ETV Bharat / international

ಬ್ರಿಕ್ಸ್​ ಸಭೆಯಲ್ಲಿ ಅಜಿತ್ ದೋವಲ್ ಭಾಗಿ: ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿಯೊಂದಿಗೆ ಮಹತ್ವದ ಸಭೆ - NSA Doval Russia Visit

ಸೇಂಟ್​ ಪೀಟರ್ಸ್​ಬರ್ಗ್​​ನಲ್ಲಿ ನಡೆಯುತ್ತಿರುವ ಬ್ರಿಕ್ಸ್​ ಸಭೆಯಲ್ಲಿ ಎನ್​ಎಸ್​ಎ ಅಜಿತ್ ದೋವಲ್ ಭಾಗಿಯಾಗಿದ್ದಾರೆ.

author img

By ANI

Published : Sep 12, 2024, 1:13 PM IST

ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಅವರು ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆ ಶೋಯಿಗು ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಅವರು ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆ ಶೋಯಿಗು ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. (ANI)

ಮಾಸ್ಕೊ(ರಷ್ಯಾ): ರಷ್ಯಾದ ಸೇಂಟ್ ಪೀಟರ್ಸ್​ಬರ್ಗ್​​ನಲ್ಲಿ ಬುಧವಾರ ನಡೆದ ಬ್ರಿಕ್ಸ್ ಎನ್ಎಸ್ಎ ಸಭೆಯ ಹೊರತಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಅವರು ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆ ಶೋಯಿಗು ಅವರೊಂದಿಗೆ ಸಭೆ ನಡೆಸಿದರು ಮತ್ತು ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಿದರು.

"ಸೆಪ್ಟೆಂಬರ್​ 11ರಂದು ಸೇಂಟ್​ ಪೀಟರ್ಸ್​ಬರ್ಗ್​ನಲ್ಲಿ ನಡೆದ ಭದ್ರತಾ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ಹೊರತಾಗಿ, ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆ ಶೋಯಿಗು ಅವರು ಎನ್ಎಸ್ಎ ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ನಡೆಸಿದರು" ಎಂದು ಭಾರತದಲ್ಲಿನ ರಷ್ಯಾ ರಾಯಭಾರ ಕಚೇರಿ 'ಎಕ್ಸ್'​ನಲ್ಲಿ ಪೋಸ್ಟ್​ ಮಾಡಿದೆ.

ಈ ಕುರಿತು ಭಾರತದಲ್ಲಿನ ರಷ್ಯಾದ ರಾಯಭಾರ ಕಚೇರಿಯು ಟೆಲಿಗ್ರಾಮ್​​ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ನವದೆಹಲಿಯು ಮಾಸ್ಕೋದ ಜಾಗತಿಕ ಸಮಾನ ಮನಸ್ಕ ಪಾಲುದಾರರಲ್ಲಿ ಒಂದಾಗಿದೆ ಎಂದು ಹೇಳಿದೆ. ಸಭೆಯಲ್ಲಿ, ರಷ್ಯಾ ಮತ್ತು ಭಾರತದ ನಡುವಿನ ಬಹು ಹಂತದ ವಿಶ್ವಾಸ ಆಧರಿತ ರಾಜಕೀಯ ಸಂವಾದದ ಬಗ್ಗೆ ವಿಶೇಷವಾಗಿ ಚರ್ಚೆ ನಡೆಸಲಾಯಿತು ಎಂದು ಅದು ತಿಳಿಸಿದೆ.

"ನವದೆಹಲಿಯು ವಿಶ್ವ ರಂಗದಲ್ಲಿ ಮಾಸ್ಕೋದ ಪ್ರಮುಖ ಸಮಾನ ಮನಸ್ಕ ಪಾಲುದಾರರಲ್ಲಿ ಒಂದಾಗಿದೆ. ಎರಡೂ ದೇಶಗಳ ಸ್ನೇಹವು ಸಮಯದ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿದೆ. ನಮ್ಮ ದೇಶಗಳು 21ನೇ ಶತಮಾನದ ಸವಾಲುಗಳನ್ನು ಜಂಟಿಯಾಗಿ ಎದುರಿಸುತ್ತಿವೆ ಎಂದು ಸೆರ್ಗೆ ಶೋಯಿಗು ಒತ್ತಿಹೇಳಿದರು. ಸಭೆಯಲ್ಲಿ, ಪರಸ್ಪರ ಹಿತಾಸಕ್ತಿಯ ವ್ಯಾಪಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು" ಎಂದು ಭಾರತದಲ್ಲಿನ ರಷ್ಯಾ ರಾಯಭಾರ ಕಚೇರಿ ಟೆಲಿಗ್ರಾಮ್​​ನಲ್ಲಿ ಶೇರ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ರಷ್ಯಾದ ಸೇಂಟ್ ಪೀಟರ್ಸ್​ಬರ್ಗ್​​ನಲ್ಲಿ ಬುಧವಾರ ನಡೆದ ಬ್ರಿಕ್ಸ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಅಜಿತ್ ದೋವಲ್ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿರುವ ರಷ್ಯಾದ ಭಾರತೀಯ ರಾಯಭಾರ ಕಚೇರಿ, ಬ್ರಿಕ್ಸ್ ಸಭೆಯ ಕೆಲ ಚಿತ್ರಗಳನ್ನು ಎಕ್ಸ್ ನಲ್ಲಿ ಹಂಚಿಕೊಂಡಿದೆ.

ಬ್ರಿಕ್ಸ್‌ ಕುರಿತು..: ರಷ್ಯಾ 2024ರ ಬ್ರಿಕ್ಸ್ ಅಧ್ಯಕ್ಷತೆಯನ್ನು ಹೊಂದಿದೆ ಎಂಬುದು ಗಮನಾರ್ಹ. ಬ್ರಿಕ್ಸ್ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡ ರಾಷ್ಟ್ರಗಳ ಅನೌಪಚಾರಿಕ ಗುಂಪಾಗಿದ್ದು, ಹೊಸ ಸದಸ್ಯ ರಾಷ್ಟ್ರಗಳಾದ ಈಜಿಪ್ಟ್, ಇರಾನ್, ಯುಎಇ, ಸೌದಿ ಅರೇಬಿಯಾ ಮತ್ತು ಇಥಿಯೋಪಿಯಾ 2023 ರಲ್ಲಿ ಗುಂಪಿಗೆ ಸೇರಿಕೊಂಡಿವೆ. 2023ರ ಜುಲೈನಲ್ಲಿ ಜೋಹಾನ್ಸ್​ಬರ್ಗ್​​ನಲ್ಲಿ ನಡೆದ 13ನೇ ಬ್ರಿಕ್ಸ್ ಎನ್ಎಸ್ಎ ಸಭೆಯಲ್ಲಿ ದೋವಲ್ ಭಾಗವಹಿಸಿದ್ದರು.

ಇದನ್ನೂ ಓದಿ: ಸೈನಿಕರಂತೆ ಗಸ್ತು ಕಾಯುವ ರೋಬೋಟ್ ತಯಾರಿಸಿದ ಆಸ್ಟ್ರೇಲಿಯಾ ಸೇನೆ - Uncrewed Robot

ETV Bharat Logo

Copyright © 2024 Ushodaya Enterprises Pvt. Ltd., All Rights Reserved.