಾಡಿರುವ ಈ ಪೋಸ್ಟ್‌ನಲ್ಲಿ, ಟ್ರಂಪ್ ಅವರು ಪ್ರಧಾನಿ ಮೋದಿ ಅವರ ಮೂರು ಗಂಟೆಗಳ ಈ ಪಾಡ್‌ಕಾಸ್ಟ್‌ನ ಲಿಂಕ್ ಹಾಕಿದ್ದಾರೆ.

ಪ್ರಧಾನಿ ಮೋದಿ ಅವರು ಟ್ರಂಪ್ ಅವರೊಂದಿಗಿನ ತಮ್ಮ ಸ್ನೇಹದ ಬಗ್ಗೆ ಹಾಗೂ ಅವರ ದಿಟ್ಟತನದ ಬಗ್ಗೆ ಸಂದರ್ಶನದಲ್ಲಿ ಶ್ಲಾಘಿಸಿದ್ದು, ಅವರು ಅಮೆರಿಕದ ಅಧ್ಯಕ್ಷರಾಗಿ ತಮ್ಮ ಮೊದಲ ಅವಧಿಗೆ ಹೋಲಿಸಿದರೆ 'ಈಗ ಹೆಚ್ಚು ಸಿದ್ಧರಾಗಿದ್ದಾರೆ' ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದಲ್ಲದೇ ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧ, ಪರಸ್ಪರ ನಂಬಿಕೆ ಮತ್ತು ಆಯಾ ರಾಷ್ಟ್ರೀಯ ಹಿತಾಸಕ್ತಿಗಳು, ಶಿಕ್ಷಣ, ಕೃತಕ ಬುದ್ಧಿಮತ್ತೆ, ಗುಜರಾತ್ ಗಲಭೆ ಮತ್ತು ಧ್ಯಾನ ಸೇರಿದಂತೆ ಹಲವಾರು ವಿಷಯಗಳ ಕುರಿತು ಪ್ರಧಾನಿ ಮೋದಿ ಪಾಡ್‌ಕಾಸ್ಟ್‌ನಲ್ಲಿ ಪ್ರಸ್ತಾಪಿಸಿರುವುದನ್ನು ಗಮನಿಸಹಹುದು.

ಡೊನಾಲ್ಡ್ ಟ್ರಂಪ್ ಓರ್ವ ಧೈರ್ಯಶಾಲಿ ವ್ಯಕ್ತಿ. ತಮ್ಮ ಹತ್ಯೆಯ ಪ್ರಯತ್ನದ ಬಳಿಕವೂ ಅಮೆರಿಕ ಚುನಾವಣೆಗಳ ಪ್ರಚಾರದ ಸಮಯದಲ್ಲಿ ಅವರ ದೃಢಸಂಕಲ್ಪವನ್ನು ಮೆಚ್ಚಲೇಬೇಕು. ಇತ್ತೀಚಿಗೆ ಅದೇ ಕ್ರೀಡಾಂಗಣದಲ್ಲಿ ನನ್ನೊಂದಿಗೆ ಕೈಕೈ ಹಿಡಿದು ಸಾಗಿದರು. ಅದೇ ಸ್ಥಿತಿಸ್ಥಾಪಕ ಮತ್ತು ಅದೇ ದೃಢನಿಶ್ಚಯವನ್ನು ನಾನು ಅವರಲ್ಲಿ ಕಂಡೆ. ತಮ್ಮ ಮೇಲೆ ಗುಂಡು ಹಾರಿಸಿದ ನಂತರವೂ ಅವರು ಅಮೆರಿಕಕ್ಕೆ ಅಚಲವಾಗಿ ಸಮರ್ಪಿತರಾಗಿದ್ದರು. ದೇಶ ಮೊದಲು ಎಂಬ ಆಶಯದಂತೆ ಅವರ ಜೀವನವು ಅವರ ರಾಷ್ಟ್ರಕ್ಕಾಗಿ ಅನ್ನೋದರಲ್ಲಿ ಎರಡು ಮಾತಿಲ್ಲ ಎಂದು ಪ್ರಧಾನಿ ಮೋದಿ ಅವರು ಟ್ರಂಪ್ ಅವರನ್ನು ಬಣ್ಣಿಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು.

