World Water Day 2025: ವಿಶ್ವಸಂಸ್ಥೆಯಿಂದ ವಿಶ್ವ ಜಲ ದಿನವನ್ನು ಪ್ರತಿವರ್ಷ ಮಾರ್ಚ್ 22ರಂದು ಜಾಗತಿಕವಾಗಿ ಆಚರಣೆ ಮಾಡಲಾಗುತ್ತಿದೆ. ಶುದ್ಧ ನೀರಿನ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಿಹಿನೀರಿನ ಸಂಪನ್ಮೂಲಗಳನ್ನು ಪ್ರಜ್ಞಾಪೂರ್ವಕವಾಗಿ ಬಳಕೆಗೆ ಈ ಬಾರಿ ವಿಶ್ವಸಂಸ್ಥೆ ಕರೆ ನೀಡಿದೆ. ಈ ದಿನದಂದು ವಿವಿಧ ಸ್ಥಳೀಯ ಹಾಗೂ ಜಾಗತಿಕ ಸಂಸ್ಥೆಗಳು ವಿಶ್ವದಾದ್ಯಂತ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಸ್ವಯಂಪ್ರೇರಿತ ಬದ್ಧತೆಗಳನ್ನು ಪ್ರದರ್ಶಿಸಲು, 2030ರ ವೇಳೆಗೆ ಎಲ್ಲರಿಗೂ ನೈರ್ಮಲ್ಯ ಹಾಗೂ ಶುದ್ಧ ನೀರು ಲಭಿಸುವಂತಾಗಬೇಕು. ಈ ಅಂಶಗಳು ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಪ್ರಮುಖ ಸ್ಥಾನ ಪಡೆದಿವೆ.
ವಿಶ್ವ ಜಲ ದಿನದ ಇತಿಹಾಸ: 1992ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ವಿಶ್ವಸಂಸ್ಥೆಯ (UN) ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನದ ವೇಳಾಪಟ್ಟಿ 21ರ ಅಡಿಯಲ್ಲಿ ವಿಶ್ವ ಜಲ ದಿನವನ್ನು ಸೇರಿಸಲಾಯಿತು. ಡಿಸೆಂಬರ್ 22, 1992 ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯು A/RES/47/193 ನಿರ್ಣಯ ಅಂಗೀಕರಿಸಿತು. ಇದರಿಂದ ಮಾರ್ಚ್ 22ರಂದು ವಿಶ್ವ ಜಲ ದಿನವೆಂದು ಘೋಷಿಸಿತು. 1993 ರಿಂದ ನೀರಿನ ಪ್ರಾಮುಖ್ಯತೆ ಮತ್ತು ಅದನ್ನು ರಕ್ಷಿಸುವ ಅಗತ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಇದನ್ನು ವಾರ್ಷಿಕ ಕಾರ್ಯಕ್ರಮವಾಗಿ ಆರಂಭಿಸಲಾಯಿತು.
❄️Glaciers store 70% of Earth’s freshwater, but they’re melting fast.
— UN-Water (@UN_Water) March 19, 2025
Their retreat is reshaping water supplies, ecosystems, and communities worldwide.
💧Join us for #WorldWaterDay & #WorldGlaciersDay to learn why #GlacierPreservation matters.
🔗 https://t.co/JeZs0DLzXS pic.twitter.com/yh0iyo5fpg
ವಿಶ್ವ ಜಲ ದಿನ 2025ರ ಧ್ಯೇಯ ವಾಕ್ಯ: 'ಹಿಮನದಿಗಳ ಸಂರಕ್ಷಣೆ' ಎಂಬುದು ಈ ಬಾರಿಯ 2025ರ ವಿಶ್ವ ಜಲ ದಿನದ (World Water Day 2025) ಧ್ಯೇಯ ವಾಕ್ಯವಾಗಿದೆ. ಈ ಥೀಮ್ ಹಿಮನದಿಗಳನ್ನು ಸಂರಕ್ಷಿಸುವ ಬಗ್ಗೆ ಒತ್ತಿಹೇಳುತ್ತದೆ. ಮತ್ತು ಪ್ರಮುಖ ಸಿಹಿನೀರಿನ ಮೂಲಗಳನ್ನು ರಕ್ಷಿಸಲು, ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಹಾಗೂ ಭವಿಷ್ಯದ ಪೀಳಿಗೆಗೆ ನೀರಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಹವಾಮಾನ ಬದಲಾವಣೆಯ ವಿರುದ್ಧ ವಹಿಸಬೇಕಾದ ಕ್ರಮಗಳ ಬಗ್ಗೆ ಪ್ರಾಮುಖ್ಯತೆಯನ್ನು ನೀಡುತ್ತದೆ.
