Sunita Williams And Other astronauts diet Plan: ಕೆಲ ಸಮಯದ ಹಿಂದೆ ನಾಸಾ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಸುನೀತಾ ವಿಲಿಯಮ್ಸ್ ದುರ್ಬಲಗೊಂಡಂತೆ ಕಾಣುತ್ತಿದ್ದಾರೆ. ಅವರ ಮುಖವು ಸುಕ್ಕುಗಟ್ಟಿದೆ. ಇವೆಲ್ಲವನ್ನೂ ಗಮನಿಸಿದರೆ ಅವರ ಆರೋಗ್ಯದ ಕುರಿತು ಆತಂಕ ಮೂಡಿಸಿದೆ. ಆದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆಹಾರದ ಕೊರತೆ ಇಲ್ಲ ಎಂದು ನಾಸಾ ಅಧಿಕಾರಿಗಳು ತಿಳಿಸಿದರು. ಗಗನಯಾತ್ರಿಗಳಿಗೆ ವಿವಿಧ ರೀತಿಯ ಪೌಷ್ಟಿಕಾಂಶಗಳನ್ನು ಪೂರೈಕೆ ಮಾಡಲಾಗುತ್ತಿದೆ.
ಗಗನಯಾತ್ರಿಗಳಿಗೆ ಅವರ ವೈಯಕ್ತಿಕ ಆದ್ಯತೆಗಳು ಹಾಗೂ ಅಗತ್ಯಗಳಿಗೆ ಅನುಗುಣವಾಗಿ ವಿಶೇಷ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ. ಇವುಗಳನ್ನು ತಂಪಾದ ಹಾಗೂ ಪ್ಯಾಕ್ ಮಾಡಿದ ರೂಪದಲ್ಲಿ ಭೂಮಿಯಿಂದ ಕಳುಹಿಸಲಾಗುತ್ತದೆ. ಗಗನಯಾತ್ರಿಗಳು ಅವುಗಳನ್ನು ಸೇವಿಸುತ್ತಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ವಿಶೇಷ ಯಂತ್ರದಲ್ಲಿ ಇರಿಸಿ ತಮಗೆ ಹಸಿವಾದಾಗ ಇವುಗಳನ್ನು ತಿನ್ನುತ್ತಾರೆ. ಆದ್ರೆ, ಅವರಿಗೆ ತಾಜಾ ಹಣ್ಣುಗಳು ಹಾಗೂ ತರಕಾರಿಗಳ ಕೊರತೆ ಇರುತ್ತದೆ. ಇವುಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಬಾಹ್ಯಾಕಾಶ ನೌಕೆಯ ಮೂಲಕ ಐಎಸ್ಎಸ್ಗೆ ಸಾಗಿಸಲಾಗುತ್ತದೆ.
ಗಗನಯಾತ್ರಿಗಳ ಆರೋಗ್ಯವನ್ನು ಭೂಮಿಯ ಮೇಲಿನ NASA ವೈದ್ಯರು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಅವರು ಸಾಕಷ್ಟು ಕ್ಯಾಲೊರಿಗಳನ್ನು ಸೇವಿಸುವಂತೆ ಗಮನಹರಿಸುತ್ತಾರೆ. ಸುನಿತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಅವರಿಗೆ ಧಾನ್ಯಗಳು, ಪ್ಯಾಕ್ ಮಾಡಿದ ಹಾಲು, ಪಿಜ್ಜಾ, ಸೀಗಡಿ ಕಾಕ್ಟೈಲ್‌ಗಳು, ಫ್ರೈಡ್ ಚಿಕನ್ ಹಾಗೂ ಟ್ಯೂನ್ ಮೀನುಗಳಿಂದ ತಯಾರಿಸಿದ ಆಹಾರವನ್ನು ನೀಡಲಾಗಿತ್ತು. ಒಣ ರೂಪದ ಸೂಪ್ಗಳನ್ನು ಸಹ ಒಗಿಸಲಾಗಿದೆ. ಗಗನಯಾತ್ರಿಗಳು ತಮ್ಮದೇ ಆದ ಆಹಾರವನ್ನು ತಯಾರಿಸುತ್ತಾರೆ ಹಾಗೂ ತಿನ್ನುತ್ತಾರೆ. ಸಮೋಸಾಗಳನ್ನು ಇಷ್ಟಪಡುವ ಸುನೀತಾ ಅವರು, ತಮ್ಮ ಆಸೆಗಳನ್ನು ಪೂರೈಸಲು ಬಾಹ್ಯಾಕಾಶ ಕಾರ್ಯಾಚರಣೆಗೂ ಅವುಗಳನ್ನು ತಂದಿದ್ದರು.
