Uric Acid Reducing Foods: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಹದಲ್ಲಿ ಯೂರಿಕ್ ಆ್ಯಸಿಡ್ ಮಟ್ಟವು ಹೆಚ್ಚಾಗುವುದರಿಂದ ಅಸಹನೀಯ ನೋವು ಮತ್ತು ಸಂಧಿವಾತ ಮತ್ತು ಮೂತ್ರಪಿಂಡದ ಕಲ್ಲುಗಳಂತಹ ಸಮಸ್ಯೆಗಳು ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರ ಅಂಬೋಣ. ಆಹಾರ ಪದ್ಧತಿ ಹಾಗೂ ಔಷಧಿಗಳಿಗೆ ಸಂಬಂಧಿಸಿದ ಹಲವು ನಿಯಮಗಳನ್ನು ಪಾಲಿಸುವುದು ಮುಖ್ಯವಾಗಿದೆ.
ಆದರೆ, ಡ್ರೈ ಫ್ರೂಟ್ಸ್ ನಿಯಮಿತವಾಗಿ ಸೇವಿಸುವುದರಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದು. ಡ್ರೈ ಫ್ರೂಟ್ಸ್ಗಳಲ್ಲಿರುವ ಉತ್ಕರ್ಷಣ ನಿರೋಧಕ ಹಾಗೂ ಉರಿಯೂತ ನಿವಾರಕ ಗುಣಗಳು ಯೂರಿಕ್ ಆ್ಯಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ದೇಹದಲ್ಲಿ ಯೂರಿಕ್ ಆ್ಯಸಿಡ್ ಸಮಸ್ಯೆಯನ್ನು ಕಡಿಮೆ ಮಾಡಲು ಯಾವ ಆಹಾರಗಳು ಪ್ರಯೋಜನಕಾರಿ ಎಂಬುದನ್ನು ಅರಿತುಕೊಳ್ಳೋಣ.
ಯೂರಿಕ್ ಆ್ಯಸಿಡ್ ಹೇಗೆ ರೂಪುಗೊಳ್ಳುತ್ತೆ ಗೊತ್ತಾ?: ನಾವು ಪ್ರತಿದಿನ ಸೇವಿಸುವ ಆಹಾರದಲ್ಲಿರುವ ಪ್ರೋಟೀನ್‌ಗಳು ಪ್ಯೂರಿನ್‌ಗಳು ಎಂಬ ರಾಸಾಯನಿಕಗಳನ್ನು ರೂಪಿಸುತ್ತವೆ. ನಿಮ್ಮ ದೇಹದಲ್ಲಿ ಪ್ಯೂರಿನ್‌ಗಳನ್ನು ಒಡೆದಾಗ ಆ್ಯಸಿಡ್ ರೂಪುಗೊಳ್ಳುತ್ತದೆ. ಈ ರೀತಿ ರೂಪುಗೊಂಡ ಯೂರಿಕ್ ಆ್ಯಸಿಡ್ ಯಾವಾಗಲೂ ಮೂತ್ರದ ಮೂಲಕ ಹೊರಹಾಕಲ್ಪಡುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ ಹೆಚ್ಚು ಯೂರಿಕ್ ಆಮ್ಲ ರೂಪುಗೊಂಡಾಗ ಹಾಗೂ ಅದು ಮೂತ್ರದ ಮೂಲಕ ಸರಿಯಾಗಿ ಹೊರಹಾಕಲು ಸಾಧ್ಯವಾಗದಿದ್ದಾಗ ಯೂರಿಕ್ ಆ್ಯಸಿಡ್ ಸಮಸ್ಯೆ ಉಂಟಾಗುತ್ತದೆ.
ಯೂರಿಕ್ ಆ್ಯಸಿಡ್ ಸರಿಯಾಗಿ ಹೊರಬರಲು ಸಾಧ್ಯವಾಗದಿದ್ದಾಗ ಅದು ರಕ್ತದಲ್ಲಿ ಸಂಗ್ರಹವಾಗುತ್ತದೆ. ಸ್ಥಿರವಾದ ಯೂರಿಕ್ ಆ್ಯಸಿಡ್ವು ಹರಳುಗಳಾಗಿ ಪರಿವರ್ತನೆಗೊಂಡು ಕೀಲುಗಳ ಸುತ್ತಲಿನ ಅಂಗಾಂಶಗಳಲ್ಲಿ ಶೇಖರಣೆಯಾಗುತ್ತದೆ. ಇದು ಹೈಪರ್ಯೂರಿಸೆಮಿಯಾವನ್ನು ಉಂಟುಮಾಡುತ್ತದೆ. ಅಂದರೆ, ರಕ್ತದಲ್ಲಿ ಹೆಚ್ಚಿನ ಮಟ್ಟದ ಯೂರಿಕ್ ಆ್ಯಸಿಡ್ ಕಂಡುಬರುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಯೂರಿಕ್ ಆ್ಯಸಿಡ್ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?

