ETV Bharat / international

ವಿಶ್ವ ಆರ್ಥಿಕ ಹಿಂಜರಿತದ ಸುಳಿವು: ಆಟೋ ಸುಂಕಗಳಿಗೂ ತಾತ್ಕಾಲಿಕ ವಿರಾಮಕ್ಕೆ ಮುಂದಾದ ಟ್ರಂಪ್​ - PAUSING HIS AUTO TARIFFS

ಟ್ರಂಪ್‌ರ ಆಮದು ತೆರಿಗೆಗಳ ಆಕ್ರಮಣದ ಬಳಿಕ ವಿಶ್ವ ಆರ್ಥಿಕತೆಯಲ್ಲಿ ಉಂಟಾದ ತಲ್ಲಣದಿಂದ ಸೃಷ್ಟಿಯಾಗಿರುವ ಭೀತಿಯಿಂದ ಟ್ರಂಪ್​ ಎಚ್ಚೆತ್ತುಕೊಂಡಿದ್ದಾರೆ. ವಾಹನ ತಯಾರಿಕೆ ವಲಯದ ಮೇಲಿನ ಸುಂಕಕ್ಕೂ ತಾತ್ಕಾಲಿಕ ವಿರಾಮ ನೀಡುವ ಸುಳಿವು ನೀಡಿದ್ದಾರೆ.

Trump considers pausing his auto tariffs
ಆಟೋ ಸುಂಕಗಳಿಗೂ ತಾತ್ಕಾಲಿಕ ವಿರಾಮಕ್ಕೆ ಮುಂದಾದ ಟ್ರಂಪ್​ (AP)
author img

By ETV Bharat Karnataka Team

Published : April 15, 2025 at 10:27 AM IST

3 Min Read

ವಾಷಿಂಗ್ಟನ್: ಕಾರು ತಯಾರಕರು ತಮ್ಮ ಪೂರೈಕೆ ಸರಪಳಿಯನ್ನು ಸರಿ ಹೊಂದಿಸಲು ಸಮಯ ಬೇಕಾಗಬಹುದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಈ ವಲಯದ ಮೇಲೆ ವಿಧಿಸಿದ ಸುಂಕಗಳಿಂದ ತಾತ್ಕಾಲಿಕವಾಗಿ ವಿನಾಯಿತಿ ನೀಡಬಹುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

ಕೆಲವು ಕಾರು ಕಂಪನಿಗಳಿಗೆ ಸಹಾಯ ಮಾಡಲು ನಾನು ಏನನ್ನಾದರೂ ಮಾಡಬೇಕು ಎಂದುಕೊಂಡಿದ್ದೇನೆ ಎಂದು ಟ್ರಂಪ್ ಓವಲ್ ಕಚೇರಿಯಲ್ಲಿ ಸೇರಿದ್ದ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕೆನಡಾ, ಮೆಕ್ಸಿಕೊ ಮತ್ತು ಇತರ ಸ್ಥಳಗಳಿಂದ ಉತ್ಪಾದನೆ ಸ್ಥಳಾಂತರಿಸಲು ವಾಹನ ತಯಾರಕರಿಗೆ ಸಮಯ ಬೇಕಾಗಬಹುದು ಎಂದು ಟ್ರಂಪ್​ ಅಭಿಪ್ರಾಯಪಟ್ಟಿದ್ದಾರೆ.

ಮ್ಯಾಟ್ ಬ್ಲಂಟ್ ಹೇಳಿದ್ದೇನು?: ಫೋರ್ಡ್, ಜನರಲ್ ಮೋಟಾರ್ಸ್ ಮತ್ತು ಸ್ಟೆಲ್ಲಂಟಿಸ್ ಪ್ರತಿನಿಧಿಸುವ ಅಸೋಸಿಯೇಷನ್‌ನ ಅಮೆರಿಕನ್ ಆಟೋಮೋಟಿವ್ ಪಾಲಿಸಿ ಕೌನ್ಸಿಲ್‌ನ ಅಧ್ಯಕ್ಷ ಮ್ಯಾಟ್ ಬ್ಲಂಟ್, ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಟ್ರಂಪ್‌ ಅವರ ಗುರಿಗಳ ಬಗ್ಗೆ ಮಾತನಾಡಿದ್ದಾರೆ.