ಬಾಹ್ಯಾಕಾಶಕ್ಕೆ ಹೋದ ನಂತರ ಗಗನಯಾತ್ರಿಗಳ ಆಹಾರ ಪದ್ಧತಿ ಹೇಗಿರುತ್ತೆ?: ಭೂಮಿಯಿಂದ ಗಗನಯಾತ್ರಿಗಳು ಸಂಶೋಧನೆಗಾಗಿ ಬಾಹ್ಯಾಕಾಶಕ್ಕೆ ಹೋಗುತ್ತಾರೆ. ಗಗನಯಾತ್ರಿಗಳ ದೈಹಿಕ ಹಾಗೂ ಮಾನಸಿಕ ಯೋಗಕ್ಷೇಮಕ್ಕೆ ಬಾಹ್ಯಾಕಾಶದಲ್ಲಿ ವಿಶೇಷವಾದ ಜಾಗೃತಿ ವಹಿಸುವುದು ಮುಖ್ಯವಾಗಿದೆ. ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೈಡ್ರೀಕರಿಸದ ಆಹಾರ ಸಹ ಸೇವಿಸುತ್ತಾರೆ.
ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಜೀವನಶೈಲಿ ಸಾಮಾನ್ಯ ಜೀವನಕ್ಕಿಂತ ಬಹಳ ಭಿನ್ನವಾಗಿದೆ. ಆಹಾರಕ್ಕಾಗಿ ವಿಶೇಷ ವಸ್ತುಗಳನ್ನು ಭೂಮಿಯಿಂದ ತೆಗೆದುಕೊಳ್ಳಲಾಗುತ್ತದೆ. ಹಿಂದೆ ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಹೋದದಂತಹ ಸಮಯದಲ್ಲಿ ಆಹಾರ ಸೇವಿಸಲು ಬಹಳ ತೊಂದರೆಗಳನ್ನು ಎದುರಿಸುತ್ತಿದ್ದರು. ಕೆಲವೇ ಕೆಲವು ಆಹಾರಗಳನ್ನು ಮಾತ್ರ ಸೇವಿಸುತ್ತಿದ್ದರು. ಟ್ಯೂಬ್ ರೂಪದಲ್ಲಿ ದ್ರವ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು.
ಒಂದು ವರ್ಷದವರೆಗೆ ಹಾಳಾಗದ ಆಹಾರ: ಈಗ ಹಾಗಲ್ಲ, ತಂತ್ರಜ್ಞಾನವೂ ಸಾಕಷ್ಟು ಮುಂದುವರಿದಿದೆ. ಗಗನಯಾತ್ರಿಗಳು ಈಗ ಥರ್ಮೋ-ಸ್ಟೆಬಿಲೈಸ್ಡ್, ಕಡಿಮೆ ತೇವಾಂಶದ ಆಹಾರ ಸೇವಿಸುತ್ತಾರೆ. ಗಗನಯಾತ್ರಿಗಳು ತಿನ್ನುವ ಆಹಾರವನ್ನು ವಿಶೇಷವಾಗಿ ಸಿದ್ಧಪಡಿಸುತ್ತಾರೆ. ಈ ಆಹಾರಗಳಲ್ಲಿ ನೀರಿಲ್ಲ. ನಾಸಾ ತಯಾರಿಸಿದ ಸಂಸ್ಕರಿತ ಆಹಾರ ಅಂದ್ರೆ, ಬಾಹ್ಯಾಕಾಶ ಆಹಾರಗಳು 90 ದಿನಗಳಿಂದ ಒಂದು ವರ್ಷದವರೆಗೆ ಹಾಳಾಗುವುದಿಲ್ಲ.
ಸಂಸ್ಕರಿಸಿದ ಆಹಾರಕ್ಕೆ ಬಿಸಿನೀರನ್ನು ಸೇರಿಸಿ ಆರಾಮವಾಗಿ ತಿನ್ನಬಹುದು. ಉಪ್ಪು, ಸಕ್ಕರೆ ಮತ್ತು ಮೆಣಸಿನಕಾಯಿಯಂತಹ ಕೃತಕ ಆಹಾರಗಳನ್ನು ಬಾಹ್ಯಾಕಾಶಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ಏಕೆಂದರೆ, ಒಣ ರೂಪದಲ್ಲಿ ಆಹಾರವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದರೆ, ಅವುಗಳು ಗಗನಯಾತ್ರಿಗಳ ಮೂಗಿನ ಮೂಲಕ ದೇಹವನ್ನು ಪ್ರವೇಶಿಸುವ ಸಾಧ್ಯತೆಯಿದೆ. ಅದಕ್ಕಾಗಿಯೇ ಗಗನಯಾತ್ರಿಗಳು ಸಂಸ್ಕರಿಸಿದ ಆಹಾರದಲ್ಲಿ ಎಲ್ಲವನ್ನೂ ಒಟ್ಟಿಗೆ ಪ್ಯಾಕ್ ಮಾಡುತ್ತಾರೆ.
ಬಾಹ್ಯಾಕಾಶದಲ್ಲಿ ಅಗತ್ಯವಿರುವಷ್ಟು ನೀರು ಮಿಶ್ರಿತ ಆಹಾರವನ್ನು ತಿಂದರೆ ಸಾಕು. ಇವುಗಳನ್ನು ವಿಶೇಷವಾಗಿ ಕ್ಯಾನ್‌ಗಳಲ್ಲಿ ತುಂಬಿ ನೀರಿನ ಚುಚ್ಚುಮದ್ದನ್ನು ನೀಡಲಾಗುತ್ತದೆ. ಇದರ ಹೊರತಾಗಿ ನೈಸರ್ಗಿಕವಾಗಿ ಸೇವಿಸಬಹುದಾದ ಕೆಲವು ಆಹಾರಗಳಿವೆ. ಅವು ಬೀಜಗಳು ಮತ್ತು ಇತರ ಪದಾರ್ಥಗಳನ್ನು ಒಳಗೊಂಡಿರುತ್ತವೆ. ಇವುಗಳನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾಗುತ್ತದೆ. ಆದರೆ, ಬಾಹ್ಯಾಕಾಶದಲ್ಲಿ ಆಹಾರವನ್ನು ತೂಕವನ್ನು ಅವಲಂಬಿಸಿ ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಲಾಗುತ್ತದೆ. ಗಗನಯಾತ್ರಿಗಳಿಗೆ ವಿಶೇಷ ಚಮಚಗಳು ಮತ್ತು ಚಾಕುಗಳನ್ನು ನೀಡಲಾಗುತ್ತದೆ. ಅವುಗಳನ್ನು ಒದ್ದೆಯಾದ ಒರೆಸುವ ಬಟ್ಟೆಗಳಿಂದ ಸ್ವಚ್ಛಗೊಳಿಸಬೇಕು ಹಾಗೂ ಮರುಬಳಕೆ ಮಾಡಬೇಕು.
