ETV Bharat / international

ಏನಿದು ಕಾನ್ಕ್ಲೇವ್​?: ಮುಂದಿನ ಕ್ಯಾಥೋಲಿಕ್​ ಧರ್ಮಗುರು ಆಯ್ಕೆಗೆ ನಡೆಯುವ ರಹಸ್ಯ ಪ್ರಕ್ರಿಯೆ ಇದು - WHAT IS A CONCLAVE

ಪೋಪ್​ ಆಯ್ಕೆ ರಹಸ್ಯವಾಗಿ ನಡೆಯುವ ಪ್ರಕ್ರಿಯೆ. ಈ ಮತದಾನ ಪೂರ್ಣ ಆಗುವವರೆಗೆ ಕಾರ್ಡಿನಲ್​ಗಳು ಸಾಮಾಜಿಕ ಸಂಪರ್ಕವನ್ನು ಕಡಿದುಕೊಳ್ಳುತ್ತಾರೆ.

explained-what-is-a-conclave-what-to-know-about-the-secretive-process-to-elect-the-next-pope
ಕಾನ್ಕ್ಲೇವ್​ಗೆ ಸಿದ್ಧತೆ (AP)
author img

By ETV Bharat Karnataka Team

Published : April 29, 2025 at 5:22 PM IST

4 Min Read

ವ್ಯಾಟಿಕನ್​ ಸಿಟಿ: ಮುಂದಿನ ಪೋಪ್​ ಆಯ್ಕೆಯ ಚಟುವಟಿಕೆಗಳು ವ್ಯಾಟಿಕನ್​ ಸಿಟಿಯಲ್ಲಿ ಗರಿಗೆದರಿವೆ. ಅತ್ಯಂತ ರಹಸ್ಯವಾಗಿ ಪೋಪ್​ ಆಯ್ಕೆ ನಡೆಯುತ್ತದೆ. ಹೊಸ ಪೋಪ್​ ಆಯ್ಕೆಗಾಗಿ ನಡೆಯುವ ಕಾರ್ಡಿನಲ್​ಗಳ ನಿರಂತರ ಸಭೆಗಳ ಕಾನ್ಕ್ಲೇವ್​ ಶತಮಾನದಷ್ಟು ಹಳೆಯ ಚುನಾವಣಾ ಪದ್ಧತಿಯಾಗಿದೆ. ಕಾನ್ ಕ್ಲೇವ್​​​ ಎಂಬ ಪದ ಇಟಾಲಿ ಮೂಲ ಹೊಂದಿದೆ.

ಪೋಪ್​ ಆಯ್ಕೆಯ ಸಂಭಾವ್ಯರ ಪಟ್ಟಿಯಲ್ಲಿರುವ ಕಾರ್ಡಿನಲ್​ಗಳು ಮತದಾನ ಪ್ರಕ್ರಿಯೆಗೆ ಒಳಗಾಗುವ ಮುನ್ನ ಹಾಗೂ ಮುಗಿಯುವವರೆಗೆ ಯಾವುದೇ ಸಾಮಾಜಿಕ ಸಂಪರ್ಕದಲ್ಲಿ ಇರುವುದಿಲ್ಲ. ಈ ಮತದಾನದ ಪ್ರಕ್ರಿಯೆಯ ಸಂದರ್ಭದಲ್ಲಿ ಕಾರ್ಡಿನಲ್​ಗಳು ವ್ಯಾಟಿಕನ್​ ಸಿಟಿಯ ಡೊಮಸ್ ಸಾಂತಾ ಮಾರ್ಟಾ ಹೋಟೆಲ್‌ನಲ್ಲಿ ತಂಗುತ್ತಾರೆ.

