ETV Bharat / international

ಇದೇ ಮೊದಲ ಬಾರಿಗೆ ಅಪರೂಪದ ವಜ್ರ 'ಗೋಲ್ಕೊಂಡ ಬ್ಲೂ' ಮೇ 14 ರಂದು ಹರಾಜು - GOLCONDA BLUE DIAMOND

ವಿಶ್ವದ ಅತಿ ಅಪರೂಪದ ವಜ್ರಗಳಲ್ಲಿ ಒಂದಾದ ಗೋಲ್ಕೊಂಡ ಬ್ಲೂ ಮುಂದಿನ ತಿಂಗಳು ಹರಾಜಾಗಲಿದೆ.

ಗೋಲ್ಕೊಂಡ ಬ್ಲೂ ವಜ್ರ
ಗೋಲ್ಕೊಂಡ ಬ್ಲೂ ವಜ್ರ (ETV Bharat File)
author img

By ETV Bharat Karnataka Team

Published : April 17, 2025 at 9:06 PM IST

1 Min Read

ಲಂಡನ್ (ಬ್ರಿಟನ್​): ಭಾರತದ ಹೋಲ್ಕರ್ ರಾಜವಂಶಕ್ಕೆ ಸೇರಿದ ಅಪರೂಪದ ವಜ್ರ 'ಗೋಲ್ಕೊಂಡ ಬ್ಲೂ' ಮೇ 14 ರಂದು ಇದೇ ಮೊದಲ ಬಾರಿಗೆ ಹರಾಜಿಗೆ ಸಿದ್ಧವಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಸ್ಟಿ ಸಂಸ್ಥೆಯು 'ಮ್ಯಾಗ್ನಿಫಿಸೆಂಟ್ ಜ್ಯುವೆಲ್ಸ್' ಹೆಸರಿನಲ್ಲಿ ಜಿನೀವಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಪೇರಳೆ ಆಕಾರದ 23 ಕ್ಯಾರಟ್​​ನ ನೀಲಿ ವಜ್ರವು 3.5 ಕೋಟಿ ಡಾಲರ್​​ನಿಂದ 5 ಕೋಟಿ ಡಾಲರ್​ (298 ಕೋಟಿಯಿಂದ 426 ಕೋಟಿ ರೂಪಾಯಿ)ಗೆ ಹರಾಜಾಗಬಹುದು ಎಂದು ಅಂದಾಜಿಸಲಾಗಿದೆ.

ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಕ್ರಿಸ್ಟಿ ಸಂಸ್ಥೆಯು, ಅಪರೂಪದ ಮತ್ತು ಬೆಲೆಬಾಳುವ ವಜ್ರವಾದ 'ಗೋಲ್ಕೊಂಡ ಬ್ಲೂ' ಜೀವಮಾನದಲ್ಲಿ ಒಮ್ಮೆ ಮಾತ್ರ ಮಾರಾಟಕ್ಕೆ ಲಭ್ಯವಾಗುತ್ತದೆ. ಅದನ್ನು ಅದೃಷ್ಟ ಇರುವವರು ಮಾತ್ರ ಧಕ್ಕಿಸಿಕೊಳ್ಳಲಿದ್ದಾರೆ ಎಂದು ಹೇಳಿದೆ.

ಭಾರತ ಮೂಲದ ವಜ್ರವಿದು: ಈ ವಜ್ರವು, ಮಧ್ಯಪ್ರದೇಶದ ಇಂದೋರ್​​ನ ಹೋಳ್ಕರ್​ ರಾಜವಂಶದ ಮಹಾರಾಜ ಯಶವಂತರಾವ್​ ಹೋಳ್ಕರ್​ ಅವರಿಗೆ ಸೇರಿದ್ದಾಗಿದೆ. ಯಶವಂತರಾವ್ ಹೋಳ್ಕರ್​- ಸಂಯೋಗಿತಾಬಾಯಿ ದೇವಿ ದಂಪತಿ ವೈಭವೋಪೇತ ಜೀವನಶೈಲಿಗೆ ಹೆಸರುವಾಸಿ. ಸಂಯೋಗಿತಾಬಾಯಿ ದೇವಿ ಅವರು ಗೋಲ್ಕೊಂಡ ಬ್ಲೂ ಹಾಗೂ ಇಂದೋರ್​ ಪಿಯರ್ಸ್​ ವಜ್ರಗಳಿಂದ ಮಾಡಿದ್ದ ಹಾರ ಧರಿಸುತ್ತಿದ್ದರು.

ಪಾಶ್ಚಿಮಾತ್ಯ ಕಲೆ, ಆಭರಣಗಳ ಬಗ್ಗೆ ಅಪಾರ ಒಲವು ಹೊಂದಿದ್ದ ಯಶವಂತರಾವ್​ ಹೋಳ್ಕರ್​ ಅವರು ತಮ್ಮ ಬದುಕಿನ ಬಹುತೇಕ ದಿನಗಳನ್ನು ವಿದೇಶಗಳಲ್ಲಿಯೇ ಕಳೆದಿದ್ದರು. ಈ ವೇಳೆ ಅವರು ಈ ಗೋಲ್ಕೊಂಡ ವಜ್ರವನ್ನು ಅಮೆರಿಕದ ಪ್ರಸಿದ್ಧ ಚಿನ್ನಾಭರಣ ಸಂಸ್ಥೆ ಹ್ಯಾರಿ ವಿನ್ಸ್​ಟನ್​ 1947 ರಲ್ಲಿ ಖರೀದಿಸಿತ್ತು. ಇದೀಗ, ಚಿನ್ನಾಭರಣಗಳ ಪ್ರಸಿದ್ಧ ವಿನ್ಯಾಸಕ ಜಾರ್​ ಅವರಿಂದ ರೂಪಿಸಲ್ಪಟ್ಟ ಉಂಗುರದಲ್ಲಿ ಹೊಂದಿಸಲಾಗಿರುವ ವಜ್ರವು ಹರಾಜಾಗಲಿದೆ.

ಇದನ್ನೂ ಓದಿ: ವಿಶ್ವದ 2ನೇ ಅತಿ ದೊಡ್ಡ ವಜ್ರ ಪತ್ತೆ: ಇದರ ಬೆಲೆ ಎಷ್ಟಿರಬಹುದು ಗೊತ್ತಾ? - Second Biggest Diamond Found

ಶಿರಡಿ ಸಾಯಿಬಾಬಾಗೆ 258 ಗ್ರಾಂ ತೂಕದ ಚಿನ್ನದ ಕಿರೀಟ ದಾನ - devotee offered gold crown

ETV Bharat Logo

Copyright © 2025 Ushodaya Enterprises Pvt. Ltd., All Rights Reserved.