ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ಡಿಸ್ನಿಲ್ಯಾಂಡ್ಗೆ ಪ್ರವಾಸಕ್ಕೆ ತೆರಳಿದ್ದ ಭಾರತೀಯ ಮೂಲದ ಮಹಿಳೆಯನ್ನು 11 ವರ್ಷದ ಮಗನನ್ನು ಕೊಲೆ ಮಾಡಿದ ಆರೋಪದಲ್ಲಿ ಸಾಂತಾ ಅನಾ ಪೊಲೀಸರು ಬಂಧಿಸಿದ್ದಾರೆ. 48 ವರ್ಷದ ಸರಿತಾ ರಾಮರಾಜು ಬಂಧಿತ ಮಹಿಳೆ.
ಮಾರ್ಚ್ 19ರಂದು ಬೆಳಗ್ಗೆ 9.12 ರ ಸುಮಾರಿಗೆ ಸಾಂತಾ ಅನಾ ಪೊಲೀಸ್ ಠಾಣೆ ದೂರವಾಣಿಗೆ ಮಹಿಳೆಯೊಬ್ಬರು ಕರೆ ಮಾಡಿ, ಸಾಂತಾ ಅನಾದಲ್ಲಿರುವ ಲಾ ಕ್ವಿಂಟಾ ಇನ್ ಆ್ಯಂಡ್ ಸೂಟ್ಸ್ ಮೋಟೆಲ್ನ ಕೋಣೆಯಲ್ಲಿ ತಮ್ಮ ಮಗನನ್ನು ಇರಿದು ಕೊಂದಿರುವುದಾಗಿ ಹಾಗೂ ಜೊತೆಗೆ ತಾವು ಅಪರಿಚಿತ ವಸ್ತುವನ್ನು ಸೇವಿಸಿರುವುದಾಗಿ ತಿಳಿಸಿದರು.
#SantaAnaPD #PressRelease - Arrest Made in Homicide Investigation
— SantaAnaPD (@SantaAnaPD) March 20, 2025
Arrestee: Saritha Ramaraju (48) Irvine
SANTA ANA, Calif. (March 20, 2025)—Santa Ana Police have arrested a 48-year-old woman for stabbing and killing her child.
On Wednesday, March 19, 2025, at approximately… pic.twitter.com/SgtZH9MQ8W
ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸ್ ಅಧಿಕಾರಿಗಳು, ಇರ್ವಿನ್ನ 48 ವರ್ಷದ ಸರಿತಾ ರಾಮರಾಜು ಅವರನ್ನು ಮೋಟೆಲ್ ಹಜಾರದಲ್ಲಿ ಬಂಧಿಸಿದರು. ನಂತರ ಮಹಿಳೆಯನ್ನು ಆರೋಗ್ಯ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪೊಲೀಸರು ಹತ್ತಿರದ ಹೋಟೆಲ್ ಕೋಣೆಯಲ್ಲಿ ಪರಿಶೀಲಿಸಿದ್ದು, ಕೋಣೆಯಲ್ಲಿ ಸ್ಪಷ್ಟವಾದ ಇರಿತದ ಗಾಯಗಳಾಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿ 11 ವರ್ಷದ ಬಾಲಕನನ್ನು ಗಮನಿಸಿದರು. ಆರೆಂಜ್ ಕೌಂಟಿ ಅಗ್ನಿಶಾಮಕ ಪ್ರಾಧಿಕಾರದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದರು.
ಮಾರ್ಚ್ 20 ರಂದು ಸರಿತಾ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ, ದಂಡ ಸಂಹಿತೆ 187(a)–ಮರ್ಡರ್, PC 273(a)ರ–ಮಕ್ಕಳಿಗೆ ಅಪಾಯ, PC 206ರ ಚಿತ್ರಹಿಂಸೆ, ಮತ್ತು PC 205ರ (ಅಗ್ರೇವೇಟೆಡ್ ಮೇಹೆಮ್- PC 205- Aggravated Mayhem) ಆರೋಪಗಳ ಮೇಲೆ ಸಾಂತಾ ಅನಾ ಅವರ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಲಾಯಿತು. ತನಿಖಾ ತಂಡ ಈ ಬಗ್ಗೆ ಹೆಚ್ಚಿನ ಸಾಕ್ಷಿಗಳನ್ನು ಪತ್ತೆಹಚ್ಚುವಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಾಂತಾ ಅನಾ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲಾ ಆರೋಪಗಳು ಸಾಬೀತಾದರೆ ಆಕೆಗೆ ಗರಿಷ್ಠ 26 ವರ್ಷಗಳವರೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗುವುದು ಎಂದು ಕ್ಯಾಲಿಫೋರ್ನಿಯಾದ ಆರೆಂಜ್ ಕೌಂಟಿಯ ಜಿಲ್ಲಾ ವಕೀಲರ ಕಚೇರಿ ಶುಕ್ರವಾರ ಹೇಳಿಕೆ ನೀಡಿದೆ.
