ETV Bharat / international

ರಷ್ಯಾದಿಂದ ಉಕ್ರೇನ್​ ಮೇಲೆ ಮಿಸೈಲ್​ ದಾಳಿ ; 32 ಮಂದಿಯ ಮಾರಣಹೋಮಕ್ಕೆ ಝಲೆನ್​ಸ್ಕಿ ಕಿಡಿ - RUSSIA ATTACK ON UKRAINE

ಉಕ್ರೇನ್​ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ 32 ಜನರು ಸಾವನ್ನಪ್ಪಿದ್ದಾರೆ.

RUSSIA ATTACKS ON UKRAINE
ರಷ್ಯಾದಿಂದ ಉಕ್ರೇನ್​ ಮೇಲೆ ಮಿಸೈಲ್​ ದಾಳಿ (AP)
author img

By ETV Bharat Karnataka Team

Published : April 13, 2025 at 8:41 PM IST

1 Min Read

ಕೀವ್​(ಉಕ್ರೇನ್​): ಬದ್ಧವೈರಿಗಳಾದ ಉಕ್ರೇನ್ ಮತ್ತು​ ರಷ್ಯಾ ನಡುವಿನ ಯುದ್ಧ ಮುಂದುವರಿದಿದ್ದು, ರಕ್ತದ ಕೋಡಿ ಹರಿಯುತ್ತಲೇ ಇದೆ. ಇಂದು (ಏಪ್ರಿಲ್​ 13) ಪಾಮ್​ ಸಂಡೇ ಆಚರಿಸುತ್ತಿದ್ದ ವೇಳೆ ಸುಮಿ ನಗರದಲ್ಲಿ ಮಾರಣಾಂತಿಕ ಖಂಡಾಂತರ ಕ್ಷಿಪಣಿ ದಾಳಿ ನಡೆಸುವ ಮೂಲಕ ಕನಿಷ್ಠ 32 ಜನರನ್ನು ರಷ್ಯಾ ಕೊಂದು ಹಾಕಿದೆ ಎಂದು ಉಕ್ರೇನ್​ ಅಧಿಕಾರಿಗಳು ತಿಳಿಸಿದ್ದಾರೆ.

ಈ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 32 ಜನರು ಬಲಿಯಾಗಿದ್ದರೆ, 84 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 10 ಮಕ್ಕಳು ಸೇರಿದ್ದಾರೆ. ಅಲ್ಲಿನ ಅಧಿಕೃತ ಚಾನಲ್​​ಗಳ ವರದಿಯಂತೆ ಮೃತದೇಹಗಳು ರಸ್ತೆ ಬದಿಯಲ್ಲಿ ಬಿದ್ದಿದ್ದವು. ಶವಗಳಿಗೆ ಸುಟ್ಟಿರುವ ಬ್ಲ್ಯಾಂಕೆಟ್​ ಹೊದಿಸಿದ ರೀತಿಯಲ್ಲಿ ಕಂಡುಬಂದಿವೆ.

RUSSIA ATTACK ON SUMY
ರಷ್ಯಾದಿಂದ ಉಕ್ರೇನ್​ ಮೇಲೆ ಮಿಸೈಲ್​ ದಾಳಿ (AP)

ಈ ಬೆಳಕಿನ ಪಾಮ್​ ಸಂಡೇ ಆಚರಿಸುತ್ತಿದ್ದ ಸಂದರ್ಭದಲ್ಲಿ ಭಯಂಕರವಾದ ದುರಂತ ನಡೆದಿದೆ. ನಮ್ಮ ಸಮುದಾಯ ಇದರಿಂದ ಸಾಕಷ್ಟು ನಷ್ಟ ಅನುಭವಿಸಿದೆ. ದುರಾದೃಷ್ಟವಶಾತ್ ನಾವು ಈಗಾಗಲೇ 20ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿದ್ದೇವೆ ಎಂದು ಸುಮಿ ನಗರದ ಮೇಯರ್​ ಅರ್ಟಮ್​ ಕೊಬ್ಝಾರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ವೊಲೊಡಿಮಿರ್​​ ಝೆಲೆನ್ಸ್ಕಿ, ಇದೊಂದು ಪೈಶಾಚಿಕ ಕೃತ್ಯ ಎಂದು ದಾಳಿಯನ್ನು ಖಂಡಿಸಿದ್ದಾರೆ. ಜನರ ರಕ್ಷಣಾ ಕಾರ್ಯ ಮುಂದುವರಿದಿದೆ. ಎರಡು ಕ್ಷಿಪಣಿಗಳ ದಾಳಿಯಿಂದಾಗಿ ಅಪಾರ ಸಾವುನೋವು ಸಂಭವಿಸಿದೆ.

RUSSIA ATTACK ON UKRAINE
ಉಕ್ರೇನ್​ ಮೇಲೆ ಮಿಸೈಲ್​ ದಾಳಿ (AP)

ಝೆಲೆನ್ಸ್ಕಿ ಅವರ ತವರು ಕ್ರಿವ್ವಿಯಲ್ಲಿ ಕಳೆದ ವಾರವೂ ನಾಲ್ವರು ಸಾವನ್ನಪ್ಪಿದ್ದರು. ಇಂದು ಡಜನ್​ ಗಟ್ಟಲೇ ಜನರು ಸಾವನ್ನಪ್ಪಿದ್ದರೆ, ಬಹಳಷ್ಟು ಜನರು ಗಾಯಗೊಂಡಿದ್ದಾರೆ. ಸಾಮಾನ್ಯ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಇಂತಹ ದಾಳಿಗಳು ಅತ್ಯಂತ ಪೈಶಾಚಿಕ ಎಂದು ಝೆಲೆನ್ಸ್ಕಿ ಕರೆದಿದ್ದಾರೆ.

RUSSIA ATTACK ON UKRAINE
ಉಕ್ರೇನ್​ ಮೇಲೆ ಮಿಸೈಲ್​ ದಾಳಿ (AP)

ಖಾರ್ಕಿವ್​, ಐಹೋರ್​, ತರೆಖೋವ್​ ನಗರಗಳ ಮೇಯರ್​ ಪ್ರಕಾರ, ಕಿಂಡರಗಾರ್ಟನ್​ ಶಾಲಾ ಕಟ್ಟಡ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಕಟ್ಟಡದ ಕಿಟಕಿ, ಗೋಡೆ ಸೇರಿದಂತೆ ಇನ್ನಿತರ ಹಾನಿಯಾಗಿದೆ.

ಇದನ್ನೂ ಓದಿ: ಉಕ್ರೇನ್‌ನಲ್ಲಿನ ಭಾರತೀಯ ಔಷಧ ಕಂಪನಿ ಗೋದಾಮಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.