ಹೇಗಿರುತ್ತದೆ ಪ್ರಕ್ರಿಯೆ?: ಮೇ 7ರ ಮಧ್ಯಾಹ್ನದಿಂದ ಕಾನ್ಕ್ಲೇವ್​ ಆರಂಭ. ಈ ದಿನ ಬೆಳಗ್ಗೆ ಕಾರ್ಡಿನಲ್​ ಕಾಲೇಜ್​ನ ಡೀನ್​ ಕಾರ್ಡಿನಲ್ ಜಿಯೋವಾನಿ ಬಟಿಸ್ಟಾ ರೆ ಎಂಬಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ. ಮಧ್ಯಾಹ್ನ ಸಿಸ್ಟೈನ್​ ಚಾಪೆಲ್​ನಲ್ಲಿ ಕಾರ್ಡಿನಲ್​ ಪ್ರಕ್ರಿಯೆ ಸಾಗುತ್ತದೆ. ಧರ್ಮಗುರುಗಳು ಪ್ರಾರ್ಥಿಸಿ, ಕಾರ್ಡಿನಲ್​ಗಳು ಪ್ರಮಾಣವಚನ ಮಾಡುವ ಮೂಲಕ ಎಕ್ಸ್​ಟ್ರಾ ಒಮನೆಸ್​ ಕಾನ್ಕ್ಲೇವ್​ ಆರಂಭವಾಗುತ್ತದೆ.

explained-what-is-a-conclave-what-to-know-about-the-secretive-process-to-elect-the-next-pope
ಪೋಪ್​ ಫ್ರಾನ್ಸಿಸ್​​ ಸಾವಿನ ಬಳಿಕ ನಡೆದ ಐದನೇ ಕಾರ್ಡಿನಲ್‌ಗಳ ಸಭೆ (AP)

ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳು ಇಲ್ಲದಿದ್ದರೆ, ಮೇ 7ರ ಮಧ್ಯಾಹ್ನ ಕಾರ್ಡಿನಲ್‌ಗಳು ತಲಾ ಒಂದೊಂದು ಮತಗಳನ್ನು ಪಡೆಯುವ ಮೂಲಕ ಮೂರನೇ ಎರಡರಷ್ಟು ಬಹುಮತ ಪಡೆದು ಆಯ್ಕೆಯಾಗಬೇಕು. ಮೊದಲ ಮತಪತ್ರದಲ್ಲಿ ವಿಜೇತರ ಆಯ್ಕೆ ಸಾಧ್ಯವಾಗದೇ ಇದ್ದಾಗ ಸಿಸ್ಟೀನ್ ಚಾಪೆಲ್‌ಗೆ ಹಿಂತಿರುಗುತ್ತಾರೆ. ಮರುದಿನ ಬೆಳಗ್ಗೆ ಅವರು ತಲಾ ಎರಡು ಮತದಾನ ನಡೆಸುತ್ತಾರೆ. ವಿಜೇತರಾಗುವವರೆಗೆ ಪ್ರತಿದಿನ ಎರಡು ಬಾರಿ ಮತದಾನ ನಡೆಯುತ್ತದೆ.

ಯಾರು ಈ ಕಾನ್ಕ್ಲೇವ್​ನಲ್ಲಿ ಭಾಗಿಯಾಗುತ್ತಾರೆ?: ಈ ಕಾನ್ಕ್ಲೇವ್​ನಲ್ಲಿ 80 ವರ್ಷದೊಳಗಿನ ಕಾರ್ಡಿನಲ್​ಗಳು ಮಾತ್ರ ಮತದಾನಕ್ಕೆ ಅರ್ಹರು. ಮತದಾನ ಮಾಡುವವರ ನಿಗದಿತ ಸಂಖ್ಯೆ 120 ಇದ್ದು, ಇದೀಗ ಸಂಖ್ಯೆ ಹೆಚ್ಚಿದ್ದು 135 ಆಗಿದೆ.

80 ವರ್ಷ ಮೀರಿದ ಕಾರ್ಡಿನಲ್‌ಗಳು ಮತದಾನ ಮಾಡಲು ಸಾಧ್ಯವಿಲ್ಲ. ಆದರೆ, ಅವರು ಸಾಮಾನ್ಯ ಸಭೆಗಳು ಎಂದು ಕರೆಯಲ್ಪಡುವ ಪೂರ್ವಸಂವಾದ ಸಭೆಗಳಲ್ಲಿ ಭಾಗಿಯಾಗಬಹುದು. ಇಲ್ಲಿ ಚರ್ಚ್ ನ ಸಮಸ್ಯೆಗಳನ್ನು ಚರ್ಚಿಸಲಾಗುತ್ತದೆ. 2013ರಲ್ಲಿ ನಡೆದ ಈ ಸಭೆಗಳಲ್ಲಿ ಆಗಿನ ಕಾರ್ಡಿನಲ್ ಜಾರ್ಜ್ ಮಾರಿಯೋ ಬರ್ಗೊಗ್ಲಿಯೊ ಚರ್ಚ್ ಅಸ್ತಿತ್ವದ ಪರಿಧಿಗೆ ಹೋಗಬೇಕಾದ ಅಗತ್ಯತೆಯ ಬಗ್ಗೆ ಮಾತನಾಡಿದ್ದರು.

