ETV Bharat / international

ಹಮಾಸ್​ ನೂತನ ಮುಖ್ಯಸ್ಥ ಸಿನ್ವರ್​ ಗಾಜಾದಲ್ಲಿ ಅಡಗಿರುವ ಶಂಕೆ: ಇಸ್ರೇಲ್​ನಿಂದ ತೀವ್ರ ಹುಡುಕಾಟ - Israel Hamas War

author img

By IANS

Published : Aug 8, 2024, 12:50 PM IST

ಹಮಾಸ್​ನ ನೂತನ ಮುಖ್ಯಸ್ಥ ಯಾಹ್ಯಾ ಸಿನ್ವರ್​ಗಾಗಿ ಇಸ್ರೇಲ್ ತೀವ್ರ ಹುಡುಕಾಟ ನಡೆಸಿದೆ.

ಹಮಾಸ್​ ನೂತನ ರಾಜಕೀಯ ಮುಖ್ಯಸ್ಥ ಯಾಹ್ಯಾ ಸಿನ್ವರ್
ಹಮಾಸ್​ ನೂತನ ರಾಜಕೀಯ ಮುಖ್ಯಸ್ಥ ಯಾಹ್ಯಾ ಸಿನ್ವರ್ (IANS)

ಟೆಲ್ ಅವೀವ್ : ಹಮಾಸ್​ ಉಗ್ರಗಾಮಿ ಸಂಘಟನೆಯ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರನ್ನು ಇರಾನ್​ನಲ್ಲಿ ದಾಳಿ ನಡೆಸಿ ಕೊಂದ ನಂತರ ಇಸ್ರೇಲ್, ಈಗ ಆ ಸ್ಥಾನಕ್ಕೆ ನೇಮಕವಾಗಿರುವ ಮತ್ತೋರ್ವ ಹಮಾಸ್​ ನಾಯಕ ಯಾಹ್ಯಾ ಸಿನ್ವರ್​ನನ್ನು ಹುಡುಕಲು ಶತಪ್ರಯತ್ನ ಮಾಡುತ್ತಿದೆ. ಗಾಜಾದಲ್ಲಿರುವ ತನ್ನ ಜಾಲದ ಮೂಲಕ ಸಿನ್ವರ್​ ಬಗ್ಗೆ ಇಸ್ರೇಲ್ ಗುಪ್ತಚರ ಇಲಾಖೆ ಸಾಧ್ಯವಾದಷ್ಟು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದೆ.

ಸಿನ್ವರ್​ನನ್ನು ಹುಡುಕಿ ಕೊಲ್ಲುವುದಾಗಿ ಇಸ್ರೇಲ್​ನ ಉನ್ನತ ನಾಯಕರಲ್ಲಿ ಒಬ್ಬರಾದ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಪುನರುಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಗ್ಯಾಲಂಟ್​ ಅವರು ಮೊಸಾದ್ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಮತ್ತು ಶಿನ್ ಬೆಟ್ ಮುಖ್ಯಸ್ಥ ರೋನನ್ ಬಾರ್ ಅವರನ್ನು ಭೇಟಿಯಾಗಿ ಸಿನ್ವರ್​ನನ್ನು ಆದಷ್ಟು ಬೇಗ ನಿರ್ಮೂಲನೆ ಮಾಡುವ ತುರ್ತು ಅಗತ್ಯವನ್ನು ವಿವರಿಸಿದರು.

ಯಾವುದೇ ಬೆಲೆ ತೆತ್ತಾದರೂ ಸರಿ ಯಾಹ್ಯಾ ಸಿನ್ವರ್​ನನ್ನು ಹುಡುಕಿ ಕೊಲ್ಲಲಾಗುವುದು ಎಂದು ಈ ಹಿಂದೆ ರಕ್ಷಣಾ ಸಚಿವ ಯೋವ್ ಗ್ಯಾಲಂಟ್​ ಸಾರ್ವಜನಿಕವಾಗಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

"ಯಾಹ್ಯಾ ಸಿನ್ವರ್ ಓರ್ವ ಭಯೋತ್ಪಾದಕ. ಆತ ಅಕ್ಟೋಬರ್ 7ರಂದು ನಡೆದ ಇತಿಹಾಸದ ಅತ್ಯಂತ ಕ್ರೂರ ಭಯೋತ್ಪಾದಕ ದಾಳಿಗೆ ಕಾರಣಕರ್ತನಾಗಿದ್ದಾನೆ. ಮೊಹಮ್ಮದ್ ದೀಫ್ ಮತ್ತು ಇತರ ಮೃತ ಭಯೋತ್ಪಾದಕರು ಹೋದಲ್ಲಿಯೇ ಆತನೂ ಹೋಗಲಿದ್ದಾನೆ. ಆತನನ್ನು ಅಲ್ಲಿಗೆ ಕಳುಹಿಸಲು ನಾವು ಸಿದ್ಧತೆ ನಡೆಸುತ್ತಿದ್ದೇವೆ" ಎಂದು ಸಿನ್ವರ್ ಅವರನ್ನು ಹಮಾಸ್ ರಾಜಕೀಯ ಮುಖ್ಯಸ್ಥರನ್ನಾಗಿ ಘೋಷಿಸಿದ ನಂತರ ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಪತ್ರಿಕಾ ಹೇಳಿಕೆಯಲ್ಲಿ ಘೋಷಿಸಿದ್ದಾರೆ.

ಯಾಹ್ಯಾ ಸಿನ್ವರ್ ಖಾನ್ ಯೂನಿಸ್ ಪ್ರದೇಶ ಅಥವಾ ರಫಾ ಪ್ರದೇಶದಲ್ಲಿನ ಭೂಗತ ಸುರಂಗ ಜಾಲದಲ್ಲಿ ಅಡಗಿದ್ದಾನೆ ಮತ್ತು ತನ್ನ ಸುತ್ತಲೂ ಇಸ್ರೇಲಿ ಒತ್ತೆಯಾಳುಗಳನ್ನು ರಕ್ಷಣೆಗಾಗಿ ಇಟ್ಟುಕೊಂಡಿದ್ದಾನೆ ಎಂದು ಇಸ್ರೇಲ್ ಗುಪ್ತಚರ ಸಂಸ್ಥೆಗಳು ಈಗಾಗಲೇ ವರದಿ ಮಾಡಿವೆ.

ಏತನ್ಮಧ್ಯೆ, ಟೆಹ್ರಾನ್​ನಲ್ಲಿ ಹಮಾಸ್ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಮತ್ತು ಬೈರುತ್​ನಲ್ಲಿ ಆಗಸ್ಟ್ 1 ರಂದು ಹಿಜ್ಬುಲ್ಲಾ ಮಿಲಿಟರಿ ಮುಖ್ಯಸ್ಥ ಫುವಾದ್ ಶುಕರ್ ಅವರ ಹತ್ಯೆಯ ನಂತರ ಇಸ್ರೇಲ್ ಸಂಭಾವ್ಯ ಇರಾನ್ ದಾಳಿಯನ್ನು ಎದುರಿಸಲು ತನ್ನ ರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ : ಆಗಸ್ಟ್​ 23ರಂದು ಮೋದಿ ಉಕ್ರೇನ್​ಗೆ ಭೇಟಿ: ಕದನವಿರಾಮ ಮಾತುಕತೆಯ ಸಾಧ್ಯತೆಯತ್ತ ವಿಶ್ವದ ಗಮನ - PM Modi To Visit Ukraine

ETV Bharat Logo

Copyright © 2024 Ushodaya Enterprises Pvt. Ltd., All Rights Reserved.