ಈ ವಲಯದ ಮೇಲೆ ಹೇರಿರುವ ವಿಶಾಲವಾದ ಸುಂಕಗಳು ಅಭಿವೃದ್ಧಿ ಹೊಂದುತ್ತಿರುವ ಮತ್ತು ಬೆಳೆಯುತ್ತಿರುವ ಅಮೆರಿಕನ್ ಆಟೋ ಉದ್ಯಮದ ಮೇಲೆ ಪರಿಣಾಮ ಬೀರಬಹುದು. ಪೂರೈಕೆ ಸರಪಳಿ ಪರಿವರ್ತನೆ ಮಾಡಲು ಹೆಚ್ಚಿನ ಸಮಯಾವಕಾಶ ಬೇಕಾಗಬಹುದು ಎಂದು ಬ್ಲಂಟ್ ಹೇಳಿದ್ದಾರೆ.

ವಾಲ್ ಸ್ಟ್ರೀಟ್ ಅರ್ಥಶಾಸ್ತ್ರಜ್ಞರು ಹೇಳಿದ್ದೇನು?: ಟ್ರಂಪ್‌ ಅವರ ಈ ಹೇಳಿಕೆ ಸುಂಕಗಳ ಮೇಲಿನ ಮತ್ತೊಂದು ಸುತ್ತಿನ ರಿವರ್ಸಲ್​​​ನ ಸುಳಿವು ನೀಡಿದೆ. ಏಕೆಂದರೆ ಟ್ರಂಪ್‌ರ ಆಮದು ತೆರಿಗೆಗಳ ಘೋಷಣೆ ಹಣಕಾಸು ಮಾರುಕಟ್ಟೆಗಳನ್ನು ಭಯಭೀತಗೊಳಿಸಿದೆ. ಅಷ್ಟೇ ಅಲ್ಲ ಇದು ಜಾಗತಿಕ ಸಂಭವನೀಯ ಹಿಂಜರಿತದ ಬಗ್ಗೆ ವಾಲ್ ಸ್ಟ್ರೀಟ್ ಅರ್ಥಶಾಸ್ತ್ರಜ್ಞರಿಂದ ಆಳವಾದ ಕಳವಳಕ್ಕೂ ಕಾರಣವಾಗಿದೆ.

ಮಾರ್ಚ್ 27 ರಂದು ಟ್ರಂಪ್ ಶೇ 25 ರಷ್ಟು ಸ್ವಯಂ ಸುಂಕಗಳನ್ನು ಘೋಷಿಸಿದಾಗ ಈ ಭೀತಿ ಹುಟ್ಟಿಕೊಂಡಿದೆ. ಕಳೆದ ವಾರ ಬಾಂಡ್ ಮಾರುಕಟ್ಟೆಯ ಸೆಲ್​ಆಫ್, ​ ಅಮೆರಿಕದ ಸಾಲದ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದ ಬಳಿಕ ಟ್ರಂಪ್ 90 ದಿನಗಳವರೆಗೆ ವಿವಿಧ ರಾಷ್ಟ್ರಗಳ ಮೇಲೆ ಹೆರಿದ್ದ ರೆಸಿಪ್ರೋಕಲ್​ ಟಾರಿಫ್​ ಅನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದ್ದರು. ಚೀನಾ ಹೊರತು ಪಡಿಸಿ ಇನ್ನುಳಿದ ಎಲ್ಲ ದೇಶಗಳಿಗೆ ತಾತ್ಕಾಲಿಕ ರಿಲೀಫ್​ ನೀಡಲಾಗಿದೆ. ಈಗ ಬಹುತೇಕ ದೇಶಗಳು ಪ್ರತಿಸುಂಕ ಹೇರಿಕೆ ಕುರಿತು ಮಾತುಕತೆಗೆ ಮುಂದಾಗಿವೆ.

ಈ ನಡುವೆ ಟ್ರಂಪ್ ಚೀನಾದ ಮೇಲಿನ ಆಮದು ತೆರಿಗೆಗಳನ್ನು ಶೇ 145 ಹೆಚ್ಚಿಸಿದ್ದಾರೆ. ಆದರೆ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ತಾತ್ಕಾಲಿಕ ವಿನಾಯಿತಿ ನೀಡಿದ್ದಾರೆ.

ಮನಸ್ಸು ಬದಲಾಯಿಸಲ್ಲ ಆದರೆ ಹೊಂದಿಕೊಳ್ಳುವ ಮನಸ್ಸಿದೆ: "ನಾನು ನನ್ನ ಮನಸ್ಸನ್ನು ಬದಲಾಯಿಸುವುದಿಲ್ಲ, ಆದರೆ ನಾನು ಹೊಂದಿಕೊಳ್ಳುವ ಮನಸ್ಥಿತಿ ಉಳ್ಳವನು ಎಂದು ಟ್ರಂಪ್ ಸೋಮವಾರ ಘೋಷಿಸಿದ್ದಾರೆ. ಟ್ರಂಪ್ ಅವರ ಈ ನಮ್ಯತೆಯು ಅವರ ಉದ್ದೇಶಗಳು ಮತ್ತು ಅಂತಿಮ ಗುರಿಗಳ ಬಗ್ಗೆ ಅನಿಶ್ಚಿತತೆ ಮತ್ತು ಗೊಂದಲ ಮುಂದುವರೆಯುವಂತೆ ಮಾಡಿದೆ.