Los glaciares se derriten más rápido que nunca.
— UN-Water (@UN_Water) February 21, 2025
A medida que aumenta la temperatura del planeta debido al cambio climático, nuestro patrimonio helado se reduce, y el ciclo del agua se vuelve más impredecible y extremo.#DíaMundialDelAgua https://t.co/syAE1IMfZD pic.twitter.com/0IiNCpowFk
2025ರ ವಿಶ್ವ ಜಲ ದಿನದ ವಿಶ್ವಸಂಸ್ಥೆಯ ಸಂದೇಶಗಳೇನು?:
- ಹಿಮನದಿಗಳು ಹಿಂದಿಗಿಂತಲೂ ಪ್ರಸ್ತುತ ವೇಗವಾಗಿ ಕರಗುತ್ತಿವೆ.
- ಭೂಮಿಯ ಮೇಲ್ಮೈ ವಾತಾವರಣ ಬಿಸಿಯಾಗುತ್ತಿದ್ದಂತೆ, ನಮ್ಮ ಹಿಮನದಿಗಳು, ಹಿಮಸಾಗರ ಸೇರಿದಂತೆ ಒಟ್ಟಾರೆ ಹಿಮ ಪ್ರಪಂಚವು ಕರಗುತ್ತಿದೆ. ಇದು ನೀರಿನ ಚಕ್ರವನ್ನು ಹೆಚ್ಚು ಅನಿರೀಕ್ಷಿತವಾಗಿಸುತ್ತದೆ.
- ಕರಗುವ ನೀರಿನ ಹರಿವುಗಳು ಬದಲಾಗುತ್ತಿವೆ, ಇದರಿಂದ ಪ್ರವಾಹಗಳು, ಬರಗಳು, ಭೂಕುಸಿತಗಳು ಮತ್ತು ಸಮುದ್ರ ಮಟ್ಟ ಏರಿಕೆಗೆ ಕಾರಣವಾಗುತ್ತದೆ. ಇದರ ಪರಿಣಾಮ ಶತಕೋಟಿ ಜನರ ಮೇಲೆ ಆಗುತ್ತಿದೆ.
- ಲೆಕ್ಕವಿಲ್ಲದಷ್ಟು ಸಮುದಾಯಗಳು ಮತ್ತು ಪರಿಸರ ವ್ಯವಸ್ಥೆಗಳು ವಿನಾಶದ ಅಪಾಯದಲ್ಲಿವೆ.
- ಇದಕ್ಕೆ ಹೊಂದಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುವ ಮೂಲಕ ಹವಾಮಾನ ಬದಲಾವಣೆಯನ್ನು ತಗ್ಗಿಸಲು ಹಾಗೂ ಹಿಮನದಿಗಳ ಸಂರಕ್ಷಣೆಯು ಪ್ರಮುಖ ಆದ್ಯತೆ ನೀಡಬೇಕು.
- ಹಿಮನದಿಗಳ ಕರಗುವುದನ್ನು ತಡೆಯಲು ನಾವು ಹಸಿರುಮನೆ ಅನಿಲಗಳನ್ನು ಹೊರಸೂಸುವಿಕೆಯನ್ನು ಕಡಿಮೆ ಮಾಡಬೇಕು.
- ಹಿಮನದಿಗಳು ಕರಗಿದ ಬಳಿಕ ಆ ನೀರನ್ನು ಹೆಚ್ಚು ಸುಸ್ಥಿರವಾಗಿ ನಿರ್ವಹಿಸಬೇಕು.
