ETV Bharat / health

ದೇಹದ ತೂಕ ಇಳಿಸಿಕೊಳ್ಳಲು ಉಪವಾಸ ಮಾಡಬೇಕಿಲ್ಲ: ತಜ್ಞರ ಸರಳ ಟಿಪ್ಸ್ ಇಲ್ಲಿದೆ ನೋಡಿ

Lose Weight Tips: ಅತಿಯಾದ ತೂಕದಿಂದ ದೇಹದ ಆಕಾರ ಹಾಳುಗುತ್ತದೆ. ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳನ್ನು ಕಾಡುತ್ತವೆ. ದೇಹದ ತೂಕವನ್ನು ಸರಳವಾಗಿ ಇಳಿಸಿಕೊಳ್ಳಲು ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.

Lose Weight Lose Weight simple tips ತೂಕ ಇಳಿಸಿಕೊಳ್ಳಲು ತಜ್ಞರ ಟಿಪ್ಸ್ Diet plan for weight loss
ದೇಹದ ತೂಕ ಇಳಿಸಿಕೊಳ್ಳಲು ತಜ್ಞರ ಸರಳ ಟಿಪ್ಸ್- ಸಾಂದಭರ್ಭಿಕ ಚಿತ್ರ (Getty Images)
author img

By ETV Bharat Health Team

Published : September 1, 2025 at 3:34 PM IST

4 Min Read
Choose ETV Bharat

Lose Weight Simple Tips: ಅಧಿಕ ತೂಕವು ಪ್ರಮುಖ ಆರೋಗ್ಯದ ಸಮಸ್ಯೆಯಾಗಿದೆ. ಅನೇಕ ಜನರು ಚಿಕ್ಕ ವಯಸ್ಸಿನಲ್ಲಿಯೇ ಅಧಿಕ ತೂಕ, ಬೊಜ್ಜುತನದಿಂದ ಬಳಲುತ್ತಿದ್ದಾರೆ. ಗಂಟೆಗಟ್ಟಲೆ ಸುಮ್ಮನೆ ಕುಳಿತುಕೊಳ್ಳುವುದು, ಜಂಕ್ ಫುಡ್ ತಿನ್ನುವುದು, ಸಾಕಷ್ಟು ನಿದ್ರೆ ಮಾಡದಿರುವುದು ಸೇರಿದಂತೆ ಇತರ ಹಲವು ಕಾರಣಗಳು ಬೊಜ್ಜುತನಕ್ಕೆ ಕಾರಣವಾಗುತ್ತವೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ವಿವಿಧ ಔಷಧಿಗಳನ್ನು ಬಳಸುತ್ತಾರೆ. ಕೆಲವು ನೈಸರ್ಗಿಕ ವಿಧಾನಗಳ ಮೂಲಕವೇ ದೇಹದ ತೂಕ ಕಳೆದುಕೊಳ್ಳಬಹುದು. ತಜ್ಞರು ತಿಳಿಸಿರುವ ಸರಳವಾರ ಸಲಹೆಗಳ ಮೂಲಕ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸಮತೋಲಿತ ಆಹಾರ: ತೂಕ ಇಳಿಸುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ನೀವು ಜಂಕ್ ಫುಡ್, ಸಕ್ಕರೆ ಪಾನೀಯಗಳು ಹಾಗೂ ಹೆಚ್ಚಿನ ಎಣ್ಣೆಯುಕ್ತ ಆಹಾರಗಳನ್ನು ತಪ್ಪಿಸಬೇಕು. ಬದಲಾಗಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.