ಗಗನಯಾತ್ರಿಗಳಿಗೆ ಬಾಹ್ಯಾಕಾಶ ಯಾನ ತರಬೇತಿಯಲ್ಲೇ, ಅವರ ಶಕ್ತಿ ಮಟ್ಟವನ್ನು ಅಳೆಯಬೇಕಾಗುತ್ತದೆ. ಆರೋಗ್ಯ, ದೈನಂದಿನ ಚಟುವಟಿಕೆಗಳು, ಜೀವರಾಸಾಯನಿಕ ಮತ್ತು ಶಾರೀರಿಕ ಸೂಚಕಗಳ ಪರೀಕ್ಷೆಗಳನ್ನು ನಂತರ, ಅದಕ್ಕೆ ಅನುಗುಣವಾಗಿ ಬಾಹ್ಯಾಕಾಶದಲ್ಲಿ ಆಹಾರ ಕ್ರಮಗಳನ್ನು ಅನುಸರಿಸಲಾಗುತ್ತದೆ.
ಗಗನಯಾತ್ರಿಗಳ ಆಹಾರ ಆದ್ಯತೆಗಳ ಹಾಗೂ ರುಚಿಗಳ ಕುರಿತು ವಿಜ್ಞಾನಿಗಳು ಮಾಹಿತಿ ಕಲೆಹಾಕಿರುತ್ತಾರೆ. ಇದರಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಎರಡು ಒಳಗೊಂಡಿರುತ್ತದೆ. ಗಗನಯಾತ್ರಿಗಳು ತಮ್ಮ ಪ್ರಯಾಣದ ಮೊದಲ ದಿನ ತಾಜಾ ತರಕಾರಿಗಳನ್ನು ಸೇವಿಸುವ ಅವಕಾಶವಿದೆ. ಆದ್ರೆ, ಇನ್ನುಳಿದ ಪ್ರಯಾಣದ ಸಂದರ್ಭದಲ್ಲಿ ತಾವು ಕೊಂಡೊಯ್ದ ಆಹಾರಗಳನ್ನು ಸೇವಿಸಬೇಕಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ರೀಹೈಡ್ರೇಟ್ ಆಗಿರುವ ಆಹಾರ: ತಣ್ಣನೆಯ ಇಲ್ಲವೆ ಬಿಸಿನೀರನ್ನು ಸೇರಿಸಿದ ನಂತರ ತಿನ್ನುವ ಆಹಾರಗಳನ್ನು ಗಗನಯಾತ್ರಿಗಳು ಸೇವಿಸುತ್ತಾರೆ. ಈ ಆಹಾರಗಳನ್ನು ಫ್ರೀಜ್ ಡ್ರೈಯಿಂಗ್ ಮತ್ತು ಸ್ಪ್ರೇ ಡ್ರೈಯಿಂಗ್‌ನಂತಹ ತಂತ್ರಗಳನ್ನು ಬಳಸಿ ಸಿದ್ಧಪಡಿಸಿರುತ್ತಾರೆ. ರೈಸ್ ಮತ್ತು ನೂಡಲ್ಸ್‌ನಂತಹ ವಸ್ತುಗಳ ಜೊತೆಗೆ ಗ್ರೀನ್ ಟೀ ಹಾಗೂ ತಂಪು ಪಾನೀಯಗಳಂತಹ ಪಾನೀಯಗಳು ಸಹ ಒಳಗೊಂಡಿದೆ. ಜೊತೆಗೆ ರೀಹೈಡ್ರೇಟ್ ಆಗಿರುವ ಆಹಾರಗಳಾದ ಧಾನ್ಯಗಳು, ಸೀಗಡಿ ಕಾಕ್ಟೇಲ್‌ಗಳು ಮತ್ತು ಕಾಫಿ ಸೇರಿವೆ.