- ನಮ್ಮ ಹಿಮನದಿಗಳನ್ನು ಉಳಿಸುವುದರಿಂದ ಜನರು ಮತ್ತು ಭೂಮಿ ಬದುಕುಳಿಯುತ್ತದೆ
ಭವಿಷ್ಯಕ್ಕಾಗಿ ಹಿಮನದಿಗಳ ನೀರಿನ ಸಂಪನ್ಮೂಲಗಳನ್ನು ರಕ್ಷಣೆಗೆ ವಿಶ್ವಸಂಸ್ಥೆ ಸಲಹೆ:
- ಹಿಮನದಿಗಳು ಜನಜೀವಕ್ಕೆ ನಿರ್ಣಾಯಕವಾಗಿವೆ. ಅಂದ್ರೆ, ಕುಡಿಯುವ ನೀರು, ಕೃಷಿ, ಕೈಗಾರಿಕೆ, ಶುದ್ಧ ಇಂಧನ ಉತ್ಪಾದನೆ ಮತ್ತು ಆರೋಗ್ಯಕರ ಪರಿಸರ ವ್ಯವಸ್ಥೆಗಳಿಗೆ ಅವುಗಳ ಕರಗಿದ ನೀರು ಅತ್ಯಗತ್ಯ.
- ವೇಗವಾಗಿ ಕರಗುತ್ತಿರುವ ಹಿಮನದಿಗಳು ನೀರಿನ ಹರಿವಿನಲ್ಲಿ ಅನಿಶ್ಚಿತತೆಯನ್ನು ಉಂಟುಮಾಡುತ್ತಿವೆ. ಇದು ಜನರು ಮತ್ತು ಭೂಮಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
- ಜಾಗತಿಕವಾಗಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕುಗ್ಗುತ್ತಿರುವ ಹಿಮನದಿಗಳಿಗೆ ಹೊಂದಿಕೊಳ್ಳಲು ಸ್ಥಳೀಯ ಕ್ರಮಗಳನ್ನು ವಹಿಸುವುದು ಅತ್ಯಗತ್ಯ.
- ಈ ವಿಶ್ವ ಜಲ ದಿನದಂದು, ಹವಾಮಾನ ಬದಲಾವಣೆ ಮತ್ತು ಜಾಗತಿಕ ನೀರಿನ ಬಿಕ್ಕಟ್ಟನ್ನು ನಿಭಾಯಿಸುವ ನಮ್ಮ ಯೋಜನೆಗಳ ಮೂಲಕ ಹಿಮನದಿಗಳ ಸಂರಕ್ಷಣೆಗಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ.
ಹಿಮನದಿಗಳ ಸಂರಕ್ಷಣೆಗಾಗಿ ನಿಮ್ಮ ಪಾತ್ರ ಅಗತ್ಯ: ನೀವೆಲ್ಲರೂ 'ಹಿಮನದಿಗಳ ಸಂರಕ್ಷಣೆ' ಕುರಿತ ಜಾಗತಿಕ ಅಭಿಯಾನದ ಭಾಗವಾಗಿರಿ. ವ್ಯಕ್ತಿಗಳು ಮತ್ತು ಕುಟುಂಬಗಳಿಂದ ಹಿಡಿದು ಕಂಪನಿಗಳು, ಸರ್ಕಾರಗಳವರೆಗೆ ಎಲ್ಲರೂ ಅಗತ್ಯವಿದೆ. ಜಾಗತಿಕ ತಾಪಮಾನ ಏರಿಕೆಯನ್ನು ಕಡಿಮೆ ಮಾಡಲು ಮತ್ತು ಕುಗ್ಗುತ್ತಿರುವ ಹಿಮನದಿಗಳಿಗೆ ಹೊಂದಿಕೊಳ್ಳಲು ತಮ್ಮಿಂದ ಸಾಧ್ಯವಾದಷ್ಟು ಕಾರ್ಯಗಳನ್ನು ಮಾಡಬೇಕು ಎಂದು ವಿಶ್ವಸಂಸ್ಥೆ ತಿಳಿಸಿದೆ.

