ETV Bharat / international

ಲಂಡನ್​ನಲ್ಲಿ ಭಾರಿ ಬೆಂಕಿ ಅವಘಡ: ಹೀಥ್ರೋ ಏರ್ಪೋರ್ಟ್‌ ಬಂದ್; ಸಾವಿರಾರು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ - HEATHROW AIRPORT

ಲಂಡನ್‌ನ ಹೀಥ್ರೋ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಬಂದ್​ ಮಾಡಲಾಗಿದೆ.

Londons Heathrow Airport Closed Due To Fire Causing Power Outage
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : March 21, 2025 at 12:01 PM IST

1 Min Read

ಲಂಡನ್​(ಯು.ಕೆ): ಲಂಡನ್​ನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಭಾರಿ ಪ್ರಮಾಣದ ಬೆಂಕಿ ಅವಘಡ ಸಂಭವಿಸಿದೆ. ನಗರದ ಪಶ್ಚಿಮ ಭಾಗದಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಿದ್ದು, 16,000 ಮನೆಗಳೂ ಸೇರಿದಂತೆ ವಿಮಾನ ನಿಲ್ದಾಣದಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ 150 ಜನರನ್ನು ಸ್ಥಳಾಂತರಿಸಲಾಗಿದೆ.

ಶುಕ್ರವಾರ ಬೆಳಗ್ಗೆ (ಭಾರತೀಯ ಕಾಲಮಾನ) ವಿಮಾನ ನಿಲ್ದಾಣದಲ್ಲಿ ವಿದ್ಯುತ್​ ಅವಘಡದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಯಾರೂ ಕೂಡ ಇಲ್ಲಿಂದ ಪ್ರಯಾಣಿಸದಂತೆ ಸಲಹೆ ನೀಡಲಾಯಿತು.

ಪ್ರಯಾಣಿಕರು ಮತ್ತು ಸಹೋದ್ಯೋಗಿಗಳ ಸುರಕ್ಷತೆ ನಿರ್ವಹಣೆ ಉದ್ದೇಶದಿಂದ ವಿಮಾನ ನಿಲ್ದಾಣವನ್ನು ಮಾರ್ಚ್​ 21ರಂದು ರಾತ್ರಿ ಗಂಟೆ 11.59ಯವರೆಗೆ ಮುಚ್ಚಲಾಗುವುದು ಎಂದು ಏರ್​ಪೋರ್ಟ್​ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ವಕ್ತಾರರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, "ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಯಾವಾಗ ವಿದ್ಯುತ್​ ಸಂಪರ್ಕ ಮರುಸ್ಥಾಪನೆಯಾಗಲಿದೆ ಎಂದು ತಿಳಿದಿಲ್ಲ. ಪರಿಸ್ಥಿತಿ ನಿಯಂತ್ರಿಸಲು ಎಲ್ಲಾ ಪ್ರಯತ್ನ ನಡೆಯುತ್ತಿದೆ" ಎಂದು ಹೇಳಿದರು.

ವಿಮಾನ ನಿಲ್ದಾಣ ಬಂದ್‌ ಮಾಡಿರುವುದರಿಂದ ಸಾವಿರಾರು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.

ದಕ್ಷಿಣ ಮತ್ತು ಸೆಂಟ್ರಲ್​ ಇಂಗ್ಲೆಡ್​​ನ ನಾಲ್ಕು ಮಿಲಿಯನ್​ ಮನೆಗಳಿಗೆ ವಿದ್ಯುತ್​ ಪೂರೈಕೆ ಮಾಡುವ ಸ್ಕಾಟಿಶ್​ ಮತ್ತು ಸದರ್ನ್​ ಎಲೆಕ್ಟ್ರಿಸಿಟಿ ನೆಟ್​ವರ್ಕ್​, ಹಲವು ಪ್ರದೇಶದಲ್ಲಿ ತುರ್ತು ಸೇವೆಗಳನ್ನು ಪೂರೈಸುವ ಕಾರ್ಯ ಸಾಗುತ್ತಿದೆ ಎಂದು ಹೇಳಿದೆ.

ಲಂಡನ್​ ಫೈರ್​​ ಬ್ರಿಗೇಡ್​ ವರದಿ ಪ್ರಕಾರ, ಟ್ರಾನ್ಸ್​ಫಾರ್ಮರ್‌ನೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಇದು ದೊಡ್ಡ ಪ್ರಮಾಣದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. 10 ಅಗ್ನಿಶಾಮಕದಳದ ವಾಹನ ಮತ್ತು ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ದಟ್ಟ ಹೊಗೆ ನಿರ್ಮಾಣವಾಗಿರುವ ಕಾರಣ ಈ ಪ್ರದೇಶದ ಜನರು ಮನೆ ಮತ್ತು ಕಿಟಕಿಗಳ ಬಾಗಿಲು ಬಂದ್​ ಮಾಡುವಂತೆ ಸೂಚಿಸಲಾಗಿದೆ.

ಹೀಥ್ರೂ ಯುಕೆಯ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು, ಪ್ರತಿನಿತ್ಯ ಇಲ್ಲಿಂದ 1,300ಕ್ಕೂ ಹೆಚ್ಚು ವಿಮಾನಗಳ ಹಾರಾಟ ನಡೆಯುತ್ತದೆ.

ಇದನ್ನೂ ಓದಿ: ವಿಶ್ವದ ಅತ್ಯಂತ ಸುಖಿ ದೇಶ ಯಾವುದು? ಸಂತೋಷ ಸೂಚ್ಯಂಕದಲ್ಲಿ ಭಾರತಕ್ಕೆಷ್ಟು ಸ್ಥಾನ?

ಇದನ್ನೂ ಓದಿ: ಸುನೀತಾ ವಿಲಿಯಮ್ಸ್ ಶೌರ್ಯಕ್ಕೆ ಅಭೂತಪೂರ್ವ ಮೆಚ್ಚುಗೆ: ಛಲದಿಂದ ಮುನ್ನಡೆದ ಮಹಿಳಾ ಗಗನಯಾತ್ರಿ ಬದುಕು ಎಲ್ಲರಿಗೂ ಮಾದರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.