ವಾಲ್ನಟ್: ವಾಲ್ನಟ್ನಲ್ಲಿ ಕಂಡುಬರುವ ಒಮೆಗಾ-3 ಕೊಬ್ಬಿನಾಮ್ಲವು ಉರಿಯೂತ ಹಾಗೂ ನೋವನ್ನು ಕಡಿಮೆ ಮಾಡಲು ತುಂಬಾ ಉಪಯುಕ್ತವಾಗಿದೆ. ಇದು ಯೂರಿಕ್ ಆ್ಯಸಿಡ್ ತೆಗೆದುಹಾಕಲು ಸಹಾಯ ಮಾಡುತ್ತದೆ. ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ವಾಲ್ನಟ್ ಯಾವಾಗ ತಿನ್ನಬೇಕು?: ರಾತ್ರಿಯಿಡೀ 2ರಿಂದ 3 ವಾಲ್ನಟ್ಗಳನ್ನು ನೀರಿನಲ್ಲಿ ನೆನೆಸಿಡಿ. ನೀವು ಇದನ್ನು ಹಾಗೆಯೇ ತಿನ್ನಬಹುದು ಅಥವಾ ಜ್ಯೂಸ್ ಇಲ್ಲವೇ ಸಲಾಡ್‌ಗಳಲ್ಲಿ ಸೇರಿಸಿ ಸೇವನೆ ಮಾಡಹುದು.
ಪಿಸ್ತಾ: ಪಿಸ್ತಾಗಳಲ್ಲಿ ಪಾಲಿಫಿನಾಲ್‌ಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಸಮೃದ್ಧವಾಗಿವೆ. ಇವು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡುತ್ತವೆ. ಇದು ಯೂರಿಕ್ ಆ್ಯಸಿಡ್ ಮತ್ತು ಉರಿಯೂತ ಕಡಿಮೆ ಮಾಡುತ್ತದೆ. ಇದರಲ್ಲಿರುವ ಆರೋಗ್ಯಕರ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಪಿಸ್ತಾ ಯಾವಾಗ ತಿನ್ನಬೇಕು?: ತಜ್ಞರ ತಿಳಿಸುವ ಪ್ರಕಾರ, ಬೆಳಗ್ಗೆ 1ರಿಂದ 5 ಪಿಸ್ತಾ ತಿನ್ನಬೇಕು. ಆದರೆ, ಇದನ್ನು ಹುರಿಯದೇ ಮತ್ತು ಉಪ್ಪು ಸೇರಿಸದೇ ತಿನ್ನುವುದು ಒಳ್ಳೆಯದು. ಉಪ್ಪಿನೊಂದಿಗೆ ಸೇವಿಸುವುದರಿಂದ ಮೂತ್ರಪಿಂಡದ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಬಾದಾಮಿ: ಬಾದಾಮಿಯಲ್ಲಿ ಮೆಗ್ನೀಸಿಯಮ್ ಇದೆ. ಇದರಿಂದ ಜೀರ್ಣಕ್ರಿಯೆ ಸುಧಾರಿಸಲು ಸಾಧ್ಯವಾಗುತ್ತದೆ. ಯೂರಿಕ್ ಆ್ಯಸಿಡ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ದೇಹದಿಂದ ಯೂರಿಕ್ ಆ್ಯಸಿಡ್ನ್ನು ತೆಗೆದುಹಾಕುತ್ತದೆ ಹಾಗೂ ಮೂತ್ರಪಿಂಡದ ಕಾರ್ಯವನ್ನು ಸಾಮಾನ್ಯಗೊಳಿಸುತ್ತದೆ. 2019ರಲ್ಲಿ ಜರ್ನಲ್ ಆಫ್ ನ್ಯೂಟ್ರಿಷನ್ ಅಂಡ್ ಮೆಟಾಬಾಲಿಸಂನಲ್ಲಿ ಪ್ರಕಟವಾದ "ಬಾದಾಮಿ ಸೇವನೆಯು ಆರೋಗ್ಯಕರ ವಯಸ್ಕರಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ" ಎಂಬ ಅಧ್ಯಯನದಲ್ಲಿ ತಿಳಿದಿದೆ.