ಯುಎಸ್​ ಬಾಂಡ್​ ಯೀಲ್ಡ್​ ಹೆಚ್ಚಳ: ಟ್ರಂಪ್​ ಅವರ ಈ ಹೇಳಿಕೆ ಬಳಿಕ ಅಮೆರಿಕದ ಪ್ರಮುಖ ಷೇರು ಮಾರುಕಟ್ಟೆ S&P 500 ಸ್ಟಾಕ್ ಸೂಚ್ಯಂಕವು ಸೋಮವಾರ 0.8% ರಷ್ಟು ಏರಿಕೆಯಾಗಿದೆ. 10-ವರ್ಷಗಳ ಅವಧಿಯ ಅಮೆರಿಕದ ಬಾಂಡ್​​ ಗಳ ಲಿನ ಬಡ್ಡಿ ದರಗಳನ್ನು ಸರಿಸುಮಾರು 4.5ಕ್ಕೆ ಹೆಚ್ಚಿಸಲಾಗಿದೆ.

ಆರ್ಥಕ ತಜ್ಞರ ಕಳವಳ: ನಾರ್ದರ್ನ್ ಟ್ರಸ್ಟ್ ಜಾಗತಿಕ ಹಣಕಾಸು ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ಕಾರ್ಲ್ ಟ್ಯಾನೆನ್‌ಬಾಮ್, ಚಾವಟಿ ಏಟು ತುಂಬಾ ದೊಡ್ಡದಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಟ್ರಂಪ್​ ಅವರ ಈನೀತಿಯು ಗ್ರಾಹಕ, ವ್ಯಾಪಾರ ಮತ್ತು ಮಾರುಕಟ್ಟೆ ವಿಶ್ವಾಸಕ್ಕೆ ಹಾನಿಯನ್ನುಂಟು ಮಾಡಿದ್ದು, ಇದು ಈಗಲೇ ಬದಲಾಗದೇ ಇರಬಹುದು ಎಂದು ಎಚ್ಚರಿಸಿದ್ದಾರೆ.

ಮಾತುಕತೆಗೆ ಮುಂದಾದ ಯುರೋಪಿಯನ್ ಯೂನಿಯನ್: ವ್ಯಾಪಾರ ಮತ್ತು ಆರ್ಥಿಕ ಭದ್ರತೆಗಾಗಿನ ಯುರೋಪಿಯನ್ ಕಮಿಷನರ್ ಮಾರೊಸ್ ಸೆಫ್ಕೊವಿಕ್ ಅವರು ಎಕ್ಸ್​​ ಹ್ಯಾಂಡಲ್​​ ನಿಂದ ಪೋಸ್ಟ್​ ವೊಂದನ್ನು ಮಾಡಿದ್ದಾರೆ. ಅದರಲ್ಲಿ ಅವರು ಯುರೋಪಿಯನ್ ಒಕ್ಕೂಟದ ಪರವಾಗಿ, ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಮತ್ತು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರೊಂದಿಗೆ ವ್ಯಾಪಾರ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

EU ರಚನಾತ್ಮಕವಾಗಿದ್ದು, ನ್ಯಾಯಯುತ ಒಪ್ಪಂದಕ್ಕೆ ಸಿದ್ಧವಾಗಿದೆ - ಕೈಗಾರಿಕಾ ಸರಕುಗಳ ಮೇಲಿನ ನಮ್ಮ 0-ಫಾರ್-0 ಸುಂಕದ ಕೊಡುಗೆ ಮೂಲಕ ಪರಸ್ಪರ ಸಂಬಂಧವನ್ನು ಒಳಗೊಂಡಿರುತ್ತದೆ ಎಂದು ಸೆಫ್ಕೊವಿಕ್ ಹೇಳಿದ್ದಾರೆ.

ಇದನ್ನು ಓದಿ: ಅಮೆರಿಕದ ಸರಕುಗಳ ಮೇಲೆ 125ರಷ್ಟು ಪ್ರತಿಸುಂಕ: ನಾಳೆಯಿಂದಲೇ ಜಾರಿ, ನಾವು ಬಗ್ಗಲ್ಲ- ಜಗ್ಗಲ್ಲ ಎಂದ ಚೀನಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.