2018ರಲ್ಲಿ ಸರಿತಾ ಅವರು ಬಾಲಕನ ತಂದೆಗ ವಿಚ್ಛೇದನ ನೀಡಿದ್ದರು. ಹಾಗಾಗಿ ತಮ್ಮ ಮಗನ ಕಸ್ಟಡಿ ಭೇಟಿಗಾಗಿ ಸರಿತಾ ಅವರು ಮಗನೊಂದಿಗೆ ಸಾಂತಾ ಅನಾದಲ್ಲಿರುವ ಹೋಟೆಲ್ನಲ್ಲಿ ತಂಗಿದ್ದರು. ಈ ಭೇಟಿಯ ಸಮಯಕ್ಕಾಗಿ ತಮಗಾಗಿ ಹಾಗೂ ತಮ್ಮ ಮಗನಿಗಾಗಿ ಡಿಸ್ನಿಲ್ಯಾಂಡ್ಗೆ ಮೂರು ದಿನಗಳ ಪಾಸ್ಗಳನ್ಜು ಖರೀದಿಸಿದ್ದರು.
ಮಾರ್ಚ್ 19ರಂದು ಸರಿತಾ ಅವರು ಮೋಟೆಲ್ನಿಂದ ಹೊರಗಡೆ ಹೋಗಿ ಮಗನನ್ನು ಅವನ ತಂದೆಗೆ ಹಿಂದಿರುಗಿಸಬೇಕಾಗಿತ್ತು. ಆದರೆ ಅದಕ್ಕೂ ಮೊದಲು ಮಹಿಳೆ 911ಗೆ ಕರೆ ಮಾಡಿ, ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳಲು ಮಾತ್ರೆಗಳನ್ನು ಸೇವಿಸಿರುವುದಾಗಿ ವರದಿ ಮಾಡಿದ್ದರು.
ಸಾಂತಾ ಅನಾ ಪೊಲೀಸರು ಮೋಟೆಲ್‌ಗೆ ಆಗಮಿಸಿದಾಗ ಡಿಸ್ನಿಲ್ಯಾಂಡ್ ಸ್ಮಾರಕಗಳ ನಡುವೆ ಇರುವ ಕೋಣೆಯಲ್ಲಿ ಹಾಸಿಗೆಯ ಮೇಲೆ ಬಾಲಕ ಮೃತಪಟ್ಟಿರುವುದು ಕಂಡುಬಂದಿದೆ. ಆ ಬಾಲಕ ಹಲವು ಗಂಟೆಗಳ ಹಿಂದೆಯೇ ಸಾವನ್ನಪ್ಪಿರುವುದು ಕಂಡು ಬಂದಿದ್ದು, ನಂತರ ಅವನ ತಾಯಿ 911 ಗೆ ಕರೆ ಮಾಡಿದ್ದಾರೆ. ಮೋಟೆಲ್ ಕೋಣೆಯೊಳಗೆ ಚಾಕು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರಿತಾ ಹಾಗೂ ಅವರ ಪತಿ ಪ್ರಕಾಶ್ ರಾಜು ನಡುವೆ ಕಳೆದ ವರ್ಷದಿಂದ ಮಗನ ಕಸ್ಟಡಿ ಹೋರಾಟ ನಡೆಯುತ್ತಿತ್ತು ಎಂದು NBC ಲಾಸ್‌ನಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಮೀರತ್ ಕೊಲೆ ಪ್ರಕರಣದ ಮತ್ತೊಂದು ರಹಸ್ಯ ಬಯಲು: ಗಂಡನನ್ನು ಕೊಲೆ ಮಾಡಿ ಲವರ್ ಜತೆ ಮನಾಲಿಗೆ ತೆರಳಿದ್ದ ಹೆಂಡತಿ!