Lose Weight Lose Weight simple tips ತೂಕ ಇಳಿಸಿಕೊಳ್ಳಲು ತಜ್ಞರ ಟಿಪ್ಸ್ Diet plan for weight loss
ದೇಹದ ತೂಕ ಇಳಿಸಿಕೊಳ್ಳಲು ತಜ್ಞರ ಸರಳ ಟಿಪ್ಸ್- ಸಾಂದಭರ್ಭಿಕ ಚಿತ್ರ (Getty Images)
  • ಫೈಬರ್ ಭರಿತ ಆಹಾರ: ತರಕಾರಿಗಳು, ಹಣ್ಣುಗಳು ಮತ್ತು ಓಟ್ಸ್‌ನಂತಹ ಫೈಬರ್ ಭರಿತ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಈ ಆಹಾರಗಳು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿಸುತ್ತವೆ. ಈ ಆಹಾರಗಳು ಹೆಚ್ಚುವರಿ ಕ್ಯಾಲೊರಿಗಳನ್ನು ಸೇವಿಸುವುದನ್ನು ತಡೆಯುತ್ತವೆ.
  • ಪ್ರೋಟೀನ್ ಸೇವಿಸಿ: ದ್ವಿದಳ ಧಾನ್ಯಗಳು, ಮೊಟ್ಟೆ, ಮೊಸರು ಮತ್ತು ಕೋಳಿ ಮಾಂಸ ಪ್ರೋಟೀನ್‌ನ ಉತ್ತಮ ಮೂಲಗಳಾಗಿವೆ. ಇವು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತವೆ.
  • ಆರೋಗ್ಯಕರ ಕೊಬ್ಬು: ನಟ್ಸ್, ಆವಕಾಡೊ ಮತ್ತು ಆಲಿವ್ ಎಣ್ಣೆಯಂತಹ ಆರೋಗ್ಯಕರ ಕೊಬ್ಬುಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತವೆ.
Lose Weight Lose Weight simple tips ತೂಕ ಇಳಿಸಿಕೊಳ್ಳಲು ತಜ್ಞರ ಟಿಪ್ಸ್ Diet plan for weight loss
ದೇಹದ ತೂಕ ಇಳಿಸಿಕೊಳ್ಳಲು ತಜ್ಞರ ಸರಳ ಟಿಪ್ಸ್- ಸಾಂದಭರ್ಭಿಕ ಚಿತ್ರ (Getty Images)

ನಿಯಮಿತವಾಗಿ ವ್ಯಾಯಾಮ:

  • ವ್ಯಾಯಾಮವು ತೂಕ ಇಳಿಸಿಕೊಳ್ಳಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯನ್ನು ಮಾಡಿ.
  • ಕಾರ್ಡಿಯೋ ವ್ಯಾಯಾಮ: ಓಟ, ಸೈಕ್ಲಿಂಗ್, ಈಜು ಮತ್ತು ಜಂಪಿಂಗ್ ಹಗ್ಗದಂತಹ ವ್ಯಾಯಾಮಗಳು ಕೊಬ್ಬನ್ನು ಸುಡಲು ಸಹಾಯ ಮಾಡುತ್ತವೆ.
  • ಶಕ್ತಿಯುತ ವ್ಯಾಯಾಮ: ತೂಕ ಎತ್ತುವುದು ಮತ್ತು ದೇಹದ ತೂಕದ ವ್ಯಾಯಾಮಗಳು (ಪುಷ್ ಅಪ್ಸ್, ಸ್ಕ್ವಾಟ್ಸ್) ಬಲವಾದ ಸ್ನಾಯುಗಳನ್ನು ನಿರ್ಮಿಸುತ್ತವೆ. ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತವೆ.
  • ಯೋಗ, ಪ್ರಾಣಾಯಾಮ: ಕಪಾಲಭಾತಿ, ಅನುಲೋಮ ವಿಲೋಮ ಮತ್ತು ಸೂರ್ಯ ನಮಸ್ಕಾರದಂತಹ ಯೋಗ ಆಸನಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತವೆ. ಇವುಗಳನ್ನು ನಿಯಮಿತವಾಗಿ ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.
Lose Weight Lose Weight simple tips ತೂಕ ಇಳಿಸಿಕೊಳ್ಳಲು ತಜ್ಞರ ಟಿಪ್ಸ್ Diet plan for weight loss
ನೀರು (Getty Images)

ಸಾಕಷ್ಟು ನೀರು ಕುಡಿಯಿರಿ: ದೇಹಕ್ಕೆ ಸಾಕಷ್ಟು ನೀರು ಬೇಕಾಗುತ್ತದೆ. ದೇಹದಲ್ಲಿ ನೀರಿನ ಕೊರತೆಯು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಕುಡಿಯುವುದರಿಂದ ದೇಹದಿಂದ ವಿಷಕಾರಿ ಅಂಶಗಳು ಹೊರಬರುತ್ತವೆ. ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸಕ್ರಿಯಗೊಳ್ಳುತ್ತದೆ. ಇದು ತೂಕ ಇಳಿಸುವಿಕೆಯನ್ನು ಸುಲಭಗೊಳಿಸುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಉತ್ತಮ ನಿದ್ರೆ ಮಾಡಿ: ನಿದ್ರೆಯ ಕೊರತೆಯು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ನಿದ್ರಾಹೀನತೆಯಿಂದ ಅಧಿಕ ತೂಕ ಹೆಚ್ಚಾಗುವ ಅಪಾಯವಿದೆ. ನಿದ್ರೆಯ ಕೊರತೆಯು ಹಸಿವನ್ನು ಹೆಚ್ಚಿಸುತ್ತದೆ ಹಾಗೂ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಸಾಕಷ್ಟು ನಿದ್ರೆ ಪಡೆಯುವುದು ಬಹಳ ಮುಖ್ಯ. ಪ್ರತಿದಿನ ಏಳರಿಂದ ಎಂಟು ಗಂಟೆಗಳ ನಿದ್ರೆ ದೇಹದ ಚಯಾಪಚಯ ಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ.

