ETV Bharat / health

ಮಳೆಗಾಲದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುವುದೇಕೆ?: ಹಾಗಾದರೆ ನೀವು ಈ ತಪ್ಪನ್ನು ಮಾಡದಿರಿ: ಸಂಶೋಧನೆಗಳು ಹೇಳುವುದು ಹೀಗೆ! - RAINY SEASON DEHYDRATION

ಮಳೆಗಾಲದಲ್ಲಿ ಕಾಡುವಂತಹ ನಿರ್ಜಲೀಕರಣ ಸಮಸ್ಯೆ ಹೋಗಲಾಡಿಸುವುದು ಹೇಗೆ? ಸಂಶೋಧನೆ ಏನು ಹೇಳುತ್ತದೆ? ಈ ತೊಂದರೆಗೆ ಪ್ರಮುಖ ಕಾರಣಗಳು ಹಾಗೂ ಪರಿಹಾರಗಳೇನು ಎಂಬುದನ್ನು ತಿಳಿಯೋಣ.

WHY ITS IMPORTANT FOR DRINK WATER  WHAT HAPPENS DRINK ENOUGH WATER  RAINY SEASON DRINKING WATER  ಮಳೆಗಾಲದಲ್ಲಿ ನಿರ್ಜಲೀಕರಣ
ಮಳೆಗಾಲದಲ್ಲಿ ನಿರ್ಜಲೀಕರಣ ಸಮಸ್ಯೆ ಏಕೆ ಕಾಡುತ್ತದೆ?- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : June 14, 2025 at 12:38 PM IST

3 Min Read

Drinking Water in Rainy Season: ಸಾಕಷ್ಟು ನೀರು ಕುಡಿಯದ ಕಾರಣ ತಲೆತಿರುಗುವಿಕೆ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳು ಕಾಡುತ್ತವೆ. ಮಳೆಗಾಲದಲ್ಲಿ ನಿರ್ಜಲೀಕರಣದ ಅಪಾಯವಿದೆ ಎಂದು ಸಂಶೋಧನೆ ಬಹಿರಂಗಪಡಿಸುತ್ತದೆ. ಬೇಸಿಗೆ ಕಳೆದು ಹೋಗಿದೆ ಇದೀಗ ಹವಾಮಾನ ತಣ್ಣಗಾಗಿದೆ. ಹೀಗಾಗಿ ಕೆಲವರು ಚಹಾ ಮತ್ತು ಕಾಫಿಯನ್ನು ಹೆಚ್ಚು ಸೇವಿಸುತ್ತಾರೆ. ಇದರಿಂದ ನಿಮ್ಮ ಆರೋಗ್ಯದ ಪರಿಣಾಮ ಬೀರುತ್ತದೆ. ಅದರಲ್ಲೂ ಪ್ರಮುಖವಾಗಿ ನಿಮ್ಮ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಬೇಸಿಗೆಯಲ್ಲಿ ಸುಡುವ ಸೂರ್ಯನಿಂದಾಗಿ ನೀವು ಹೆಚ್ಚು ಬೆವರುತ್ತೀರಿ. ಇದರಿಂದಾಗಿ ದೇಹಕ್ಕೆ ಹೆಚ್ಚಿನ ನೀರು ಬೇಕಾಗುತ್ತದೆ. ಮತ್ತೊಂದೆಡೆ, ಮಳೆಗಾಲದಲ್ಲಿ ಶೀತ ವಾತಾವರಣದಿಂದಾಗಿ ನಿಮಗೆ ಹೆಚ್ಚು ಬಾಯಾರಿಕೆಯಾಗುವುದಿಲ್ಲ, ಇದರಿಂದಾಗಿ ನೀವು ಕಡಿಮೆ ನೀರು ಕುಡಿಯುತ್ತೀರಿ. ಸಾಕಷ್ಟು ನೀರು ಕುಡಿಯದಿದ್ದರೆ ನಿರ್ಜಲೀಕರಣ ಉಂಟಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಯಾವುದೇ ಸಮಯದಲ್ಲಿ ದಿನಕ್ಕೆ ಕನಿಷ್ಠ 2 ರಿಂದ 3 ಲೀಟರ್ ನೀರು ಕುಡಿಯಬೇಕು ಎಂದು ತಜ್ಞರು ತಿಳಿಸುತ್ತಾರೆ.

ಯಾರು ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು?: ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಇದು ದೇಹ, ದೈಹಿಕ ಚಟುವಟಿಕೆ, ಹವಾಮಾನ ಮತ್ತು ಇತರ ಅಂಶಗಳನ್ನು ಅವಲಂಬಿಸಿರುತ್ತದೆ. ವಯಸ್ಕರು 2 ರಿಂದ 3 ಲೀಟರ್ ನೀರು ಕುಡಿಯಬೇಕಾಗುತ್ತದೆ. National Institutes of Health ಅಧ್ಯಯನವು ಮಹಿಳೆಯರು ದಿನಕ್ಕೆ ಸರಾಸರಿ 9 ಕಪ್ ನೀರು ಕುಡಿಯಬೇಕು. ಮತ್ತು ಪುರುಷರು ಸರಾಸರಿ 13 ಕಪ್ ಕುಡಿಯಬೇಕು ಎಂದು ತಿಳಿಸುತ್ತದೆ. ಅಮೆರಿಕ ರಾಷ್ಟ್ರೀಯ ವಿಜ್ಞಾನ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಅಕಾಡೆಮಿಯು ಮಹಿಳೆಯರು 2.7 ಲೀಟರ್ ಮತ್ತು ಪುರುಷರು 3.7 ಲೀಟರ್ ನೀರು ಕುಡಿಯಬೇಕು ಎಂದು ಸೂಚಿಸುತ್ತದೆ.

ಕಡಿಮೆ ನೀರು ಕುಡಿದರೆ ಏನಾಗುತ್ತೆ?: ಉಸಿರಾಟ, ಬೆವರುವುದು, ಮೂತ್ರ ವಿಸರ್ಜನೆ ಮತ್ತು ಮಲವಿಸರ್ಜನೆಯ ಮೂಲಕ ದೇಹವು ನೀರನ್ನು ಕಳೆದುಕೊಳ್ಳುತ್ತದೆ. ಅದಕ್ಕಾಗಿಯೇ ಕಾಲಕಾಲಕ್ಕೆ ನೀರು ಕುಡಿಯುವುದು ಮುಖ್ಯ. ದೇಹಕ್ಕೆ ಅಗತ್ಯವಿರುವಷ್ಟು ನೀರಿನ ಸೇವನೆ ಮಾಡದೇ ಇದ್ದರೆ, ಸಾಮಾನ್ಯ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದ ಮಟ್ಟಕ್ಕೆ ತಲುಪುತ್ತದೆ. ಇದರಿಂದಲೇ ನಿರ್ಜಲೀಕರಣಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ನಿರ್ಜಲೀಕರಣದಿಂದ ನಿಮ್ಮ ದೇಹವು ದುರ್ಬಲಗೊಳಿಸುತ್ತದೆ. ಏಕಾಗ್ರತೆ ಹಾಗೂ ಅಲ್ಪಾವಧಿಯ ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ. ತಲೆತಿರುಗುವಿಕೆ, ತಲೆನೋವು ಮತ್ತು ಸ್ನಾಯು ಸೆಳೆತದಂತಹ ಸಮಸ್ಯೆಗಳು ಉಂಟಾಗಬಹುದು. ದೇಹದಲ್ಲಿ ಸಾಕಷ್ಟು ನೀರು ಇಲ್ಲದಿದ್ದರೆ ಮಲಬದ್ಧತೆ, ಚರ್ಮ ಹಾಗೂ ಕಿಡ್ನಿಗಳು ಹಾನಿಗೊಳಗಾಗಬಹುದು ಎಂದು ವೈದ್ಯರು ತಿಳಿಸುತ್ತಾರೆ.

ಚಹಾ, ಕಾಫಿ ಹೆಚ್ಚು ಕುಡಿಯದಿರಿ: ಶೀತ ವಾತಾವರಣದಿಂದಾಗಿ ಅನೇಕ ಜನರು ಚಹಾ ಮತ್ತು ಕಾಫಿ ಕುಡಿಯುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಇದರಿಂದ ದೇಹವು ನಿರ್ಜಲೀಕರಣಗೊಳ್ಳಲು ಕಾರಣವಾಗಬಹುದು. ಚಹಾ ಹಾಗೂ ಕಾಫಿಯಲ್ಲಿರುವ ಕೆಫೀನ್ ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಇದು ದೇಹವು ಅಗತ್ಯಕ್ಕಿಂತ ವೇಗವಾಗಿ ನೀರನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ಅದಕ್ಕಾಗಿಯೇ ದಿನಕ್ಕೆ 3 ಕಪ್‌ಗಳಿಗಿಂತ ಹೆಚ್ಚು ಕಾಫಿ ಹಾಗೂ ಚಹಾ ಕುಡಿಯಬಾರದು ಎಂದು ತಜ್ಞರು ಹೇಳುತ್ತಾರೆ.

ಅತಿಯಾಗಿ ನೀರು ಸೇವಿಸಿದರೆ ಏನಾಗುತ್ತೆ?: ಬೇಸಿಗೆ ಹಾಗೂ ಚಳಿಗಾಲವನ್ನು ಲೆಕ್ಕಿಸದೆ ಕೆಲವರು ಒಂದೇ ಪ್ರಮಾಣದ ನೀರನ್ನು ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಕೆಲವೊಮ್ಮೆ ಹೈಪೋನಾಟ್ರೀಮಿಯಾ ಎಂಬ ಸ್ಥಿತಿಗೆ ಕಾರಣವಾಗಬಹುದು. ಇದು ರಕ್ತದಲ್ಲಿನ ಸೋಡಿಯಂ ಸಾಂದ್ರತೆಯ ಇಳಿಕೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಆಯಾಸ, ಸೆಳೆತ, ವಾಂತಿ ಮತ್ತು ವಾಕರಿಕೆ ಉಂಟಾಗಬಹುದು. ಹೆಚ್ಚು ನೀರು ಕುಡಿಯುವುದು ಮತ್ತು ಆಗಾಗ್ಗೆ ಮೂತ್ರ ವಿಸರ್ಜಿಸುವುದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್ ಮಟ್ಟಗಳು ಕಡಿಮೆಯಾಗಬಹುದು. ಇದು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ಇದರೊಂದಿಗೆ ದೇಹದಲ್ಲಿ ಪೊಟ್ಯಾಸಿಯಮ್ ಅಂಶವು ಕಡಿಮೆಯಾಗುತ್ತದೆ. ಇದು ಎದೆ ನೋವು ಹಾಗೂ ಕಾಲುಗಳಲ್ಲಿ ಉರಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್‌ ವೀಕ್ಷಿಸಿ: (ಸಂಶೋಧನಾ ವರದಿ)

https://newsinhealth.nih.gov/2023/05/hydrating-health

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.