ಇದೇ ವೇಳೆ 2019ರಲ್ಲಿ ಹೂಸ್ಟನ್‌ನಲ್ಲಿ ನಡೆದ "ಹೌಡಿ ಮೋದಿ" ಕಾರ್ಯಕ್ರಮವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಅಂದಿನ ಸಭೆಯಲ್ಲಿ ಯಾವುದೇ ಭದ್ರತೆಯನ್ನು ಕೇಳದೆ ಸಾವಿರಾರು ಜನರ ಗುಂಪಿನೊಳಗೆ ಟ್ರಂಪ್ ತಮ್ಮೊಂದಿಗೆ ನಡೆದುಕೊಂಡು ಹೋಗಿದ್ದನ್ನು ನಾನು ಈವರೆಗೂ ಮರೆಯಲಾರೆ ಎಂದು ಅವರೊಂದಿಗಿನ ಸ್ನೇಹದ ಕುರಿತು ಪ್ರಧಾನಿ ಮೋದಿ ನೆನಪಿಸಿಕೊಂಡರು. ಇತ್ತೀಚಿನ ಭೇಟಿ ಕುರಿತು ಕೂಡ ಮೋದಿ ಈ ಪಾಡ್‌ಕಾಸ್ಟ್​ನಲ್ಲಿ ಪ್ರಸ್ತಾಪಿಸಿದ್ದಾರೆ.

ಶ್ವೇತಭವನಕ್ಕೆ ಕಾಲಿಟ್ಟ ಕ್ಷಣವೇ ಅವರು ಎಲ್ಲಾ ಔಪಚಾರಿಕ ಶಿಷ್ಟಾಚಾರಗಳನ್ನು ಮುರಿದರು. ವೈಯಕ್ತಿಕವಾಗಿ ನನ್ನನ್ನು ಶ್ವೇತಭವನಕ್ಕೂ ಕರೆದುಕೊಂಡು ಹೋದರು. ವರ್ಷಗಳ ಕಾಲ ವೈಯಕ್ತಿಕವಾಗಿ ಭೇಟಿಯಾಗದಿದ್ದರೂ, ಅವರ ಸಂವಹನ ಮತ್ತು ನಂಬಿಕೆ ಬಲವಾಗಿ ಉಳಿದಿದೆ ಎಂದು ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಓರ್ವ ಉತ್ತಮ ಸಮಾಲೋಚಕ ಎಂಬ ಡೊನಾಲ್ಡ್ ಟ್ರಂಪ್ ಅವರ ಹಿಂದಿನ ಹೇಳಿಕೆಯ ಬಗ್ಗೆ ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಕೇಳಿದಾಗ, ಅದಕ್ಕೆ ಅಮೆರಿಕ ಅಧ್ಯಕ್ಷರ ದಯೆ ಮತ್ತು ನಮ್ರತೆ ಕಾರಣ ಎಂದು ಮೋದಿ ಹೇಳಿರುವುದನ್ನೂ ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: ಕೃತಕ ಬುದ್ಧಿಮತ್ತೆ ಶಕ್ತಿಶಾಲಿಯಾಗಿದ್ದರೂ, ಮಾನವನ ಕಲ್ಪನಾ ಶಕ್ತಿಗೆ ಸರಿಸಾಟಿಯಾಗಲ್ಲ : ಪ್ರಧಾನಿ ಮೋದಿ - PM NARENDRA MODI

ETV Bharat Logo

Copyright © 2025 Ushodaya Enterprises Pvt. Ltd., All Rights Reserved.