ಒತ್ತಡ ಹೆಚ್ಚಾಗದಂತೆ ನೋಡಿಕೊಳ್ಳಿ: ಒತ್ತಡವು ತೂಕ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಿಸುತ್ತದೆ. ತೂಕ ಹೆಚ್ಚಾಗಲು ಇದು ಕೂಡ ಒಂದು ಕಾರಣವಾಗಿದೆ. ಧ್ಯಾನ, ಯೋಗ ಹಾಗೂ ಸಂಗೀತದ ಮೂಲಕ ನೀವು ಒತ್ತಡ ಕಡಿಮೆ ಮಾಡಬಹುದು. ನೆಚ್ಚಿನ ಹವ್ಯಾಸಗಳನ್ನು ಅಭ್ಯಾಸ ಮಾಡುವ ಮೂಲಕ ಒತ್ತಡ ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು.

ಒಂದೇ ಸಮಯದಲ್ಲಿ ಹೆಚ್ಚು ಸೇವಿಸಬೇಡಿ: ಅನೇಕರು ಒಂದೇ ಬಾರಿಗೆ ಹೆಚ್ಚು ತಿನ್ನುತ್ತಾರೆ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಪ್ರತಿದಿನ ಒಂದೇ ಬಾರಿಗೆ ಬಹಳಷ್ಟು ತಿನ್ನುವ ಬದಲು, ದಿನಕ್ಕೆ 5 ರಿಂದ 6 ಸಣ್ಣ ಪ್ರಮಾಣದಲ್ಲಿ ತಿನ್ನಿರಿ. ಈ ರೀತಿ ತಿನ್ನುವುದರಿಂದ ನಿಮ್ಮ ಚಯಾಪಚಯ ಕ್ರಿಯೆ ವೇಗಗೊಳ್ಳುತ್ತದೆ. ಈ ವಿಧಾನವು ತೂಕ ನಿಯಂತ್ರಿಸುತ್ತದೆ. ನೀವು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.

Lose Weight Lose Weight simple tips ತೂಕ ಇಳಿಸಿಕೊಳ್ಳಲು ತಜ್ಞರ ಟಿಪ್ಸ್ Diet plan for weight loss
ಸಮತೋಲಿತ ಆಹಾರ (Getty Images)

ಸಕ್ಕರೆ, ಸಂಸ್ಕರಿಸಿದ ಆಹಾರಗಳನ್ನು ಸೇವಿಸಬೇಡಿ: ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಬೊಜ್ಜುತನಕ್ಕೆ ಕಾರಣವಾಗುತ್ತದೆ. ಇವುಗಳನ್ನು ತಿನ್ನುವ ಬದಲು, ನೈಸರ್ಗಿಕ ಸಿಹಿಯನ್ನು ಹೊಂದಿರುವ ಹಣ್ಣುಗಳನ್ನು ಸೇವಿಸಿ. ಹಣ್ಣಿನ ರಸವನ್ನು ಕುಡಿಯುವುದಕ್ಕಿಂತ ಬದಲು ಹಣ್ಣಿನ ರಸಗಳನ್ನು ತಿನ್ನುವುದು ಉತ್ತಮ ಅಂದರೆ ನಿಧಾನಕ್ಕೆ ಸ್ವಲ್ಪ ಸ್ವಲ್ಪವೇ ಕುಡಿಯುದು. ಇದು ದೇಹಕ್ಕೆ ಫೈಬರ್ ಒದಗಿಸುತ್ತದೆ. ದೇಹದ ತೂಕ ಇಳಿಸಿಕೊಳ್ಳಲು ಹೆಚ್ಚು ಸಹಾಯ ಮಾಡುತ್ತದೆ. ಹುರಿದ ಆಹಾರಗಳಿಂದ ಆದಷ್ಟು ದೂರವಿರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಓದುಗರಿಗೆ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ: