ETV Bharat / international

ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ, ಇಬ್ಬರ ಸಾವು: ಐವರಿಗೆ ತೀವ್ರ ಗಾಯ - ಟ್ರಂಪ್​ ಕಳವಳ - FLORIDA SHOOTING 2 DIED

ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಮೃತಪಟ್ಟಿದ್ದು ಐವರು ಗಾಯಗೊಂಡಿದ್ದಾರೆ.

NEWSALERT-FLORIDA-SHOOTING
ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ, ಇಬ್ಬರ ಸಾವು: ಐವರಿಗೆ ತೀವ್ರ ಗಾಯ (ANI)
author img

By ETV Bharat Karnataka Team

Published : April 18, 2025 at 7:17 AM IST

2 Min Read

ಫ್ಲೋರಿಡಾ,ಅಮೆರಿಕ: ಅಮೆರಿಕದ ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಗುರುವಾರ ಗುಂಡಿನ ದಾಳಿ ನಡೆದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಪ್ರಮುಖ ಸುದ್ದಿ ಮಾಧ್ಯಮ ವರದಿ ಮಾಡಿದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಬಳಿ 20 ವರ್ಷದ ಯುವಕನೊಬ್ಬ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಈ ಅನಾಹುತ ಸಂಭವಿಸಿದೆ.

ಈ ನಡುವೆ ತಕ್ಷಣ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗೆ ಶರಣಾಗುವಂತೆ ಎಚ್ಚರಿಕೆ ನೀಡಿದರೂ ಬಗ್ಗದಿದ್ದರಿಂದ ಆತನ ಮೇಲೆ ಪೊಲೀಸರು ಗುಂಡು ಹಾರಿಸಬೇಕಾಯಿತು ಎಂದು ತಲ್ಲಾಹಸ್ಸಿ ಪೊಲೀಸ್ ಮುಖ್ಯಸ್ಥ ಲಾರೆನ್ಸ್ ರೆವೆಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶಂಕಿತನನ್ನು 20 ವರ್ಷದ ಫೀನಿಕ್ಸ್ ಇಕ್ನರ್ ಎಂದು ಗುರುತಿಸಲಾಗಿದೆ. ಶಂಕಿತ ಬಂದೂಕುಧಾರಿ ತನ್ನ ತಾಯಿಯ ಆಯುಧವನ್ನು ತೆಗೆದುಕೊಂಡು ಬಂದಿದ್ದ. ಅಧಿಕಾರಿಗಳು ವ್ಯಕ್ತಿಯಿಂದ ಮಾರಕಾಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದಲ್ಲಿ ಶಾಟ್ ಗನ್ ಕೂಡ ಪತ್ತೆಯಾಗಿದ್ದು, ಶಂಕಿತ ವಾಹನದಲ್ಲಿ ಮತ್ತೊಂದು ಬಂದೂಕು ಇರುವುದು ಗೊತ್ತಾಗಿದೆ ಎಂದು ಪೊಲೀಸರು ಪ್ರಕರಣದ ಮಾಹಿತಿ ನೀಡಿದರು.

ನಾವು ಆ ಆಯುಧವನ್ನು ಹೇಗೆ ಬಳಸಲಾಗಿದೆ ಮತ್ತು ಇತರ ಯಾವ ಆಯುಧಗಳನ್ನು ಆತ ತಂದಿದ್ದನೇ ಎಂಬುದರ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಲಾರೆನ್ಸ್​ ಹೇಳಿದ್ದಾರೆ.

ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿ ಅಧ್ಯಕ್ಷ ರಿಚರ್ಡ್ ಮೆಕ್‌ಕುಲೋ ಇದನ್ನು ದುರಂತದ ದಿನ ಎಂದು ಕರೆದಿದ್ದಾರೆ. ಇಂದು ಮುಂಜಾನೆ ನಮ್ಮ ಕ್ಯಾಂಪಸ್‌ನಲ್ಲಿ ನಡೆದ ಹಿಂಸಾಚಾರದಿಂದ ನಾವು ಶಾಕ್​ ಗೆ ಒಳಗಾಗಿದ್ದೇವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ವಿಶ್ವವಿದ್ಯಾಲಯಕ್ಕೆ ರಜೆ: ಎಲ್ಲ ಈವೆಂಟ್​ಗಳು ಸ್ಥಗಿತ: ಗುಂಡಿನ ದಾಳಿಯ ಘಟನೆಯ ನಂತರ ನಿನ್ನೆ ಮತ್ತು ಇಂದು ಕೂಡಾ ಎಲ್ಲ ತರಗತಿಗಳು, ಈವೆಂಟ್‌ಗಳು ಮತ್ತು ಇನ್ನಿತರ ಕಾರ್ಯಾಚರಣೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ಈ ವಾರಾಂತ್ಯದಲ್ಲಿ ತಲ್ಲಾಹಸ್ಸಿಯಲ್ಲಿ ನಿಗದಿಯಾಗಿದ್ದ ಎಲ್ಲಾ ಅಥ್ಲೆಟಿಕ್ ಈವೆಂಟ್‌ಗಳನ್ನು ಸಹ ರದ್ದುಗೊಳಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಘಟನೆಗೆ ಟ್ರಂಪ್​ ಕಳವಳ: ಈ ವಿಚಾರ ಅಮೆರಿಕ ಅಧ್ಯಕ್ಷರಿಗೂ ಗೊತ್ತಾಗಿದ್ದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಗುಂಡಿನ ದಾಳಿಯ ಬಗ್ಗೆ ತನಗೆ ಮಾಹಿತಿ ಸಿಕ್ಕಿದೆ ಎಂದು ಹೇಳಿದ್ದಾರೆ. ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿ, ತಲ್ಲಾಹಸ್ಸಿ, ಸಕ್ರಿಯ ಶೂಟಿಂಗ್ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಆತ ಸಕ್ರಿಯ ಶೂಟರ್ ಎಂದು ನಾನು ಭಾವಿಸುತ್ತೇನೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಅಷ್ಟೇ ಅಲ್ಲ ಇದು ಭಯಾನಕ ವಿಷಯ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.( PTI AND ANI)

ಇದನ್ನು ಓದಿ: ಇದೇ ಮೊದಲ ಬಾರಿಗೆ ಅಪರೂಪದ ವಜ್ರ 'ಗೋಲ್ಕೊಂಡ ಬ್ಲೂ' ಮೇ 14 ರಂದು ಹರಾಜು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.