ETV Bharat / international

ಹಮಾಸ್​ ವಿರುದ್ಧ ಪ್ರತಿಭಟನೆಗಿಳಿದ ಪ್ಯಾಲೆಸ್ಟೈನಿಯನ್ನರು: ಯುದ್ಧ ನಿಲ್ಲಿಸುವಂತೆ ಆಗ್ರಹ - PEOPLES PROTEST AGAINST HAMAS

ತಾತ್ಕಾಲಿಕ ಯುದ್ಧ ವಿರಾಮದ ಬಳಿಕ ತಮ್ಮ ಮನೆಗಳತ್ತ ಧಾವಿಸಿದ್ದ ಪ್ಯಾಲೆಸ್ಟೈನಿಯನ್ನರು ಯುದ್ಧ ಮರು ಆರಂಭವಾಗಿದ್ದಕ್ಕೆ ಆಕ್ರೋಶಗೊಂಡಿದ್ದಾರೆ. ಹಮಾಸ್​ ವಿರುದ್ಧವೇ ಪ್ರತಿಭಟನೆ ಆರಂಭಿಸಿದ್ದಾರೆ.

ಹಮಾಸ್​ ವಿರುದ್ಧ ಪ್ರತಿಭಟನೆಗಿಳಿದ ಪ್ಯಾಲೆಸ್ಟೈನಿಯನ್ನರು
ಹಮಾಸ್​ ವಿರುದ್ಧ ಪ್ರತಿಭಟನೆಗಿಳಿದ ಪ್ಯಾಲೆಸ್ಟೈನಿಯನ್ನರು (ANI)
author img

By ETV Bharat Karnataka Team

Published : March 26, 2025 at 10:43 PM IST

2 Min Read

ಟೆಲ್ ಅವಿವ್: ಇಸ್ರೇಲ್​ ಮತ್ತು ಹಮಾಸ್​ ಉಗ್ರರ ನಡುವೆ ನಡೆಯುತ್ತಿರುವ ಯುದ್ಧವು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಕೆಲ ದಿನಗಳ ಹಿಂದಷ್ಟೇ ಎರಡೂ ರಾಷ್ಟ್ರಗಳು ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದವು. ಅದರ ಮಾತುಕತೆಗಳು ಮುಂದುವರಿಯದ ಕಾರಣ, ಮತ್ತೆ ಯುದ್ಧ ಆರಂಭವಾಗಿದೆ. ಇಸ್ರೇಲ್ ಗಾಜಾ ಪಟ್ಟಿಯಲ್ಲಿ ಮತ್ತೆ ಮಾರಣಹೋಮ ಆರಂಭಿಸಿದೆ.

ಇದರಿಂದ ತೀವ್ರ ಆಕ್ರೋಶಕ್ಕೀಡಾಗಿರುವ ಪ್ಯಾಲೆಸ್ಟೈನಿಯನ್ನರು, ಗಾಜಾ ಪಟ್ಟಿಯಲ್ಲಿ ಹಮಾಸ್​ ಉಗ್ರರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಯುದ್ಧ ಮರು ಆರಂಭವಾಗಿದ್ದಕ್ಕೆ ತೀವ್ರ ಕ್ರೋಧಗೊಂಡು ಕದನ ನಿಲ್ಲಿಸಲು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದಾರೆ.

ಹಮಾಸ್​ ವಿರುದ್ಧ ಘೋಷಣೆ: ಹಮಾಸ್​ ಉಗ್ರರ ವಿರುದ್ಧದ ಬರಹಗಳುಳ್ಳ ಫಲಕಗಳನ್ನು ಪ್ರದರ್ಶಿಸುತ್ತಾ, ಯುದ್ಧ ನಿಲ್ಲಿಸಲು ಜನರು ಆಗ್ರಹಿಸುತ್ತಿದ್ದಾರೆ. ನೂರಾರು ಪ್ಯಾಲೆಸ್ಟೈನಿಯನ್ನರು ಹಮಾಸ್​ ವಿರುದ್ಧ ಘೋಷಣೆ ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವಿಡಿಯೋ ಒಂದರಲ್ಲಿ ಕಾಣುವಂತೆ, "ಜನರು ಯುದ್ಧ ಬಯಸುತ್ತಿಲ್ಲ. ನಮಗೆ ಹಮಾಸ್ ಬೇಡ, ಅಲ್ ಜಜೀರಾ ಬೇಡ. ನಮ್ಮ ಪ್ರಾಣ ಉಳಿದರೆ ಸಾಕು ಎಂದು ಘೋಷಣೆ ಕೂಗುತ್ತಿರುವುದು ಇದೆ. ಹಮಾಸ್​ ಮತ್ತು ಇಸ್ರೇಲ್​ ನಡುವೆ ಯುದ್ಧ ಆರಂಭಗೊಂಡ 17 ತಿಂಗಳು ಗತಿಸಿದ್ದು, ಅಪಾರ ಸಾವು - ನೋವು ಸಂಭವಿಸಿದೆ. ಆದರೆ, ಈಗ ಹಮಾಸ್​ ವಿರುದ್ಧವೇ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

ಯುದ್ಧ ನಿಲ್ಲಿಸಲು ಕೂಗು: ಗಾಜಾಪಟ್ಟಿಯ ಬೀಟ್​ ಲಹಿಯಾ ನಗರದಲ್ಲಿ ಮಂಗಳವಾರ ನಡೆದ ಯುದ್ಧ ವಿರೋಧಿ ಪ್ರತಿಭಟನೆಯಲ್ಲಿ ಜನರು ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಯುದ್ಧ ನಿಲ್ಲಿಸಿ, ನಾವು ಸಾಯಲು ಬಯಸುವುದಿಲ್ಲ, ನಮ್ಮ ಮಕ್ಕಳ ರಕ್ತ ಚೆಲ್ಲಲು ಬಿಡುವುದಿಲ್ಲ ಎಂದು ಬರಹಗಳಿರುವ ಭಿತ್ತಿಪತ್ರಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು.

ಇಷ್ಟಲ್ಲದೇ, ಕೆಲ ಪ್ರತಿಭಟನಾಕಾರರು ಹಮಾಸ್​ ತೊಲಗಲಿ ಎಂಬ ಘೋಷಣೆಗಳನ್ನೂ ಕೂಗಿದರು. ಹಮಾಸ್​ ಬಂಡುಕೋರರಿಗೆ ಬೆಂಬಲಿಸುವ ಜನರನ್ನು ಪ್ರತಿಭನಾಕಾರರು ಅಲ್ಲಿಂದ ತೊಲಗಿಸುವ ದೃಶ್ಯಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದು.

ಯುದ್ಧದ ಸಾವು - ನೋವುಗಳು: 2023 ರ ಅಕ್ಟೋಬರ್ 7 ರಿಂದ ನಡೆಯುತ್ತಿರುವ ಇಸ್ರೇಲ್​- ಹಮಾಸ್​ ಯುದ್ಧ ಗಾಜಾ ಪಟ್ಟಿಯಲ್ಲಿ ಭೀಕರತೆ ಸೃಷ್ಟಿಸಿದೆ. ಇಸ್ರೇಲ್​ ಸೇನಾಪಡೆಯ ದಾಳಿಗೆ ಈವರೆಗೂ 10 ಸಾವಿರ ಮಕ್ಕಳು ಸೇರಿದಂತೆ 24 ಸಾವಿರಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. 60 ಸಾವಿರ ಮಂದಿ ಗಾಯಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಮನೆಗಳನ್ನು ಕಳೆದುಕೊಂಡವರು ಇನ್ನೂ ನಿರಾಶ್ರಿತರ ಆಶ್ರಯ ಶಿಬಿರದಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ: ಇಸ್ರೇಲ್‌ನ ಒತ್ತೆಯಾಳುಗಳನ್ನು ಬಿಡದಿದ್ದರೆ, ನಿಮ್ಮ ಕಥೆ ಮುಗಿದಂತೆ: ಹಮಾಸ್​ಗೆ ಟ್ರಂಪ್​ ಎಚ್ಚರಿಕೆ

ಮುಂದುವರೆದ ಇಸ್ರೇಲ್​-ಹಮಾಸ್ ಭೀಕರ​ ಯುದ್ಧ: ಸೆರೆಯಲ್ಲಿದ್ದಾರೆ ಒತ್ತೆಯಾಳುಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.