ಶುದ್ಧ ನೀರಿನ ಕೊರತೆಯಿಂದ 14 ಲಕ್ಷ ಜನ ಸಾವು: ವಿಶ್ವ ಜಲ ದಿನದ ಮಹತ್ವ: ವಿಶ್ವಸಂಸ್ಥೆಯ ಪ್ರಕಾರ, ಪರಿಸರ ನೈರ್ಮಲ್ಯ, ಸ್ವಚ್ಛತೆ ಮತ್ತು ಶುದ್ಧ ನೀರಿನ ಕೊರತೆಯಿಂದ ಉಂಟಾಗುವ ರೋಗಗಳಿಂದ ಪ್ರತಿವರ್ಷ 14 ಲಕ್ಷ ಜನರು ಸಾಯುತ್ತಾರೆ. ವಿಶ್ವದ ಜನಸಂಖ್ಯೆಯ ಸುಮಾರು ಶೇ. 25 ಜನರಿಗೆ ಶುದ್ಧ ನೀರು ಲಭ್ಯವಿಲ್ಲ ಮತ್ತು ಜಾಗತಿಕ ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನರಿಗೆ ಸರಿಯಾದ ಶೌಚಾಲಯಗಳಿಲ್ಲ. ೨೦೫೦ರ ವೇಳೆಗೆ ಜಾಗತಿಕವಾಗಿ ನೀರಿನ ಮೇಲಿನ ಅವಲಂಬನೆ ಶೇ.55 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ದಿನನಿತ್ಯದ ಚಟುವಟಿಕೆಗಳಿಗೆ ನೀರು ಅತ್ಯಗತ್ಯವಾಗಿರುವುದರಿಂದ, ಸಿಹಿನೀರಿನ ಜಲಾಶಯಗಳನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸರಾಸರಿ ಒಬ್ಬ ವ್ಯಕ್ತಿಯು ಒಂದು ದಿನದಲ್ಲಿ ಆಕಸ್ಮಿಕವಾಗಿ 45 ಲೀಟರ್ ನೀರನ್ನು ವ್ಯರ್ಥ ಮಾಡುತ್ತಾನೆ. ಆದ್ದರಿಂದ, ದೈನಂದಿನ ನೀರಿನ ಬಳಕೆಯ ಅಭ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರಿಂದ ಭವಿಷ್ಯದ ಬಳಕೆಗಾಗಿ ಗಮನಾರ್ಹ ಪ್ರಮಾಣದ ನೀರನ್ನು ಉಳಿಸಬಹುದು.
ಈ ವರ್ಷದ ವಿಶ್ವ ಜಲ ದಿನದ ವಿಷಯವು ಮುಂಬರುವ ಪೀಳಿಗೆಗೆ ನೀರನ್ನು ಸಂರಕ್ಷಿಸಲು ಅಗತ್ಯವಾದ ಬದಲಾವಣೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸುವ ಚಟುವಟಿಕೆಗಳನ್ನು ಉತ್ತೇಜಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಕಳಪೆ ನೈರ್ಮಲ್ಯ, ಅಸಮರ್ಪಕ ಸ್ವಚ್ಛತೆ ಮತ್ತು ನೀರಿನಿಂದ ಹರಡುವ ರೋಗಗಳಿಂದಾಗಿ ವಾರ್ಷಿಕವಾಗಿ 8.2 ಲಕ್ಷಕ್ಕೂ ಹೆಚ್ಚು ಜನರು ಸಾಯುವುದನ್ನು ತಡೆಯಲು ವಿಶ್ವಸಂಸ್ಥೆಯು 2030ಕ್ಕೆ ಕೆಲವು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ: ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಚಿಕ್ಕ ದೇಶ: ಕೇವಲ ಮೂರೇ ಜನರು ವಾಸ, ದೇಶದೊಳಗೆ ಈರುಳ್ಳಿ ತೆಗೆದುಕೊಂಡು ಹೋದರೆ ಅರೆಸ್ಟ್!