ETV Bharat / international

ಅಮೆರಿಕದಲ್ಲಿ ಹಮಾಸ್ ಪರ ಪ್ರಚಾರ ಆರೋಪ; ಭಾರತೀಯ ಯುವಕನ ಗಡೀಪಾರಿಗೆ ತಡೆಯಾಜ್ಞೆ - DEPORTATION OF INDIAN STUDENT

ಹಮಾಸ್ ಪರವಾಗಿ ಪ್ರಚಾರ ಮಾಡುತ್ತಿದ್ದ ಯುವಕನ ಗಡೀಪಾರಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಯುಎಸ್​ನಲ್ಲಿ ಹಮಾಸ್ ಪರ ಪ್ರಚಾರ ಆರೋಪ; ಭಾರತೀಯ ಯುವಕನ ಗಡೀಪಾರಿಗೆ ತಡೆಯಾಜ್ಞೆ
ಯುಎಸ್​ನಲ್ಲಿ ಹಮಾಸ್ ಪರ ಪ್ರಚಾರ ಆರೋಪ; ಭಾರತೀಯ ಯುವಕನ ಗಡೀಪಾರಿಗೆ ತಡೆಯಾಜ್ಞೆ (ians)
author img

By ETV Bharat Karnataka Team

Published : March 21, 2025 at 4:07 PM IST

2 Min Read

ನ್ಯೂಯಾರ್ಕ್, ಅಮೆರಿಕ: ಹಮಾಸ್ ಪರವಾಗಿ ಅಮೆರಿಕದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದಾನೆ ಎಂಬ ಆರೋಪದ ಮೇಲೆ ಫೆಡರಲ್ ಅಧಿಕಾರಿಗಳು ಬಂಧಿಸಿದ್ದ ಭಾರತೀಯ ಯುವಕನೊಬ್ಬನ ಗಡೀಪಾರಿಗೆ ಅಮೆರಿಕದ ಫೆಡರಲ್ ನ್ಯಾಯಾಧೀಶರೊಬ್ಬರು ತಡೆಯಾಜ್ಞೆ ನೀಡಿದ್ದಾರೆ.

ಪ್ರಕರಣದ ಆರೋಪಿ ಬದರ್ ಖಾನ್ ಸೂರಿ ಈತ ವಾಷಿಂಗ್ಟನ್ ಡಿಸಿಯ ಜಾರ್ಜ್ ಟೌನ್ ವಿಶ್ವವಿದ್ಯಾಲಯದ ಎಡ್ಮಂಡ್ ಎ ವಾಲ್ಷ್ ಸ್ಕೂಲ್ ಆಫ್ ಫಾರಿನ್ ಸರ್ವಿಸ್​ನಲ್ಲಿರುವ 'ಅಲ್ ವಲೀದ್ ಬಿನ್ ತಲಾಲ್ ಸೆಂಟರ್ ಫಾರ್ ಮುಸ್ಲಿಂ-ಕ್ರಿಶ್ಚಿಯನ್ ಅಂಡರ್ ಸ್ಟ್ಯಾಂಡಿಂಗ್​' ವಿಭಾಗದಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋ ಆಗಿ ಆಧ್ಯಯನ ಮಾಡುತ್ತಿದ್ದಾನೆ.

"ನ್ಯಾಯಾಲಯವು ವ್ಯತಿರಿಕ್ತ ಆದೇಶ ಹೊರಡಿಸದ ಹೊರತು ಅರ್ಜಿದಾರರನ್ನು ಅಮೆರಿಕದಿಂದ ಗಡೀಪಾರು ಮಾಡಕೂಡದು ಎಂದು ಆದೇಶಿಸಲಾಗಿದೆ" ಎಂದು ಮಾರ್ಚ್ 20 ರಂದು ಯುನೈಟೆಡ್ ಸ್ಟೇಟ್ಸ್ ಜಿಲ್ಲಾ ನ್ಯಾಯಾಧೀಶ ಪ್ಯಾಟ್ರೀಷಿಯಾ ಟಾಲಿವರ್ ಗಿಲ್ಸ್ ಆದೇಶ ನೀಡಿದ್ದಾರೆ.

ಸೂರಿ ಜಾರ್ಜ್ ಟೌನ್ ವಿಶ್ವವಿದ್ಯಾಲಯದಲ್ಲಿ ವಿದೇಶಾಂಗ ಅಧ್ಯಯನ ವಿಭಾಗದ ವಿದ್ಯಾರ್ಥಿಯಾಗಿದ್ದು, ಈತ ಹಮಾಸ್ ಪರವಾಗಿ ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾನೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಹೂದಿ ವಿರೋಧಿ ಭಾವನೆಗಳನ್ನು ಉತ್ತೇಜಿಸುತ್ತಿದ್ದಾನೆ ಎಂದು ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಹಿರಿಯ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಮಾಸ್​ನ ಹಿರಿಯ ಸಲಹೆಗಾರರಾಗಿರುವ ಪರಿಚಿತ ಅಥವಾ ಶಂಕಿತ ಭಯೋತ್ಪಾದಕನೊಂದಿಗೆ ಸೂರಿ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ಅವರು ಹೇಳಿದ್ದಾರೆ.

"ಅಮೆರಿಕದಲ್ಲಿ ಸೂರಿಯ ಚಟುವಟಿಕೆಗಳ ಕಾರಣದಿಂದ ಅವರನ್ನು ಗಡೀಪಾರು ಮಾಡಲಾಗುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಚ್ 15, 2025 ರಂದು ಆದೇಶ ಹೊರಡಿಸಿದರು." ಎಂದು ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಹೇಳಿದೆ.

ಸೂರಿ ಪರ ವಕೀಲ ಹಸನ್ ಅಹ್ಮದ್ ಮಾರ್ಚ್ 18ರಂದು ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಪ್ರಕಾರ, ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಮಾರ್ಚ್ 17 ರಂದು ಸೂರಿಯನ್ನು ಬಂಧಿಸಿ ಗಡೀಪಾರು ಮಾಡುವ ಆದೇಶ ಹೊರಡಿಸಿತ್ತು.

ತನ್ನನ್ನು ವರ್ಜೀನಿಯಾದ ಫಾರ್ಮ್ ವಿಲ್ಲೆಯಲ್ಲಿರುವ ಫಾರ್ಮ್ ವಿಲ್ಲೆ ಬಂಧನ ಕೇಂದ್ರದಲ್ಲಿ ಬಂಧಿಸಿಡಲಾಗಿತ್ತು ಎಂದು ಅರ್ಜಿ ಸಲ್ಲಿಸುವ ಸಮಯದಲ್ಲಿ ಸೂರಿ ಆರೋಪಿಸಿದ್ದರು. ಸೂರಿಯನ್ನು ಬಂಧನದಿಂದ ಬಿಡುಗಡೆ ಮಾಡಿಸಲು ತಾವು ಮತ್ತು ತಮ್ಮ ತಂಡವು ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ ಎಂದು ಸೂರಿ ಪರ ವಕೀಲರು ಹೇಳಿದ್ದರು. ನ್ಯಾಯಾಧೀಶ ಗಿಲ್ಸ್ ಅವರ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ವಕೀಲ ಅಹ್ಮದ್ ಸಿಎನ್ಎನ್​ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 'ತಿರುಮಲ ದೇವಸ್ಥಾನದಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ': ಸಿಎಂ ಚಂದ್ರಬಾಬು ನಾಯ್ಡು - TIRUMALA TEMPLE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.