ಲಾಸ್ ಏಂಜಲೀಸ್(ಯುಎಸ್‌ಎ): ತಾವು ವನೆಸ್ಸಾ ಟ್ರಂಪ್ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವುದಾಗಿ ಅಮೆರಿಕದ ವೃತ್ತಿಪರ ಪ್ರಸಿದ್ಧ ಗಾಲ್ಫರ್ ಟೈಗರ್ ವುಡ್ಸ್ ಹೇಳಿಕೊಂಡಿದ್ದಾರೆ.
ವನೆಸ್ಸಾ ಟ್ರಂಪ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಸೊಸೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಎರಡು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವನೆಸ್ಸಾ ಟ್ರಂಪ್ ಅವರೊಂದಿಗಿನ ಸಂಬಂಧವನ್ನು ವುಡ್ಸ್ ದೃಢಪಡಿಸಿದ್ದಾರೆ. ಆ ಫೋಟೋಗಳಿಗೆ, "ಎಲ್ಲೆಡೆ ಪ್ರೀತಿ ತುಂಬಿದೆ" ಎಂದು ಬರೆದಿದ್ದಾರೆ.
"ನೀನು ನನ್ನ ಪಕ್ಕದಲ್ಲಿದ್ದರೆ ನಮ್ಮ ಜೀವನ ಇನ್ನಷ್ಟು ಉತ್ತಮ ಅನ್ನಿಸುತ್ತದೆ. ನಮ್ಮ ಭವಿಷ್ಯದ ಪ್ರಯಾಣವನ್ನು ಒಟ್ಟಿಗೆ ನಡೆಯಲು ಎದುರು ನೋಡುತ್ತಿದ್ದೇವೆ" ಎಂದು ವುಡ್ಸ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ. ಟೈಗರ್ ವುಡ್ಸ್ ಅವರಿಗೆ ಎಕ್ಸ್ ಖಾತೆಯಲ್ಲಿ 6.4 ಮಿಲಿಯನ್ ಅನುಯಾಯಿಗಳಿದ್ದಾರೆ.
Love is in the air and life is better with you by my side! We look forward to our journey through life together. At this time we would appreciate privacy for all those close to our hearts. pic.twitter.com/ETONf1pUmI
— Tiger Woods (@TigerWoods) March 23, 2025
ಒಂದು ಫೋಟೋದಲ್ಲಿ, ಟೈಗರ್ ವುಡ್ಸ್ ಮತ್ತು ವನೆಸ್ಸಾ ಟ್ರಂಪ್ ಒಟ್ಟಿಗೆ ಪೋಸ್ ನೀಡುತ್ತಿರುವುದು ಕಂಡುಬಂದರೆ, ಎರಡನೇ ಫೋಟೋದಲ್ಲಿ, ವನೆಸ್ಸಾ ಟ್ರಂಪ್ ಅವರ ಕೈಗಳನ್ನು ಎದೆಯ ಮೇಲಿಟ್ಟುಕೊಂಡು ಉಯ್ಯಾಲೆಯಲ್ಲಿ ಮಲಗಿ ಆಕಾಶದೆಡೆಗೆ ನೋಡುತ್ತಿರುವುದನ್ನು ನೋಡಬಹುದು.
ಟೈಗರ್ ವುಡ್ಸ್ ಮತ್ತು ವನೆಸ್ಸಾ ಟ್ರಂಪ್ ಜೋಡಿ ಕಳೆದ ಕೆಲವು ಹಲವು ದಿನಗಳಿಂದ ಇದೇ ವಿಚಾರವಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದರು. ನೆಟ್ಟಿಗರ ಕುತೂಹಲಕ್ಕೂ ಕಾರಣರಾಗಿದ್ದರು. ಸದ್ಯ ಈ ಜೋಡಿ ಫೋಟೋಗಳ ಸಹಿತ ತಮ್ಮ ಖಾಸಗಿ ಜೀವನವನ್ನು ದೃಢಪಡಿಸಿದ್ದಾರೆ.
2005ರಲ್ಲಿ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರನ್ನು ಮದುವೆಯಾದ ವನೆಸ್ಸಾ ಟ್ರಂಪ್ 12 ವರ್ಷ ಸಂಸಾರ ನಡೆಸಿ 5 ಮಕ್ಕಳನ್ನು ಹೊಂದಿದ್ದರೆ, ಟೈಗರ್ ವುಡ್ಸ್ ಅವರಿಗೆ ಸ್ಯಾಮ್ ಮತ್ತು ಚಾರ್ಲಿ ಎಂಬಿಬ್ಬರು ಮಕ್ಕಳಿದ್ದಾರೆ. ಇಬ್ಬರೂ ಎಲಿನ್ ನಾರ್ಡೆಗ್ರೆನ್ ಮೂಲದವರು. ವನೆಸ್ಸಾ 2018ರಲ್ಲಿ ಜೂ.ಟ್ರಂಪ್ ಅವರಿಂದ ವಿಚ್ಛೇದನ ಪಡೆದರೆ, ವುಡ್ಸ್, 2010ರಲ್ಲಿ ಎಲಿನ್ ನಾರ್ಡೆಗ್ರೆನ್ ಅವರೊಂದಿಗಿನ ಸಂಬಂಧ ಮುರಿದುಕೊಂಡಿದ್ದರು.
ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಗೌಪ್ಯವಾಗಿಟ್ಟುಕೊಳ್ಳುತ್ತಿದ್ದ ವುಡ್ಸ್, ಈ ಸಂಬಂಧವನ್ನು ಬಹಿರಂಗವಾಗಿ ದೃಢೀಕರಿಸುವ ಫೋಟೋಗಳನ್ನು ಪ್ರಕಟಿಸಲು ಕಾರಣವೇನು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. 2013ರಲ್ಲಿ ವುಡ್ಸ್ ಮತ್ತು ಲಿಂಡ್ಸೆ ವಾನ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ದೃಢೀಕರಿಸಲು ಒಟ್ಟಿಗಿರುವ ಫೋಟೋ ಹಂಚಿಕೊಂಡಿದ್ದರು.
ಹಲವು ವಿವಾಹೇತರ ಸಂಬಂಧಗಳನ್ನು ಹೊಂದಿದ್ದ ವುಡ್ಸ್, 2010ರ ಎಲಿನ್ ನಾರ್ಡೆಗ್ರೆನ್ ಅವರೊಂದಿಗಿನ ಸಂಬಂಧವನ್ನು ಮುಗಿಸಿದ ನಂತರ ಅವರು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದ ಏಕೈಕ ಸಂಬಂಧ ಎರಿಕಾ ಹರ್ಮನ್ ಅವರೊಂದಿಗೆ ಆಗಿತ್ತು. ಇದು ಸುಮಾರು ಏಳು ವರ್ಷಗಳ ಕಾಲ ಮುಂದುವರಿದು 2022ರಲ್ಲಿ ವಿಚ್ಛೇದನ ಪಡೆದಿದ್ದರು. ಹರ್ಮನ್ ಅಂತಿಮವಾಗಿ ಟೈಗರ್ ವುಡ್ಸ್ ಮತ್ತು ವಾಸಿಸುತ್ತಿದ್ದ ಅವರ ದಕ್ಷಿಣ ಫ್ಲೋರಿಡಾ ಎಸ್ಟೇಟ್ನಲ್ಲಿ ಜೀವನ ನಡೆಸಲು ಆರಂಭಿಸಿದರು.