ಯಾವಾಗ ಬಾದಾಮಿ ತಿನ್ನಬೇಕು?: 5ರಿಂದ 6 ಬಾದಾಮಿಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಇಡಿ. ನಂತರ ಸಿಪ್ಪೆ ಸುಲಿದು ಬೆಳಗ್ಗೆ ಇಲ್ಲವೇ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ನೀವು ಅದನ್ನು ಈ ರೀತಿ ತಿನ್ನಲು ಸಾಧ್ಯವಾಗದಿದ್ದರೆ, ಅದನ್ನು ಹಾಲು ಇಲ್ಲವೇ ಓಟ್ ಮೀಲ್ನಲ್ಲಿ ಬೆರೆಸಿ ಕುಡಿಯಿರಿ.

ಗೋಡಂಬಿ: ಗೋಡಂಬಿ ಮೆಗ್ನೀಸಿಯಮ್ ಹಾಗೂ ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ. ಇವು ಉರಿಯೂತವನ್ನು ಕಡಿಮೆ ಮಾಡಲು ಹಾಗೂ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತವೆ. ಕಡಿಮೆ ಪ್ರಮಾಣದ ಪ್ಯೂರಿನ್‌ಗಳಿಂದಾಗಿ ಯೂರಿಕ್ ಆ್ಯಸಿಡ್ ನಿಯಂತ್ರಣದಲ್ಲಿ ಉಳಿಯುತ್ತದೆ.
ಗೋಡಂಬಿ ಯಾವಾಗ ತಿನ್ನಬೇಕು?: ಬೆಳಗ್ಗೆ 4-5 ಗೋಡಂಬಿಯನ್ನು ಉಪ್ಪು ಸೇರಿಸದೆ ತಿನ್ನಬೇಕು. ಸಾಧ್ಯವಾದರೆ ಇದನ್ನು ಇತರ ಡ್ರೈಫ್ರೂಗಳೊಂದಿಗೆ ತಿನ್ನುವುದರಿಂದ ಸಮತೋಲಿತ ಪೋಷಕಾಂಶಗಳು ದೊರೆಯುತ್ತವೆ.

ಖರ್ಜೂರ: ಖರ್ಜೂರವು ಫೈಬರ್, ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇವೆರಡೂ ಯೂರಿಕ್ ಆ್ಯಸಿಡ್ ತೆಗೆದುಹಾಕುವ ಮೂಲಕ ಮೂತ್ರಪಿಂಡದ ಕಾರ್ಯ ಸುಧಾರಿಸುತ್ತದೆ. ಖರ್ಜೂರವು ನೈಸರ್ಗಿಕವಾಗಿ ಶಕ್ತಿ ಹೆಚ್ಚಿಸುತ್ತದ ಎಂದು ತಜ್ಞರು ತಿಳಿಸುತ್ತಾರೆ.
ಖರ್ಜೂರ ಯಾವಾಗ ತಿನ್ನಬೇಕು?: ಬೆಳಿಗ್ಗೆ ನೇರವಾಗಿ 1ರಿಂದ 2 ಖರ್ಜೂರ ತಿನ್ನಿರಿ ಅಥವಾ ಜೂಸ್ ಹಾಗೂ ಸಲಾಡ್‌ಗಳಿಗೆ ಸೇರಿಸಿ ಸೇವಿಸಬಹುದು.
ಬ್ರೆಜಿಲ್ ನಟ್: ಬ್ರೆಜಿಲ್ ನಟ್ನಲ್ಲಿ ಸೆಲೆನಿಯಂ ಸಮೃದ್ಧವಾಗಿವೆ. ಇದು ಉರಿಯೂತವನ್ನು ಕಡಿಮೆ ಮಾಡುವ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಯೂರಿಕ್ ಆ್ಯಸಿಡ್ ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ. ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಬ್ರೆಜಿಲ್ ನಟ್ ಯಾವಾಗ ತಿನ್ನಬೇಕು?: ಪ್ರತಿದಿನ 1 ರಿಂದ 2 ಬ್ರೆಜಿಲ್ ಬೀಜಗಳನ್ನು ಸೇವಿಸಿ. ಸೆಲೆನಿಯಮ್ ಅತಿಯಾಗಿ ಸೇವಿಸಿದರೆ ದೇಹಕ್ಕೆ ಹಾನಿಕಾರಕವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ವೀಕ್ಷಿಸಬಹುದು:
ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿರುವ ಎಲ್ಲ ಆರೋಗ್ಯ ಸಂಬಂಧಿತ ವಿಚಾರಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ಆಗಿರುತ್ತದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.