ನ್ಯೂಯಾರ್ಕ್: ಭಾರತದ ಜೊತೆಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳ ಮಾತುಕತೆ ಉತ್ತಮವಾಗಿ ಸಾಗುತ್ತಿದ್ದು, ನವದೆಹಲಿಯ ಜೊತೆಗೆ ವಾಷಿಂಗ್ಟನ್ 'ಒಪ್ಪಂದ' ಸಾಕಾರವಾಗಲಿದೆ ಎಂದು ಭಾವಿಸಿದ್ದೇನೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್ ಅಧಿಕಾರಕ್ಕೆ ಬಂದು 100 ದಿನವಾದ ಹಿನ್ನೆಲೆಯಲ್ಲಿ ಮಿಚಿಂಗನ್ ರ್‍ಯಾಲಿಯಲ್ಲಿ ಭಾಗಿಯಾಗಿ ಶ್ವೇತಭವನಕ್ಕೆ ತೆರಳುವ ಮುನ್ನ ಮಾತನಾಡಿದ ಅವರು, ಒಪ್ಪಂದಕ್ಕೆ ಭಾರತವು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ನಾವು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಮೂರು ವಾರಗಳ ಹಿಂದೆ ಆಗಮಿಸಿದ್ದರು. ಅವರು ಒಪ್ಪಂದವನ್ನು ಮಾಡಿಕೊಳ್ಳಬೇಕು ಎಂದಿದ್ದರು. ಮುಂದೆನಾಗುತ್ತದೆ ಎಂದು ನೋಡೋಣ ಎಂದು ಟ್ರಂಪ್ ತಿಳಿಸಿದ್ದಾರೆ.
ಅಮೆರಿಕ ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ತುಂಬಾ ಸನಿಹದಲ್ಲಿದೆ. ಅಮೆರಿಕ ಏಷ್ಯಾ ವ್ಯಾಪಾರದ ಪಾಲುದಾರ ಮತ್ತು ಮೈತ್ರಿ ಹೊಂದಿದ್ದು, ಒಪ್ಪಂದ ನಡೆಸುವಲ್ಲಿ ಮುಂದೆ ಬಂದಿದೆ ಎಂದು ಖಜಾಂಚಿ ಕಾರ್ಯದರ್ಶಿ ಸ್ಕೊಟ್ ಬೆಸೆಂಟ್ ಶ್ವೇತಭವನದಲ್ಲಿ ವರದಿಗಾರರಿಗೆ ತಿಳಿಸಿದರು.
ಕಳೆದ ವಾರ ಜೆಡಿ ವ್ಯಾನ್ಸ್ ಭಾರತ ಭೇಟಿ ಕುರಿತು ಮಾತನಾಡಿದ ಅವರು, ವ್ಯಾನ್ಸ್ ಮತ್ತು ಪ್ರಧಾನಿ ಮೋದಿ ಉತ್ತಮ ಪ್ರಕ್ರಿಯೆ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದೊಂದಿಗೆ ಕೆಲವು ಘೋಷಣೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಇದೇ ವೇಳೆ, ದಕ್ಷಿಣ ಕೋರಿಯಾದ ಜೊತೆಗೆ ಒಪ್ಪಂದವನ್ನು ಎದುರು ನೋಡುತ್ತಿದ್ದು, ಜಪಾನ್ನೊಂದಿಗೂ ಮಾತುಕತೆ ಸಾಗುತ್ತಿದೆ ಎಂದರು.
ವ್ಯಾಪಾರ ಒಪ್ಪಂದ ಕುರಿತದ ಸಮಯದ ಅವಧಿ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತದೊಂದಿಗೆ ನಾವು ಒಪ್ಪಂದದ ಸನಿಹದಲ್ಲಿದ್ದೇವೆ. ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ, ಭಾರತದೊಂದಿಗೆ ಮಾತುಕತೆ ಸುಲಭ. ಭಾರತದಂತಹ ದೇಶದೊಂದಿಗೆ ಸುಂಕಕ್ಕೆ ಸಿದ್ಧವಾಗಿದ್ದು, ಅವರ ಜೊತೆ ಮಾತುಕತೆ ಸುಲಭವಾಗಿದೆ. ನವದೆಹಲಿ ಈ ನಿಟ್ಟಿನಲ್ಲಿ ಉತ್ತಮ ನಡೆ ತೋರಿದೆ ಎಂದರು.
ವಾನ್ಸ್ ಭಾರತದ ಭೇಟಿ ಸಂದರ್ಭದಲ್ಲಿ, ಅಮೆರಿಕ-ಭಾರತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಮಾತುಕತೆಗಳಲ್ಲಿ ಗಮನಾರ್ಹ ಪ್ರಗತಿ ಕಂಡಿದೆ. ವ್ಯಾಪಾರ ಒಪ್ಪಂದಗಳನ್ನು ಔಪಚಾರಿಕವಾಗಿ ಅಂತಿಮಗೊಳಿಸುವುದರ ಕುರಿತು ಘೋಷಿಸಲಾಗಿದೆ. ದ್ವಿಪಕ್ಷೀಯ ವ್ಯಾಪಾರ ಮತ್ತು ಪೂರೈಕೆ ಪರಸ್ಪರ ಪ್ರಯೋಜನಕಾರಿ ರೀತಿಯಲ್ಲಿ ಹೆಚ್ಚಿಸಲು, ಎರಡೂ ದೇಶಗಳು ಉದ್ಯೋಗ ಸೃಷ್ಟಿ ಮತ್ತು ನಾಗರಿಕರ ಯೋಗಕ್ಷೇಮವನ್ನು ಉತ್ತೇಜಿಸುವತ್ತ ಗಮನಹರಿಸಿದ ಹೊಸ ವ್ಯಾಪಾರ ಒಪ್ಪಂದವನ್ನು ಮಾತುಕತೆ ನಡೆಸಲು ಬಿಟಿಎ ಅವಕಾಶವನ್ನು ಒದಗಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಈ ವರ್ಷದ ಫೆಬ್ರವರಿಯಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ ದ್ವಿಪಕ್ಷೀಯ ಸಭೆಯ ನಂತರ ಜಂಟಿ ಹೇಳಿಕೆಯಲ್ಲಿ, ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ 2025ರ ಹೊತ್ತಿಗೆ ಪರಸ್ಪರ ಪ್ರಯೋಜನಕಾರಿ ಬಿಟಿಎಯ ಮೊದಲ ಹಂತದ ಮಾತುಕತೆ ನಡೆಸುವ ಯೋಜನೆಯನ್ನು ಘೋಷಿಸಿದ್ದರು.
ಇದನ್ನೂ ಓದಿ: ಭಾರತದ ಮೇಲೆ ಹೇರಿದ್ದ ಶೇ.26ರಷ್ಟು ಸುಂಕ ಜುಲೈ 9ರವರೆಗೆ ತಡೆಹಿಡಿದ ಅಮೆರಿಕ
ಇದನ್ನೂ ಓದಿ: ಅಮೆರಿಕ ಸುಂಕ ಎಫೆಕ್ಟಿನಿಂದ ಚೀನಾಗೆ ಪೆಟ್ಟು! ಭಾರತದಿಂದ ರಫ್ತು ಆದವು 600 ಟನ್ ಐಫೋನು!!