ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ತಕ್ಷಣವೇ ಕದನ ವಿರಾಮ ಮಾತುಕತೆ ನಡೆಸುವಂತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಎರಡು ದೇಶದ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ ಅವರು, ಕಳೆದ ಮೂರು ವರ್ಷಗಳ ಯುದ್ದಗೊಳಿಸುವ ಕುರಿತು ಚರ್ಚೆ ನಡೆಸಿದ್ದಾರೆ. ಆದರೆ, ಈ ಮಾತುಕತೆಗಳು ಯಾವುದೇ ಪ್ರಗತಿ ಕಂಡಿಲ್ಲದಂತೆ ತೋರಿದೆ.
ಕದನ ವಿರಾಮ ಸಂಬಂಧ ಎಲ್ಲಿ, ಯಾವಾಗ ಮತ್ತು ಯಾವ ಸ್ಥಳದಲ್ಲಿ ಮಾತುಕತೆ ನಡೆಯಲಿದೆ. ಹಾಗೂ ಯಾರು ಭಾಗಿಯಾಗಲಿದ್ದಾರೆ ಎಂಬ ಕುರಿತು ಸ್ಪಷ್ಟತೆ ಇಲ್ಲ. 2022 ರ ನಂತರ ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವಿನ ಮೊದಲ ನೇರ ಮಾತುಕತೆಯ ಕೆಲವು ದಿನಗಳ ನಂತರ ಟ್ರಂಪ್ ಅವರ ಘೋಷಣೆ ಹೊರಬಿದ್ದಿದೆ. ಶುಕ್ರವಾರ ಟರ್ಕಿಯಲ್ಲಿ ನಡೆದ ಮಾತುಕತೆ ಕೇವಲ ಸೀಮಿತ ಪ್ರಮಾಣದ ಕೈದಿಗಳ ವಿನಿಮಯ ಕುರಿತು ಆಗಿದ್ದು, ಯುದ್ಧ ನಿಲ್ಲಿಸುವ ಕುರಿತು ಆಗಿಲ್ಲ.
ಸುದೀರ್ಘ ಯುದ್ಧದಿಂದ ಇಬ್ಬರು ನಾಯಕರು ಹತಾಶೆಗೊಂಡಿದ್ದಾರೆ ಎಂದು ಟ್ರಂಪ್ ಈ ಕರೆಗೆ ಮುನ್ನ ತಿಳಿಸಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ನಿಜವಾಗಿಯೂ ಯುದ್ಧ ನಿಲ್ಲಿಸುವ ಆಸಕ್ತಿ ಹೊಂದಲಿ ಎಂದು ಟ್ರಂಪ್ ಒತ್ತಾಯಿಸಿದ್ದಾರೆ. ಅವರು ಈ ಬಗ್ಗೆ ಆಸಕ್ತಿ ಇಲ್ಲವಾದಲ್ಲಿ ಅಮೆರಿಕ ಈ ಪ್ರಯತ್ನದಿಂದ ದೂರ ಉಳಿಯಲಿದೆ ಎಂದು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಿಳಿಸಿದ್ದಾರೆ.
ಇದನ್ನೂ ಓದಿ: ಗೆಳೆಯ ಸಾವು, ಸದ್ಯ ಸಂಗಾತಿಯೂ ಯದ್ಧದಲ್ಲಿ ಭಾಗಿ: ಉಕ್ರೇನ್ ಸೈನಿಕರ ಪತ್ನಿಯರಿಗೆ ನಿತ್ಯ ನರಕ!
ಎರಡೂ ರಾಷ್ಟ್ರಗಳು ಷರತ್ತುಗಳ ಮೂಲಕ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬಹುದು. ಏಕೆಂದರೆ ಬೇರೆ ಯಾರಿಗೂ ತಿಳಿದಿರದ ವಿವರ ಅವರಿಗೆ ತಿಳಿದಿರುತ್ತದೆ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ಟ್ರಂಪ್, ಪುಟಿನ್ ಜೊತೆಗಿನ ಮಾತುಕತೆ ಉತ್ತಮವಾಗಿತ್ತು ಎಂದಿದ್ದಾರೆ.
ಇದಾದ ಬಳಿಕ ಓವಲ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ಪ್ರಕ್ರಿಯೆಯಲ್ಲಿ ಸಾಕಷ್ಟು ದೊಡ್ಡ ಒಣ ಪ್ರತಿಷ್ಠೆಗಳು ಇವೆ. ಆದರೆ, ಏನೋ ಒಂದು ನಡೆಯಲಿದೆ ಎಂದು ನನಗೆ ಅನ್ನಿಸುತ್ತಿದೆ. ಇದು ಸಾಧ್ಯವಾಗದೇ ಇದ್ದರೆ ನಾನು ಅದರಿಂದ ದೂರು ಸರಿಯುತ್ತೇನೆ. ಅವರು ಮುಂದುವರೆಯಲಿ. ಇದು ಯುರೋಪಿಯನ್ ಪರಿಸ್ಥಿತಿಯಾಗಿದ್ದು, ಅದು ಯುರೋಪಿಯನ್ ಪರಿಸ್ಥಿತಿಯಲ್ಲಿಯೆ ಉಳಿಯಲಿ. ಈ ವಿಚಾರವಾಗಿ ನಾವು ಮುಂದುವರೆಯಲೇಬೇಕು ಎಂದು ಕೂಡ ಪುಟಿನ್ಗೆ ಹೇಳಿದ್ದಾಗಿ ಟ್ರಂಪ್ ತಿಳಿಸಿದ್ದಾರೆ.
2022ರ ಫೆಬ್ರವರಿಯಲ್ಲಿ ಆರಂಭವಾದ ರಷ್ಯಾ ಮತ್ತು ಉಕ್ರೇನ್ ಯುದ್ದ ಕೊನೆಗೊಳಿಸಲು ಟ್ರಂಪ್ ಹರಸಾಹಸ ನಡೆಸುತ್ತಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ಈ ಸಂಘರ್ಷ ಕೊನೆಗಾಣಿಸುವುದಾಗಿ ನೀಡಿದ್ದ ಭರವಸೆಯಲ್ಲಿ ಟ್ರಂಪ್ಗೆ ಹಿನ್ನಡೆಯಾಗಿದೆ. (ಎಪಿ)
ಇದನ್ನೂ ಓದಿ: ಮಾಸ್ಕೋ ಬಳಿ ಕಾರ್ ಬಾಂಬ್ ದಾಳಿ: ರಷ್ಯಾದ ಉನ್ನತ ಮಿಲಿಟರಿ ಜನರಲ್ ಸಾವು