9ನೇ ದಿನದ ಶೋಕಾಚರಣೆಯಲ್ಲಿ ಕಾರ್ಡಿನಲ್​ಗಳು (AP)

ಕಾನ್ಲ್ಕೇವ್​ ಮತ್ತು ಈ ಹಿಂದಿನ ಪದ್ಧತಿಯ ನಡುವಿನ ವ್ಯತ್ಯಾಸ: 1996ರಲ್ಲಿ ಪೋಪ್​ ಚುನಾವಣೆಯ ನಿಯಮವನ್ನು ಸೇಂಟ್ ಜಾನ್ ಪಾಲ್ 2 ಹೊಸದಾಗಿ ರಚಿಸಿದ್ದು, ಇದು ಇಂದಿಗೂ ಚಾಲ್ತಿಯಲ್ಲಿದೆ. ಆದಾಗ್ಯೂ, ಪೋಪ್​ ಬೆನೆಡಿಕ್ಟ್ XVI ಅವರು ರಾಜೀನಾಮೆ ನೀಡುವ ಮೊದಲು ಇದನ್ನು ಎರಡು ಬಾರಿ ತಿದ್ದುಪಡಿ ಮಾಡಿದ್ದರು.

ಫ್ರಾನ್ಸಿಸ್​ ಈ ಕಾನ್ಕ್ಲೇವ್​ ಪದ್ಧತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಗಿಲ್ಲ. ಆದಾಗ್ಯೂ, 135 ಕಾರ್ಡಿನಕಲ್​ನಲ್ಲಿ 108 ಜನರು ಮತದಾನಕ್ಕೆ ಅರ್ಹರಾಗಿದ್ದಾರೆ ಎಂದು ಭಾವಿಸಿದರು.

ಮತದಾನಗಳು ಸಮಾಧಾನಕರವಾಗಿದ್ದು, ಸರಳ ಬಹಮತ ಪಡೆದರೆ ಪೋಪ್​ ಆಯ್ಕೆ ಮಾಡಬಹುದು ಎಂಬ 1996ರ ದಾಖಲೆಗಳಲ್ಲಿ ಗಮನಾರ್ಹ ಬದಲಾವಣೆ ಮಾಡಿದವರು ಬೆನೆಡಿಕ್ಟ್​​. ಬೆನೆಡಿಕ್ಟ್​​ ಪೋಪ್​ ಆಯ್ಕೆ ಎಷ್ಟು ಸಮಯ ಪಡೆದರೂ ಪರವಾಗಿಲ್ಲ. ಇದಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕೇ ಬೇಕು ಎಂಬ ನಿಯಮ ತಂದರು. ಜಾನ್ ಪಾಲ್ ಊಹಿಸಿದ 12 ದಿನಗಳವರೆಗೆ ಕಾರ್ಡಿನಲ್‌ಗಳು ಸ್ಪರ್ಧಿಸುವುದನ್ನು ತಡೆಯಲು ಹಾಗೂ ಕಡಿಮೆ ಬಹುಮತ ಪಡೆದ ಅಭ್ಯರ್ಥಿಗಳನ್ನು ತಳ್ಳಿ ಹಾಕುವುದನ್ನು ತಡೆಯಲು ಈ ಕ್ರಮ ಜಾರಿಗೆ ತಂದರು ಎನ್ನಲಾಗಿದೆ.

ಕಾನ್ಕ್ಲೇವ್​ ದೀರ್ಘ ಸಮಯವಾದಲ್ಲಿ ಎರಡು ಮತಗಳನ್ನು ಪಡೆದ, ಮೂರನೇ ಎರಡರಷ್ಟು ಬಹುಮತ ಪಡೆದವರು ವಿಜೇತರು.

ವ್ಯಾಟಿಕನ್‌ನ ಸೇಂಟ್ ಪೀಟರ್ಸ್ ಚೌಕದಲ್ಲಿ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಕಾರ್ಡಿನಲ್​ಗಳು (AP)

ಪೋಪ್​ ಆಯ್ಕೆಗೆ ಯಾರು ಅರ್ಹರು?: ಬ್ಯಾಪ್ಟಿಸ್ಡ್​​ ಕ್ಯಾಥೋಲಿಕ್​ನ ಯಾವುದೇ​ ಪುರುಷರು ಪೋಪ್ ಹುದ್ದೆಗೆ ಅರ್ಹರು. ಆದರೆ, 1378ರಿಂದ ಕೇವಲ ಕಾರ್ಡಿನಲ್​ಗಳನ್ನು ಆಯ್ಕೆ ಮಾಡಲಾಗುವುದು. ಈ ಕಾರ್ಡಿನಲ್​ಗಳು 80 ವರ್ಷದೊಳಗೆ ಇರಬೇಕು.

ಮಹಿಳೆಯರು ಯಾಕೆ ಚುನಾವಣೆಯಲ್ಲಿ ಭಾಗಿಯಾಗುವುದಿಲ್ಲ?: ಧರ್ಮಗುರುವಿನ ಆಯ್ಕೆಯಲ್ಲಿ ಫ್ರಾನ್ಸಿಸ್ ಮತ್ತು ಅವರ ಹಿಂದಿನ ಪೋಪ್‌ಗಳು ಮಹಿಳೆಯರು ಪಾಲ್ಗೊಳ್ಳುವುದಕ್ಕಿದ್ದ ನಿಷೇಧವನ್ನು ಎತ್ತಿ ಹಿಡಿದರು. ಇದರಿಂದಾಗಿ ಅವರು ಪೋಪ್ ಹುದ್ದೆಗೂ​ ಆಯ್ಕೆಯಾಗುವ ಹಕ್ಕು ಹೊಂದಿಲ್ಲ. ಕ್ಯಾಥೋಲಿಕ್ ಸಿದ್ಧಾಂತದ ಅಡಿಯಲ್ಲಿ, ಕ್ರಿಸ್ತನು ತನ್ನ 12 ಅಪೊಸ್ತಲರಾಗಿ ಪುರುಷರನ್ನು ಮಾತ್ರ ಆರಿಸಿಕೊಂಡ ಎಂಬ ನಂಬಿಕೆ ಇದೆ. ಹಾಗಾಗಿ, ಈ ಹುದ್ದೆ ಪುರುಷರಿಗೆ ಮೀಸಲಾಗಿದೆ.

ಮತದಾನ ರಹಸ್ಯವೇಕೆ?: ಬೆನೆಡಿಕ್ಟ್​​ ಕಾನ್ಕ್ಲೇವ್​ನಲ್ಲಿ ರಹಸ್ಯ ಮತದಾನ ನಡೆಸಲಾಗುವುದು. ಒಂದು ವೇಳೆ ಇದನ್ನು ಮೀರಿ ಒಳಗೆ ಏನಾಗುತ್ತಿದೆ ಎಂದು ತಿಳಿಸಿದಲ್ಲಿ, ಇದು ಬಹಿಷ್ಕಾರವಾಗುತ್ತದೆ.

ಜಾನ್​ಪೌಲ್​ ನಿಯಮದ ಪ್ರಕಾರ, ಈ ಬಹಿಷ್ಕಾರ ಯಾವಾಗಲೂ ಸಾಧ್ಯವಿದೆ. ಆದರೆ, ಬೆನೆಡಿಕ್ಟ್​ ಇದನ್ನು ಪರಿಷ್ಕರಿಸಿದ್ದು, ಇದು ಸಂಪೂರ್ಣವಾಗಿ ರಹಸ್ಯವಾಗಿ ನಡೆಯಲಿದ್ದು, ಯಾವುದೇ ಆಡಿಯೋ ಅಥವಾ ವಿಡಿಯೋ ರೆಕಾರ್ಡಿಂಗ್​ ಗೆ ಅವಕಾಶ ಇಲ್ಲ. ಈ ಪ್ರಮಾಣವಚನವನ್ನು ಉಲ್ಲಂಘಿಸಿದರೆ ಅಪೋಸ್ಟೋಲಿಕ್ ಪೀಠಕ್ಕೆ ಮೀಸಲಾಗಿ ಬಹಿಷ್ಕಾರದ ಶಿಕ್ಷೆಗೆ ಗುರಿಯಾಗುತ್ತಾರೆ.