ಥರ್ಮೋಸ್ಟೆಬಿಲೈಸ್ ಮಾಡಿದ ಆಹಾರ: ರಿಟಾರ್ಟ್ ಪೌಚ್ ಆಹಾರಗಳು ಹಾಗೂ ಮೊದಲೇ ರೆಡಿ ಮಾಡಿಟ್ಟ ಆಹಾರಗಳು ಸೇರಿವೆ. ಇವುಗಳನ್ನು ನೇರವಾಗಿ ಪೌಚ್‌ನಿಂದ ಅಥವಾ ಆಹಾರ ವಾರ್ಮರ್‌ನಲ್ಲಿ ಬಿಸಿ ಮಾಡಿದ ನಂತರ ಸೇವಿಸಬಹುದು. ವಿಧಗಳಲ್ಲಿ ಪೂರ್ವಸಿದ್ಧ ಕರಿ ಮತ್ತು ಮೀನು, ಯಾಕಿಟೋರಿ (ಸುಟ್ಟ ಕೋಳಿ ಸ್ಕೇವರ್‌ಗಳು) ಸೇರಿವೆ. ಥರ್ಮೋಸ್ಟಾಬಿಲೈಸ್ಡ್ ಆಹಾರಗಳಲ್ಲಿ ಮಾಂಸದ ಪೀಸ್, ರವಿಯೊಲಿ (ಸ್ಟಫ್ಡ್ ಪಾಸ್ತಾ) ಹಾಗೂ ಪುಡಿಂಗ್ (ಸಿಹಿ ಹಾಲು ಆಧಾರಿತ ಸಿಹಿಭಕ್ಷ್ಯ) ಸೇರಿವೆ.
ನೈಸರ್ಗಿಕ & ಅರೆ ಒಣಗಿದ ಆಹಾರ: ಸಂಸ್ಕರಿಸಿದ ಆಹಾರಗಳನ್ನು ಹಾಗೆಯೇ ತಿನ್ನಬಹುದು. ಇವುಗಳಲ್ಲಿ ಯೋಕಾನ್ (ಜೆಲ್ಲಿ ಮಾಡಿದ ಸಿಹಿ ಬೀನ್ ಪೇಸ್ಟ್), ಬಿಸ್ಕತ್, ಕ್ಯಾಂಡಿ ಮತ್ತು ಜೆಲಾಟಿನ್ ಸಿಹಿತಿಂಡಿಗಳು ಹಾಗೂ ಕಡಲಕಳೆ ಮುಂತಾದ ಆಹಾರಗಳು ಸೇರಿವೆ. ಇದರ ಜೊತೆಗೆ ಟೋರ್ಟಿಲ್ಲಾಗಳು, ಡ್ರೈಫ್ರೂಟ್ ಸೇರಿವೆ.
ಕಾಂಡಿಮೆಂಟ್ಸ್: ಆಹಾರಕ್ಕೆ ಮಸಾಲೆ ಹಾಕಲು ಬಳಸುವ ಮಸಾಲೆಗಳಾದ ಮೇಯನೇಸ್ ಮತ್ತು ಸೋಯಾ ಸಾಸ್. ಉಪ್ಪು, ಕರಿಮೆಣಸು, ಕೆಚಪ್, ಸಾಸಿವೆ, ಚಿಲ್ಲಿ ಸಾಸ್ ಮತ್ತು ಟಬಾಸ್ಕೊ ಸಾಸ್ ಸೇರಿವೆ. ಭೂಮಿಯ ಮೇಲೆ ಹರಳಿನ ರೂಪದಲ್ಲಿ ಬರುವ ಉಪ್ಪು ಮತ್ತು ಮೆಣಸನ್ನು ದ್ರವಗಳಾಗಿ ಸಿದ್ಧಪಡಿಸಲಾಗಿರುತ್ತದೆ. ಇವು ಬಾಹ್ಯಾಕಾಶದ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಹರಡುವುದಿಲ್ಲ ಎಂದು ತಜ್ಞರು ತಿಳಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಿ:
https://www.nasa.gov/directorates/esdmd/hhp/space-food-systems/
https://www.nasa.gov/wp-content/uploads/2015/05/167750main_fs_spacefood508c.pdf
https://humans-in-space.jaxa.jp/en/life/food-in-space/
ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಇದನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ಈ ಬಗ್ಗೆ ನೀವು ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.