ETV Bharat / international

ಟ್ರಂಪ್​-ಪುಟಿನ್ ಮಹತ್ವದ​ ಮಾತುಕತೆ: 30 ದಿನಗಳ ಕದನ ವಿರಾಮಕ್ಕೆ ಒಪ್ಪಿದ ರಷ್ಯಾ - TRUMP PUTIN TALK ON UKRAINE WAR

ಉಕ್ರೇನ್​ನ ಇಂಧನ ಮತ್ತು ಮೂಲಸೌಕರ್ಯಗಳ ಮೇಲೆ 30 ದಿನ ಕದನ ವಿರಾಮ ಘೋಷಿಸಲು ರಷ್ಯಾ ಒಪ್ಪಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

trump-and-putin-agree-to-an-immediate-30-day-ceasefire-on-all-energy-infrastructure
ರಷ್ಯಾ ಅಧ್ಯಕ್ಷ ಪುಟಿನ್​ (ANI)
author img

By PTI

Published : March 19, 2025 at 10:38 AM IST

1 Min Read

ವಾಷಿಂಗ್ಟನ್(ಯುಎಸ್‌ಎ)​: ಉಕ್ರೇನ್​-ರಷ್ಯಾ ನಡುವೆ ಕದನ ವಿರಾಮ ಘೋಷಿಸುವ ಅಮೆರಿಕದ ಪ್ರಸ್ತಾಪವನ್ನು ವ್ಲಾಡಿಮಿರ್​ ಪುಟನ್​ ಒಪ್ಪಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಯುದ್ದ ಅಂತ್ಯಗೊಳಿಸುವ ಕುರಿತು ಮಂಗಳವಾರ ದೂರವಾಣಿ ಕರೆ ಮೂಲಕ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉಕ್ರೇನ್‌ನ ಇಂಧನ ಮೂಲಸೌಕರ್ಯಕ್ಕಾಗಿ 30 ದಿನಗಳ ತಕ್ಷಣದ ಸಣ್ಣ ಕದನ ವಿರಾಮಕ್ಕೆ ರಷ್ಯಾ ಒಪ್ಪಿಗೆ ಸೂಚಿಸಿದೆ.

ಉಕ್ರೇನ್​ನ ಇಂಧನ ಹಾಗೂ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸಲು ಪುಟಿನ್ ಮತ್ತು ಟ್ರಂಪ್ ನಡುವೆ ಪ್ರಾಥಮಿಕ ಒಪ್ಪಂದವಾಗಿದೆ ಎಂದು ವರದಿಯಾಗಿದೆ. ಸಾಮಾಜಿಕ ಮಾಧ್ಯಮ ಟ್ರುಥ್​ನಲ್ಲಿ ಟ್ರಂಪ್​, "ಶಾಂತಿ ಒಪ್ಪಂದಕ್ಕೆ ಅನೇಕ ಅಂಶಗಳ ಕುರಿತು ಮಾತುಕತೆ ನಡೆಸಲಾಗಿದೆ. ಇದರ ಪರಿಣಾಮ ಕದನ ವಿರಾಮ ಪ್ರಕ್ರಿಯೆ ನಡೆಸಲಾಗುವುದು" ಎಂದಿದ್ದಾರೆ.

"ರಷ್ಯಾಧ್ಯಕ್ಷರ ಜೊತೆಗಿನ ತಮ್ಮ ಮಾತುಕತೆ ಫಲಪ್ರದವಾಗಿದೆ. ಎಲ್ಲಾ ಇಂಧನ ಮತ್ತು ಮೂಲಸೌಕರ್ಯದ ಮೇಲಿನ ಕದನ ವಿರಾಮಕ್ಕೆ ರಷ್ಯಾ ಒಪ್ಪಿದೆ. ಈ ಕದನ ವಿರಾಮವನ್ನು ತ್ವರಿತಗೊಳಿಸಲು ನಾವು ಕಾರ್ಯನಿರ್ವಹಿಸುತ್ತೇವೆ. ರಷ್ಯಾ ಮತ್ತು ಉಕ್ರೇನ್​ ನಡುವಿನ ಭೀಕರ ಯುದ್ಧವನ್ನು ಕೊನೆಗೊಳಿಸಬೇಕಿದೆ. ಆಗ ನಾನು ಅಧ್ಯಕ್ಷನಾಗಿದ್ದಿದ್ದರೆ ಈ ಯುದ್ದವೇ ಪ್ರಾರಂಭವಾಗುತ್ತಿರಲಿಲ್ಲ. ಯುದ್ಧದಲ್ಲಿ ಅನೇಕ ಸೈನಿಕರು ಸಾವನ್ನಪ್ಪಿದ್ದಾರೆ. ಪುಟಿನ್​ ಮತ್ತು ಝೆಲನ್ಸ್ಕಿ ಇಬ್ಬರೂ ಯುದ್ದ ಕೊನೆಗೊಳಿಸಲು ಬಯಸಿದ್ದಾರೆ. ಈ ಪ್ರಕ್ರಿಯೆ ಇದೀಗ ಪೂರ್ಣ ಪ್ರಮಾಣದಲ್ಲಿದೆ. ಮಾನವೀಯತೆ ದೃಷ್ಟಿಯಿಂದ ನಾವು ಕೆಲಸ ಮಾಡುತ್ತೇವೆ" ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ರಷ್ಯಾದ ತೈಲದಿಂದ ಸಂಸ್ಕರಿಸಿದ 6,850 ಕೋಟಿ ರೂ. ಮೌಲ್ಯದ ಇಂಧನ ರಿಲಯನ್ಸ್​ನಿಂದ ಅಮೆರಿಕಕ್ಕೆ ರಫ್ತು; ವರದಿ

ಇದನ್ನೂ ಓದಿ: ಹಮಾಸ್​ ಗುರಿಯಾಗಿಸಿ ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ ​; 200 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.