ಹೊಸ ಪೋಪ್​ ಆಯ್ಕೆ ಘೋಷಣೆ: ಮತಪತ್ರಗಳನ್ನು ಚುಚ್ಚಿದ ನಂತರ, ಮತದಾನದ ಅವಧಿಯ ಕೊನೆಯಲ್ಲಿ ಅವುಗಳನ್ನು ಸಿಲಿಂಡರಾಕಾರದ ಸ್ಟೌವ್‌ನಲ್ಲಿ ಸುಡಲಾಗುತ್ತದೆ. ಸಿಸ್ಟೀನ್ ಚಾಪೆಲ್ ಚಿಮಣಿಯಿಂದ ಕಪ್ಪು ಹೊಗೆ ಎಂದರೆ ಯಾವುದೇ ನಿರ್ಧಾರವಿಲ್ಲ ಎಂದು ಅರ್ಥ. ಬಿಳಿ ಹೊಗೆ ಕಾರ್ಡಿನಲ್ಸ್ ಪೋಪ್ ರನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ಸೂಚಿಸಲಾಗುವುದು.

ಪೋಪ್​ ಆಯ್ಕೆ ಸಮಯದಲ್ಲಿನ ಚಿಮಣಿಯಲ್ಲಿ ಬರುವ ಕಪ್ಪು ಹೊಗೆ (AP)

ಈ ಬಣ್ಣದಲ್ಲಿ ಯಾವುದೇ ಗೊಂದಲ ಇರಬಾರದು ಎಂಬ ಕಾರಣಕ್ಕೆ ರಾಸಾಯನಿಕ ಕಾರ್ಟ್ರಿಡ್ಜ್​ಗಳನ್ನು ಸೆರಿಸಲಾಗುತ್ತದೆ. ಕಪ್ಪು ಹೊಗೆಗೆ ಕಾರ್ಟ್ರಿಡ್ಜ್​ನಲ್ಲಿ ಕಲ್ಲಿದ್ದಲ್ಲು ಟಾರ್​ ಅಂಶ ಹೊಂದಿರುವ ಆಂಥ್ರಾಸೀನ್ ಮತ್ತು ಗಂಧಕವನ್ನು ಬ್ಯಾಲೆಟ್‌ಗಳೊಂದಿಗೆ ಸುಡಲಾಗುತ್ತದೆ. ಬಿಳಿ ಹೊಗೆಗೆ ಲ್ಯಾಕ್ಟೊಸ್​ ಮತ್ತು ಕ್ಲೊರೊಫೋರ್ಮ್​ ರೆಸಿನ್​ಗಳನ್ನು ಸುಡಲಾಗುವುದು.

ಪೋಪ್​ ಆಯ್ಕೆಗೆ ಬಳಿಕ ಬೆಲ್​ಗಳನ್ನು ಬಾರಿಸುವ ಮೂಲಕ ಸೂಚನೆ ನೀಡಲಾಗುವುದು. ಬಳಿಕ ಹೊಸ ಪೋಪ್​ ಅನ್ನು ಸೆಂಟ್​ ಪೀಟರ್​ ಸ್ಕ್ವೇರ್​ನಲ್ಲಿ ಹೊಸ ಪೋಪ್​ ಸಿಕ್ಕರು ಎನ್ನುವ ಮೂಲಕ ಪಾಪಲ್​ ಹೆಸರನ್ನು ಘೋಷಿಸಲಾಗುವುದು.

ಇದನ್ನೂ ಓದಿ: ಮುಂದಿನ ಪೋಪ್​ ಯಾರು?; ಕ್ಯಾಥೋಲಿಕ್​ ಧರ್ಮಗುರುವಿನ ಸ್ಪರ್ಧೆಯಲ್ಲಿರುವ ಸಂಭಾವ್ಯರಿವರು!

ಇದನ್ನೂ ಓದಿ: 'ಪೋಪ್ ಫ್ರಾನ್ಸಿಸ್ ಅವರದು ಇತರೆ ಪೋಪ್‌ಗಳಿಗಿಂತ ಭಿನ್ನ ವ್ಯಕ್ತಿತ್ವ': 2018ರಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದಿದ್ದ ಬೆಂಗಳೂರಿನ ಕುಟುಂಬ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.