ಟೆಲ್ ಅವಿವ್, ಇಸ್ರೇಲ್: ವಾರದ ರಜೆಯ ಮೂಡ್ ನಲ್ಲಿದ್ದ ಇಸ್ರೇಲಿಗಳ ಮೇಲೆ ಭಾನುವಾರ ಮಧ್ಯಾಹ್ನ ಹೌತಿ ಬಂಡುಕೋರರು ಯೆಮೆನ್‌ನಲ್ಲಿರುವ ತಮ್ಮ ನೆಲೆಗಳಿಂದ ಇಸ್ರೇಲ್‌ನ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಹೌತಿ ಬಂಡುಕೋರರು ಹಾರಿದ ಎರಡೂ ಕ್ಷಿಪಣಿಳನ್ನು ಇಸ್ರೇಲ್ ರಕ್ಷಣಾ ಪಡೆ IDF ಹೊಡೆದುರುಳಿಸಿದೆ.
ಮತ್ತೊಂದು ಕಡೆ ಯೆಮೆನ್ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ, ಡಜನ್ ಗಟ್ಟಲೆ ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭಾನುವಾರ ಸಂಜೆ ಯೆಮೆನ್ ನಲ್ಲಿ ಇರಾನ್ ಬೆಂಬಲಿತ ಹೌತಿಗಳು ಇಸ್ರೇಲ್ ಮೇಲೆ ಹಾರಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ವಾಯು ರಕ್ಷಣಾ ಪಡೆಗಳು ತಡೆದವು ಎಂದು ಇಸ್ರೇಲ್ ನ ಮಿಲಿಟರಿ ತಿಳಿಸಿದೆ.
ಒಂದು ಸ್ಡಾಟ್ ಮಿಚಾ ಏರ್‌ಬೇಸ್ ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದ್ದರೆ, ಇನ್ನೊಂದು ಬೆನ್ ಗುರಿಯನ್ ವಿಮಾನ ನಿಲ್ದಾಣವನ್ನು ಗುರಿಯಾಗಿರಿಸಿಕೊಂಡು ಹೌತಿಗಳು ದಾಳಿ ನಡೆಸಿದ್ದರು. ಆದರೆ ಇಸ್ರೇಲ್ ರಕ್ಷಣಾ ವ್ಯವಸ್ಥೆ ಅವುಗಳನ್ನು ಆಕಾಶದಲ್ಲಿ ಪುಡಿಗಟ್ಟಿವೆ. ಕ್ಷಿಪಣಿ ದಾಳಿಯಲ್ಲಿ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಆದರೂ ಪ್ರತಿಬಂಧಕದಿಂದ ಕ್ಷಿಪಣಿಗಳು ಸಿಡಿದ ಚೂರುಗಳು ಪಶ್ಚಿಮ ದಂಡೆಯ ಹೆಬ್ರಾನ್ ಪ್ರದೇಶದಲ್ಲಿ ಬಿದ್ದಿವೆ ಎಂದು ವರದಿಯಾಗಿದೆ.
ಹೌತಿಗಳ ಕ್ಷಿಪಣಿಗಳು ಇಸ್ರೇಲ್ ನ ವಾಯು ಪರದೆಯನ್ನು ತಲುಪುತ್ತಿದ್ದಂತೆ, ಮಧ್ಯ ಇಸ್ರೇಲ್, ಜೆರುಸಲೆಮ್ ಮತ್ತು ಕೆಲವು ವೆಸ್ಟ್ ಬ್ಯಾಂಕ್ ವಸಾಹತುಗಳಲ್ಲಿ ಸೈರನ್‌ಗಳು ಮೊಳಗಿದವು. ಮಾರ್ಚ್ 18 ರಿಂದ ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ IDF ತನ್ನ ಆಕ್ರಮಣ ಪುನರಾರಂಭಿಸಿದ ಬಳಿಕ ಹೌತಿಗಳು ಇಸ್ರೇಲ್ ಮೇಲೆ 20 ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಹಲವಾರು ಡ್ರೋನ್‌ಗಳನ್ನು ಉಡಾಯಿಸಿದ್ದಾರೆ. ಅರ್ಧದಷ್ಟು ಕ್ಷಿಪಣಿಗಳು ಮಾತ್ರ ಇಸ್ರೇಲ್‌ನಲ್ಲಿ ಸೈರನ್‌ಗಳನ್ನು ಹೊಡೆದವು ಮತ್ತು ತಡೆಹಿಡಿಯಲ್ಪಟ್ಟವು.
ಇಸ್ರೇಲಿ ಹಡಗುಗಳನ್ನು ಗುರಿಯಾಗಿಸಿಕೊಂಡು ಹೌತಿ ಬಂಡುಕೋರರು ದಾಳಿ ನಡೆಸಿದ್ದರಿಂದ ಅಮೆರಿಕ ಮಿಲಿಟರಿ ಮಾರ್ಚ್ 15 ರಂದು ವೈಮಾನಿಕ ದಾಳಿಯ ತೀವ್ರವಾದ ಕಾರ್ಯಾಚರಣೆ ಪ್ರಾರಂಭಿಸಿದೆ.
ಹೌತಿಗಳು 100 ಕ್ಕೂ ಹೆಚ್ಚು ವ್ಯಾಪಾರಿ ಹಡಗುಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್‌ಗಳೊಂದಿಗೆ ದಾಳಿ ನಡೆಸಿದ್ದಾರೆ. 2023 ರ ನವೆಂಬರ್‌ನಿಂದ ಈ ವರ್ಷದ ಜನವರಿವರೆಗೆ ಹೌತಿಗಳು ನಾಲ್ಕು ನಾವಿಕರು ಕೊಂದು ಹಾಕಿದ್ದಾರೆ. ಅಷ್ಟೇ ಅಲ್ಲ ಹೌತಿ ಬಂಡುಕೋರರು ಅಮೆರಿಕದ ಯುದ್ಧನೌಕೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿಗಳನ್ನು ನಡೆಸುತ್ತಿದ್ದಾರೆ. ಇವರನ್ನು ಮಟ್ಟ ಹಾಕಲು ಅಮೆರಿಕ ಸಹ ನಿರಂತರ ದಾಳಿಗಳನ್ನು ಮುಂದುವರೆಸಿದೆ.
ಇದನ್ನು ಓದಿ: ರಷ್ಯಾದಿಂದ ಉಕ್ರೇನ್ ಮೇಲೆ ಮಿಸೈಲ್ ದಾಳಿ ; 32 ಮಂದಿಯ ಮಾರಣಹೋಮಕ್ಕೆ ಝಲೆನ್ಸ್ಕಿ ಕಿಡಿ